ಒತ್ತಡ ಜಾಸ್ತಿ ಇದ್ದಾಗ ಎದುರಾಗೋ 5 ಮುಖ್ಯ ಸಮಸ್ಯೆಗಳಿಗೆ ಪರಿಹಾರ ನಿಮ್ಮ ಕೈಯಲ್ಲೇ ಇದೆ

ಏನ್ ಮಾಡಿದರೆ ಹೇಗೆ ಪರಿಹಾರ ಆಗುತ್ತೆ ಅಂತ ತಿಳ್ಕೊಳಿ

ಜೀವನದಲ್ಲಿ ಸ್ವಲ್ಪ ಒತ್ತಡ ಇದ್ದರೆ ಒಳ್ಳೇದೇ. ಏನೂ ಇಲ್ಲದೆ ಹೋದರೆ ನಾವು ಕೆಲಸಾನೇ ಮಾಡಲ್ಲ. ಆದರೆ ಒತ್ತಡ ತೀರಾ ಜಾಸ್ತಿ ಆಗ್ತಾ ಹೋದ್ರೆ ಜೀವನ ಕಷ್ಟ ಆಗೋಗುತ್ತೆ. ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಬಹುದು.

ಇಂಥ ಸಮಸ್ಯೆಗಳಿಗೆ ಎಲ್ಲಾ ಸಂಸ್ಕೃತಿಗಳಲ್ಲೂ ಒಂದಲ್ಲ ಒಂದು ಪರಿಹಾರ ಹುಡುಕ್ಕೊಂಡೇ ಇರ್ತಾರೆ. ಜಪಾನಲ್ಲಿ ಏನ್ ಮಾಡ್ತಾರೆ ಅಂತ ಕೇಳಿ ಬಹಳ ಆಶ್ಚರ್ಯ ಪಡ್ತೀರಿ.

ಇದಕ್ಕೆ 5 ನಿಮಿಷ ಕೂಡ ಬೇಕಾಗಿಲ್ಲ. ಎಲ್ಲಿದ್ದರೂ ಯಾರು ಬೇಕಾದರೂ ಮಾಡಬಹುದು.

ಮೊಟ್ಟಮೊದಲಿಗೆ ನಿಮಗೆ ಗೊತ್ತಿರಬೇಕಾದ್ದು ಒಂದಿದೆ. ಅದೇನಪ್ಪಾ ಅಂದ್ರೆ ನಮ್ಮ ಕೈಯಿಲ್ಲಿ ಒಂದೊಂದು ಬೆರಳೂ ಒಂದೊಂದು ಮನಸ್ಥಿತಿಯನ್ನ ಪ್ರತಿನಿಧಿಸುತ್ತೆ.

ವಿವರವಾಗಿ ಹೇಳೋದಾದ್ರೆ:

  1. ಹೆಬ್ಬೆರಳು: ಯೋಚನೆ, ಚಿಂತೆ, ಆತಂಕ ಕಡಿಮೆ ಮಾಡಿಕೊಳ್ಳೋದ್ರಲ್ಲಿ ಸಹಾಯ ಮಾಡುತ್ತೆ
  2. ತೋರುಬೆರಳು: ಹೆದರಿಕೆ ಕಡಿಮೆ ಮಾಡಿಕೊಳ್ಳೋದ್ರಲ್ಲಿ ಸಹಾಯ ಮಾಡುತ್ತೆ
  3. ಮಧ್ಯದ ಮೆರಳು: ಸಿಟ್ಟು ಕಡಿಮೆ ಮಾಡಿಕೊಳ್ಳೋದ್ರಲ್ಲಿ ಸಹಾಯ ಮಾಡುತ್ತೆ
  4. ಉಂಗುರದ ಬೆರಳು: ತೀರಾ ದುಃಖ ಮತ್ತು ಖಿನ್ನತೆ ಕಡಿಮೆ ಮಾಡಿಕೊಳ್ಳೋದ್ರಲ್ಲಿ ಸಹಾಯ ಮಾಡುತ್ತೆ
  5. ಕಿರುಬೆರಳು: ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋದ್ರಲ್ಲಿ ಸಹಾಯ ಮಾಡುತ್ತೆ; ಇನ್ನಷ್ಟು ಧೈರ್ಯವಂತರಾಗೋದ್ರಲ್ಲಿ ಸಹಾಯ ಮಾಡುತ್ತೆ

ಮೇಲಿನ ಸಮಸ್ಯೆಗಳಲ್ಲಿ ಯಾವುದಾದರೂ ನಿಮ್ನ ಕಾಡಿದರೆ ಮೊದಲಿಗೆ ದೇಹದೊಳಗೆ ಪ್ರಾಣ ಸರಿಯಾಗಿ ಸಂಚರಿಸುವ ಹಾಗೆ ಆಗಬೇಕು.

ನೀವು ಮಾಡಬೇಕಾದ್ದು ಇಷ್ಟೇ

ಮೊದಲು ನಿಮ್ಮ ಸಮಸ್ಯೆಗೆ ಸರಿಯಾದ ಬೆರಳು ಯಾವುದು ಅಂತ ಗುರುತಿಸಿಕೊಳ್ಳಿ. ಯಾವ ಕೈ ಆದರೂ ಪರವಾಗಿಲ್ಲ, ಆ ಬೆರಳನ್ನ ಇನ್ನೊಂದು ಕೈಯಿಂದ ಪೂರ್ತಿ ಹಿಡ್ಕೊಂಡು 1-2 ನಿಮಿಷ ಹಾಗೇ ಇರಿ. ಆ ಬೆರಳಿಗೆ ಹೆಚ್ಚು ರಕ್ತ ಹರಿದು ಬರೋದು ನಿಮಗೇ ಗೊತ್ತಾಗುತ್ತೆ. ಆಗ ನಿಮ್ಮ ಸಮಸ್ಯೆ ಬಗೆಹರಿಯಕ್ಕೆ ಶುರು ಆಗಿದೆ ಅಂತ ಅರ್ಥ.

ನಿಮ್ಮ ಮನಸ್ಸಿಗೆ ಶಾಂತಿ ಬೇಕು ಅನ್ನಿಸಿದಾಗ ಕೈ ಮಧ್ಯದಲ್ಲಿ ಇನ್ನೊಂದು ಕೈ ಹೆಬ್ಬೆರಳಿಂದ ಒತ್ತಿಕೊಳ್ಳಿ - ಮತ್ತೆ 1-2 ನಿಮಿಷ ಹೀಗೆ ಮಾಡಬೇಕು.

ಇದನ್ನ ದಿನಾ ಮಾಡ್ತಾ ಬಂದ್ರೆ ನಿಮ್ಮ ಒತ್ತಡ ಕಡಿಮೆ ಆಗಿ ನಿಮಗಿರೋ ಸಮಸ್ಯೆ ಹೋಗುತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: