ಐಐಟಿ ಡೆಲ್ಲಿಯಲ್ಲಿ ಹುಡ್ಗೀರು ಹಾಸ್ಟೆಲ್ ಒಳಗೆ ಮಜಾ ಮಾಡೋದು ನೋಡಿ ಆಶ್ಚರ್ಯ ಪಡ್ತೀರಿ

ದೇಶದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು

ಇಡೀ ಪ್ರಪಂಚದಲ್ಲೆ ಹೆಸರು ಮಾಡಿರೋ ಭಾರತೀಯ ಶಿಕ್ಷಣ ಸಂಸ್ಥೆ ಅಂದ್ರೆ ಐಐಟಿ. ಅಲ್ಲಿ ಒಂದು ಹುಡುಗೀರ ಹಾಸ್ಟೆಲ್ ಇದೆ - ಕೈಲಾಶ್ ಅಂತ ಅದಕ್ಕೆ ಹೆಸರು. ಅದರಲ್ಲಿ ಹುಡುಗೀರು ಹೇಗೆ ಮಜಾ ಮಾಡ್ತಾರೆ ಅಂತ ನೋಡಿ ನಿಮಗೆ ಆಶ್ಚರ್ಯ ಆಗುತ್ತೆ…

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಮಹಾಭಾರತ ಅರಿದು ಕುಡಿದಿರೋರ್ಗೆ ಮಾತ್ರ ಅದರಲ್ಲಿ ಬರೋ ಈ 8 ಅಪರೂಪದ ಕಥೆಗಳು ಗೊತ್ತಿರುತ್ತವೆ

ಸಹದೇವ ಏನ್ ಮಾಡಿದಾನೆ ಅಂತ ಹೇಳುದ್ರೆ ನೀವು ನಂಬಲ್ಲ

ಮಹಾಭಾರತವನ್ನ ಪಂಚಮವೇದ ಅಂತ ಹಿಂದು ಧರ್ಮದಲ್ಲಿ ಕರೀತಾರೆ. ಅದೊಂತರ ಮಹಾಸಾಗರ ಇದ್ದಂಗೆ. ಕೆದ್ಕಿದಷ್ಟೂ ಜಾಸ್ತಿ ಕಥೆಗಳು ಸಿಗತ್ತೆ. ಅಂತಹ ಒಂದಿಷ್ಟು ಅಪರೂಪದ ಘಟನೆಗಳನ್ನ ಇಲ್ಲಿ ಕೊಟ್ಟಿದ್ದೀವಿ ನೋಡಿ.

1) ದ್ರೋಣಾಚಾರ್ಯ ಮೊದಲ ಟೆಸ್ಟ್ ಟ್ಯುಬ್ ಬೇಬಿ

ಪಾಂಡವ ಮತ್ತು ಕೌರವರ ಬಿಲ್ವಿದ್ದೆಯ ಗುರು ಈ ದ್ರೋಣಾಚಾರ್ಯ. ದ್ರೋಣಾಚಾರ್ಯರ ಜನ್ಮರಹಸ್ಯವೇ ಒಂಥರಾ ವಿಚಿತ್ರವಾದುದು. ಇವ್ರನ್ನ ಟೆಸ್ಟ್ ಟ್ಯುಬ್ ಬೇಬಿ ಅಂತ ಕರೀಬೋದು. ಅದಕ್ಕೊಂದ್ ಕಾರಣ ಇದೆ. ದ್ರೋಣಾಚಾರ್ಯರ ತಂದೆ ಋಷಿ ಭರದ್ವಾಜ. ಒಮ್ಮೆ ಸಾಯಂಕಾಲದ ಪ್ರಾರ್ಥನೆಯನ್ನ ನದಿಯ ದಡದಲ್ಲಿ ಮುಗಿಸೋ ಸಮಯಕ್ಕೆ , ಅಪ್ಸರೆಯಾದ ಕ್ರಿತಾಜಿಯು ಸ್ನಾನ ಮಾಡ್ತಾ ಇರೋದನ್ನ ನೋಡಿ ಆಸೆಯಾಗತ್ತೆ. ಇತ್ತ ಕ್ರಿತಾಜಿಯು ಋಷಿ ಭರದ್ವಜರನ್ನ ನೋಡಿ ಮೈಮೇಲೆ ಅಲ್ಪ ಸ್ವಲ್ಪ ಬಟ್ಟೆಯನ್ನ ಮಾತ್ರ ಉಳಿಸಿಕೊಂಡು ದಡಕ್ಕೆ ಬರ್ತಾಳೆ. ಈ ಸಮಯದಲ್ಲಿ ಅನೈಚ್ಚಿಕವಾಗಿ ಭರದ್ವಜರು ತಮ್ಮ ವೀರ್ಯ ಸ್ಖಲನ ಮಾಡ್ಕೊಳ್ತಾರಂತೆ. ವೀರ್ಯಾಣುಗಳನ್ನ ತಗೊಂಡು ಒಂದು ಮಣ್ಣಿನ ಮಡಿಕೆಯಲ್ಲಿಡ್ತಾರೆ. ಅದ್ರಿಂದ ಹುಟ್ಟಿ ಬಂದವ್ನೇ ಈ ದ್ರೋಣಾಚಾರ್ಯ. ದ್ರೋಣ ಅಂದ್ರೆ ಮಡಿಕೆ ಅಂತ ಅರ್ಥ. ಅಲ್ಲ ಹೆಣ್ಣಿನ ಅಂಡಾಣು ಇಲ್ದೇ ಹೇಗ್ ಹುಟ್ದ ಅಂತ ಕೆಳ್ಭೇಡಿ. ಯಾಕಂದ್ರೆ ಇದೆಲ್ಲ ಪ್ರಕೃತಿಯ ಆಟ. ಈ ಥರಾನೇ ಹುಟ್ಟ್ ಬೇಕು ಅಂತ ಬರ್ದಾದ್ ಮೇಲೆ ಯಾವ್ ತರ ಹುಟ್ಟುದ್ರೆ ಎನು ಅಲ್ವಾ?

ಮೂಲ

2) ಧೃತರಾಷ್ಟ್ರನಿಗೆ ಗಾಂಧಾರಿಯಿಂದ ಅಷ್ಟೇ ಅಲ್ಲದೆ ಒಬ್ಬ ದಾಸಿಯಿಂದಾನೂ ಒಬ್ಬ ಮಗ ಇರ್ತಾನೆ

ಗಾಂಧಾರಿಯ ಬಸಿರಿನ ಸಮಯದಲ್ಲಿ ಧೃತರಾಷ್ಟ್ರನ್ನ ನೋಡ್ಕೊಳಕ್ಕೆ ಸುವಲ್ಲಿ ಅನ್ನೋ ದಾಸಿ ಇರ್ತಾಳೆ. ಅವ್ಳ ಅಂದ ಚಂದದಿಂದ ಆಕರ್ಷಣೆಗೆ ಒಳ್ಗಾಗಿ ಅವ್ಳಿಗೆ ಒಂದು ಮಗುವನ್ನ ಕೊಡ್ತಾನೆ, ಅವ್ನೇ ಯುಯುತ್ಸು. ಮಹಾಧರ್ಮಬೀರುವಾದ ಯುಯುತ್ಸು, ಕೌರವ್ರ ಪರ್ವಾಗಿ ಯುದ್ದ ಮಾಡ್ಲೇ ಇಲ್ಲ. ಪಾಂಡವ್ರಿಗೆನೇ ಸಹಾಯ ಮಾಡ್ತಾ ಬಂದಿದ್ದ. ದುರ್ಯೊಧನನ ತಮ್ಮನಾದ ಇವ್ನು, ಉಳಿದ 98 ಕೌರವ್ರ ಅಣ್ಣ. ಮಹಾಭಾರತ ಯುದ್ದದ ನಂತರ ಇಂದ್ರಪ್ರಸ್ಥವನ್ನ ಇವ್ನು ಆಳಿದ್ದಾನೆ ಅನ್ನೋ ವಿಷ್ಯ ಕೆಲ್ವೊಂದ್ಕಡೆ ದಾಖಲಾಗಿದೆ.

ಮೂಲ

3) ಸಹದೇವ ಅವರಪ್ಪನ ಮೆದುಳನ್ನೇ ತಿಂತಾನೆ

ಪಾಂಡುರಾಜ ತಾನು ಸಾಯೋ ಸಂದರ್ಭದಲ್ಲಿ ತನ್ನೆಲ್ಲಾ ಮಕ್ಕಳಲ್ಲಿ ನನ್ನ ಮೆದುಳನ್ನ ಯಾರಾದ್ರೂ ತಿಂದು ನನ್ನಲ್ಲಿರೋ ಬುದ್ದಿಯನ್ನ ನಿಮ್ಮದಾಗಿಸಿಕೊಳ್ಳಿ ಅಂತ ಕೇಳ್ತಾನಂತೆ.ಅದೇ ಸಮಯಕ್ಕೆ ಸಹದೇವ ಮುಂದೆ ಬಂದು ಮೆದುಳನ್ನ ತಿನ್ನೋದಕ್ಕೆ ಶುರು ಮಾಡ್ತಾನೆ. ಮೊದಲ್ನೆ ತುತ್ತಲ್ಲಿ ಅವ್ನಿಗೆ ಈ ಜಗತ್ತಲ್ಲಿ ಎನೆಲ್ಲ ಆಗತ್ತೆ ಅನ್ನೋದು ಗೊತ್ತಾಗತ್ತೆ. ಎರಡ್ನೇ ತುತ್ತಲ್ಲಿ ಈ ಕ್ಷಣದಲ್ಲಿ ಎನಾಗತ್ತೆ ಅನ್ನೋದು ತಿಳ್ಕೊಂಡ್. ಮೂರನೆ ತುತ್ತು ತಿಂದಾಗ ಮುಂದೇನಾಗತ್ತೆ ಅನ್ನೋದು ಗೊತ್ತಾಗತ್ತೆ. ಅದ್ಕೆ ಸಹದೇವನನ್ನ ಮಹಾಭಾರತದಲ್ಲಿ ಅತಿ ಬುದ್ದಿವಂತ ಅಂತ ಕರೀತಾರೆ .

ಮೂಲ

4) ಅರ್ಜುನಂಗೆ ದುರ್ಯೊಧನನ ಹತ್ತಿರ ಒಂದು ವರ ಕೇಳೋ ಅವಕಾಶ ಇರತ್ತೆ

ಪಾಂಡವರು ವನವಾಸ ಮಾಡೋ ಸಮಯದಲ್ಲಿ ಅವ್ರ ಬಿಡಾರದ ಎರ್ದುರಗಡೇನೇ ದುರ್ಯೋಧನ ಕೂಡಾ ತನ್ನ ಬಿಡಾರ ಹೂಡಿರ್ತಾನೆ. ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿರೋ ಗಂಧರ್ವರು ಮತ್ತು ದುರ್ಯೋಧನನ ನಡುವೆ ಯುದ್ದ ಆಗತ್ತೆ. ಯುದ್ದದಲ್ಲಿ ದುರ್ಯೋಧನನನ್ನು ಗಂಧರ್ವರು ಹೆಡೆಮುರಿ ಕಟ್ಟಿ ಹಾಕಿದ್ರು. ಅದೇ ಸಮಯಕ್ಕೆ ಅರ್ಜುನ ಬಂದು ದುರ್ಯೋಧನನನ್ನು ಬಿಡಿಸ್ತಾನೆ. ಇದ್ರಿಂದ ನಾಚಿಕೆಗೊಂಡ ದುರ್ಯೋಧನ ಅರ್ಜುನನ ಬಳಿ ಎನಾದ್ರೂ ವರ ಕೇಳು ಅಂದಾಗ ಅರ್ಜುನ ಸಮಯ ಬರ್ಲಿ ಕೇಳ್ತೇನೆ ಅಂದಿದ್ದ.

ಮೂಲ

5) ಕುರುಕ್ಷೇತ್ರ ಯುದ್ದ ಯಾವಾಗ ಇಟ್ಕೊಳೋಣ ಅಂತ ದುರ್ಯೋಧನ ಸಹದೇವನ್ನ ಕೇಳ್ತಾನೆ, ಅವನು ಮುಹೂರ್ತ ಇಟ್ಕೊಡ್ತಾನೆ

ಯಾವಾಗ ಸಹದೇವ ತನ್ನ ತಂದೆಯ ಮಿದುಳನ್ನ ತಿಂದ್ನೋ, ಆವಾಗ್ಲೇ ಅವ್ನಿಗೆ ಜ್ಯೋತಿಷ್ಯದ ಜ್ಞಾನ ಕೂಡಾ ಸಿಗತ್ತೆ. ಇದ್ನ ತಿಳಿದಿದ್ದ ದುರ್ಯೋಧನ ಸಹದೇವನ ಬಳಿ ಯಾವಾಗ ಯುದ್ಧ ಮಾಡಿದ್ರೆ ಒಳ್ಳೇದು ಅಂತ ಕೇಳ್ತಾನೆ. ಬದ್ದ ವೈರಿ ಎದ್ರುಗಡೇ ಇದ್ರೂ ತನ್ನ ಕೆಲ್ಸ ತಾನು ಸರಿಯಾಗಿ ಮಾಡ್ಬೇಕು ಅಂತ ಸಹದೇವ ದುರ್ಯೋಧನನಿಗೆ ಒಳ್ಳೆ ಮಹೂರ್ತ ಇಟ್ಕೊಡ್ತನೆ. ಆದ್ರೆ ಯಾವಾಗ ಸಹದೇವ ಭವಿಷ್ಯವನ್ನ ಬಾಯಿಬಿಡ್ತಾನೋ ಅವತ್ತೆ ಅವನಿಗೆ ಸಾವು. ಆದ್ರಿಂದ ಸಹದೇವ ದುರ್ಯೋಧನಂಗೆ ಆವ್ನು ಯುದ್ಧದಲ್ಲಿ ಸೋಲ್ತನೆ ಅಂತ ಗೊತ್ತಿದ್ರೂ ಹೇಳಿರಲ್ಲ.

ಮೂಲ

6) ಕೃಷ್ಣ ಮೋಹಿನಿ ಆಗಿ ಅರ್ಜುನನ ಮಗನ್ನ ಮದುವೆ ಆಗ್ತಾನೆ

ಇರಾವಾನ್ ಅನ್ನೋನು ಅರ್ಜುನ ಮತ್ತೆ ಉಲೂಪಿಯ ಮಗ. ಪಾಂಡವ್ರು ಕುರುಕ್ಷೇತ್ರ ಯುದ್ಧದಲ್ಲಿ ಗೆಲ್ಬೇಕು ಅಂತ ತನ್ನನ್ನೇ ತಾನು ಕಾಳಿ ಮಾತೆಗೆ ಅರ್ಪಿಸಿಕೊಂಡಿರ್ತಾನೆ. ಇರಾವಾನ್ಗೆ ಸಾಯೊ ಮುಂಚೆ ಮದ್ವೆಯಾಗ್ಬೇಕು ಅನ್ನೋ ಆಸೆ ಇರತ್ತೆ. ಇನ್ನೇನ್ ಸಾಯೋ ಅವನ್ನ ಯಾವ್ ಹುಡ್ಗಿ ಒಪ್ಪಿಕೊಳ್ತಾಳೆ ಹೇಳಿ? ಅದಕ್ಕೆ ಶ್ರೀಕೃಷ್ಣ ಮೋಹಿನಿಯ ಅವ್ತಾರ ಎತ್ತಿ ಅವನನ್ನ ಮದ್ವೆಯಾಗ್ತಾನೆ. ಗಂಡ ಸತ್ತ ಮೇಲೆ ಮೋಹಿನಿ ಎಲ್ಲರಂತೆ ಅತ್ತು ದು:ಖ ತೋರ್ಸ್ತಾಳೆ.

ಮೂಲ

7) ಭೀಷ್ಮ ಕೊಟ್ಟಿದ್ದ ಐದು ಚಿನ್ನದ ಬಾಣಗಳ್ನ ದುರ್ಯೋಧನ ಉಪಯೋಗಿಸಿದ್ರೆ ಎಲ್ಲಾ ಪಾಂಡವರೂ ಸತ್ತೋಗ್ತಿದ್ರು, ಆದರೆ ಅವನು ಉಪಯೋಗಿಸಲ್ಲ

ಕುರುಕ್ಷೇತ್ರದ ಯುದ್ದದ ಸಮಯದಲ್ಲಿ ದುರ್ಯೊಧನ ಸಾಲು ಸಾಲು ಅತಿರಥ ಮಹಾರಥರ ಸಾವನ್ನ ಕಂಡು ಸಿಟ್ಟಾಗ್ತಾನೆ. ಅದ್ಕೆ ಭೀಷ್ಮನ ಹತ್ತಿರ ಹೋಗಿ ಸಿಟ್ಟಾಗಿ ಇದೆಲ್ಲ ನಿನ್ನಿಂದ ಅಂತ ಭೀಷ್ಮನ್ನ ದೂರ್ತಾನೆ. ಕೋಪಗೊಂಡ ಭೀಷ್ಮ ಐದು ಬಾಣಗಳನ್ನ ತೆಗ್ದು ಮಂತ್ರೋಚ್ಚಾರಣೆ ಮಾಡಿ, "ಇದ್ನ ನಾಳೆ ಉಪಯೋಗ್ಸು ಪಂಚ ಪಾಂಡವರು ಸಾಯ್ತಾರೆ" ಅಂತ ಅಭಯ ಕೊಡ್ತಾನೆ. ಭೀಷ್ಮನ್ನ ಪೂರ್ತಿಯಾಗಿ ನಂಬದ ದುರ್ಯೋಧನ ಅದನ್ನ ಸುಮ್ನೆ ತಗೊಂಡು ಹೋಗ್ತಾನೆ..

ಮೂಲ

8) ಅರ್ಜುನ ಸಹಾಯ ಮಾಡಿದ ಅಂತ ದುರ್ಯೋಧನ ಅರ್ಜುನಂಗೆ ಒಂದು ವರ ಕೊಡ್ತಾನೆ

ದುರ್ಯೋಧನ ಚಿನ್ನದ ಬಾಣಗಳ್ನ ತಗೊಂಡ ವಿಷ್ಯ ಶ್ರೀ ಕೃಷ್ಣನಿಗೆ ಗೊತ್ತಾಗತ್ತೆ. ಆಗ ಅರ್ಜುನನ ಬಳಿ ಶ್ರೀ ಕೃಷ್ಣ , ದುರ್ಯೋಧನನ ಹತ್ತಿರ ಹೋಗಿ ಆ ಬಾಣ ಕೊಡುವಂತೆ ವರ ಕೇಳು ಅಂತಾನೆ. ಕ್ಷತ್ರಿಯ ಧರ್ಮದವನಾದ ದುರ್ಯೋಧನ ತನ್ನ ಮಾತಿಗೆ ತಪ್ಪಲ್ಲ, ಕೊಡ್ತಾನೆ. ಮತ್ತೆ ಪುನ: ಭೀಷ್ಮನ ಬಳಿ ಹೊಸ ಬಾಣಗಳ್ನ ಕೇಳ್ತಾನೆ. ಆವಾಗ ಭೀಷ್ಮಇವಾಗ ಅದು ಸಾಧ್ಯವಿಲ್ಲ ಅಂತ ಹೇಳ್ತಾನೆ. ಇವಾಗ ಹೇಳಿ ದುರ್ಯೋಧನ ಮನ್ಸು ಮಾಡಿದ್ರೆ ಎನಾಗ್ತಿತ್ತು? ಕಥೇನೆ ಬೇರೆಯಾಗ್ತಿರ್ಲಿಲ್ವಾ?

ಮೂಲ

ಇಷ್ಟೆಲ್ಲ ರಹಸ್ಯಗಳ್ನ ಹೊಂದಿರೋ ಈ ಮಹಾಭಾರತದ ಕಥೆಯನ್ನ ನಾವು ಇದುವರೆಗೆ ನಮ್ ಬಾಲ್ಯದಲ್ಲಿ ಕೇಳೆ ಇಲ್ಲ ಅಲ್ವಾ? ಅದ್ಕೆ ಇದ್ನ 'ಮಹಾ" ಭಾರತ ಅಂತಾರೇನೋ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: