ನಿಮ್ಮ ಕಿವಿ ಹೆಂಗಿದೆ ಅನ್ನೋದರ ಮೇಲೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಇಷ್ಟು ಹೇಳಬಹುದು

ತುಂಬ ಚಿಕ್ಕದಾ?‌ ಹಾಗಾದ್ರೆ ಎಚ್ಚರಿಕೆಯಿಂದ ಕೆಲಸ ಮಾಡ್ತೀರಿ

ಪ್ರತಿಯೊಬ್ರಿಗೂ ಅವರ ವ್ಯಕ್ತಿತ್ವದ ಬಗ್ಗೆ ತಿಳ್ಕೊಳ್ಳೋ ಆಸಕ್ತಿ ಇರುತ್ತೆ. ಅದೂ ಅವರ ಬಗ್ಗೆ ಅವರ ದೇಹದ ರಚನೇನೆ ಹೇಳುತ್ತೆ ಅಂದ್ರೆ ಕಾತರದ ಜೊತೆ ಆಶ್ಚರ್ಯನೂ ಆಗದೇ ಇರಲಾರ್ದು ಅಲ್ವ?

ಹಾಗಿದ್ರೆ ನಿಮ್ಮ ಕಿವಿ ಹೇಗಿದೆ, ಜೊತೆಲಿ ನಿಮ್ಮ ಬಗ್ಗೆ ನಿಮ್ಮ ಕಿವಿ ಏನು ಹೇಳುತ್ತೆ ತಿಳ್ಕೊಳ್ಳಿ..

1. ಕಿವಿಯ ಕೆಳಭಾಗ ಮುಖದಿಂದ ಬೇರೆ ಆಗಿದ್ರೆ

ನೀವು  ಸ್ವತಂತ್ರ ವ್ಯಕ್ತಿ ಹಾಗೂ ಸಕಾರತ್ಮಕ ಚಿಂತಕರು.  ಪ್ರೀತಿ ಮಾಡೊದ್ರಲ್ಲಿ ಜಯಿಸೋದ್ರಲ್ಲಿ ಸಾಹಸಿಗಳು ಹಾಗೆ ಸ್ಪುರದ್ರೂಪಿಗಳು. ನಿಮ್ಮ ಆತ್ಮವಿಶ್ವಾಸ ಎಲ್ರಿಗೂ ಸ್ಪೂರ್ತಿ ಆಗುತ್ತೆ.

ಮೂಲ

2. ಕಿವಿಯ ಕೆಳಭಾಗ ಮುಖಕ್ಕೆ ಅಂಟಿದ ಹಾಗಿದ್ರೆ

ನಿಮ್ಮದು ಸ್ಥಿರ ವ್ಯಕ್ತಿತ್ವ, ಜೀವನದಲ್ಲಿ ಗುರಿ ಕಡೆಗೆ ಮುನ್ನುಗ್ತೀರಿ. ನೀವು ಯಾರನ್ನದ್ರೂ ಬೇಗ ಹಚ್ಕೊತೀರಿ ಹಾಗೆ ಗಾಢವಾಗಿ ಪ್ರೀತಿಸ್ತೀರಿ

ಮೂಲ

3. ಕಿವಿ ಡೈಮಂಡ್ ತರ ಕಂಡ್ರೆ

ನೀವು ಕ್ರಿಯಾಶೀಲರು. ಜನ ನಿಮ್ಮನ್ನ ಗಮನಿಸಲಿ ಹಾಗೆ ಪ್ರಾಮುಖ್ಯತೆ ಕೊಡ್ಲಿ ಅಂತ ಆಶಿಸ್ತೀರಿ. ಒಮ್ಮೆ ಇದ್ದ ಹಾಗೆ ಮತ್ತೊಮ್ಮೆ ಮೂಡ್ ಇರಲ್ಲ. ನಿಮ್ಮ ಸ್ನೇಹಿತ್ರಿಗೆ ನೀವೇನು ಅಂತ ಅರ್ಥ ಮಾಡ್ಕೊಳ್ಳೋದು ತುಂಬ ಕಷ್ಟ.

ಮೂಲ

4. ಕಿವಿ ರೆಕ್ಟಾಂಗಲ್ ತರ ಇದ್ರೆ

ನೀವು ನಂಬಿಕೆಗೆ ಅರ್ಹರು, ಮಾತಿಗೆ ನಿಲ್ತೀರಿ. ನೀವು ಕೆಲಸದಲ್ಲಿ ನಿಪುಣರು ಮತ್ತೆ ಯಾವುದೇ ಕೆಲ್ಸ ಪೂರ್ತಿ ಮುಗಿಸ್ತೀರಿ. ಹಾಗಾಗಿ ನಿಮ್ಮ ಸುತ್ತಮುತ್ತ ಸಣ್ಣ ಪುಟ್ಟ ವ್ಯತ್ಯಾಸಗಳು ಆಗೋದು ನಿಮಗೆ ಹಿಡ್ಸಲ್ಲ.

ಮೂಲ

5. ತುಂಬ ಚಿಕ್ಕ ಕಿವಿ ಆದ್ರೆ

ನೀವು ನಮ್ರಾರಾಗಿರ್ತೀರಿ, ಎಚ್ಚರಿಕೆಯಿಂದ ಕೆಲಸಗಳ್ನ ಮಾಡ್ತೀರಿ. ನಿಮ್ಮ ಕಿವಿಹಾಳೆ ಇನ್ನೂ ಮಂದ ಇದ್ರೆ ನೀವು ಇನ್ನೂ ಹೆಚ್ಚು ಮೃದು, ನಮ್ರ ಹಾಗೂ ಭಯಸ್ತರು.

ಮೂಲ

6. ದೊಡ್ಡ ಕಿವಿ ಆದ್ರೆ

ನೀವು ಮಾತುಗಾರರು, ಕ್ರಿಯಾಶೀಲರು. ನೀವು ಮಾತುಗಳನ್ನ ಕ್ರಿಯೆಗೆ ತರೋಕೆ ತುಂಬ ಸಮಯ ತೊಗೊಳಲ್ಲ. ಬೇರೆಯವರ ಮಾತನ್ನ ಪಾಲಿಸೋಕ್ಕೆ ಇಷ್ಟ ಪಡಲ್ಲ.

ಮೂಲ

7. ದೊಡ್ದದಾಗಿ ತೆಳುವಾದ ಕಿವಿ 

ನೀವು ಅಧ್ಯಾತ್ಮದತ್ತ ಮುನ್ನುಗ್ಗುತೀರಿ ಜೊತೇಲಿ ಜೀವನದಲ್ಲಿ ಎತ್ತರಕ್ಕೆ ಏರ್ತೀರಿ.

ಮೂಲ

8. ಗುಂಡಾದ ಕಿವಿ

ನೀವು ಎಲ್ಲರ ಮಧ್ಯೆ ಗುರ್ತಿಸ್ಕೊಳ್ಳೋಕೆ ಇಷ್ಟ ಪಡ್ತೀರಿ. ನೀವು ಸುಖ ಜೀವಿಗಳು. ನಿಮಗೆ ಸ್ನೇಹಿತರು ಹೆಚ್ಚು.

ಮೂಲ

9. ಕಿವಿಹಾಳೆ ಮಂದ ಆದ್ರೆ

ನೀವು ಕಷ್ಟಜೀವಿಗಳು, ಯಾವುದೇ ಸಂಬಂಧಕ್ಕೆ ಬಧ್ಧರಾಗಿರ್ತೀರಿ. ಹೆಣ್ಣು ಮಕ್ಕಳಿಗೆ ಇಂತಹ ಕಿವಿ ಇದ್ರೆ ಅವರ ಗಂಡಂದಿರು ತುಂಬಾ ಅದೃಷ್ಟ ಮಾಡಿರ್ತಾರೆ. 

ಮೂಲ

10.  ಮುಖಕ್ಕಿಂತ ಕಿವಿ ಬಣ್ಣ ತೆಳುವಾಗಿದ್ರೆ

ಇದು ಒಳ್ಳೆ ಲಕ್ಷಣ. ಈ ರೀತಿ ಕಿವಿ ಇದ್ದವರಿಗೆ ನಾಯಕರಾಗೋ ಗುಣ ಇರುತ್ತೆ ಜೊತೇಲಿ ಗೌರವ ಸಂಪಾದಿಸ್ತಾರೆ.

ಮೂಲ

ನಿಮ್ಮ ಕಿವಿ ಹೇಗಿದೆ, ನಿಮ್ಮ ಲಕ್ಷಣ ಸರಿ ಇದ್ಯಾ? 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: