ಎಲ್ಲೋ‌ ಒಂದ್ಕಡೆ ನನ್ ಜೀವನ ನಂಗ್ ಮಾಡಕ್ಕಾಗ್ತಿಲ್ಲ ಅನ್ನೋದಿದ್ರೆ ಈ 10 ಸಲಹೆಗಳ್ನ ಗಂಭೀರವಾಗಿ ತೊಗೊಳ್ಳಿ

ನಮ್ಮಿಷ್ಟದ ಜೀವನ ಮಾಡೋದು ಒಂದು ಕಲೆ, ಅದನ್ನ ತಿಳ್ಕೊಳ್ಳಿ....

ಯಾರದ್ದೋ ಖುಷಿಗೆ ಬದುಕಿ, ದಿನದ ಕೊನೇಲಿ ಅಯ್ಯೊ ನನ್ನಿಷ್ಟದ ಜೀವನ ಮಾಡೋಕಾಗ್ಲಿಲ್ವಲ್ಲ ಅಂತ ಕೊರಗೋದ್ರಲ್ಲೇನಿದೆ ರೀ? ನಿಮಗೆ ಇಷ್ಟ ಆಗೋ ಹಾಗೆ ಬದುಕಿ ನೋಡಿ ಎಷ್ತು ಚೆನ್ನಾಗ್ ಇರುತ್ತೆ ಅಂತ. ಆದರೆ ಈ ಬದಲಾವಣೆ ಮಾಡ್ಕೋಬೇಕಾದ್ರೆ ನಿಮಗೆ ಕೆಲವು ವಿಷಯಗಳು ಗೊತ್ತಿರಬೇಕು. ಒಂದೊಂದಾಗಿ ಹೇಳ್ತೀವಿ ಕೇಳಿ.

1. ನೀವು ಎಲ್ಲರ ತರಹ ಅಲ್ಲ. ನೀವೇ ಬೇರೆ ಅಂತ ಮರೀಬೇಡಿ.

ನಿಮ್ಮ ಇಷ್ಟ-ಕಷ್ಟಗಳು ಬೇರೆ, ನಿಮ್ಮ ಆಲೋಚನೆಗಳೇ ಬೇರೆ. ಮಿಕ್ಕವರ ಹಾಗೆ ನೀವಲ್ಲ, ಸಮಾಜದ ಎಲ್ಲ ಕಟ್ಟುಪಾಡುಗಳು ನಿಮಗೆ ಅನ್ವಯಿಸೋಲ್ಲ, ನಿಮಗೇನಿಷ್ಟಾನೋ ಅದನ್ನೇ ಮಾಡೋದು ನಿಮಗೇ ಒಳ್ಳೇದು.

ಮೂಲ

2. ನಿಮ್ಮೊಳಗಿನ ಕೂಗಿದೆಯಲ್ಲ, ಅದನ್ನ ಕಿವಿಗೊಟ್ಟು ಕೇಳಿ

ನಿಮ್ಮ ಮನಸ್ಸು ಹೇಳಿದ್ದನ್ನೇ ಮಾಡಿ, ಅದು ಸರಿಯಾಗೇ ಹೇಳಿರುತ್ತೆ. ನೀವು ಅದರ ಮಾತನ್ನ ಕೇಳದೇ ಹೋದ್ರೆ ಜೀವನದಲ್ಲಿ ನಿಮ್ಮ ಬಗ್ಗೆ ನೀವು ತಿಳ್ಕೊಳ್ಳೋಕೆ ಆಗದೇ ಹೋಗ್ಬಹುದು.

ಮೂಲ

3. ನಿಮಗೆ ಯಾವುದು ಒಳ್ಳೇದು ಅಂತ ಬೇರೆ ಯಾರಿಗೂ ಗೊತ್ತಿಲ್ಲ - ನಿಮಗೊಬ್ಬರಿಗೇ ಗೊತ್ತಿರೋದು

ಅವರಿಗೆ ಸರಿ ಹೋಗಿದ್ದು ನಿಮಗೆ ಸರಿ ಹೋಗಬೇಕು ಅಂತೇನಿಲ್ಲ. ಅವರು ನಿಮ್ಮ ಒಳ್ಳೇದಕ್ಕೇ ಹೇಳ್ತಾರೆ, ನಿಜ, ಆದರೆ ಅದು ನಿಮಗೂ ಒಳ್ಳೇದೇ ಮಾಡಬೇಕು ಅಂತಿಲ್ಲ.

ಮೂಲ

4. ನೀವು ಮನಸ್ಸು ಮಾಡಿದರೆ ಎಲ್ಲರನ್ನೂ ಮೀರಬಹುದು

ಮಿಕ್ಕವರಿಗಿಂತ ಚೆನ್ನಾಗಿ ನೀವು ಕೆಲಸ ಮಾಡಬಲ್ಲಿರಿ, ಯಾಕಂದ್ರೆ ನೀವು ಸಾಮನ್ಯರ ಹಾಗಲ್ಲ ಅನ್ನೋದು ನೆನೆಪಿರಲಿ. ನಾನು ಎಲ್ಲರ ತರಹಾನೇ ಅನ್ಕೊಂಡ್ರೆ ಹಾಗೇ ಇರ್ತೀರಿ. ಇಲ್ಲ, ನನ್ನಲ್ಲಿ ವಿಶೇಷವಾದ್ದು ಏನೋ‌ ಇದೆ ಅನ್ಕೊಂಡ್ರೆ ಹಾಗೇ ಆಗ್ತೀರಿ.

ಮೂಲ

5. ನಿಮಗೆ ಸರಿ ಅನ್ನಿಸಿದ್ದು ಈಗಲೇ ಮಾಡಿ, ನಾಳೆ ಕೊರಗೋದು ತಪ್ಪುತ್ತೆ

ನಿಮಗೆ ಈಗೇನು ಅನಿಸುತ್ತೋ ಅದನ್ನ ಮಾಡಿ, ನಾಳೆ ಯಾಕೆ ಮಾಡಲಿಲ್ಲ, ಮಾಡಿದ್ರೆ ಚೆನ್ನಾಗಿತ್ತು ಅಂತ ನೀವೇ ಕೊರಗೋದು ತಪ್ಪುತ್ತೆ. ನಿಮಗೆ ಏನೋ ಒಂದು ಸರಿ ಅನ್ನಿಸಿದ ಮೇಲೆ ಅದು ಸುಳ್ಳು ಅಂತ ಯಾಕೆ ಅನ್ಕೋತೀರಿ?

ಮೂಲ

6. ಬೇರೆಯೋರು ಹೇಳ್ದಂಗೆ ಜೀವನ ಮಾಡ್ತಾನೇ‌ ಇದ್ರೆ ಬರ್ತಾ‌ ಬರ್ತಾ ಬೇಜಾರಾಗುತ್ತೆ

ನೀವು ನಿಮ್ಮ ಜೀವನನ ಖುಷಿಯಾಗಿ ಮಾಡಿ, ಬೇರೆಯವರ ಜೀವನ ಮಾಡೋದ್ರಿಂದ ನಿಮಗೇನು ಸಂತೋಷ ಇಲ್ಲ. ಅಷ್ಟೇ ಅಲ್ಲ, ನೀವು ಸಂತೋಷವಾಗಿ ಇರಕ್ಕಾಗದೆ ಹೋದ್ರೆ ನೀವು ನಿಮ್ಮನ್ನ ನಂಬ್ಕೊಂಡಿರೋರ್ನ ಹೆಂಗೆ ಸುಖವಾಗಿ ಇಟ್ಕೊಳಕ್ಕೆ ಸಾಧ್ಯ? ನೀವೆ ಹೇಳಿ.

ಮೂಲ

7. ನಿಮಗೆ ಬೇಕಾದಂಗೆ ಜೀವನ ಮಾಡಕ್ಕೆ ಶುರು ಮಾಡಿದಾಗ ನಿಮಗೆ ಸಂತೋಷ ಅನ್ನೋದು ನಿಮ್ಮೊಳಗೇ ಇದೆ ಅಂತ ಗೊತ್ತಾಗುತ್ತೆ

ನಿಮ್ಮ ಸಂತೋಷಕ್ಕೆ ಬೇರೆಯೋರು ಯಾರೂ ಕಾರಣ ಅಲ್ಲ ಅಂತ ಗೊತ್ತಾಗುತ್ತೆ. ನೀವೇ ಪೂರ್ತಿ ಜವಾಬ್ದಾರರು ಅಂತಾನೂ ಗೊತ್ತಾಗುತ್ತೆ. ಇದಕ್ಕಿಂತ ಒಳ್ಳೇ ಫೀಲಿಂಗ್ ಇಲ್ಲ ಅನ್ನಿಸುತ್ತೆ.

ಮೂಲ

8. ನಿಮಗೆ ಬೇಕಾದಂಗೆ ಜೀವನ ಮಾಡೋದು ನಿಮ್ಮ ಹಕ್ಕು

ನೀವು ಸ್ವತಂತ್ರ ಜೀವಿ! ಕಾರಣವಿಲ್ಲದೆ ನಿಮ್ಮನ್ನ ನೀವೇ ಯಾಕೆ ಒಂದು ಪಂಜರದೊಳಗೆ ಕೂಡಿ ಹಾಕೋತಿದೀರಿ? ಅದರಿಂದ ಹೊರಬನ್ನಿ, ನಿಮಗೆ ನೀವೇ ಸ್ವಾತಂತ್ರ್ಯ ಕೊಟ್ಟುಕೊಳ್ಳಿ! ಅದನ್ನ ನೀವೇ ಕೊಟ್ಕೋಬೇಕು… ಬೇರೆಯೋರು ಯಾರೂ ಕೊಡಲ್ಲ! ನಿಮ್ಮ ಜನ್ಮಸಿದ್ಧ ಹಕ್ಕನ್ನ ಅನ್ಯಾಯವಾಗಿ ಬಿಟ್ಟುಕೊಡಬೇಡಿ.

ಮೂಲ

9. ನಿಮ್ಮ ಜೀವನ ನೀವು ಮಾಡಿದಾಗ ಬೇರೆಯೋರ ಜೊತೆ ನಿಮ್ಮ ಸಂಬಂಧಗಳು ಇನ್ನಷ್ಟು ಚೆನ್ನಾಗಿ ಆಗ್ತವೆ

ನಿಮ್ಮ ಸಂತೋಷ ಬೇರೆಯೋರ ಮೇಲೆ ನಿಂತಿಲ್ಲ ಅಂತ ಗೊತ್ತಾದ ಕೂಡಲೆ ಅವರಿಗೂ ನಿಮಗೂ ಸಂಬಂಧ ನಿಜವಾದ ಸಂಬಂಧ ಆಗುತ್ತೆ. ಅವರನ್ನ ನೀವು ಗುರವಿಸ್ತೀರಿ… ಅವರನ್ನ ತಿದ್ದಕ್ಕೆ ಹೋಗಲ್ಲ…. ಯಾಕಂದ್ರೆ ನಿಮಗೆ ಗೊತ್ತಿರುತ್ತೆ, ಅವರು ಅವರಿಗೋಸ್ಕರ ಅವರಿಗೆ ಬೇಕಾಗಿದ್ದನ್ನ ಮಾಡ್ಕೋತಿರ್ತಾರೆ ಅಂತ… ನಿಮ್ಮ ತರಹ…

ಮೂಲ

10. ಬೇರೆಯವರು ಏನ್ ಅನ್ಕೋತಾರೆ ಅನ್ನೋ ಯೋಚನೆ ಬಿಟ್ಟಾಕಿ

ನಿಮ್ಮ ಜೀವನ ನಿಮಗೆ ಬೇಕಾದಂಗೆ ಮಾಡದೆ ಇರಕ್ಕೆ ಕಾರಣವೇ ಇಲ್ಲ. ಬೇರೆಯೋರ್ನ ಮೆಚ್ಚಿಸಕ್ಕೆ ಯಾಕೆ ಹೊರಡ್ತೀರಿ? ಎಲ್ಲರನ್ನೂ ಮೆಚ್ಚಿಸಕ್ಕೆ ಸಾಧ್ಯವೂ ಇಲ್ಲ. ಈ ಸತ್ಯ ನಿಮಗೆ ಎಷ್ಟು ಬೇಗ ಗೊತ್ತಾಗುತ್ತೋ ಅಷ್ಟು ಒಳ್ಳೇದು. ನೀವು ನಿಮ್ಮ ಜೀವನ ಮಾಡ್ತಾ ಬಂದ್ರೆ ನಿಮಗೆ ನಿಜವಾಗಲೂ ಬೇಕಾದೋರು ಇರ್ತಾರಲ್ಲ, ಅವರು ಕೊನೆಗೆ ನಿಮ್ಮ ಆಯ್ಕೆಗಳ್ನ ಒಪ್ಕೊಂಡೇ ಒಪ್ಕೋತಾರೆ…

ಮೂಲ

ಅವರು ಅವರ ಜೀವನ ಮಾಡಲಿ, ನೀವು ನಿಮ್ಮದು ಮಾಡಿ. ಹೋಗಿ, ಮುನ್ನುಗ್ಗಿ! ಇನ್ಯಾಕೆ ತಡ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೂಕ್ಷ್ಮ ಮನಸ್ಸಿನ ಹುಡುಗಿಯರನ್ನ ಚೆನ್ನಾಗಿ ನೋಡ್ಕೊಳಕ್ಕೆ ಈ ಕಲೆ ಗೊತ್ತಿರ್ಬೇಕು

ಬೇಗ ಮನಸಿಗೆ ತೆಗೊಂಡು ಬಿಡ್ತಾರೆ

ನಮ್ಮ ಮನೇಲೋ ಅಥ್ವಾ ಗೆಳೆಯರಲ್ಲೋ ಎಲ್ಲೋ ಒಬ್ರು ಸಿಕ್ಕಾಪಟ್ಟೆ ಸೂಕ್ಷ್ಮ ಮನಸ್ಸಿರೋ ಹುಡುಗಿಯರು ಇದ್ದೇ ಇರ್ತಾರೆ. ನೋಡೇ ಇರ್ತೀವಿ ಅಲ್ವಾ?

ಹೆಂಗೋ ಇಂಥೋರಿಗೆ ಇನ್ನೊಬ್ರ ಕಷ್ಟ-ಸುಖ ಭಾಳ ಬೇಗ ಅರ್ಥ ಅಗೋಗತ್ತೆ. ಒಮ್ಮೊಮ್ಮೆ ಇನ್ನೊಬ್ರ ನೋವನ್ನ ತಾವೇ ಅನುಭವಿಸಿ ಒಳ್ಗೊಳ್ಗೇ ಕಷ್ಟ ಪಡ್ತಾರೆ. ಜೀವನ ಕಾಂಪ್ಲಿಕೇಟ್ ಮಾಡ್ಕೊಳ್ಳೋದೇನು ಇವರ ಉದ್ದೇಶ ಅಲ್ಲ, ಆದ್ರೆ ತುಂಬಾ ಬೇಗ ಎಲ್ಲಾನೂ ಮನಸಿಗೆ ತೆಗೊಂಡು ಬಿಡ್ತಾರೆ. ಸುತ್ತಮುತ್ತ ಏನ್ ನಡ್ಯತ್ತೋ ಅದೆಲ್ಲಾ ಪೂರ್ತಿ ಕಣ್ಣಲ್ಲಿ ನೋಡದೇ ಹೋದ್ರೂ ಗೊತ್ತಾಗತ್ತೆ. ಅವರೇನ್ ಸಹಾಯ ಮಾಡ್ಬೋದು? ಮಾಡ್ಲೋ ಬೇಡ್ವೋ? ಅಂತ ಭಾಳ ಯೋಚ್ನೆ ಮಾಡ್ತಾರೆ. ಒಳಗೆ ನಡೀತಿರೋ ಚಂಡಮಾರುತಾನ ಮುಚ್ಚಿಟ್ಟು ಎಲ್ಲರ ಥರ ಬದುಕೋಕೆ ನೋಡ್ತಾರೆ. ಇನ್ನೊಬ್ರ ಕಷ್ಟ ಅರ್ಥ ಮಾಡ್ಕೊಂಡು ಅನುಕಂಪ ತೋರ್ಸಕ್ಕೆ ಎಲ್ಲಾ ಹುಡ್ಗೀರ್ಗೂ ಬರಲ್ಲ ಅಲ್ವಾ? ಈ ತರ ಸೂಕ್ಷ್ಮ ಮನಸ್ಸಿರೋರು ಅಪರೂಪ. ಈ ತರದೋರು ಜೊತೆ ಹೇಗೆ ನೋಡ್ಕೊಬೇಕು, ಹೇಗೆ ಮಾತಾಡ್ಬೇಕು ಅನ್ನೋದೇ ಒಂದು ಕಲೆ.

ಈಗ ಅದೇನ್ ಮಾತಾಡ್ಬಾರ್ದು ಅಂತ ತಿಳ್ಕೊಳ್ಳಿ...ಇಷ್ಟು ತಿಳ್ಕೊಂಡ್ರೆ ಅವರು ನಿಮ್ಮನ್ನ ಇಷ್ಟ ಪಡ್ತಾರೆ.

1. ಯಾಕೆ ಎಲ್ಲಾದಕ್ಕೂ ಇಷ್ಟು ಇಮೋಶನಲ್ ಆಗ್ತೀಯಾ?

ಸೂಕ್ಷ್ಮ ಮನಸ್ಸಿನವರಿಗೆ ಅವರ ಗುಣಾನ ಬದ್ಲಾಯಿಸ್ಕೊಳ್ಳೋಕೆ ಆಗೊಲ್ಲ. ಅದು ಅವ್ರಿಗೆ ಸಹಜವಾಗಿ ಬಂದಿರೋದು. ಅಂದ್ರೆ ಅವರ ದೇಹದಲ್ಲಿರೋ ಹಾರ್ಮೋನು, ಅವರ ಮಿದುಳು ಎಲ್ಲವೂ ಅವ್ರನ್ನ ಆ ರೀತಿ ಮಾಡುತ್ತೆ. ಬರೀ ಗಟ್ಟಿ ಮನಸ್ಸು ಮಾಡೋದ್ರಿಂದ ಇದು ಬದಲಾಗೊಲ್ಲ. 20% ಜನ ಈ ರೀತಿ ಆಗಿರ್ತಾರೆ ಅಂತ ಇದರ ಬಗ್ಗೆ ಅಧ್ಯಯನ ಮಾಡಿರೋ ಸೈಕಾಲಾಜಿಸ್ಟ್ಗಳು ಹೇಳ್ತಾರೆ.

2. ನೀ ಯಾಕೆ ಎಲ್ಲಾದ್ಕು ಇಷ್ಟು ಟೈಮ್ ತೊಗೊತ್ಯಾ?

ಇವ್ರು ನಿಧಾನವಾಗಿ ಯೋಚ್ನೆ ಮಾಡ್ತಾರೆ, ಹಾಗಾಗಿ ಇವ್ರಿಗೆ ಸ್ವಲ್ಪ ಜಾಸ್ತಿ ಸಮಯ ಬೇಕು. ಚಿಕ್ಕ ಚಿಕ್ಕ ಕೆಲಸಗಳೂ ಇವ್ರಿಗೆ ತುಂಬಾ ಯೋಚ್ನೆ ಮಾಡೋ ಹಾಗೆ ಮಾಡುತ್ತೆ. 

ಮೂಲ

3. ಯಾಕಿಷ್ಟು ರೆಸ್ಟ್ ತೊಗೊತ್ಯಾ?

ಇವ್ರು ತುಂಬಾ ಯೋಚ್ನೆ ಮಾಡೋದ್ರಿಂದ ಬೇಗ ಸುಸ್ತಾಗ್ತಾರೆ. ಹಾಗಂತ ಇವ್ರು ಸೋಮಾರಿಗಳಲ್ಲ. ಇವ್ರು ತುಂಬಾ ಬುದ್ಧಿವಂತರಿರ್ತಾರೆ. ಆದರೆ ಇವ್ರು ಕೆಲಸ ಮಾಡೋ ಸ್ಪೀಡ್ ಬೇರೆಯವ್ರಿಗಿಂತ ನಿಧಾನ ಅಷ್ಟೆ. ಅವರ ಸಹಜ ಗುಣಕ್ಕೆ ಅವರು ಬೇಜಾರು ಪಟ್ಕೊಳ್ಲೋ ಹಾಗೆ ಮಾಡ್ಬೇಡಿ.

4. ನೀ ಯಾಕೆ ನಿನ್ ಜೀವನ ಇಷ್ಟು ಕಷ್ಟ ಮಾಡ್ಕೋತ್ಯಾ?

ಕಷ್ಟ ಏನ್ ಮಾಡ್ಕೊಳಕ್ಕೆ ಇಷ್ಟ ಇಲ್ಲ ಇವ್ರಿಗೆ. ಆದ್ರೆ ಕಣ್ಣೇದುರಿಗಾಗ್ಲಿ ಸುತ್ತ ಮುತ್ತ ನಡೀತಿರೋದಾಗ್ಲಿ, ಬೆನ್ನು ಹಿಂದೆ ಆಗ್ತಿರೋದಾಗ್ಲಿ ಇಂಥೋರಿಗೆ ಬೇರೆಯೋರ್ಗಿಂತ ಬೇಗ ಗೊತ್ತಾಗತ್ತೆ, ಸರ್ಯಾಗಿ ಗೊತಾಗತ್ತೆ. ಹಾಗಾಗಿ ಸುಮ್ನೆ ತಮ್ ಪಾಡಿಗೆ ತಾವು ಇರಕ್ಕಾಗಲ್ಲ. ಇವ್ರು ಸಾಮಾನ್ಯ ಜನ್ರಿಗಿಂತ ಸ್ವಲ್ಪ ಜಾಸ್ತಿ ತಿಳ್ಕೊಂಡಿರ್ತಾರೆ, ಬೇರೆಯವ್ರ ನೋವು ಬೇಗ ತಟ್ಟುತ್ತೆ, ಅಷ್ಟೆ. ಮನಸಲ್ಲಿ ಸದಾ ಯೋಚ್ನೆಗಳು ಹೊಯ್ದಾಡ್ತಾ ಇರತ್ವೆ. ಹಾಗಂತ ಇವ್ರಿಗೆ ನಮ್ಮ ಕನಿಕರ ಬೇಕಿಲ್ಲ. ನಮ್ಮೆಲ್ಲರ ಹಾಗೆ ಇವ್ರಿಗೂ ಇವ್ರನ್ನ ಅರ್ಥ ಮಾಡ್ಕೊಳ್ಳೋರು ಬೇಕು.

ಮೂಲ

5. ಯಾವಾಗ್ಲೂ ಅದೇನ್ ನಿನ್ ಗೋಳು?

ಇವ್ರು ಮೊದ್ಲೇ ಸೂಕ್ಷ್ಮ ಮನಸಿನೋರು. ಅಂಥಾದ್ರಲ್ಲಿ ನೀವು ಒರಟಾಗಿ ಮಾತಾಡಿ ಇನ್ನೂ ನೋವು ಮಾಡ್ಬೇಡಿ. ಇವ್ರು ಎಲ್ಲಾದ್ಕು ಕಂಪ್ಲೇಟ್ ಮಾಡ್ತಾರೆ ಅಂದ್ಕೋಬೇಡಿ. ಮನಸ್ಸಿನ ಭಾರ ಕಳ್ಕೊಳ್ಳೋಕೆ ಏನೋ ಹೇಳಿರ್ತಾರೆ ಅಷ್ಟೆ. ಎಲ್ರೂ ಒಂದಲ್ಲ ಒಂದ್ಸಲ ಈ ರೀತಿ ಕಂಪ್ಲೇಟ್ ಮಾಡೇ ಇರ್ತೀವಿ, ಇವ್ರೂ ಮಾಡ್ತಾರೆ ಅಷ್ಟೆ.

6. ಎಲ್ಲರ ಗಮನ ನಿನ್ ಮೇಲೆನೇ ಇರ್ಬೇಕು ಅಂತ ಹೀಗೆ ಮಾಡ್ತೀಯಾ?

ಸಾಮಾನ್ಯವಾಗಿ ಸೂಕ್ಷ್ಮ ಮನಸಿನವ್ರು ಅವ್ರದ್ದೇ ಯೋಚ್ನೇಲಿ ಮುಳುಗಿರ್ತಾರೆ, ಅಂತರ್ಮುಖಿಗಳಾಗಿರ್ತಾರೆ, ಒಂಟಿಯಾಗಿರೋದು ಇಷ್ಟ ಪಡ್ತಾರೆ. ಹೋಗಿ ಹೋಗಿ ಇವ್ರು ಬೇರೆಯವ್ರ ಗಮನ ಸೆಳೆಯೋಕೆ ಹೀಗೆಲ್ಲ ಮಾಡ್ತಾರೆ ಅಂತ ಹೇಳಿ ಬೇಜಾರು ಮಾಡ್ಬೇಡಿ. ಇವ್ರಿಗೆ ಬೇಕಿರೋದು ಸಾಧಾರಣ ಬದುಕು, ಸಂತೋಷವಾಗಿರೋ ಬದುಕು ಅಷ್ಟೆ. ಮೊದ್ಲೇ ಹೇಳಿದ್ ಹಾಗೆ ಇವ್ರು ನಿಧಾನವಾಗಿ ಯೋಚ್ನೆ ಮಾಡೋರು, ಇವ್ರನ್ನ ಕೆಳಗೆಳಿಯೋ ಮೊದ್ಲು ಯೋಚ್ನೆ ಮಾಡಿ.

ಮೂಲ

7. ಅತಿಯಾಗಿ ಯಾಕೆ ಯೋಚ್ನೆ ಮಾಡ್ತೀಯ?

ಯೋಚ್ನೆ ಮಾಡೋದು, ಬೇರೆಯವ್ರ ಭಾವನೆಗಳ್ನ ಬೇಗ ಅರ್ಥ ಮಾಡ್ಕೊಳ್ಳೋದು ಇವ್ರ ಸಹಜ ಗುಣ. ಇದನ್ನ ಬದಲಾಯಿಸೋಕೆ ಆಗೊಲ್ಲ. ಇದು ವರಾನೂ ಹೌದು, ಶಾಪಾನೂ ಹೌದು. ಆದ್ರೆ ಚಾನ್ಸ್ ಕೊಟ್ರೂ ಇವ್ರು ಬದಲಾಯಿಸ್ಕೊಳೊಲ್ಲ. ಯಾಕಂದ್ರೆ ಹೀಗೆ ತುಂಬ ಯೋಚ್ನೆ ಮಾಡೋದ್ರಿಂದಾನೇ ಇವ್ರು ಬದುಕನ್ನ ಪೂರ್ತಿಯಾಗಿ ಅನುಭವಿಸ್ತಾರೆ. ದುಃಖ, ಬೇಜಾರನ್ನ ಮನಸ್ಪೂರ್ತಿಯಾಗಿ ಅನುಭವಿಸೋದ್ರಿಂದ ಖುಷೀನೂ ಅಷ್ಟೇ ಪೂರ್ತಿಯಾಗಿ ಅನುಭವಿಸ್ತಾರೆ. ಬದುಕಲ್ಲಿರೋ ಸಣ್ಣ ಸಣ್ಣ ಖುಷಿಗಳ್ನ ಇವ್ರು ಮಿಸ್ ಮಾಡ್ಕೊಳೊಲ್ಲ. ಹೀಗಾಗಿ ಸ್ವಲ್ಪ ಹೆಚ್ಚೇ ಅನ್ಸಿದ್ರೂ ಯೋಚ್ನೆ ಮಾಡೋದನ್ನ ಇವ್ರು ಬಿಡೋಕೆ ಇಷ್ಟ ಪಡೊಲ್ಲ.

8. ನೀ ಹೀಗೆಲ್ಲ ಆಡಿದ್ರೆ ಯಾರ್ ನಿನ್ ಜೊತೆ ಸ್ನೇಹ ಬೆಳೆಸ್ತಾರೆ?

ಇವ್ರು ಸ್ವಲ್ಪ ಅಂತರ್ಮುಖಿಗಳು, ಏಕಾಂತಪ್ರಿಯರು. ಹಾಗಂತ ಇವ್ರಿಗೆ ಸ್ನೇಹಿತರು ಇಲ್ಲ ಅಂತ ಅಲ್ಲ. ಇವ್ರಿಗೆ ತುಂಬಾ ಕಡಿಮೆ ಫ್ರೆಂಡ್ಸ್ ಇದ್ರೂ ಕೂಡ ಅವರ ಜೊತೆ ನಿಜವಾದ ಸಂಬಂಧ ಇರುತ್ತೆ. ಇವ್ರಿಗೆ ತುಂಬಾ ಜನ ಫ್ರೆಂಡ್ಸ್ ಇಲ್ದೇ ಇರೋದು ಇವ್ರು ಕೆಟ್ಟವ್ರು ಅನ್ನೋ ಕಾರಣಕ್ಕೆ ಅಲ್ಲ. ಇವ್ರೇ ಬೇಕ್-ಬೇಕು ಅಂತಾನೇ ಸಣ್ಣ ಸರ್ಕಲ್ ಇಟ್ಕೊಂಡಿರ್ತಾರೆ. ಹಾಗಾಗಿ ನೀವು ಇವ್ರ ಬಗ್ಗೆ ಗೊತ್ತಿಲ್ದೆ ಏನೇನೋ ಅಂದ್ಕೊಳ್ಳೋಕೆ ಹೋಗ್ಬೇಡಿ.

ಮೂಲ

9. ಚಿಕ್ ಚಿಕ್ಕ ವಿಶ್ಯಾನ ದೊಡ್ದದು ಯಾಕ್ ಮಾಡ್ತೀಯಾ?

ನಮ್ಗೆ ಸೂಕ್ಷ್ಮ ಮನಸ್ಸು ಇಲ್ದೇ ಇರೋದ್ರಿಂದ ಇವ್ರು ಹೇಳೋದು ನಮ್ಗೆ ಹಾಗೆ ಕಾಣುತ್ತೆ. ಇವ್ರು ಎಲ್ಲಾನೂ ಮನಸ್ಸಿಗೆ ತೆಗೊಳೋದ್ರಿಂದ ಚಿಕ್ಕ ಚಿಕ್ಕ ವಿಶ್ಯ ಕೂಡ ಇವ್ರಿಗೆ ತುಂಬಾ ಮುಖ್ಯ ಅಂತ ಅನ್ಸುತ್ತೆ. ಹಾಗಾಗಿ ಇವ್ರು ಚಿಕ್ಕದನ್ನ ದೊಡ್ಡದು ಮಾಡ್ತಿದಾರೆ ಅಂತ ಹೇಳೋ ಮೊದ್ಲು ಯೊಚ್ನೆ ಮಾಡಿ.

10. ಪ್ರಪಂಚ ಇರೋದೇ ಹೀಗೆ, ಬದುಕೋದು ಕಲಿಯಕ್ಕಾಗಲ್ವಾ?

ಸೂಕ್ಷ್ಮ ಮನಸ್ಸಿನವರು ಅವ್ರಿಂದ ಸಾಧ್ಯವಾದಷ್ಟೂ ನಾರ್ಮಲ್ ಆಗಿರೋಕೆ ನೋಡ್ತಾರೆ. ಹಾಗಾಗಿ ಅವ್ರಿಗೆ ಬದ್ಕೋದು ಕಲಿ ಅಂತ ಹೇಳೋಕೆ ಹೋಗ್ಬೇಡಿ. ನೀವು ಹಾಗೆ ಹೇಳಿದ್ರೆ ಅವ್ರು ನಿಮ್ಮನ್ನ ದೂರ ಮಾಡ್ಕೊಳ್ಳೋದು ಗ್ಯಾರಂಟಿ. ಅವ್ರನ್ನ ಅರ್ಥ ಮಾಡ್ಕೊಳ್ಳೋಕೆ ನೋಡಿ, ನಿಮ್ಗೆ ಒಳ್ಳೆ ಫ್ರೆಂಡ್ ಆಗ್ತಾರೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: