ಜೀವನದಲ್ಲಿ ಈ 12 ಅನುಭವಗಳಾದ್ರೆ ಹೊಸ ಹೊಸ ಸಾಧ್ಯತೆಗಳು ಕಾಣಿಸಕ್ಕೆ ಶುರು ಆಗಿ ತುಂಬ ಬೆಳೀತೀರಿ

ಕೆಲವೊಂದ್ಸಲ ನಾವೇ ಬೇಡ ಅಂತ ಬಿಟ್ಟುಬಿಡ್ತೀವಿ

ಜೀವನ ಅನುಭವಗಳ ಸಂತೆ ಅಂತಾರೆ. ಅದು ಕೆಟ್ಟದ್ದೋ ಒಳ್ಳೋದೋ ಎಲ್ಲರಿಗು ಒಂದಲ್ಲ ಒಂದು ಅನುಭವ ಆಗೇ ಇರುತ್ತೆ. ಅದರಿಂದ ಪಾಠನೂ ಕಲಿತಿರ್ತೀವಿ. ಆದ್ರೆ ಕೆಲವೊಂದು ಅನುಭವಗಳನ್ನು ಅನುಭವಿಸಿಯೇ ತೀರಬೇಕು. ಕೆಳಗೆ ಕೊಟ್ಟಿರೋ 12 ಅನುಭಗಳು ನಿಮಗೆ ಆದರೆ ಜೀವನದಲ್ಲಿ ಹೊಸ ಹೊಸ ಸಾಧ್ಯತೆಗಳು ಕಾಣಿಸಕ್ಕೆ ಶುರು ಆಗುತ್ತೆ. ಬೆಳೀತೀರಿ. ಒಂದೊಂದಾಗಿ ಬರೋಣ್ವಾ?

1. ಯಾವುದಾದರೂ ಬೇರೆ ದೇಶದಲ್ಲಿ ವಾಸ ಮಾಡೋಂತ ಅನುಭವ

ಹೊಸ ಊರು, ಪರಿಚಯಸ್ಥರು, ಗೆಳೆಯ ಗೆಳತಿ ಯಾರೂ ಇರಲ್ಲ. ಒಂಥರಾ ಏಕಾಂಗಿ ಬದುಕು ಅನ್ನಿಸಿಬಿಡುತ್ತೆ. ಈ ಅನುಭವ ಪಡಿಯೋಕೆ ಎಲ್ಲರ ಕೈಲೂ ಸಾಧ್ಯವಾಗಲ್ಲ. ಉದ್ಯೋಗ, ವ್ಯಾಪಾರಕ್ಕಾಗಿ ಪರಸ್ಥಳಗಳಿಗೆ ಹೋಗೋಂತವರಿಗೆ ಮಾತ್ರ ಈ ರೀತಿ ಅನುಭವ ಆಗಿರುತ್ತೆ. ಈ ರೀತಿ ಅನುಭವಾನ ನೀವು ಯಾಕೆ ಒಂದ್ಸಲ ಪಡ್ಕೋಬಾರ್ದು?

ಮೂಲ

2. ಅತಿಯಾದಂತ ದುಃಖ, ಹೃದಯ ಚೂರುಚೂರಾಗೋಂತ ಅನುಭವ

ಈ ರೀತಿ ಎಲ್ಲರಿಗೂ ಆಗಕ್ಕೆ ಸಾಧ್ಯವಿಲ್ಲ ಬಿಡಿ. ಆದರೂ ಪ್ರತಿಯೊಬ್ರ ಜೀವನದಲ್ಲೂ ಒಂದಲ್ಲ ಒಂದ್ಸಲ ಅತಿಯಾದ ದುಃಖ, ಹೃದಯ ಚೂರುಚೂರಾಗೋಂತ ಅನುಭವ ಸಂಭವಿಸುತ್ತದೆ. ಇದ್ರಿಂದ ಧೃತಿಗೆಡಬಾರದು. ಶಿಲ್ಲಿ ಕೆತ್ತಿದಷ್ಟೂ ಸುಂದರವಾಗಿರೋಂತ ಮೂರ್ತಿ ಹೇಗೆ ರೂಪಗೊಳ್ಳುತ್ತೋ ಹಾಗೆ ನಮ್ಮ ಮನಸ್ಸು ಈ ರೀತಿ ಅನುಭವಗಳಿಂದ ವಿಕಾಸ ಆಗುತ್ತೆ. ನಮ್ಮ ಎಲ್ಲಾ ಭ್ರಮೆಗಳನ್ನು ತೊಲಗಿಸುತ್ತವೆ ಈ ತರದ ಅನುಭವ. 

ಮೂಲ

3. ಯಾರೂ ಜೊತೆಗೆ ಇಲ್ದಂಗೆ ಒಬ್ಬರೇ ಪ್ರಯಾಣ ಹೊರಡುವ ಅನುಭವ

ನಿಮ್ಮನ್ನ ನೀವು ಚೆನ್ನಾಗಿ ಅರ್ಥ ಮಾಡ್ಕೋಬೇಕು ಅಂದ್ರೆ ಈ ತರದ ಅನುಭವನ್ನ ಪಡೇಲೇಬೇಕು. ಸಾಧ್ಯವಾದರೆ ಟ್ರೈ ಮಾಡಿ. ಗಂಟುಮೂಟೆ ಕಟ್ಕೊಂಡು ಒಬ್ರೇ ಪ್ರವಾಸ, ಪ್ರಯಾಣ ಹೊರಟುಬಿಡಿ. ಜೊತೆಗೆ ಯಾರೂ ಇಲ್ಲ. ಹೆಂಗ್ ಹೋಗೋದು ಅಂದ್ಕೊಳ್ಳೋರೆ ಜಾಸ್ತಿ. ಈ ರೀತಿ ಮಾಡೋದ್ರಿಂದ ನಿಮ್ಮನ್ನ ನೀವು ಚೆನ್ನಾಗಿ ಅರ್ಥ ಮಾಡ್ಕೊಳ್ಳಕ್ಕೆ ಸಾಧ್ಯವಾಗುತ್ತೆ.

ಮೂಲ

4. ಅನುಭವಿಸಿಯೇ ತೀರಬೇಕು ಸಾಕುನಾಯಿ ಜೊತೆಗಿನ ಒಡನಾಟ

ಮನುಷ್ಯ ಮನುಷ್ಯರ ನಡುವಿನ ಒಡನಾಡ ಬಿಟ್ಟಾಕಿ. ಸಾಕುನಾಯಿ ಜೊತೆಗಿನ ಒಡನಾಡದಿಂದ ಆಗೋಂತ ಅನುಭವ ನಿಜಕ್ಕೂ ನಮ್ಮ ಮನಸ್ಸನ್ನ ಅರಳಿಸತ್ತೆ. ಜೀವನದಲ್ಲಿ ಈ ರೀತಿಯ ಒಡನಾಡ ಇನ್ಯಾವುದರಲ್ಲೂ ಸಿಗಲ್ಲ. ನಂಬಿಕೆ ಅಂದ್ರೆ ಏನು, ಏನನ್ನೂ ನಿರೀಕ್ಷಿಸದೆ ಪ್ರೀತಿಸೋದು ಹೇಗೆ ಅಂತ ಈ ಅನುಭವ ಹೇಳಿಕೊಡುತ್ತೆ. 

ಮೂಲ

5. ಜೀವನದಲ್ಲಿ ಒಮ್ಮೆನಾದ್ರೂ ಕಂಠಪೂರ್ತಿ ಕುಡಿದು ಎಂಜಾಯ್ ಮಾಡೋಂತ ಅನುಭವ

ಮಿತಿಯಿಲ್ಲದ ಕುಡಿತ ಕೆಟ್ಟದ್ದು ಅಂತ ಎಲ್ರಿಗೂ ಗೊತ್ತು (ಮಿತಿಯಲ್ಲಿದ್ರೆ ಅದರ ಕಥೇನೇ ಬೇರೆ). ಆದ್ರೆ ಜೀವನದಲ್ಲಿ ಒಮ್ಮೆನಾದ್ರೂ ಕುಡೀದಿದ್ರೆ ನಿಮಗೆ ಈ ಅನುಭವ ಸಿಗಲ್ಲ. ಜವಾಬ್ದಾರಿ ಅರಿತು ಕುಡಿಯೋದ್ರಿಂದ ನಿಮ್ಮ ಆಲೋಚನೆಗಳಿಗೆ ರೆಕ್ಕೆ ಬರುತ್ತೆ. ಹೊಸ ಹೊಸ ಕನಸುಗಳಿಗೆ ಉತ್ತೇಜನ ಸಿಗುತ್ತೆ. ಮೈಮರೆತು ಒಮ್ಮೆನಾದ್ರೂ ಕುಡಿದು ಬಿಡಿ, ಏನಾಗಲ್ಲ!

ಮೂಲ

6. ಮೂವತ್ತು ವರ್ಷ ದಾಟೋಕು ಮುನ್ನ ಒಂದು ರೋಡ್ ಟ್ರಿಪ್ ಹೋಗೋಂತ ಅನುಭವ

ಯಾವಾಗ್ಲೂ ಗೊತ್ತಿರೋಂತ ಸ್ಥಳಗಳಿಗೆ ಹೋಗೋದ್ರಲ್ಲಿ ಅಂತಾ ಏನ್ ಮಜಾ ಇರಲ್ಲ. ಅದ್ರಲ್ಲೂ ಹೊಸ ರೂಟು, ಹೊಸ ರೋಡು ಹುಡುಕಿಕೊಂಡು ಹೊರಡಿ. ಜೊತೆಗೆ ಗೆಳೆಯ/ಗೆಳತಿ ಇರ್ಲಿ. ಈ ಅನುಭವಾನ ಮೂವತ್ತು ವರ್ಷ ದಾಟೋಕು ಮುನ್ನ ಪಡ್ಕೊಂಡ್ರೆನೇ ನಿಜವಾದ ಥ್ರಿಲ್ ಸಿಗೋದು. 

ಮೂಲ

7. ಏಕಾಂಗಿಯಾಗಿ ಇದ್ದು ನೋಡಿ, ನಿಮ್ಮೊಳಗಿನ ಹೊಸ ವ್ಯಕ್ತಿ ಪರಿಚಯವಾಗ್ತಾನೆ

ಈ ತರದ ಅನುಭವ ಪಡ್ಕೋಬೇಕು ಅಂದ್ರೆ ಏಕಾಂಗಿಯಾಗಿ ಒಂದಷ್ಟು ದಿನ ಕಳೀಬೇಕು. ಜೊತೆಗೆ ಯಾರೂ ಇರ್ಬಾದ್ರು. ಆಗ ನಿಮ್ಮನ್ನು ನೀವು ಅರ್ಥ ಮಾಡ್ಕೊಳ್ಳೋಕೆ, ನಿಮ್ಮೊಳೊಗಿನ ಹೊಸ ವ್ಯಕ್ತಿಯನ್ನು ಹೊರಗೆ ತರೋಕೆ ಸಾಧ್ಯವಾಗುತ್ತೆ.

ಮೂಲ

8. ಏನೇ ಕೆಲಸ ಮಾಡಿದ್ರೂ ಅತ್ಯುತ್ತಮವಾಗಿ ಮಾಡಿದಾಗ ಆಗೋ ಅನುಭವ

ಜೀವನದಲ್ಲಿ ಎಲ್ರೂ ಸುಮ್ನೆ ಏನೋ ಒಂದು ಕೆಲಸ ಮಾಡ್ಕೊಂಡ್ ಹೋಗ್ತಿತಾರ್ತೆ. ಕಡೆಗೆ ರಿಟೈರೂ ಆಗ್ತಾರೆ. ಗುರುತಿಸೋಂತ ಒಂದೇ ಒಂದು ಕೆಲಸಾನು ಮಾಡಿರಲ್ಲ. ಅದು ಎಷ್ಟೇ ಚಿಕ್ಕ ಕೆಲಸವಾದರೂ ಪರ್ವಾಗಿಲ್ಲ. ಜೀವನದಲ್ಲಿ ನಾನು ಮಾಡಿದಂತ ಅತ್ಯುತ್ತಮ ಕೆಲಸ ಅನ್ನೋ ಹಂಗೆ ಮಾಡಿ ನೋಡಿ. ಜಗತ್ತಿನಲ್ಲಿ ಏನೇ ಸಾಧಿಸಿದ ಅನುಭವ ನಿಮಗೆ ಸಿಗುತ್ತೆ. 

ಮೂಲ

9. ಸೋಲಿನ ಅನುಭವ

ಸೋಲೆ ಗೆಲುವಿನ ಸೋಪಾನ ಅನ್ನೋ ಮಾತು ಕೇಳೇ ಇರ್ತೀವಿ. ಸೋಲು ಗೆಲುವಿಗೆ ಮೆಟ್ಟಿಲಾಗುತ್ತೆ. ಸೋಲಿನಿಂದ ನಾನು ಪಾಠದ ಅನುಭವ ಕಲ್ತಿರ್ತೀವಿ. ಸೋಲ್ತೀವಿ ಅಂತ ಭಯ ಪಡಬೇಡಿ. ನಾನು ಸೋತಿದ್ದೀನಿ ಅಂತ ನಿಮಗೆ ಗೊತ್ತಾಗ್ಲಿಲ್ಲ ಅಂದ್ರೆ ಗೆಲುವನ್ನ ನಿರ್ಧರಿಸಕ್ಕಾಗಲ್ಲ. ಸೋತರೇನೆ ಗೆಲುವಿನ ಮಹತ್ವ ಗೊತ್ತಾಗೋದು. ಈ ಅನುಭವ ನಿಮಗೆ ಸಿಕ್ಕಿದ್ರೆ ಗೆಲ್ಲೋದು ಸುಲಭ. 

ಮೂಲ

10. ನನಗೆ ಯಾವ ಭಯವೂ ಇಲ್ಲ ಅನ್ನೋ ಅನುಭವ

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಭಯ ಇದ್ದೇ ಇರುತ್ತೆ. ಲವ್ ಮಾಡ್ತಿದ್ದೀನಿ ಅಂತ ಹೇಳೋಕೆ ಅಂಜಿಕೆ. ಕಾರು ಡ್ರೈವ್ ಮಾಡೋಕೆ ಭಯ. ಹೀಗೆ ನಾನಾ ತರದ ಭಯಗಳಿರ್ತಾವೆ. ಅವನ್ನೆಲ್ಲ ಒಂದ್ಸಲ ಮರೆತು ಮನಸ್ಸಿಂದ ಭಯ ಅನ್ನೋದನ್ನೇ ಕಿತ್ತುಬಿಸಾಕಿ ಅಂದ್ಕೊಂಡಿರೋಂತ ಕೆಲಸ ಮಾಡಿ ನೋಡಿ. ಆಗ ನೋಡಿ ನಿಮ್ಮ ಅನುಭವ ಹೇಗಿರುತ್ತೆ ಅಂತ.

ಮೂಲ

11. ನಗರಗಳಿಂದ ದೂರ ಹೋಗಿ ಪ್ರಕೃತಿಯ ಮಡಿಲಲ್ಲಿ ಬದುಕೋಂತ ಅನುಭವ 

ಅದೇ ಟ್ರಾಪಿಕ್ಕು, ಮಾಲಿನ್ಯ ಬಿಟ್ಟು ಸಂಪೂರ್ಣ ಹಸಿರು, ಕಾಡು ಇರೋಂತ ಪ್ರದೇಶದಲ್ಲಿ ಸ್ವಲ್ಪ ದಿನ ಇದ್ದು ಬರೋಂತ ಅನುಭವ. ಜೊತೆಗೆ ಯಾವ ಮೊಬೈಲು, ಟಿವಿ, ಗ್ಯಾಜೆಟ್ಜ್ ಏನೂ ಇರ್ಬಾದ್ರು. ಆ ರೀತಿಯ ವಾತಾವರಣದಲ್ಲಿ ಒಂದ್ಸಲ ಇದ್ದು ಬನ್ನಿ. ನಿಮ್ ಮನಸ್ಸನ್ನ ನೀವು ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಾಧ್ಯವಾಗತ್ತೆ. ಜೊತೆಗೆ ಈ ಜಗತ್ತಿನಲ್ಲಿ ನೀವೆಷ್ಟು ಚಿಕ್ಕವರು ಅನ್ನೋದು ಗೊತ್ತಾಗುತ್ತೆ. 

ಮೂಲ

12. ಅಂಜಿಕೆಯನ್ನ ನುಚ್ಚುನೂರು ಮಾಡಿದ ಅನುಭವ

ಆಗ್ಲೇ ಹೇಳ್ದಂಗೆ ಭಯ, ಅಂಜಿಕೆ ಎಲ್ರಿಗೂ ಇದ್ದೆ ಇರುತ್ತೆ. ಆದರೆ ಅದನ್ನ ಎದುರಿಸೋದೆ ಜೀವನ. ನಿಮ್ಮ ಭಯಕ್ಕೆ, ಅಂಜಿಕೆಗೆ ಕಾರಣವಾಗಿರೋದು ಏನೂ ಅಂತ ಮೊದ್ಲು ತಿಳ್ಕೊಳ್ಳಿ. ಅದನ್ನ ಎದುರಿಸಿ, ಗೆಲ್ಲಿ. ಆಗ ಭಯ ಅನ್ನೋದು ನಿಮ್ಮ ಹತ್ರ ಸುಳಿಯಲ್ಲ. ಈ ಅನುಭವಾನ ಒಂದ್ಸಲಾನಾದ್ರೂ ಪಡ್ಕೊಳ್ಳಿ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಒಂದಲ್ಲ ಒಂದ್ ರೀತೀಲಿ ದಿನಾ ಕರಿಬೇವು ತಿನ್ನೋರ್ಗೆ ಈ 11 ಲಾಭ ಗ್ಯಾರಂಟಿ

ಕೊಲೆಸ್ಟ್ರಾಲ್ ಕಡಿಮೆ ಮಾಡತ್ತೆ

ನಮ್ಮ ಕರ್ನಾಟಕ ಏನು ಭಾರತದಲ್ಲಿ ಎಲಾ ಕಡೆ ಕರ್ಬೇವು ಇಲ್ದೆ ಅಡುಗೆನೇ ಮಾಡಲ್ಲ. ಹಿಂದಿನ ಕಾಲದಿಂದ್ಲೂ ಈ ಪದ್ದತಿ ನಡ್ಕೊಂಡು ಬಂದಿದೆ. ಒಗ್ಗರಣೆಗೆ ಕರ್ಬೇವು ಇಲ್ದೆ ಎಲ್ಲಾದ್ರು ಅಡುಗೆ ಮಾಡೊದುಂಟೆ? ಕರ್ಬೇವಿನಲ್ಲಿ ವಿಟಮಿನ್ ಏ, ವಿಟಮಿನ್ ಬಿ, ಬಿ2, ವಿಟಮಿನ್ ಸಿ, ಕ್ಯಾಲ್ಸಿಯಮ್ ಹಾಗೂ ಕಬ್ಬಿಣದಂಶ ಹೆಚ್ಚಾಗಿ ಇರತ್ತೆ. ಹೊಟ್ಟೆಯಲ್ಲಿ ತಿಂದಿದ್ದು ಅರಗಕ್ಕೆ ಬೇಕಾಗೋ ರಾಸಾಯನಿಕ ಕಿಣ್ವಗಳು ಉತ್ಪತ್ತಿ ಆಗೋ ಹಾಗೆ ಪ್ರಚೋದಿಸತ್ತೆ. ನಮ್ ದೇಶ ನೋಡ್ಕೊಂಡು ಬೇರೆ ದೇಶಗಳಲ್ಲಿ ಕೂಡ ಕರ್ಬೇವು ಉಪ್ಯೋಗಿಸಕ್ಕೆ ಶುರು ಮಾಡಿದ್ದಾರೆ. ಕರ್ಬೇವಿನ ಎಣ್ಣೆ ಕೂಡ ಬಳಕೆ ಮಾಡ್ತಾರೆ. 

ಮಕ್ಕಳಿಗಂತೂ ಕರ್ಬೇವು ಯಾಕಾದ್ರೂ ಹಾಕ್ತಾರೋ, ಬರೀ ತೆಗೆಯೋದೇ ಆಗೋಗತ್ತೆ ಅಂತ ಬೇಜಾರ್ ಮಾಡ್ಕೊತಾರೆ. ಮಕ್ಕಳಿಗೇನ್ ಗೊತ್ತು ಅಲ್ವಾ? ಕರ್ಬೇವಿನ ಒಳ್ಳೆ ಗುಣಗಳ ಬಗ್ಗೆ ಇಲ್ಲಿ ಓದಿ ನಿಮ್ಮ ಮಕ್ಕಳಿಗೂ ತಿಳಿಸಿಕೊಡಿ.

1. ರುಚಿ ಹತ್ತದೆ ಇರೋ ನಾಲಿಗೆಗೆ ಕಿಕ್ ಕೊಡತ್ತೆ

ಏನೋ ಹುಷಾರ್ ತಪ್ಪಿ ಸಿಕ್ಕಾಪಟ್ಟೆ ಆಂಟಿಬಯಾಟಿಕ್ಸ್ ಮಾತ್ರೆ ತೊಗೊಂಡ ನಂತರ ನಾಲಿಗೆ ಬೆಂಡಾಗಿರೋ ಅನುಭವ ಆಗತ್ತಲ್ಲ ಆಗ ಕರ್ಬೇವಿನ ಚಟ್ನಿ ಅಥವಾ ಮೊದಲನೆ ಅನ್ನದಲ್ಲಿ ಕರ್ಬೇವಿನ ಚಟ್ನಿಪುಡಿ ಹಾಕೊಂಡು ತಿಂದ್ರೆ ನಾಲಿಗೆಯ ರುಚಿ ಸರಿಹೋಗತ್ತೆ. ಕರಿಬೇವಿನ ಚಿತ್ರಾನ್ನ ಜ್ವರ ಬಂದು ಹೋದ ನಂತರ ತಿಂದ್ರೆ ಸಕತ್ ಕಿಕ್ ಕೊಡತ್ತೆ. ಟ್ರೈ ಮಾಡಿ ನೋಡಿ.

ತೀರ ರುಚಿನೇ ಹತ್ತಲ್ಲ, ಹಸಿವೇ ಇಲ್ಲ ಅಂತ ಅನ್ನಿಸಿದಾಗ ಕರ್ಬೇವು ಪೇಸ್ಟ್ ಮಾಡ್ಕೊಂಡು ಸ್ವಲ್ಪ ಜೀರಿಗೆ ಪುಡಿ ಮತ್ತೆ ಕಪ್ಪು ಉಪ್ಪನ್ನ ಮಿಕ್ಸ್ ಮಾಡಿ ಮಜ್ಜಿಗೆಗೆ ಹಾಕಿ ಕುಡಿದ್ರೆ ಹೊಟ್ಟೆಗೆ ಒಳ್ಳೇದು.

2. ಸಿಕ್ಕಾಪಟ್ಟೆ ಪಿತ್ತ ಆಗಿದ್ರೆ ಕಡಿಮೆ ಮಾಡತ್ತೆ

ಬೆಳಗ್ಗೆ ಎದ್ದಾಗ ಒಂಥರಾ ತಲೆ ಸುತ್ತೋದು ಅಥವಾ ವಾಂತಿ ಆಗೋ ಹಾಗೆ ಆದ್ರೆ ಅಥವಾ ಹಳದಿ ರಸ ವಾಂತಿ ಆದ್ರೆ ನಮ್ ಮೈನಲ್ಲಿ ಪಿತ್ತ ಜಾಸ್ತಿ ಆಗಿದೆ ಅಂತ ಅರ್ಥ. ಆಗ ಕರ್ಬೇವ್ ಉಪ್ಯೋಗ್ಸಿ ಕಡಿಮೆ ಮಾಡೊಬೋದು, ಹೇಗೆ ಅಂದ್ರೇ...

ಒಂದು  - ಕರ್ಬೇವಿನ ಪೇಸ್ಟ್ ಮಾಡ್ಕೊಂಡು ಅದಕ್ಕೆ ಹುರಿದ ಉದ್ದಿನ ಕಾಳು ಮತ್ತು ಸ್ವಲ್ಪ ಉಪ್ಪು ಸೇರ್ಸ್ಕೊಂಡು ಒಂದೆರಡು ದಿನ ಬೆಳಗ್ಗೆ ಎದ್ದ ತಕ್ಷಣ ತಿನ್ನೋದು. ತಲೆಸುತ್ತು ಹಾಗೆ ವಾಂತಿ ಕಡಿಮೆ ಆಗತ್ತೆ ಇದ್ರಿಂದ.

ಎರಡನೇದು - ಕರ್ಬೇವಿನ ಪೇಸ್ಟ್ ಮಾಡ್ಕೊಂಡು ಅದಕ್ಕೆ ಸ್ವಲ್ಪ ನಿಂಬೆ ಹುಳಿ ಹಿಂಡಿ, ಸ್ವಲ್ಪ ಸಕ್ಕರೆ ಸೇರ್ಸಿ ತೊಗೊಳ್ಳೊದು. ಇದು ಕೂಡ ಪಿತ್ತ ಕಡಿಮೆ ಮಾಡತ್ತೆ.

3. ಕಣ್ಣಿಗೆ ಶಕ್ತಿ ಕೊಡತ್ತೆ, ಪೊರೆ ಬರೋ ಅವಕಾಶ ಕಡಿಮೆ

ದೃಷ್ಟಿ ದೋಷ ಇದ್ರೆ ಕಡಿಮೆ ಮಾಡತ್ತೆ. ಅದಕ್ಕೆ ಹೇಳೋದು ಊಟ-ತಿಂಡಿಗೆ ಹಾಕಿರೋ ಕರ್ಬೇವ್ನ ತಿನ್ನಿ, ಬಿಸಾಕ್ಬೇಡಿ ಅಂತ ದೊಡ್ಡೋರು :-)

ವಿಟಮಿನ್ ಏ ಹೆಚ್ಚಾಗಿ ಇರೋದ್ರಿಂದ ಕಣ್ಣಿನ ಪೊರೆ ಬರಕ್ಕೆ ತೀರಾ ವಯಸ್ಸಾಗೋ ತನಕ ಅವಕಾಶ ಮಾಡ್ಕೊಡಲ್ಲ. ಇದಲ್ದೆ ಕರ್ಬೇವಲ್ಲಿರೋ ಫೋಲಿಕ್ ಆಸಿಡ್ ಅಂಶ ನಾವು ತಿನ್ನೋ ಇತರ ಅಹಾರದಿಂದ ಕಬ್ಬಿಣದ ಅಂಶನ ನಮ್ ದೇಹ ಹೀರ್ಕೊಳ್ಳೊ ಹಾಗೆ ಮಾಡತ್ತೆ. ಆಯುರ್ವೇದದಲ್ಲಿ ಕರ್ಬೇವಿನ ಎಲೆ ಜ್ಯೂಸ್ ಮಾಡಿ ಕಣ್ಣಿಗೆ ಹಾಕಿ ದೃಷ್ಟಿಹೀನತೆಯನ್ನ ಪರಿಹಾರ ಮಾಡೋ ಪದ್ದತಿ ಇದ್ಯಂತೆ.

4. ಅಜೀರ್ಣ, ಹೊಟ್ಟೆ ಹುಣ್ಣು ಕಡಿಮೆ ಮಾಡತ್ತೆ

ಕರ್ಬೇವು ನೋಡಕ್ಕೆ ಬರೀ ಎಲೆ ಆದ್ರೆ ಹೊಟ್ಟೆ ಒಳಗೆ ಹೋದ್ರೆ ಜೀರ್ಣ ಆಗಕ್ಕೆ ಬೇಕಾದ ರಾಸಾಯನಿಕನ ಬೇಗ ಉತ್ಪತ್ತಿ ಆಗೋ ಹಾಗೆ ಪ್ರಚೋದನೆ ಮಾಡತ್ತೆ. ಇದಲ್ಲದೆ ನಮ್ ಮೈನಲ್ಲಿ ಕೊಬ್ಬು ಶೇಖರಣೆ ಆಗಕ್ಕೆ ಬಿಡಲ್ಲ. ಕರಗಿಸತ್ತೆ ಅಂದ್ರೆ ಜೀರ್ಣ ಆಗೋ ಹಾಗೆ ಮಾಡೊ ಶಕ್ತಿ ಕರ್ಬೇವಿನಲ್ಲಿದೆ.

ಇದಕ್ಕೆ ಒಂದು ಮುಷ್ಟಿ ಕರ್ಬೇವಿನ ಎಲೆ+ಕೆಂಪು ಮೆಣಸಿನಕಾಯಿ ತೊಗೊಂಡು ಸ್ವಲ್ಪ ತುಪ್ಪದಲ್ಲಿ ಹುರಿದು, ಅದಕ್ಕೆ ಉಪ್ಪು ಮತ್ತು ಹುಣಸೆಹಣ್ಣು ಹಾಕಿ ಚಟ್ನಿ ಅಥವಾ ಚಟ್ನಿಪುಡಿ ಮಾಡ್ಕೊಂಡು ಬಿಸ್ಬಿಸಿ ಅನ್ನಕ್ಕೆ ಹಾಕೊಂಡು ಊಟ ಮಾಡಿ. ಅಥವಾ ಒಂದು ಲೋಟ ಮಜ್ಜಿಗೆಗೆ ಕರ್ಬೇವಿನ ಎಲೆ ಮತ್ತೆ ಸ್ವಲ್ಪ ಇಂಗು ಹಾಕೊಂಡು ಊಟದ ನಂತರ ಕುಡಿರಿ. ಅಜೀರ್ಣ, ಭೇದಿ, ಹೊಟ್ಟೆ ಉಬ್ರ, ವಾಂತಿ, ತಲೆಶೂಲೆ ಎಲ್ಲಾ ಕಡಿಮೆ ಆಗತ್ತೆ.

ಮೂಲವ್ಯಾಧಿಗೆ ಕರ್ಬೇವಿನ ಚಿಗುರು ಎಲೆಗಳ್ನ ಜೇನುತುಪ್ಪದಲ್ಲಿ ಅದ್ದಿ ತಿಂದ್ರೆ ಸ್ವಲ್ಪ ಅರಾಮ ಸಿಗತ್ತೆ.

 

5. ಹೇಳೋದೇ ಬೇಕಾಗಿಲ್ಲ, ಡಯಾಬಿಟಿಸ್ಗೆ ಹೇಳಿ ಮಾಡ್ಸಿದ ಔಷಧಿ

ಡಯಾಬಿಟೀಸ್ ಇರೋರ್ಗೆ ಮೈಕೈಯೆಲ್ಲಾ ನೋವಿರತ್ತೆ, ಹಾಗೆ ಅವಾಗವಾಗ ತಲೆ ಸುತ್ತು, ಸುಸ್ತು ಮತ್ತೆ ಕಣ್ಣು ಮಂಜಾಗೋದು, ಕತ್ಲು ಕಟ್ಟೊದು ಎಲ್ಲಾ ಇರೋರು ಅವಾಗವಾಗ ಸ್ವಲ್ಪ ಕರ್ಬೇವಿನ ಎಲೆ ಹಾಕೊಂಡು ಜಗಿದ್ರೆ ಸ್ವಲ್ಪ ಮಟ್ಟಿಗೆ ಉತ್ತಮ ಆಗತ್ತೆ.

ಅಯ್ಯೋ ನಂಗೆ ಡಯಾಬಿಟೀಸ್ ಹೆರಿಡಿಟರಿ, ನಮ್ಮ ಅಪ್ಪ ಅಮ್ಮಂಗೆ ಇತ್ತು ಅಂತ ಅಳೋರಿಗೆ ಬೆಳಗಾನೆ ಎದ್ದು ಈ ತರ ಮಾಡ್ಬೋದು.

--- 10 ಕರ್ಬೇವಿನ ಎಲೇನ ಮೂರು ತಿಂಗಳ ಕಾಲ ಎಡಬಿಡದೆ ತಿನ್ನೋದು.

--- ಕರ್ಬೇವ್ನ ಬಿಸಿಲಲ್ಲಿ ಒಣಗಿಸಿಕೊಂಡು ಅದರ ಕಷಾಯ ಕೂಡ ಅಗಾಗ್ಗೆ ಕುಡಿಯೋದು

--- ಕರ್ಬೇವಿನ ಎಲೆ ಜೊತೆ ಒಂದೆರಡು ಮೆಣಸಿನ ಕಾಳನ್ನ ಅಗಿಯೋದು

ಹೀಗ್ ಮಾಡಿರೆ ಸಕ್ಕರೆ ಮಟ್ಟ ಹತೋಟಿಗೆ ಬರೋದಲ್ಲ್ದೆ ಬೊಜ್ಜು ಕೂಡ ಕಡಿಮೆ ಆಗತ್ತಂತೆ.

6. ಕೊಲೆಸ್ಟ್ರಾಲ್ ಕಡಿಮೆ ಮಾಡತ್ತೆ

ನಮ್ ಮೈನಲ್ಲಿ ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಬೊಜ್ಜಿನ ಸಮಸ್ಯೆ, ಬ್ಲಡ್ ಪ್ರೆಶರ್ ಇನ್ನಿತರ ಖಾಯಿಲೆ ಬರತ್ತೆ ಅಲ್ವಾ. ಹಾಗಾಗಿ ನಾವು ಬಳಸೋ ಎಣ್ಣೆನ ಕೂಡ ಕರ್ಬೇವು ಹಾಕಿ ಕಾಯಿಸಿ ಶೋಧಿಸಿಟ್ಟುಕೊಂಡ್ರೆ ಎಣ್ಣೆಲಿರೋ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗತ್ತಂತೆ.

ಇದಕ್ಕೆ 1 kg ಅಡುಗೆ ಎಣ್ಣೇಲಿ 15-20 ಕರ್ಬೇವಿನ ಎಲೆ ಹಾಕಿ ರೆಡಿ ಮಾಡಿ. ಈ ಎಣ್ಣೇನ ಅಡುಗೆ ಮಾಡ್ಬೇಕಾದ್ರೆ ಉಪ್ಯೋಗ್ಸಿ.

ಕರ್ಬೇವಿನ ಎಣ್ಣೇನ ಸೋಪ್ ಮಾಡಕ್ಕೂ ಬಳಸ್ತಾರೆ.

7. ಭೇದಿ ನಿಲ್ಸಕ್ಕೆ ರಾಮಬಾಣ

40 gm ಕರ್ಬೇವು ಎಲೆ ತೊಗೊಂಡು, ಅದಕ್ಕೆ 10 gm ಜೀರಿಗೆ ಪುಡಿ ಹಾಕಿ ಕುಡೀಬೇಕು. ಆಮೇಲೆ ಒಂದು ಲೋಟ ಬೆಚ್ಚನೆಯ ನೀರನ್ನ ಕುಡೀಬೇಕು. 10 ನಿಮಿಷದ ನಂತರ ಒಂದು ಸ್ಪೂನ್ ಜೇನುತುಪ್ಪ ತಿನ್ಬೇಕು. ಹೀಗೆ ದಿನಕ್ಕೆ 3-4 ಟೈಮ್ ಮಾಡಿದರೆ ಭೇದಿ ನಿಲ್ಲತ್ತಂತೆ.

8. ಬಾಲನರೆ ತಡೆಯತ್ತೆ

ಹುಡ್ಗೂರು ಹುಡ್ಗೀರು ಇಬ್ರಿಗೂ ಈಗಿನ ಕಾಲದಲ್ಲಿ ಬಹಳ ಬೇಗ ಕೂದ್ಲು ನರೆ ಆಗೋದು ನೋಡ್ತಿದ್ದೀವಿ. ಅಂಥೋರು ಕರ್ಬೇವು ತಿಂದು ಕರ್ಬೇವು ತಲೆಗೆ ಹಚ್ಚ್ಕೊಂಡು ಬಿಳಿ ಕೂದ್ಲಾಗೋದನ್ನ ತಡಿಬೋದು. ತಲೆ ಹೊಟ್ಟು ಕೂಡ ಕಡಿಮೆ ಮಾಡ್ಕೊಬೋದು. ಹೀಗೆ ಮಾಡಿ:

ಒಂದು ಲೀಟರ್ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ತೊಗೊಳ್ಳಿ. 10-20 ಕರ್ಬೇವಿನ ಎಲೆ ತೊಗೊಂಡು ಅದಕ್ಕೆ ಹಾಕಿ ಚೆನ್ನಾಗಿ ಒಲೆ ಮೇಲಿಟ್ಟು ಕಾಯಿಸಿ. ಕಾದ ಎಣ್ಣೆನ ಆರಕ್ಕೆ ಬಿಡಿ. ಆಮೇಲೆ ಬಾಟಲ್ನಲ್ಲಿ ತುಂಬಿಟ್ಟುಕೊಂಡು ತಲೆಸ್ನಾನ ಮಾಡೊ ಮುಂಚೆ ತಲೆ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ 15-20 ನಿಮಿಶ ಬಿಟ್ಬಿಡಿ. ನಂತರ ಸೀಗೆಕಾಯಿ ಅಥವಾ ಶಾಂಪೂ ಹಾಕಿ ತಲೆ ತೊಳೆದ್ರಾಯ್ತು! ವಾರಕ್ಕೆ ಒಂದೆರಡು ಬಾರಿ ಹೀಗೆ ಮಾಡಿದ್ರೆ ನರೆಕೂದ್ಲಾಗೋದನ್ನ ತಡಿಬೋದು.

ಇನ್ನೂ ಹೆಚ್ಚಿಗೆ ಮಾಡೊದಾದ್ರೆ ಇದೇ ಕೊಬ್ಬರಿ ಎಣ್ಣೆಗೆ ಕರ್ಬೇವ್ ಜೊತೆ ದಾಸವಾಳದ ಎಲೆ, ನಲ್ಲಿಕಾಯಿ ಹಾಗೂ ತುಳಸಿ ಎಲೆ ಹಾಕ್ಬೋದು.

9. ಮೂಳೆಗೆ ಬೇಕಾದ ಕ್ಯಾಲ್ಶಿಯಮ್ ಕೊಡತ್ತೆ

ಮೂಳೆ ಸೆವೆತದಿಂದ ಕಷ್ಟ ಪಡ್ತಿರೋರು ತಮ್ಮ ಊಟ ತಿಂಡೀಲಿ ಕರ್ಬೇವಿಗೆ ಆದ್ಯತೆ ಕೊಟ್ರೆ ಅದ್ರಿಂದ ಅವರ ದೇಹಕ್ಕೆ ಬೇಕಾದ ಕ್ಯಾಲ್ಶಿಯಮ್ ಪೂರೈಕೆ ಆಗತ್ತೆ.

10. ಮೊಡವೆ ಹೋಗ್ಸಿ ಚರ್ಮದ ಸೌಂದರ್ಯ ಹೆಚ್ಚಿಸತ್ತೆ

ಬೇಸಿಗೇಲಿ ಚರ್ಮದ ಮೇಲೆ ಚಿಕ್ಕ ಚಿಕ್ಕ ಗುಳ್ಲೆ ಏಳೋದುಂಟು. ಅದಕ್ಕೆ ಕರ್ಬೇವಿನ ಪೌಲ್ಟೀಸ್ ಅಥವಾ ಪೇಸ್ಟ್ ಹಚ್ಚಿದ್ರೆ ಬೇಗ ಉರಿ ಕಡಿಮೆ ಆಗಿ ಮಾಯತ್ತೆ.

ಕರ್ಬೇವ್ ಎಲೇನ ತೊಗೊಂಡು ಪೇಸ್ಟ್ ತರ ಮಾಡ್ಕೊಂಡು ಸ್ವಲ್ಪ ಅರಿಶಿನ ಮಿಕ್ಸ್ ಮಾಡಿ ಮುಖಕ್ಕೆ ಸ್ವಲ್ಪ ದಿನ ಹಚ್ಚುತ್ತಾ ಬಂದ್ರೆ ಮುಖದ ಚರ್ಮ ಸಿಕ್ಕಾಪಟ್ಟೆ ಕ್ಲೀನ್ ಅಂಡ್ ಕ್ಲಿಯರ್ ಆಗತ್ತೆ!

ಕರ್ಬೇವು ಗಿಡ ಕೂಡ ಹಣ್ಣು ಬಿಡತ್ತೆ. ಕಾಯಿ ಆಗಿದ್ದಾಗ ಹಸಿರು ಬಣ್ಣ, ಹಣ್ಣಾದಾಗ ನೇರಳೆ ಬಣ್ಣ ಇರತ್ತೆ. ಈ ಕಾಯಿ/ಹಣ್ಣಿನ ಜ್ಯೂಸ್ ತೊಗೊಂಡು ಅದಕ್ಕೆ ಸಮ ಪ್ರಮಾಣ ನಿಂಬೆ ರಸ ಹಾಕಿ ಹುಳ ಅಥವಾ ವಿಷದ ಹಾವು ಕಚ್ಚಿರೋ ಜಾಗಕ್ಕೆ ಹಚ್ಚಿದ್ರೆ ತಕ್ಷಣ ಉರಿ ಕಡಿಮೆ ಆಗತ್ತಂತೆ.

11. ಬಾಯಿ ದುರ್ವಾಸನೆ ವಸಡಿನ ಫಂಗಸ್ ಪ್ರಾಬ್ಲಂಗೂ ಕರ್ಬೇವು ಮದ್ದು

ಹಲ್ಲಿನ ಮೇಲೆ ಕೂತ್ಕೊಳೊ ಕೊಳೆ ಮತ್ತೆ ಅದ್ರಿಂದ ಉಂಟಾಗೋ ಕೆಟ್ಟ ವಾಸನೆನ ಕಡಿಮೆ ಮಾಡಕ್ಕೆ ಕರಿಬೇವು ಸಹಾಯ ಮಾಡತ್ತೆ. 

 

ನಿಮ್ಮ ದಿನನಿತ್ಯದ ಊಟ-ತಿಂಡೀಲಿ...ವಡೆ, ಚಿತ್ರಾನ್ನ, ಸಾರು, ಗೊಜ್ಜು, ತಂಬೂಳಿಗಳಿಗೆ ಕರ್ಬೇವು ಬಳಸುತ್ತಾ ಬನ್ನಿ. ಹಾಗೆ ಅದನ್ನ ಚೆಲ್ಲದೆ ತಿನ್ನೋ ಪ್ರಾಕ್ಟೀಸ್ ಕೂಡ ಮಾಡ್ಕೊಳ್ಳಿ ಅಂತ ಹೇಳಕ್ಕೆ ಮೇಲಿನ 11 ಕಾರಣಕ್ಕಿಂತ ಮತ್ತೇನ್ ಬೇಕು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: