ಸಕ್ಕರೆ ಬದಲು ಬೆಲ್ಲ ತಿನ್ನೋದ್ರಿಂದ ಏನೇನ್ ಒಳ್ಳೇದಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ರಕ್ತ ಶುದ್ಧಿ ಮಾಡುತ್ತೆ

ಸಕ್ಕರೆನ ಬಿಳಿ ವಿಷ ಅಂತ್ಲೇ ಕರೆಯೋ ಡಾಕ್ಟರ್ಗಳು ಇದಾರೆ. ಅದರಿಂದ ಮನುಷ್ಯನ ಆರೋಗ್ಯ ಪೂರ್ತಿ ಹಾಳಾಗೋಗುತ್ತೆ. ಆದರೆ ಹಿಂದಿನಿಂದ ನಮ್ಮಲ್ಲಿ ಅಡುಗೆಗೆ ಬೆಲ್ಲ ಬಳಸೋ ಅಭ್ಯಾಸ ಇದೆ. ಮಿತವಾಗಿ ಬೆಲ್ಲ ಬಳಸಿದರೆ ಎನೆನ್ ಒಳ್ಳೇದಾಗುತ್ತೆ ಗೊತ್ತಾ?

1. ಮಲಬದ್ಧತೆ ಸಮಸ್ಯೆ ಬಗೆಹರಿಸುತ್ತೆ

ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತೆ. ಜಠರದ ಚಲನೆ ಸರಿಯಾಗಿ ಆಗೋತರ ಮಾಡಿ ಮಲಬದ್ಧತೆ ಸಮಸ್ಯೆಯಿಂದ ರಕ್ಷಿಸುತ್ತೆ.

2. ಮೂತ್ರಪಿಂಡ ಚೆನ್ನಾಗಿ ಕೆಲ್ಸ ಮಾಡೋತರ ನೋಡ್ಕೊಳುತ್ತೆ

ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರ ಹಾಕದಿಕ್ಕೆ ಸಹಾಯ ಮಾಡುತ್ತೆ. ದೇಹದಿಂದ ವಿಷಕಾರಿ ವಸ್ತುಗಳ್ನ ಹೊರ ಹಾಕ್ಬೇಕು ಅಂದ್ರೆ ಅವಾಗವಾಗ ಸ್ವಲ್ಪ ಸ್ವಲ್ಪ ಬೆಲ್ಲ ತಿನ್ನಿ.

ಮೂಲ

3. ಜ್ವರ ಬರೋದನ್ನ ತಪ್ಪಿಸುತ್ತೆ

ಜ್ವರದ ಚಿಹ್ನೆಗಳು ಏನಾದ್ರು ಕಾಣಿಸಿಕೊಂಡ್ರೆ ಅಥವಾ ಶೀತ,ಕಫ ಇದ್ದಾಗ ಬೆಲ್ಲ / ಬೆಲ್ಲದ ಕಶಾಯ ಮಾಡ್ಕೊಂಡು ಕುಡೀರಿ. ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಟೀ, ಕಾಫಿಗೆ ಸಕ್ಕರೆ ಬದಲು ಬೆಲ್ಲ ಹಾಕೊಂಡು ಕುಡೀಬೋದು.

4. ರಕ್ತ ಶುದ್ಧಿ ಮಾಡುತ್ತೆ

ಬೆಲ್ಲದ ಅತೀ ಪ್ರಸಿದ್ಧ ಲಾಭವೆಂದರೆ ರಕ್ತ ಶುದ್ಧೀಕರಣ. ನಿತ್ಯವೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.

ಮೂಲ

5. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ

ಬೆಲ್ಲದಲ್ಲಿ ಹಲವು ಆಂಟಿ ಆಕ್ಸಿಡಂಟ್‌ಗಳು, ಮಿನರಲ್ಸ್ ಸತು ಮತ್ತು ಸೆಲೆನಿಯಂ ಇವೆ. ಇವು ರಕ್ತ ಕಣಗಳಿಗೆ ಹಾನಿಯಾಗದಂತೆ ನೋಡ್ಕೊಳುತ್ತೆ. ಸೋಂಕುಗಳ ವಿರುದ್ಧನು ಹೋರಡುತ್ತೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸೋದಕ್ಕೂ ಬೆಲ್ಲ ಸಹಾಯ ಆಗುತ್ತೆ.

6. ದೇಹದಲ್ಲಿರೋ ಕಸಾನ ಆಚೆ ಬರ್ಸತ್ತೆ

ಬೆಲ್ಲ ಸಹಜವಾಗಿ ದೇಹ ಸ್ವಚ್ಛಗೊಳಿಸುವಂತ ವಸ್ತು. ಹೀಗಾಗಿ ಬೆಲ್ಲ ತಿನ್ನೋದ್ರಿಂದ ಬೇಡದೇಇರೋ ವಸ್ತುಗಳ್ನ ದೇಹದಿಂದ ಆಚೆ ಹಾಕುತ್ತೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತೆ. ತುಂಬಾ ಕೊಳಕು ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.

ಮೂಲ

7. ಋತುಸ್ರಾವದ ನೋವು ಕಡಿಮೆ ಮಾಡುತ್ತೆ

ಬೆಲ್ಲ ತಿನ್ನದ್ರಿಂದ ಹಲವಾರು ಪೌಷ್ಠಿಕಾಂಶಗಳು ದೇಹಕ್ಕೆ ಸಿಗೋ ಕಾರಣ ಋತುಸ್ರಾವದ ಟೈಂನಲ್ಲಿ ಬರೋ ನೋವಿಗೆ ಇದು ಒಳ್ಳೇ ಓಷಧಿ. ಋತುಸ್ರಾವದ ಸಮಯದಲ್ಲಿ ನಿಮ್ಮ ಮನೋಸ್ಥಿತಿಯಲ್ಲಿ ಬದಲಾವಣೆ ಆಗ್ತಿದ್ರೆ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತೆ. ಎಂಡೋರ್ಫಿನ್‌ಗಳು ನಮ್ಮ ದೇಹ ಆರಾಮಾಗಿರೋ ತರ ಮಾಡುತ್ತೆ.

8. ಅನೀಮಿಯದಿಂದ ರಕ್ಷಣೆ ಮಾಡುತ್ತೆ

ಬೆಲ್ಲದಲ್ಲಿ ಕಬ್ಬಿಣದ ಅಂಶ ಮತ್ತು ಫೊಲೇಟ್ ಹೆಚ್ಚಾಗಿ ಇರೋ ಕಾರಣ ರಕ್ತದ ಕಣಗಳ ಪ್ರಮಾಣನಾ ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಇದು ತುಂಬಾ ಒಳ್ಳೇದು.

ಮೂಲ

9. ಕರುಳಿನ ಆರೋಗ್ಯ ಹೆಚ್ಚುಮಾಡುತ್ತೆ

ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಾಗಿರೋ ಕಾರಣ ಕರುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇದೆ.

10. ಹೊಟ್ಟೆನ ತಂಪಾಗಿ ಇಡೋ ಶಕ್ತಿ ಇದೆ

ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಾಡಕ್ಕೆ ತುಂಬಾ ಉಪಕಾರಿ. ಬೆಲ್ಲದ ಪಾನಕ ಮಾಡ್ಕೊಂಡು ಕುಡಿಯೋದು ಬೇಸಿಗೆಗೆ ಉತ್ತಮ.

ಮೂಲ

11. ರಕ್ತದೊತ್ತಡ ನಿಯಂತ್ರಣ ಮಾಡುತ್ತೆ

ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರೋ ಕಾರಣ ದೇಹದಲ್ಲಿ ಆಸಿಡ್ ಅಂಶವನ್ನ ನಿಭಾಯಿಸುತ್ತೆ. ಹೀಗಾಗಿ ರಕ್ತದೊತ್ತಡ (ಬಿಪಿ)ನ ಹತೋಟಿಲೀ ಇಡುತ್ತೆ.

12. ಶ್ವಾಸಕೋಶದ ಸಮಸ್ಯೆ ಕಡಿಮೆ ಮಾಡುತ್ತೆ

ಬೆಲ್ಲವನ್ನು ದಿನ ನಿತ್ಯ ತಿನ್ನೋದ್ರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ಕಡಿಮೆ  ಆಗುತ್ತೆ. ಜೊತೆಗೆ ಎಳ್ಳು ಬೆರೆಸಿ ತಿಂದ್ರೆ ಶ್ವಾಸಕೋಶಕ್ಕೆ ಉತ್ತಮ.

13. ಸಂಧಿ ನೋವಿಗೆ ಒಳ್ಳೇ ಓಷಧಿ

ನಿಮಗೆ ಸಂದುಗಳಲ್ಲಿ, ಕೀಲು ನೋವಿದ್ದರೆ, ನೋವು ಕಡಿಮೆ ಮಾಡದ್ರಲ್ಲಿ ಬೆಲ್ಲ ಸಹಕಾರಿ. ಶುಂಠಿ ಜೊತೆ ಸೇವಿಸಿ ಬೆಲ್ಲ ತಿನ್ನಿ ಮೂಳೆಗಳಿಗೂ ಇದು ಒಳ್ಳೇದು.

ಮೂಲ

14. ತೂಕ ಕಡಿಮೆ ಮಾಡ್ಕೋಬೋದು

ತೂಕ ಇಳಿಸಕೂ ಬೆಲ್ಲ ಉಪಕಾರಿ. ಪೊಟಾಶಿಯಂ ಹೆಚ್ಚಾಗಿರುವ ಕಾರಣ ಎಲೆಕ್ಟ್ರೊಲೈಟ್ ಗಳನ್ನು ಸಮತೋಲನ ಮಾಡಿ ಚಯಾಪಚಯ ಕ್ರಿಯೆಗೆ ಬೆಲ್ಲ ಸಹಾಯ ಮಾಡುತ್ತೆ.

15. ನಮ್ಮ ದೇಹಕ್ಕೆ ಬೇಕಾಗಿರೋ ಶಕ್ತಿ ಕೊಡುತ್ತೆ

ಸಕ್ಕರೆ ದೇಹಕ್ಕೆ ಕಾರ್ಬೋಹೈಡ್ರೇಟ್ ಕೊಡುತ್ತೆ ಆದರೆ ಬೆಲ್ಲ ದೇಹಕ್ಕೆ ದೀರ್ಘಕಾಲದ ಶಕ್ತಿ ಕೊಡುತ್ತೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಮಾಡಲ್ಲ. ಸುಸ್ತು ಮತ್ತು ನಿಶ್ಶಕ್ತಿ ಇರುವವರಿಗೂ ಒಳ್ಳೇದು.

ಮೂಲ

ಸಕ್ಕರೆ ಬಿಟ್ಟು ಬೆಲ್ಲ, ಆರ್ಗಾನಿಕ್ ಬೆಲ್ಲ ತಿಂದು ನೋಡ್ರಿ. ರುಚಿನೂ ಸಕ್ಕತ್ತಾಗಿರುತ್ತೆ. ಸಕ್ಕರೆ ಕಾಯಿಲೆ ಬರೋದನ್ನು ಸಹ ತಡಿಯುತ್ತೆ. ಮೊದಮೊದಲು ಕಾಫಿ-ಟೀಗೆಲ್ಲ ಬೆಲ್ಲ ಹಾಕೊಳೋದು ಸ್ವಲ್ಪ ರುಚಿಗೆ ಸರಿ ಅನ್ನಿಸಲ್ಲ, ಆದರೆ ಬರ್ತಾ ಬರ್ತಾ ಅಡ್ಜಸ್ಟ್ ಆಗುತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: