ರಣಜಿ ಟ್ರೋಫಿ ಹೆಂಗ್ ಶುರು ಆಯಿತು ಅಂತ ತಿಳ್ಕೊಂಡು ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಿ

ಕ್ರಿಕೆಟ್ ಬಗ್ಗೆ ಎಷ್ಟ್ ಗೊತ್ತಿದ್ರು ಈ ವಿಷ್ಯ ಗೊತ್ತಿರಲ್ಲ

ಕ್ರಿಕೆಟ್ಟು ಯಾವಾಗಿಂದ ಫೇಮುಸ್ ಆಗಿರ್ಬೋದು?

ಸಚಿನ್ ಸಣ್ಣ ವೈಸಿಗೆ ಆಡಕ್ಕ್ ಶುರು ಮಾಡಿದಾಗ್ಲಾ? ಅಥವಾ ಕಪಿಲ್ ದೇವ್ ವಿಶ್ವ ಕಪ್ ಗೆದ್ದು ತಂದಾಗ್ಲಾ? ಅಥವಾ ಗವಾಸ್ಕರ್ ಕಾಲದಲ್ಲಾ? ಇಲ್ಲ ಧೋನಿ ಬಂದ್ಮೇಲಾ?.... ಇದ್ಯಾವದಕ್ಕೂ ಉತ್ತರ ಇಲ್ಲ.

ಆದ್ರೇ ಒಂದಂತೂ ನಿಜ. ಭಾರತದಲ್ಲಿ ಕ್ರಿಕೆಟ್ ಬಂದಿದ್ದು ಮಹಾರಾಜ ರಂಜಿತ್ ಸಿಂಗ್ ಅನ್ನೋ ವ್ಯಕ್ತಿಯಿಂದ. ರಣಜಿ ಅಂತಾನೇ ಇತಿಹಾಸ ಪುಟದಲ್ಲಿ ಫೇಮಸ್ ಆಗಿದಾನೆ. 

ನಮ್ಗೆಲ್ಲಾ ರಣಜಿ ಪಂದ್ಯ ಶುರು ಆದ್ರಂತೂ ಟಿವಿ ನೋಡದೆ, ಸ್ಕೋರ್ ಕೇಳ್ದೆ ಸುಮ್ನಿರಕ್ಕೆ ಆಗಲ್ಲ. ಅಷ್ಟೆಲ್ಲಾ ಇಷ್ಟ ಪಡೋರು ರಣಜಿ ಯಾರು ರಣಜಿ ಟ್ರೋಫಿ ಅಂತ ಯಾಕೆ ಹೆಸ್ರು ಬಂತು ಅಂತಾ ತಿಳ್ಕೊಂಡಿದ್ದೀರಾ? ಇದನ್ನ ಓದಿ... ಗೊತ್ತಾಗತ್ತೆ.

ರಣಜಿ ಹುಟ್ಟಿಗೆ ಕಾರಣ ಮಹಾರಾಜಾ ರಂಜಿತ್ ಸಿಂಗ್ (ರಂಜಿ) 

ಮೂಲ

ಅನಧಿಕೃತವಾಗಿ ನಮ್ಮ ದೇಶದ ಮೊದಲ ಟೆಸ್ಟ್ ಕ್ರಿಕೆಟ್ ಆಟಗಾರ... ಆದರೆ ಅವರು ಭಾರತದ ಯಾವ ಟೀಮ್ಗೂ ಆಡಿಲ್ಲ!

ಇವರು ಇಂಗ್ಲೇಂಡಿನ ಕೇಂಬ್ರಿಡ್ಜ್ ಟೀಂ 1892ರಲ್ಲಿ ಕ್ರಿಕೆಟ್ ಆಡಿ ಒಳ್ಳೆ ಬ್ಯಾಟ್ಸ್ಮ್ಯಾನ್ ಮತ್ತೆ ಫೀಲ್ಡರ್ ಅಂತ ಫೇಮಸ್ ಆಗಿದ್ರು. ಮುಂದೆ ಇಂಗ್ಲೇಂಡ್ ಟೀಂ ಕ್ಯಾಪ್ಟನ್ ಆಗೋ ಚಾನ್ಸ್ ಬಂದಾಗ ಇವ್ರು ಭಾರತದಲ್ಲಿ ಹುಟ್ಟಿದ ಕಾರಣ ಅಲ್ಲಿ ಸೆಲೆಕ್ಟ್ ಮಾಡ್ಲಿಲ್ವಂತೆ.

ಮೂಲ

ಕ್ರಿಕೆಟ್ಟಲ್ಲಿ ಬ್ಯಾಕ್ ಫುಟ್ ಆಡೋದನ್ನ ಕಂಡು ಹಿಡಿದಿದ್ದು ರಂಜಿ...

ಎಲ್ಲರು ಬರಿ ಫ್ರಂಟ್ ಫುಟ್ ಆಡಿ ಔಟಾದಾಗ, ಈ ಮನುಷ್ಯ ಬ್ಯಾಕ್ ಫುಟ್ ಯಾಕೆ ಆಡಬಾರ್ದು ಅಂತ ಯೋಚ್ನೆ ಮಾಡಿ ಮಾಡಿ ಮಾಇದನಕ್ಕೆ ಇಳಿಸಿದ್ರು..

ಮೂಲ

ಆ ಕಾಲದಲ್ಲೇ ಬರಿ 10 ಮ್ಯಾಚಲ್ಲಿ 1000 ರನ್ ಹೊಡಿದಿದ್ರು...

ಉತ್ತರ ಅಮೇರಿಕಾ ಪೂರ್ತಿ ಪ್ರವಾಸ ಮಾಡಿ ಕ್ರಿಕೆತ್ ಆತ ಆಡಿ ತಮ್ಮ ಕೈಚಲಕ ತೋರ್ಸಿದ್ರು. ಹಾಗೆ ಭಾರತದಲ್ಲೂ ಮೊದ್ಲು ಕ್ರಿಕೆಟ್ ಶುರು ಮಾಡಿದ್ದು ಇವ್ರೇ.

ಮೂಲ

ಕಣ್ಣ್ ಕಳ್ಕೊಂಡ್ರೂ ಕ್ರಿಕೆಟ್ ಬಿಡ್ಲಿಲ್ಲ ರಂಜಿ...

ಕೊನೆ ಕಾಲದಲ್ಲಿ ಇವ್ರಿಗೆ ಕಣ್ಣ್ ಕಾಣ್ತಿರ್ಲಿಲ್ಲ ಆದ್ರೂ ತನ್ನ ತಂಗಿ ಮಗನಿಗೆ ಕ್ರಿಕೆಟ್ ಕಲ್ಸಿದ್ದು ಇವ್ರೇ. ಅವರ ಹೆಸರು ದುಲೀಪ್ ಸಿಂಗ್ ಜಿ. ಅವರ ನೆನಪಿಗೆ ಇರೋ ಟ್ರೋಫಿ ದುಲೀಪ್ ಟ್ರೋಫಿ.

ಮೂಲ

ಇವರ ಸಾವಿನ ನಂತರ ಬಿ.ಸಿ.ಸಿ.ಐ. "ರಂಜಿ" ಹೆಸರನ್ನ "ರಣಜಿ" ಮಾಡಿ ಟ್ರೋಫಿ ಆಡ್ಸಕ್ಕೆ ಶುರು ಮಾಡಿದ್ದು...

ಮೂಲ

ಜುಲೈ 1934ರಲ್ಲಿ ಮೊದಲ್ನೇ ಸಲ ರಣಜಿ ಟ್ರೋಫಿ ಆಡ್ಸಿದ್ದು...

ಈ ಟ್ರೋಫಿನ ದಾನ ಮಾಡಿದ್ದು ಪಟಿಯಾಲಾದ ಮಹಾರಾಜಾ ಭುಪಿಂದರ್ ಸಿಂಗ್.

ಮೂಲ

ಇವತ್ತು ರಣಜಿ ಪಂದ್ಯ ಎರಡು ರಾಜ್ಯದ ನಡುವೆ ನಡಿಯೋ ಕ್ರಿಕೆಟ್ ಪಂದ್ಯವಾಗಿ ನಮ್ ಮಧ್ಯೆ ಇದೆ!

ಮೂಲ

ರಣಜಿ ಕ್ರಿಕೆಟ್ಟಿಗೆ ಇಂತಾ ಇತಿಹಾಸ ಇರೋದು ಗೊತ್ತಿತ್ತಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಕಷ್ಟ ಬಂದಾಗ ಈ 12 ಸತ್ಯಗಳ್ನ ನೆನಪಿಸಿಕೊಂಡರೆ ಇನ್ನಷ್ಟು ಗಟ್ಟಿಯಾಗಿ ಹೊರಬರ್ತೀರಿ

ಸೋಲು ಗೆಲುವು ಎಲ್ಲಕ್ಕೂ ಮನಸ್ಸೇ ಕಾರಣ

ಕಷ್ಟ ಅನ್ನೋದ್ ಎಲ್ಲಾರ್ಗೂ ಬಂದೇ ಬರತ್ತೆ. ಒಂದೊಂದ್ಸಲ ಯಾವಾಗ್ ಮುಗ್ಯತ್ತಪ್ಪ ಅನ್ನೋ ಅಷ್ಟು ಕಷ್ಟಗಳು ಬರತ್ತೆ. 

ಆದ್ರೆ ನಮಗೆ ನಾವೇ ಈ 12 ಸತ್ಯಗಳ್ನ ಹೇಳ್ಕೊಂಡ್ ಸಮಾಧಾನ ಮಾಡ್ಕೊಂಡ್ರೆ ಕಷ್ಟಾನ ಎದುರಿಸೋ ಧೈರ್ಯ ಬರತ್ತೆ.

1. ಗೆಲ್ಲೋದಕ್ಕೆ ಸೋಲೋದಕ್ಕೆ ಎರಡಕ್ಕೂ ನಮ್ಮ ಮನಸ್ಸೇ ಕಾರಣ

ನಾವ್ ಮನಸ್ಸಿನಲ್ಲಿ ಏನ್ ಯೋಚ್ನೆ ಮಾಡ್ತೀವೋ ಅದೇ ತರ ನಡ್ಕೊಳ್ತೀವಿ. ನಮಗೆ ಅದೇ ತರ ಸಂದರ್ಭಗಳು ಒದಗಿ ಬರತ್ತೆ.

ನಾವು ಒಳ್ಳೇದನ್ನ ಯೋಚ್ನೆ ಮಾಡ್ತಾ, ಒಳ್ಳೇ ಕೆಲ್ಸಾನೇ ಯಾವಾಗ್ಲೂ ಮಾಡ್ತಾ ಇದ್ರೆ, ಮನಸ್ಸೂ ಒಳ್ಳೇದಾಗಿರತ್ತೆ. 

2. ನೋವು ಬರತ್ತೆ ಹಾಗೆ ಹೋಗತ್ತೆ

ಎಲ್ಲಾರ್ ಬದುಕಲ್ಲೂ ಒಂದಲ್ಲ ಒಂದು ತೊಂದ್ರೆ ಇದ್ದೇ ಇರತ್ತೆ, ಮನಸ್ಸಿಗೆ ನೋವು ತರೋ ಸಂದರ್ಭನೂ ಇದ್ದಿದ್ದೇ. ಇವೆಲ್ಲ ನಮ್ಮನ್ನ ಇನ್ನೂ ಗಟ್ಟಿ ಆಗ್ಸತ್ತೆ. ಕುಗ್ಗಕ್ಕೆ ಅವಕಾಶ ಕೊಡ್ಬಾರ್ದು ಅಷ್ಟೆ.

3. ಯೋಚ್ನೆ ಮಾಡೋದ್ರಿಂದ ಯಾವ ಸಮಸ್ಯೆನೂ ಪರಿಹಾರ ಆಗಲ್ಲ

ಯೋಚ್ನೆ ಮಾಡೋದ್ರಿಂದ ಯಾವ್ದೂ ಸರಿ ಹೋಗಲ್ಲ. ಅದ್ರಿಂದ ಮನಸ್ಸಿಗೆ ಮತ್ತೆ ದೇಹಕ್ಕೆ ಒತ್ತಡ ಜಾಸ್ತಿ ಆಗತ್ತೆ ಅಷ್ತೇ

4. ಕಷ್ಟ ಎದುರಿಸಕ್ಕೆ ಭಯಪಟ್ರೆ ಮುಂದೆ ಹೋಗಕ್ಕೆ ಆಗಲ್ಲ

ಕಷ್ಟ ಬಂತು ಅಂತ ಭಯದಿಂದ ಮನಸ್ಸು ಮುದುಡಿಕೊಂಡು ಕೂತ್ಕೋಂಡ್ರೆ ಯಾವ ಕೆಲ್ಸನೂ ಆಗಲ್ಲ.  ಹಿಂದೇನೆ ಉಳೀತೀವಿ.

ನಿಮಗೆ ಬೇಕಾಗಿರೋದೆಲ್ಲಾ ಭಯದ ಇನ್ನೊಂದು ಕಡೆ ಇದೆ. ಧೈರ್ಯವಾಗಿ ಮುನ್ನುಗ್ಗಿ ಗುರಿ ಸಾಧಿಸಿ.

5. ಅನುಭವಾನೇ ಇಲ್ದಿದ್ರೆ ಯಾವ್ದೇ ಪಾಠಾನೂ ಇರಲ್ಲ

ನಾವು ತುಂಬಾ ದ್ವೇಷ ಮಾಡೋಂಥ, ಮತ್ತೆ ನಮಗೆ ಬೇಡದೇ ಇರೋ ಅನುಭವಗಳೇ ನಮ್ಮನ್ನ ಗಟ್ಟಿಯಾಗಿ ನಿಲ್ಲೋಹಂಗೆ ಮಾಡೋದು.

6. ಪ್ರಯತ್ನಪಡದೆ ಯಾವ್ದೂ ಬದಲಾಗಲ್ಲ

ಬದಲಾವಣೆ ಅನ್ನೋದು ಏನಾದ್ರೂ ಮಾಡೋದಿಕ್ಕೆ ಸಂಬಂಧಿಸಿದ್ದು. ಸುಮ್ಮನೆ ಇರೋಕಲ್ಲ. ಯಾವುದೇ ವಿಚಾರಾನ ಬದಲಾಯಿಸಕ್ಕೆ ಪ್ರಯತ್ನ ಪಡ್ದೇ ಇದ್ರೆ ಏನೂ ಬದಲಾಗೋದೇ ಇಲ್ಲ.

7. ಆಗೋಗಿರೊದನ್ನ ಬದಲಾಯ್ಸಕ್ಕೂ ಆಗಲ್ಲ

ಆಗೋಗಿದ್ದು ಹಿಂದೆ ಸರಿದಿದ್ದು ಆಯ್ತು. ಅದನ್ನ ಬದಲಾಯ್ಸಕ್ಕೆ ಬ್ರಹ್ಮನಿಂದ್ಲೂ ಆಗಲ್ಲ

8. ರಾತ್ರೋರಾತ್ರಿ ಯಾವ್ದೇ ಕೆಲ್ಸ ಮುಗ್ಸಕ್ಕಾಗಲ್ಲ

ಯಾವ್ದೇ ಕೆಲ್ಸಾನೂ ಒಂದ್ ನಿಮಿಷದಲ್ಲಿ, ಒಂದ್ ದಿನದಲ್ಲಿ ಆಗೋದಿಲ್ಲ. ಸರಿಯಾಗಿ ಮಾಡ್ಬೇಕೂಂದ್ರೆ ಸಮಯ ಬೇಕು. ತಾಳ್ಮೆ ಇರ್ಬೇಕು. ದೊಡ್ಡ ದೊಡ್ಡ ಕನಸುಗಳನ್ನ ಸಾಧಿ ತೋರ್ಸ್ಬೇಕಾದ್ರೆ ಗುರಿ ಅಷ್ಟೆ ಅಲ್ಲ ಅದರ ಕಡೆ ಹೆಜ್ಜೆ ಹೆಜ್ಜೆನೂ ಮೆಲುಕು ಹಾಕ್ತ ಸರಿಯಾದ ದಾರೀಲಿ ನಡಿತಾ ಇದ್ದೀರಾ ಅಂತ ವಿಮರ್ಶೆ ಮಾಡೊ ಛಲ ಇರಲಿ. ಅತುರದಲ್ಲಿ ಮುಗ್ಸಕ್ಕೆ ಹೋಗಿ ಕೈ ಸುಟ್ಕೋಳೋದು ಸರಿಯಲ್ಲ.

9. ಎಲ್ಲಾ ಕೆಟ್ಟದ್ರಲ್ಲೂ ಒಳ್ಳೇದೇನೋ ಒಂದ್ ಇರತ್ತೆ

ಬರೀ ಕೆಟ್ಟದಾಗ್ತಾ ಇದೆ ಅಂತ ಆ ಟೈಮಲ್ಲಿ ಆಗೊ ಒಳ್ಳೇದನ್ನ ಗಮನ್ಸೋದೇ ಇಲ್ಲ ನಾವು. ಆದ್ರೆ, ಎಷ್ಟೇ ಕೆಟ್ಟದಾಗ್ತಾ ಇದ್ರೂ ಏನೋ ಒಂದ್ ಒಳ್ಳೇದ್ ಇದ್ದೇ ಇರತ್ತೆ.

10. ಸೋಲು ಗೆಲ್ಲೋದಿಕ್ಕೆ ಒಂದ್ ಮೆಟ್ಟಿಲು ಅಷ್ಟೇ

ಸೋತೋದೆ ಅಂತ ಆಕಾಶ ಏನೂ ತಲೆ ಮೇಲೆ ಬೀಳಲ್ಲ. ಸೋಲು ಅನ್ನೋದ್ ಗೆಲ್ಲಕ್ಕೆ ಒಂದೊಂದೇ ಮೆಟ್ಟಿಲು.

11. ಬಂದಿರೋ ಕಷ್ಟನ ಎದುರಿಸಕ್ಕೆ ನನ್ನ ಕೈಲಿ ಆಗತ್ತೆ

ಯಾರೋ ಏನೋ ಮಾಡಿದ್ರೂ ಅಂದ್ರೆ ಅದೆಲ್ಲಾ ನಮಗೂ ಆಗ್ಬೇಕೂಂತ ಏನೂ ಇಲ್ಲ. ಐದು ಬೆರೆಳೂ ಸಮ ಇರಲ್ಲ; ಹಾಗೆ ಇದೂನು. ಅವರಿವರಿಗೆ ಹೋಲಿಸಿಕೊಂಡ್ರೆ ನಿಮಗೆ ನೀವು ಅವಮಾನ ಮಾಡ್ಕೊಂಡ್ ಹಾಗೆ.

12. ಯಾರೂ ಒಂಟಿ ಅಲ್ಲ

ಈ ಪ್ರಪಂಚ್ದಲ್ಲಿ ಯಾರೂ ಒಂಟಿ ಅಲ್ಲ. ಏನೇನೆ ಅಡ್ಡಿ ಆತಂಕ ಬಂದ್ರೂ ಯಾರ್ದಾದ್ರೂ ಸಹಾಯ ಸಿಕ್ಕೇ ಸಿಗತ್ತೆ. ಎಲ್ಲಾರ್ಗೂ ಅವರವರ್ ಕಷ್ಟ ಇರತ್ತೆ. ಅದನ್ನ ಗೆದ್ದು ಬರೋ ದಾರಿ ನೋಡ್ಕೋಬೇಕು ಅಷ್ಟೇ.

ನೀವು ಎದುರಿಸ್ತಾ ಇರೋ ಸಂಕಷ್ಟ ಯಾವ್ದೇ ಇರ್ಲಿ – ಈ 12 ಸತ್ಯಗಳ್ನ ಹೇಳ್ಕೊಳಿ. ಮುನ್ನಗ್ಗಕ್ಕೆ ಧೈರ್ಯ ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: