ಈ 11 ಅಭ್ಯಾಸ ಇರೋರ್ಗೆ ಸಮಾಜ ಗೌರವ ಕೊಡಬೇಕಾದ್ರೆ ದುಡ್ಡು ಮೈಮಾಟ ಎಲ್ಲ ನೋಡಲ್ಲ

ಎಲ್ರ ಜೊತೆ ನಗ್ತಾ ಇರ್ತಾರೆ ಇವರು

ಕೆಲವ್ರನ್ನ ನೋಡಿದ್ರೆ ಆಶ್ಚರ್ಯ ಆಗುತ್ತೆ ರೀ ನೋಡೋಕು ಚೆನ್ನಾಗ್ ಇರಲ್ಲ, ಅಷ್ಟೇನೂ ಹೆಸರು- ದುಡ್ಡು ಕೂಡ ಮಾಡಿರಲ್ಲ, ಆದ್ರೂ ಜೀವನನ ಚೆನ್ನಾಗ್ ಸವಿತಿರ್ತಾರೆ, ಸಮಾಜ ಅವರನ್ನ ಬಹಳ ಗೌರವಿಸುತ್ತೆ. ಅಂತವರ ಬಗ್ಗೆ ತಿಳ್ಕೊಬೇಕಾ? ಅವರು ಹೆಂಗಿರ್ತಾರೆ ಅನ್ನೋ ಕುತೂಹಲ ಇದ್ಯಾ? ಹಾಗಿದ್ರೆ ಓದಿ...

1. ಅವರು ಎಲ್ಲರಿಗೂ ಮರ್ಯಾದೆ ಕೊಡ್ತಾರೆ

ತುಂಬಾ ದೊಡ್ಡೋರ ಜೊತೆ ಮಾತಾಡ್ತಾ ಇರಲಿ ಅಥವಾ ಸಾಮಾನ್ಯ ವ್ಯಕ್ತಿ ಆಗ್ಲಿ, ಅವರಿಗೆ ಮರ್ಯಾದೆ ಕೊಡೊ ಅಭ್ಯಾಸ ಇವರಿಗಿರುತ್ತೆ. ಎಲ್ಲರೂ ಒಂದೇ ಅನ್ನೋ ಸಿದ್ಧಾಂತ ಇವರದ್ದು. ಇಂಥವರ ಜೊತೆ ಇರೋರು ಇವರನ್ನ ತುಂಬ ಮೆಚ್ತಾರೆ.

ಮೂಲ

2. ನಮ್ಮ ಹಾಗೇ ಬೇರೆಯವರು ಅಂತ ನಂಬಿರ್ತಾರೆ

ನಮ್ಮನ್ನ ಜನ ಹೇಗೆ ನಡೆಸ್ಕೊಬೇಕು ಅಂತ ನಮಗೆ ಇಷ್ಟಾನೋ ಹಾಗೆ ಮಿಕ್ಕವರನ್ನೂ ನಾವು ನೋಡ್ಕೋಬೇಕು ಅನ್ನೋದು ಇವರ ಸಿದ್ಧಾಂತ. ಅದಕ್ಕೆ ಇವರು ಎಲ್ಲರಿಗೂ ಇಷ್ಟ.

ಮೂಲ

3. ಬಹಳ ಸಹಜವಾಗಿ ಸಂಬಂಧಗಳ್ನ ಬೆಳೆಸಿಕೊಳ್ತಾರೆ

ಇಂಥವರು ಆಡೋ ದಿನನಿತ್ಯದ ಮಾತುಗಳಲ್ಲೇ ಒಳ್ಳೆ ಸಂಬಂಧ ಬೆಳೆಸ್ತಾರೆ. ಅವ್ರಿಗೆ ಗೊತ್ತಿರುತ್ತೆ ಸಣ್ಣ ಮಾತುಗಳಲ್ಲೂ ಭಾವನಾತ್ಮಕ ಸಂಬಂಧಗಳು ಬೆಳಿಬಹುದು ಅಂತ. ಅವ್ರಿಗೆ ಜನಗಳ ಬಗ್ಗೆ ಇರೋ ಕಾಳಜಿ ಈ ರೀತಿ ಅವ್ರನ್ನ ಹತ್ರ ತರಿಸುತ್ತೆ.

ಮೂಲ

4. ಅವರಿಗೆ ಜನ ಮುಖ್ಯ

ತಮ್ಮ ಬಗ್ಗೆ ಆಲೋಚಿಸೋಕೂ ಸಮಯ ಇಲ್ಲದ ಹಾಗೆ ಇವರು ತಮ್ಮ ಸುತ್ತ ಇರೋರ ಬಗ್ಗೆ ಕಾಳಜಿ ವಹಿಸ್ತಾರೆ! ಇವರಿಗೆ ತಮಗಿಂತ ಸುತ್ತ ಇರೋರೇ ಮುಖ್ಯ. ಈ ಕೆಲಸ ನೀವು ಮಾಡ್ಬೇಕು ಅಂದ್ರೆ ನಿಮ್ಮ ಫೋನ್ನ ಪಕ್ಕಕ್ಕಿಟ್ಟು ನಿಮ್ಮ ಜೊತೇಲಿರೋರು ಏನ್ ಹೇಳ್ತಿದಾರೆ ಅದರ ಬಗ್ಗೆ ಗಮನ ಕೊಡಿ.

ಮೂಲ

5. ತಮ್ಮ ಅಭಿಪ್ರಾಯಗಳ್ನ ಹೇರೋ ಪ್ರಯತ್ನ ಪಡಲ್ಲ

ನಾನು ಹೇಳಿದ್ದೇ ಆಗ್ಬೇಕು ಅಂತ ಇವರು ಹಟ ಮಾಡಲ್ಲ. ತಮ್ಮ ಮಾತೇ ಆಗಬೇಕು ಅನ್ನೋರು ಜನಕ್ಕೆ ಅಷ್ಟು ಇಷ್ಟ ಆಗಲ್ಲ ಅನ್ನೋದು ಗೊತ್ತಿರುತ್ತೆ ಇವರಿಗೆ.

ಮೂಲ

6. ಅವರಿಗೆ ನಿಜಕ್ಕೂ ಅಭಿಪ್ರಾಯಕ್ಕೂ ವ್ಯತ್ಯಾಸ ಗೊತ್ತಿರುತ್ತೆ

ಪ್ರಪಂಚದ ಯಾವುದೇ ವಿಷಯದ ಬಗ್ಗೆ ಮಾತಾಡ್ಬೇಕಾದ್ರೂ ಇವರು ಗಂಭೀರವಾಗಿ ತಮ್ಮ ಅಭಿಪ್ರಾಯ ಹೇಳಿ, "ಇದು ನನ್ನ ಅಭಿಪ್ರಾಯ ಮಾತ್ರ, ಸತ್ಯ ಆಗಿರದೆ ಇರಬಹುದು" ಅಂತಾನೂ ಹೇಳ್ತಾರೆ.

ಮೂಲ

7. ಮುಚ್ಚು-ಮರೆ ಮಾಡಲ್ಲ

ಅವರು ಏನು, ಅವರಿಂದ ಏನಾಗುತ್ತೆ ಅನ್ನೋದನ್ನ ಪ್ರಪಂಚಕ್ಕೆ ಇರೋದು ಇದ್ದಂಗೆ ತೋರಿಸ್ತಾರೆ. ಇಂಥವರು ಜನಕ್ಕೆ ಹೆಚ್ಚು ಇಷ್ಟ ಆಗ್ತಾರೆ, ಯಾಕೆ ಗೊತ್ತಾ? ಇವರನ್ನ ಸುಲಭವಾಗಿ ನಂಬಬಹುದು.

ಮೂಲ

8. ಕೊಟ್ಟ ಮಾತಿಗೆ ಬೆಲೆ ಇರುತ್ತೆ

ಅವರು ನಡೆದಂಗೆ ನುಡೀತಾರೆ, ನುಡಿದಂಗೆ ನಡೀತಾರೆ. ಎಷ್ಟು ಕಟ್ಟುನಿಟ್ಟು ಅಂದ್ರೆ ಇನ್ನೊಬ್ಬರ ಬಗ್ಗೆ ಕೆಟ್ಟದ್ದು ಆಡಲ್ಲ, ಯಾರಿಗೂ ನೋವು ಮಾಡಲ್ಲ. ಅದೇ ಅವರು ಮಾಡೋ ಕೆಲಸ ಒಳ್ಳೆದಾದ್ರೆ ನೋವಾದ್ರೂ ಪರ್ವಾಗಿಲ್ಲ, ಮಾಡ್ತಾರೆ.

ಮೂಲ

9. ಯಾವಾಗ್ಲೂ ನಗ್-ನಗ್ತಾ ಇರ್ತಾರೆ

ಇವರಿಗೆ ಎದುರಿಗೆ ಇರೋ ವ್ಯಕ್ತಿ ಚೆನ್ನಾಗೆ ಅರ್ಥ ಆಗ್ತಾರೆ. ಅದಕ್ಕೇ ಬಹಳ ಸಹಜವಾಗಿ ಎಲ್ಲರ ಜೊತೇನೂ ನಗ್-ನಗ್ತಾ ಇರ್ತಾರೆ. ಇವರನ್ನ ನೋಡಿ ಬೇರೆಯೋರಿಗೂ ಈ ಅಭ್ಯಾಸ ಬಂದುಬಿಡುತ್ತೆ!

ಮೂಲ

10. ಚೆನ್ನಾಗ್ ಕಾಣೋ ಪ್ರಯತ್ನ ಮಾಡ್ತಾರೆ

ಇವರು ಜನರಿಗೆ ಚೆನ್ನಾಗ್ ಕಾಣೋ ಪ್ರಯತ್ನ ಖಂಡಿತ ಮಾಡ್ತಾರೆ ಆದ್ರೆ ಅದನ್ನೇ ತುಂಬಾ ದೊಡ್ಡದು ಮಾಡ್ಕೊಳಲ್ಲ. ಅಂದ್ರೆ ಸಾಮಾನ್ಯವಾಗಿ ಯಾರಾದ್ರೂ ಅತಿಥಿಗಳು ಮನೆಗ್ ಬರೋ ಮುಂಚೆ ಮನೆ ಸ್ವಚ್ಛ ಮಾಡಿದಹಾಗೆ.

ಮೂಲ

11. ಸಮಸ್ಯೆಗಳಿದ್ದರೂ ಜೀವನ ಸವೀತಾರೆ

ಅವರಿಗೆ ಜೀವನ ಯಾವತ್ತೂ ಬೇಸರ ಅನ್ಸಲ್ಲ, ಯಾಕೆ ಅಂತೀರಾ? ಅವರಿಗೆ ಜೀವನಾನ ಆಶಾವಾದಿಯೊಬ್ಬನ ಕಣ್ಣಿಂದ ನೋಡೋ ಅಭ್ಯಾಸ ಇರುತ್ತೆ. ಇವರಿಗೇನೂ ಸಮಸ್ಯೇನೇ ಇರಲ ಅಂತಲ್ಲ… ಸಮಸ್ಯೆಗಳ ಜೊತೆ ನಗ್ತಾ ಜೀವನ ಮಾಡೋದು ಗೊತ್ತಿರುತ್ತೆ.

ಮೂಲ

ಈಗ ನೀವು ಯೋಚನೆ ಮಾಡೋ ರೀತಿನ ಬದಲಾಯಿಸ್ತೀರಾ ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: