ಬಾಳೆ ಹೂವು ಅಡುಗೆಗೆ ಉಪಯೋಗ್ಸೋದ್ರಿಂದ ಏನೇನ್ ಲಾಭ ಇದೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ರುಚೀಗೂ ಸೈ ಆರೋಗ್ಯಕ್ಕೋ ಜೈ

ಬಾಳೆಕಾಯಿ, ಬಾಳೆಹಣ್ಣು, ಬಾಳೆ ದಿಂಡು, ಬಾಳೇಹೂವು...ಹೀಗೆ ಎಲ್ಲಾನೂ ಮನುಷ್ಯನ ದೇಹಕ್ಕೆ ಒಂದೊಂದು ರೀತೀಲಿ ಒಳ್ಳೇದು.

ಬಾಳೆಹೂವಿಂದಾನು ಆರೋಗ್ಯಕ್ಕೆ ಏನೇನು ಲಾಭ ಇದೆ ಇಲ್ಲಿ ಪಟ್ಟಿ ಮಾಡಿದ್ದೀವಿ. ಹಂಗಂತ ಹಂಗಂಗೆ ತಿಂದ್ಬಿಟ್ಟೀರ ಮತ್ತೆ, ಬಾಳೆಹೂವು ಗೊಜ್ಜು, ಚಟ್ನಿ, ಪಲ್ಯ, ಸಾಂಬಾರು ಈ ತರಾ ಏನಾದ್ರು ಮಾಡ್ಕೊಂಡ್ ತಿನ್ನಿ. 

1. ಇನ್ಫೆಕ್ಷನ್ ಆಗಲ್ಲ, ಮಲೇರಿಯಾ ಬರೋದೇ ಇಲ್ಲ 

ಬಾಳೆಹೂವಲ್ಲಿ ಎಥೆನಾಲ್ ಅಂಶ ಇರೋದ್ರಿಂದ ಇದು ಯಾವುದೇ ಬ್ಯಾಕ್ಟೀರಿಯಾ ಬೆಳ್ಯಕ್ಕೆ ಬಿಡಲ್ಲ. ಚರ್ಮದ ರೋಗ ಬೇಗ ವಾಸಿಯಾಗತ್ತೆ. ಗಾಯ ಆಗಿದ್ರೆ ಬೇಗ ಮಾಯತ್ತೆ.

ಮೂಲ

2. ದೇಹಕ್ಕೆ ಬೇಗ ವಯಸ್ಸಾಗಲ್ಲ

ಈ ಬಾಳೆಹೂವಲ್ಲಿ ವಿಟಮಿನ್ ಸಿ, ಟ್ಯಾನಿನ್ಸ್, ಪ್ಲಾವನಾಯಿಡ್ಸ್ ಇರೋದ್ರಿಂದ ಜೀವ ಕೋಶದ ಮೇಲೆ ಒತ್ತಡ ಕಮ್ಮಿ ಆಗತ್ತೆ, ಇದ್ರಿಂದ ಬೇಗ ವಯಸ್ಸಾಗಲ್ಲ. ಮೈಯಲ್ಲಿ ಯೌವ್ವನ ಜಾಸ್ತಿ ಆಗತ್ತೆ. 

ಮೂಲ

3. ಹೃದಯಾಘಾತ ಆಗೋದನ್ನ ತಪ್ಸತ್ತೆ 

ಬಾಳೆಹೂವಲ್ಲಿ ಪೊಟ್ಯಾಸಿಯಂ ಇದೆ, ಇದು ಬಿ.ಪಿ. ಜಾಸ್ತಿ ಆಗಕ್ಕೆ ಬಿಡಲ್ಲ. ಹೃದಯದ ಆರೋಗ್ಯನ ಕಾಪಾಡತ್ತೆ.

4. ಜೀರ್ಣಶಕ್ತಿ ಜಾಸ್ತಿ ಮಾಡತ್ತೆ 

ಎಷ್ಟೋ ಜನಕ್ಕೆ ತಿಂದಿದ್ದು ಜೀರ್ಣನೆ ಆಗಲ್ಲ. ಹೊಟ್ಟೆ ಕೆಟ್ಟರೆ, ಹೂಟೆ ಉರಿ ಇದ್ರೆ, ಬೆಳ್ಗೆ ಟೈಮಲ್ಲಿ ಸರಿಯಾಗಿ ಆಗ್ದೇ ಹೋದ್ರೆ, ಬಾಳೆಹೂವನ್ನ ತಿನ್ನಿ ಇದ್ರಲ್ಲಿ ನಾರಿನಂಶ ಜಾಸ್ತಿ ಇರೋದ್ರಿಂದ ಎಲ್ಲ ಸರಿಹೋಗತ್ತೆ.

ಮೂಲ

5. ಮನಸ್ಸಿನ ಮೇಲೆ ಒತ್ತಡ ಕಮ್ಮಿ ಮಾಡತ್ತೆ 

ಇದ್ರಲ್ಲಿ ಮ್ಯಾಗ್ನೇಸಿಯಮ್ಮಿನ ಅಂಶ ಇರೋದ್ರಿಂದ ಇದು ದೇಹಕ್ಕೆ ಆರಾಮಿನ ಅನುಭವ ಕೊಡತ್ತೆ. ರಾತ್ರಿ ಚೆನ್ನಾಗಿ ನಿದ್ದೆ ಬರ್ಸತ್ತೆ. ಹೀಗೆ ಒತ್ತಡ ಕಮ್ಮಿ ಮಾಡತ್ತೆ.

ಮೂಲ

6. ಮುಟ್ಟಿನ ದಿನದಲ್ಲಿ ಹೆಂಗಸರ ಆರೋಗ್ಯ ಕಾಪಾಡತ್ತೆ 

ಮುಕ್ಕಾಲ್ವಾಸಿ ಹೆಂಗಸರ ಕೊರಗು ಅಂದ್ರೆ ಪ್ರತಿ ತಿಂಗ್ಳು ಸರಿಯಾದ ಟೈಮಿಗೆ ಮುಟ್ಟಾಗಲ್ಲ ಅಂತ. ಬಾಳೆಹೂವಲ್ಲಿ ಪ್ರೊಜೆಸ್ಟೀರಾನ್ ಇರೋದ್ರಿಂದ ಪ್ರತಿ ತಿಂಗ್ಳು ಸರಿಯಾದ ಟೈಮಿಗೆ ಆಗೊತರ ಮಾಡತ್ತೆ.

ಮೂಲ

7. ಸಕ್ಕರೆ ಕಾಯ್ಲೆ ನಿಯಂತ್ರಣಕ್ಕೆ ಒಳ್ಳೇದು 

ಬಾಳೆಹೂವಲ್ಲಿ ನಾರಿನಂಶ ಜಾಸ್ತಿ ಇದೆ ಆದ್ರಿಂದ ಸಕ್ಕ್ರೆ ಖಾಯಿಲೆ ಇರೋವ್ರಿಗೆ ಇದು ಒಳ್ಳೇದು. ಇದು ದೇಹದ ಸಕ್ಕರೆ ಮಟ್ಟ ಜಾಸ್ತೀನೂ ಆಗದೇರೋ ಹಾಗೆ, ತೀರಾ ಕಮ್ಮಿನೂ ಆಗ್ದಿರಂಗೆ ನೋಡ್ಕೊಳತ್ತೆ. ಇದ್ರಿಂದ ಕಿಡ್ನಿ ಸಮಸ್ಯೆ, ನರದ ಸಮಸ್ಯೆನೂ ಕಮ್ಮಿ ಆಗತ್ತೆ.

ಮೂಲ

8. ಅನೀಮಿಯಾ ರೋಗಕ್ಕೆ ಮದ್ದು 

ದೇಹದಲ್ಲಿ ಕಬ್ಬಿಣದ ಅಂಶ ಕಮ್ಮಿ ಆಗಿರತ್ತೆ. ಕೆಂಪು ರಕ್ತ ಕಣಗಳು ಕಮ್ಮಿ ಇರತ್ತೆ. ಇದಕ್ಕೆ ಅನೀಮಿಯಾ ಅಂತಾರೆ. ಕಬ್ಬಿಣದ ಅಂಶ ಮತ್ತು ಕೆಂಪು ರಕ್ತ ಕಣಗಳನ್ನ ದೇಹದಲ್ಲಿ ಹೆಚ್ಚಿಸಕ್ಕೆ ಏನು ಬೇಕೋ ಅದು ಬಾಳೆಹೂವಲ್ಲಿದೆ. 

ಮೂಲ

ಈಗ್ಲಾದ್ರೂ ಮನೇಲಿ ಬಾಳೆಗಿಡ ಇದ್ರೆ  ಬಾಳೆಹೂವು ಬಿಟ್ಟಗ ಕಿತ್ತಿ ಬಿಸಾಕದೆ ಅಡುಗೆ ಮಾಡ್ಕೊಂಡು ತಿಂತೀರಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: