ಮೆಣಸಿಗೆ ಈ 8 ಸೂಪರ್ ಲಾಭಗಳಿವೆ ಅಂತ ಕೇಳಿ ಅಜ್ಜಿ-ತಾತಂದ್ರು ಕೂಡ ಆಶ್ಚರ್ಯ ಪಡ್ತಿದಾರೆ

ಬರೀ ಖಾರಕ್ಕಲ್ಲ ಇದಿರೋದು

ಯಾವುದೇ ಅಡುಗೆಗೆ ಕರಿಮೆಣಸು ಹಾಕಿದ್ರೇ ಒಂದು ಕಿಕ್ ಇರತ್ತೆ. ಹಸಿ ಅಥವಾ ಒಣಮೆಣಸಿನಕಾಯಿ ಒಂಥರಾ ಖಾರದ ಕಿಕ್ ಕೊಟ್ರೆ, ಕರಿಮೆಣಸು ಇನ್ನೊಂದ್ ತರ ಖಾರ ಕೊಡತ್ತೆ. ಒಬ್ಬೋಬ್ರು ಮನೇಲಿ ಒಂದೊಂದು ತರ ಅಭ್ಯಾಸ ಮಾಡ್ಕೊಂಡಿರ್ತಾರೆ. 

ಹಾಗಾದ್ರೆ ನಿಮ್ ಮನೇಲಿ ಯಾವ ತರ ಖಾರ? ಕರಿಮೆಣಸಿನ ಖಾರಾನೇ ಜಾಸ್ತಿ ಅನ್ನೋರ್ ಮನೆ ಪೊಂಗಲ್ ನೋಡ್ಬೇಕು ಮೆಣಸಿಂದ ತುಂಬಿ ತುಳುಕ್ತಿರತ್ತೆ. ಚಳಿಗಾಲ, ಧನುರ್ಮಾಸದಲ್ಲಿ ಜೀರಿಗೆ ಮೆಣಸು ತಿಂದೇ ಇರೋರು ಇಲ್ಲ ನಮ್ ಕರ್ನಾಟಕದಲ್ಲಿ. ನೆಗಡಿ ಬಂದ್ರಂತೂ ಮೆಣಸಿನ ಕಷಾಯ ರಾಮ ಬಾಣ. ಹೀಗೆ ಬೇಕಾದಷ್ಟು ಆರೋಗ್ಯದ ಲಾಭಗಳಿವೆ. 

ಅದೇ ಕಾಳುಮೆಣಸಿಂದ ನಮ್ಮ ಸಣ್ಣ ಪುಟ್ಟ ಆರೋಗ್ಯದ ತೊಂದ್ರೆಗೆ ಮನೇಲೆ ಸುಲಭವಾಗಿ ಮಾಡ್ಕೊಳಕ್ಕೆ ಇಲ್ಲಿ 6 ಉಪಾಯ ಇದೆ. ಓದಿ... ನಿಮ್ಗೆ ಆಶ್ಚರ್ಯ ಆಗೋದಂತೂ ಖಂಡಿತ.

1. ಚರ್ಮದ ಸೋಂಕು, ಎಗ್ಜಿಮಾ ಅಥವಾ ಆಲರ್ಜಿ ಇರೋದಾದ್ರೆ..

ಸ್ವಲ್ಪ ಕಾಳುಮೆಣಸಿನ ಪುಡೀನಾ ಸ್ವಲ್ಪ ಬೆಣ್ಣೆ ಜೊತೆ ಮಿಕ್ಸ್ ಮಾಡಿ ಆಗಿರೋ ಜಾಗಕ್ಕೆ ಹಚ್ಕೊಳ್ಳಿ. 

ಮೂಲ

2. ಮೈ ತೂಕ ಕಡಿಮೆ ಮಾಡ್ಕೊಬೇಕಾದ್ರೆ...

2 ಸ್ಪೂನ್ ನಿಂಬೆ ರಸಕ್ಕೆ +  1 ಸ್ಪೂನ್ ಜೇನು ತುಪ್ಪ +  1/4 ಸ್ಪೂನ್ ಕಾಳುಮೆಣಸಿನ ಪುಡಿ ಹಾಕೊಂಡು ದಿನಾ ಕುಡೀರಿ.

ಮೂಲ

3. ಎಂಥಾ ಕೆಮ್ಮು ಇದ್ರೂ...

5-6 ಕಾಳುಮೆಣಸನ್ನ ಪುಡಿ ಮಾಡ್ಕೊಂಡು 1 ಸ್ಪೂನ್ ಜೇನುತುಪ್ಪದ ಜೊತೆ ತಿನ್ನಿ. ಕರಾಮತ್ತು ನೋಡಿ.

ಮೂಲ

4. ಬಾಲ್ಡ್ ಆಗ್ತಿದ್ರೆ...ಕೂದ್ಲು ಬೆಳೆಸ್ಕೊಬೇಕಾದ್ರೆ...

ನಿಂಬೆ ರಸದ ಜೊತೆ ಒಂದಿಷ್ಟು ಕಾಳುಮೆಣಸನ್ನ ತೊಗೊಂದು ನೀರಾಕಿ ಪೇಸ್ಟ್ ಮಾಡ್ಕೊಂಡು ಎಲ್ಲಿ ಬಾಲ್ಡ್ ಆಗ್ತಿದ್ಯೋ ಅಲ್ಲಿ ಹಚ್ಚ್ಕೊಳ್ಳಿ.

ಮೂಲ

5. ತಲೆ ಹೊಟ್ಟು ಕಾಟ ಇದ್ರೆ...

1 ಕಪ್ ಮೊಸರಿಗೆ 1 ಸ್ಪೂನ್ ಕಾಳುಮೆಣಸಿನ ಪುಡಿ ಸೇರ್ಸಿ ತಲೆಗೆ ಹಚ್ಚ್ಕೊಳ್ಳಿ. ಅರ್ಧ ಘಂಟೆ ಬಿಟ್ಟು ತಲೆ ಸ್ನಾನ ಮಾಡಿ. ಶ್ಯಾಂಪೂ ಸೀಗೆಕಾಯಿ ಏನೂ ಹಾಕ್ಬೇಡಿ. ಹಾಗೆ ಬಿಟ್ಟ್ರೆ ಮೆಣಸು ತಾನ್ ಮಾಡ್ಬೇಕಾಗಿರೋ ಕೆಲ್ಸ ಮಾಡತ್ತೆ. ಬೇಕಾದ್ರೆ ಮಾರನೆ ದಿನಾ ಶ್ಯಾಂಪೂ ಹಾಕೊಳ್ಳಿ.

ಮೂಲ

6. ಮೂಗು ಕಟ್ಟಿದ್ರೆ...

ಸಮ ಪ್ರಮಾಣದಲ್ಲಿ ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ ತೊಗೊಂದು ನುಣ್ಣಗೆ ಪುಡಿ ಮಾಡ್ಕೊಳ್ಳಿ. ಇದನ್ನ ಮೂಸಿ ನೋಡಿ ತಕ್ಷಣ ಸಿಕ್ಕಾಪಟ್ತೆ ಸೀನಕ್ಕೆ ಶುರು ಆಗಿ ಮೂಗೊಳಗೆ ಅದೇನ್ ಕಟಿದ್ಯೋ ಅದೆಲ್ಲಾ ಆಚೆ ಬಂದು ಉಸಿರಾಟ ಸಲೀಸಾಗತ್ತೆ.

ಮೂಲ

7. ಹಲ್ಲು ನೋವಿದ್ರೆ...

 ಕಾಳುಮೆಣಸಿನ ಪುಡೀನಾ ಲವಂಗದ ಎಣ್ಣೆ ಜೊತೆ ಬೆರೆಸಿ ಹಲ್ಲು ನೋವು ಇರೋ ಕಡೆ ಹಚ್ಕೊಳ್ಳಿ.

ಮೂಲ

8. ಅಜೀರ್ಣ ಆಗಿದ್ರೆ...

 ಕಾಳುಮೆಣಸಿನ ಪುಡಿ ಜೊತೆ ಶುಂಠಿ ರಸ ಮಿಕ್ಸ್ ಮಾಡ್ಕೊಂಡು ತಿಂದ ನಂತರ ತೊಗೊಳ್ಳಿ.

ಮೂಲ

ಇಷ್ಟೆಲ್ಲಾ ಉಪ್ಯೋಗ ಇದೆ. ಇನ್ಮುಂದೆ ಮೆಣಸಿನ ಡಬ್ಬಾನಾ ಆಡುಗೆ ಮನೆ ಶೆಲ್ಫಲ್ಲಿ ಹಿಂದಕ್ಕೆ ತಳ್ಳದೆ ಮುಂದೆ ಕೈ ಸಿಗೋ ತರ ಇಟ್ಕೊತೀರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: