ಕನ್ನಡ ಬಿಟ್ಟು ಹಿಂದಿ ಫಿಲಂ ನೋಡಿ ಬಾಲಿವುಡ್ ನಟ-ನಟೀರ್ನ ಹೆಂಗೆ ಬೆಳೆಸ್ತಾ ಇದೀವಿ ನೋಡಿ

ಕೋಟಿಗಟ್ಲೆ ರೂಪಾಯಿ ಕಾರ್ಗೇ ಇವರು ಕೊಡಬೇಕಾದರೆ ಇನ್ನೆಷ್ಟು ಇಟ್ಟಿರಬೇಕು!

ಒಂದು ಕಡೆ ಹಿಂದಿ ರಾಷ್ಟ್ರಭಾಷೆ, ಹಿಂದಿ ಕಲೀದೇ ಹೋದ್ರೆ ನೀವು ಭಾರತೀಯರೇ ಅಲ್ಲ ಅನ್ನೋ ಕೂಗುಗಳು. ಇನ್ನೊಂದ್ ಕಡೆ ಬಾಲಿವುಡ್ಡು ಇಡೀ ಭಾರತದಲ್ಲಿ ಹಿಂದಿ ಫಿಲಂಗಳಿಗೆ ಒಂದು ಮಾರುಕಟ್ಟೆ ರೆಡಿ ಮಾಡ್ಕೊಂಡು ಹಿಂದಿ ಹರಡ್ತಾ ಇದೆ. ನಾವು ಕನ್ನಡಿಗರು ಸ್ವಲ್ಪ ವಿಶ್ವಮಾನವರು. ಬೇರೆ ಭಾಷೆಯೋರ್ನ ಬೆಳೆಸೋದು ಜಾಸ್ತಿ. ಹಿಂದಿ ಫಿಲಮ್ಮು ಅಂದ್ರೆ ಅದೆನೋ ಒಂಥರಾ ಹುಚ್ಚು ನಮ್ಮ ಜನರಿಗೆ. ಈ ಹುಚ್ಚು ಭಾರತೀಯರಿಗೆ ಎಲ್ಲೀವರೆಗೆ ಇರುತ್ತೋ ಅಲ್ಲೀವರೆಗೆ ನಮ್ಮ ದುಡ್ಡಿಂದ ಬಾಲಿವುಡ್ ನಟ-ನಟೀರು ಮಾಡಿ ಮೇಲೆ ಮಾಡಿ ಕಟ್ಟುಸ್ಕೊಂಡು ಐಷಾರಾಮಿ ಜೀವನ ಮಾಡೋದು ನಿಲ್ಲಲ್ಲ, ಕಾರ್ ಮೇಲೆ ಕಾರ್ ತೊಗೊಂಡು ಮೆರೆಯೋದೂ ನಿಲ್ಲಲ್ಲ. ಇಲ್ಲಿ ನೋಡಿ, ಕೆಲವು ಬಾಲಿವುಡ್ ನಟ-ನಟೀರ ಹತ್ತಿರ ಎಂತೆಂಥ ಕಾರುಗಳಿವೆ ಅಂತ….

10. ಶ್ರದ್ಧಾ ಕಪೂರ್ ಒಂದು Mini Cooper ಕೊಂಡ್ಕೋಬೆಕು ಅಂತಿದ್ದೋಳು ಬೇಡ ಅಂತ Mercedes ML ಕೊಂಡ್ಕೊಂಡಿದಾಳೆ. ಬೆಲೆ ಕೇವಲ 60 ಲಕ್ಷ ರೂಪಾಯಿ.

9. ಕಂಗನಾ ರನೌತ್ ತನಗೆ ತಾನೇ ಒಂದು BMW 7 ಗಿಫ್ಟ್ ಮಾಡ್ಕೊಂಡಿದಾಳೆ - ಅವಳ ಬರ್ತಡೇಗೆ ಅಂತ. ಬೆಲೆ 85 ಲಕ್ಷ.

8. ಹ್ರಿತಿಕ್ ರೋಶನ್ ಹತ್ತಿರ ಒಂದು Jaguar XJ ಇದೆ. ಬೆಲೆ ಬರೀ 1.1 ಕೋಟಿ.

7. ಅಜಯ್ ದೇವ್ಗನ್ ಹತ್ರ ಒಂದು Maserati Quattroporte ಇದೆ. ಬೆಲೆ ಬರೀ 1.5 ಕೋಟಿ.

6. ಪ್ರಿಯಾಂಕ ಚೋಪ್ರನ್ ಹತ್ರ ಒಂದು ಕಸ್ಟಮೈಸ್ ಮಾಡಿರೋ Rolls Royce ಇದೆ. ಬೆಲೆ 2 ಕೋಟಿ ಮಾತ್ರ.

5. ರಣಬೀರ್ ಕಪೂರ್ ಹತ್ರ ಒಂದು Audi R8 ಇದೆ. ಬರೀ 2.2 ಕೋಟಿ ರೂ. ಅಷ್ಟೇ ಅಲ್ಲ, ಇನ್ನೂ ಬೇಜಾನ್ ಕಾರು-ಬೈಕುಗಳ ಒಂದು ಕಲೆಕ್ಷನ್ನೇ ಇದೆ ಇವನ ಹತ್ತಿರ.

4. ಸಂಜಯ್ ದತ್ತು ಹೆಂಡ್ತಿ ಮಾನ್ಯತಂಗೆ ಒಂದು Rolls Royce Ghost ಗಿಫ್ಟಾಗಿ ಕೊಟ್ಟಿದಾನೆ. ಬೆಲೆ 3 ಕೋಟಿ ಅಷ್ಟೆ.

3. ಜಾನ್ ಅಬ್ರಹಾಮ್ ಹತ್ರ ಒಂದು ಕರೀ Lamborghini Gallardo ಇದೆ. ಬೆಲೆ ಕೇವಲ 3.4 ಕೋಟಿ.

2. ಅಮಿತಾಭ್ ಬಚ್ಚನ್ ಅಂದ್ರೆ ಇಡೀ ಭಾರತದಲ್ಲಿ ಜನರಿಗೆ ಹುಚ್ಚು ಹತ್ತಿಸಿಬಿಟ್ಟಿದಾರೆ. ಪಾಲ್ಟಿ ಹತ್ರ ಒಂದು Rolls Royce Phantom ಇದೆ. ಅದಕ್ಕೆ ಕೇವಲ ರೂ. 4.5 ಕೋಟಿ.

ಈ ಕಾರ್ನ ವಿಧು ವಿನೋದ್ ಚೋಪ್ರಾ ಗಿಫ್ಟಾಗಿ ಕೊಟ್ನಂತೆ. ಗಿಫ್ಟೇ ಈ ಲೆವಲ್ಲಿಗೆ ಇರಬೇಕಾದ್ರೆ ಇನ್ನು ಸ್ವಂತದ್ದು ಎಷ್ಟು ಇಟ್ಟಿದಾನೋ ಅಮಿತಾಭ್ ಬಚ್ಚನ್ನು!

1. ಅಮೀರ್ ಖಾನ್ ಹತ್ತಿರ ಒಂದು Mercedes Benz S600 ಇದೆ. ಅದಕ್ಕೆ ಬರೀ 10 ಕೋಟಿ ರೂಪಾಯಿ

ಭಾರತದ ಪ್ರಧಾನಿ ಮತ್ತೆ ಮುಕೇಶ್ ಅಂಬಾನಿ ಬಿಟ್ರೆ ಇವ್ನ್ ಹತ್ರಾನೇ ಈ ಕಾರ್ ಇರೋದು. ಈ ಕಾರು ಬುಲೆಟ್ ಪ್ರೂಫು ಬೇರೆ.

ಯೋಚನೆ ಮಾಡಬೇಕಾದ ವಿಷಯ: ಇವರನ್ನ ಇನ್ನೂ ಹೀಗೇ ಬೆಳೆಸ್ತಾನೇ ಇರಬೇಕಾ ನಾವು? ಅಥವಾ ನಮ್ಮ ನಟ-ನಟೀರ್ನ ಬೆಳೆಸಬೇಕಾ?

ಚಿತ್ರಗಳ ಮೂಲ: ಕೊಂಡಿ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಾನು ಜೀವನದಲ್ಲಿ ಹಿಂದೆ ಬೀಳ್ತಾ ಇದೀನಿ ಅನ್ನೋ ಮುಳ್ಳು ಚುಚ್ತಾ ಇದ್ರೆ ಈ 30 ಮಾತು ನೆನಪಿಸಿಕೊಳ್ಳಿ

ವೇದಾಂತ ಗೀದಾಂತ ಅಲ್ಲ, ಸಿಂಪಲ್ ವಿಷಯಗಳು

ನಮ್ಮ ಪ್ರಕಾರ ನಾವು ಜೀವನದಲ್ಲಿ ಎಷ್ಟೇ ಗೆಲುವು ಸಾಧಿಸಿದ್ದರೂ… ನಮ್ಮ ಪ್ರಕಾರ ನಮಗೆ ಬೇಕಾದ್ದೆಲ್ಲ ಇದ್ದರೂ… ಬೇಕಾದೋರೆಲ್ಲ ಇದ್ದರೂ… ಜೀವನ ಒಂದೊಂದ್ಸಲ ನಮಗೆ "ನೀನು ಹಿಂದೆ ಬಿದ್ದಿದೀಯ" ಅನ್ನೋ ಸಂದೇಶ ಕೊಡುತ್ತೆ. ಈ ಸ್ಪರ್ಧಾತ್ಮಕ ಜಗತ್ತಿನ ವಿಚಿತ್ರ ಇದು. ಇಂಥ ಪ್ರಪಂಚದಲ್ಲಿ ಅನವಶ್ಯಕವಾಗಿ ಕೀಳರಿಮೆ ಮೂಡಬಾರದು ಅನ್ನೋದಾದರೆ ಈ 30 ಮಾತು ನೆನಪಿಸಿಕೊಳ್ಳಿ. ಇವೆಲ್ಲ ಏನು ದೊಡ್ಡ ವೇದಾಂತ ಅಲ್ಲ, ಆದರೂ ನಿಮಗೆ ತುಂಬ ಉಪಯೋಗಕ್ಕೆ ಬರುತ್ತವೆ:

  1. ನೀವು ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿದೀರಿ.
  2. ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿಲ್ಲ ಅನ್ನಿಸಿದರೆ ಇನ್ನೇನ್ ಮಾಡ್ಬೋದು ಅಂತ ಯೋಚನೆ ಮಾಡಿ, ಕೆಲಸದಲ್ಲಿ ತೊಡಗಿಕೊಳ್ಳಿ.
  3. ತುಂಬಾ ಅನುಭವ ಇರೋರು ಅಥವಾ ನಿಮಗಿಂತ ತುಂಬಾ ಹಿಂದೆ ಶುರು ಮಾಡ್ಕೊಂಡೋರ್ನ ನೋಡಿ ನಾನು ಹಿಂದೆ ಇದೀನಿ ಅನ್ಕೋಬೇಡಿ. ಅವರ ಜೊತೆ ಪೈಪೋಟಿಗೆ ಇಳಿಯೋದು ಪೆದ್ದತನ.
  4. ಎಲ್ಲರಿಗೂ ಅವರದೇ ಆದ ವೇಗ ಅಂತ ಇರುತ್ತೆ.
  5. ನಿಮಗೆ ತುಂಬ ಇಷ್ಟವಿದ್ದ ಕೆಲಸ ಸಿಗದೆ ಹೋದರೆ ನೀವು ವೇಸ್ಟು ಅಂತೆನಲ್ಲ. ಜಾತಕ ಹೊಂದಲಿಲ್ಲ ಅಂತ ಅರ್ಥ!
  6. ಈಗಲೂ ನೀವು ತುಂಬಾ ಜನರಿಗಿಂತ ಮುಂದಿದೀರಿ. ನೀವು ಹಿಂದೆ ಆಗಿದ್ದ ವ್ಯಕ್ತೀನೂ ಆ ಪಟ್ಟಿಯಲ್ಲಿ ಇದಾನೆ/ಳೆ.
  7. ನಿಮಗೆ ಯಾವ ತರಹದ ಭವಿಷ್ಯ ಬೇಕಾದರೂ ರೂಪಿಸಿಕೊಳಕ್ಕೆ ಅನುಮತಿ ಇದೆ.
  8. ಜೀವನ ಅಂದ್ರೆ ಹೀಗೇ ಇರಬೇಕು ಅಂತೆನಿಲ್ಲ, ನೀವು ನಡೆಸಿದ್ದೇ ಜೀವನ.
  9. ಮೂವತ್ತನೇ ವಯಸ್ಸಿಗಿಂತ ಮುಂಚೆ ಮದುವೆ ಆಗದೆ ಹೋದರೆ ಮುಗೀತು ಕಥೆ ಅನ್ಕೋಬೇಡಿ.
  10. ಏನಾದರೂ ಆಗಿಬಿಡೋಷ್ಟು ಶ್ರಮ ಪಟ್ಟು ಕೆಲಸ ಮಾಡಿ ಉಪಯೋಗ ಇಲ್ಲ. ಅದರಿಂದ ಸಿಗೋದು ಗೆಲುವಲ್ಲ, ನಿಃಶಕ್ತಿ.
  11. ಮನಸ್ಥಿತಿ ಸರಿಯಾಗಿಲ್ಲದೆ ಇದ್ದರೆ ನಿಮಗೆ ನೀವೇ ಎಷ್ಟು ಹೇಳಿಕೊಂಡರೂ ಸ್ಫೂರ್ತಿ ಬರಲ್ಲ.
  12. ನಿಮ್ಮ ವಯಸ್ಸು ಇಪ್ಪತ್ತು-ಚಿಲ್ಲರೆ ಆದರೆ ನಿಮ್ಮ ಮುಂದೆ ಇನ್ನೂ ಇಡೀ ಜೀವನವೇ ಇದೆ, ಅದರಲ್ಲಿ ಎಂಥ ಅದ್ಭುತಗಳಾಗುತ್ತವೆ ಅಂತ ಈಗಲೇ ಹೇಳಕ್ಕಾಗಲ್ಲ.
  13. ನಿಮಗೆ ಬೇಕಾದ ಸ್ಫೂರ್ತಿ ಸಿಕ್ಕಿಲ್ಲದೆ ಇರಕ್ಕೆ ಕಾರಣ ಸರಿಯಾದ ವ್ಯಕ್ತಿ ಇನ್ನೂ‌ ಸಿಕ್ಕಿಲ್ಲದೆ ಇರೋದು ಅನ್ನಿಸುತ್ತೆ.
  14. ಯಾವಾಗಲೂ ಹೀಗೇ ತುಸುಕ್ ಅಂತ ಕೂತಿರಲ್ಲ  ನೀವು.
  15. ನಿಮ್ಮ ಭಾವನೆಗಳು ಇನ್ನಷ್ಟು ಕೆಲಸ ಮಾಡೋದಕ್ಕೆ ಪ್ರೇರಣೆ ಆಗಬೇಕು, ಕಡಿಮೆ ಕೆಲಸ ಮಾಡಕ್ಕಲ್ಲ.
  16. ಸರಿಯಾದ ಜೀವನ, ತಪ್ಪು ಜೀವನ ಅಂತ ಏನೂ ಇರಲ್ಲ.
  17. ಸಮಯ ನಿಮ್ಮ ಹತೋಟಿಗೆ ಮೀರಿದ್ದು.
  18. ಮುಂದಿನ 24 ಗಂಟೆ ಬಗ್ಗೆ ಯೋಚನೆ ಮಾಡಿ. ಅದರಲ್ಲಿ ಸಾಧಿಸಕ್ಕೆ ಆಗೋದನ್ನೆಲ್ಲ ಸಾಧಿಸಿ.
  19. ಸಾಮಾಜಿಕ ತಾಣಗಳಲ್ಲಿ ಜನ ಬರೀ ಒಳ್ಳೇ ಸುದ್ದಿಗಳು, ಒಳ್ಳೇ ಫೋಟೋಗಳ್ನೇ ಹಂಚಿಕೊಳ್ಳೋದು. ಒಳಗೆ ಏನಿರುತ್ತೋ ಯಾರಿಗ್ ಗೊತ್ತು?
  20. ಇಲ್ಲೀವರೆಗೆ ನೀವು ಏನೇನು ಸಾಧಿಸಿದ್ದೀರಿ ಅಂತ ಮೆಲಕು ಹಾಕಿ.
  21. ಸದ್ಯಕ್ಕೆ ಒಂದು ದಿನಕ್ಕಿಂತ ಹೆಚ್ಚು ಪ್ಲಾನ್ ಮಾಡಬೇಡಿ.
  22. ಇನ್ನೂ ಮಾಡಕ್ಕೆ ತುಂಬಾ ಇದೆ ಅಂತ ಯೋಚನೆ ಮಾಡ್ಕೊಂಡ್ ಕೂತ್ಕೋಬೇಡಿ. ಅದರಿಂದ ಕೆಲಸ ಬೇಗೇನು ಆಗಲ್ಲ.
  23. ಬೇಕಾದಾಗ ಸಲಹೆ, ಸಹಾಯ ಕೇಳೋದ್ರಿಂದ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ, ಇನ್ನಷ್ಟು ಗಟ್ಟಿ ಆಗ್ತೀರಿ.
  24. ನಿಮಗೆ ಸಹಾಯ ಮಾಡ್ದೋರ್ನ ನೆನಪಿಸಿಕೊಳ್ಳಿ. ಆಗ ಗೊತ್ತಾಗುತ್ತೆ, ನೀವು ಒಂಟಿ ಅಲ್ಲ ಅಂತ.
  25. ಕೆಲಸ ಮುಂದಕ್ಕೆ ಹೋಗ್ತಿಲ್ಲ ಅಂದಾಗ ನಿಮ್ಮ ಪ್ರಕಾರ ಅದ್ಭುತವಾಗಿ ಕೆಲಸ ಮಾಡೋರು ಯಾರನ್ನಾದರೂ ನೆನಪಿಸಿಕೊಳ್ಳಿ. ಆಗ ಮುಂದಕ್ಕೆ ಹೋಗುತ್ತೆ.
  26. ಕಾಲೇಜ್ ಮುಗಿಸಿದ ತಕ್ಷಣ ಕೆಲಸ ಸಿಕ್ಕಿಲ್ಲದೆ ಹೋದರೆ ನೀವು ವೇಸ್ಟು ಅಂತಲ್ಲ. ನಿಮಗೆ ಸರಿ ಹೋಗೋ‌ ಕೆಲಸಗಳು ಇನ್ನೂ‌ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಂತ ಅರ್ಥ.
  27. ಚೆನ್ನಾಗಿ ಜೀವನ ಮಾಡೋದು ಅಂದ್ರೆ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡೋದು.
  28. ನಿಮ್ಮ ತಂದೆ-ತಾಯಿ ಹೇಳಿದ್ದನ್ನೇ ನೀವು ಮಾಡಬೇಕು ಅಂತಿಲ್ಲ. ನಿಮ್ಮ ದಾರಿ ನೀವು ಕಂಡ್ಕೊಳಿ.
  29. ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಮನಸ್ಸು ಬದಲಾಯಿಸಿ. ಬೇಡ ಅನ್ನೋನ್ ಯಾವನು?
  30. ಎಲ್ಲಾ ಬೇಗ್-ಬೇಗ ಮಾಡೋದೇ ಪ್ರಗತಿ ಅನ್ನೋದು ಮೂರ್ಖತನ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: