ಆಕಸ್ಮಿಕವಾಗಿ ಕಾಣಿಸಿಕೊಂಡ ಈ 15 ಪ್ರತಿಬಿಂಬಗಳಲ್ಲಿ ನಿಮ್ಮ ಮಿದುಳಿಗೆ ಏನೇನೋ ಕಾಣುತ್ತೆ

ಎರಡೆರಡು ಸಲ ನೋಡ್ಬೇಕು

ಒಂದೊಂದ್ ಸಲ ನಮ್ ಕಣ್ಣನ್ನ ನಾವೇ ನಂಬಕ್ಕಾಗಲ್ಲ. ನಾವು ನೋಡ್ತಿರೋದೆಲ್ಲಾ ನಿಜಾನಾ? ಅಥವಾ ನಮ್ ಭ್ರಮೆ ಇರ್ಬೋದಾ ಅನ್ನೋ ದೌಟು ಶುರುವಾಗುತ್ತೆ. ಇಲ್ಲಿರೋಂತ ಫೋಟೋಗಳೂ ಅಷ್ಟೇ. ನಂಬಕ್ಕೇ ಆಗಲ್ಲ. ಸ್ವಲ್ಪ ಹೊತ್ತು ನಿಮ್ಮನ್ನ ಕಾಡೋದಂತೂ ಸತ್ಯ. ಪಟ್ ಅಂತ ನೋಡಿದ ಕೂಡ್ಲೆ ಅರ್ಥ ಆಗಲ್ಲ ಇಲ್ಲಿರೋ ಫೋಟೋಗಳು. ಅದಕ್ಕೆಲ್ಲಾ ಸೂಕ್ಷ್ಮವಾಗಿ ಗಮನಿಸೋಂತ ಕಣ್ಣು ಬೇಕು. ಮುಖ್ಯವಾಗಿ ಫೋಟೋಗಳನ್ನ ನೋಡುವ ನಮ್ಮ ಆಲೋಚನೆ ಬದಲಾಗಬೇಕು ಅನ್ನಿಸೋ ಹಂಗಿವೆ ಇಲ್ಲಿರೋ ಫೋಟೋಗಳು.  

1. ಈ ಫೋಟೋದಲ್ಲಿರೋದು ಚಂದಮಾಮ ಅಲ್ಲ, ಬ್ರಿಡ್ಜ್ ಅಷ್ಟೇ; ಸ್ವಲ್ಪ ಟೈಮ್ ಬೇಕಿದ್ರೆ ತಗೊಂಡ್ ನೋಡಿ

ಮೂಲ

2. ಆಕಾಶದಾಗೆ ಯಾರೋ ಮಾಯಗಾರ ಚಿತ್ತಾರ ಮಾಡಿದ್ದಾನೆ ಅಂದ್ಕೋಬೇಡಿ, ಕೆಸರುಗುಂಡಿಯಲ್ಲಿ ಕಾಣ್ತಿರೋಂತ ಪ್ರತಿಬಿಂಬ ಇದು!

ಮೂಲ

3. ಹೈಡ್ ಪಾರ್ಕಿನಲ್ಲಿ ಬಣ್ಣಗಳ ಚಿತ್ತಾರ, ಈ ಫೋಟೋ ತಲೆಕೆಳಗೆ ಮಾಡಿದ್ರೂ ಚೆನ್ನಾಗೇ ಕಾಣುತ್ತೆ ಅಲ್ವಾ?

ಮೂಲ

4. ಈ ಫೋಟೋನಂತು ನೀವು ನಂಬಕ್ಕೆ ಸಾಧ್ಯ ಇಲ್ಲ ಅಂದ್ಕೋತೀರ, ಕಡೆಗೆ ನಂಬ್ತೀರ 

ಮೂಲ

5. ಈ ಮೋಹಕ ದೃಶ್ಯಾನ ಸೆರೆಹಿಡೀಬೇಕು ಅಂದ್ರೆ ಕ್ಯಾಮೆರಾಮೆನ್ ಕವಿನೇ ಆಗಿರ್ಬೇಕು

ಮೂಲ

6. ನಿಮ್ಮ ಕಣ್ಣನ್ನ ನೀವೇ ನಂಬಲ್ಲ, ಸ್ವಲ್ಪ ಸಮಾಧಾನದಿಂದ ನೋಡಿದ್ರೆ ಗೊತ್ತಾಗುತ್ತೆ ಅಸಲಿ ವಿಚಾರ

ಮೂಲ

7. ಬಿಲ್ಡಿಂಗಿಗೆ ಬೆಂಕಿ ಬಿದ್ದಿದೆ ಅಂದ್ಕೊಂಡ್ರಾ? ಸೂರ್ಯಾಸ್ತದ ಪ್ರತಿಬಿಂಬ ಅಷ್ಟೇ ಇದು

ಮೂಲ

8. ಈ ಫೋಟೋದಲ್ಲಿರೋಂತ ಅಸಲಿಯತ್ತು ಅರ್ಥ ಮಾಡ್ಕೋಬೇಕು ಅಂದ್ರೆ ಸ್ವಲ್ಪ ಹೊತ್ತು ತಲೆಬಿಸಿ ಮಾಡ್ಕೊಳ್ಳಲೇಬೇಕು

ಮೂಲ

9. ಕಾಫಿ ಕಪ್ಪಲ್ಲಿ ಏನು ಅಂದ್ಕೊಂಡ್ರಾ? ಉಳಿದ ಚರಟದಲ್ಲಿ ಚಾವಣಿ ಪ್ರತಿಬಿಂಬ

ಮೂಲ

10. ನಿಜವಲ್ಲ ಅದು ಭ್ರಮೆ ಅಷ್ಟೇ, ಆಕಾಶದಲ್ಲೇನು ತೇಲಾಡ್ತಿಲ್ಲ ಭೂಮಿ ಮೇಲೆ ಇದ್ದಾರೆ  

ಮೂಲ

11. ಛೀ...ಪ್ಯಾಂಟಲ್ಲೇ ಸುಸು ಮಾಡ್ಕೊಂಡಿದ್ದಾನೆ ಅಂದ್ಕೊಂಡ್ರಾ? ಮೇಜಿನ ಪ್ರತಿಬಿಂಬ ಅಷ್ಟೇ ಅದು, ಸ್ವಲ್ಪ ಸೂಕ್ಷಮವಾಗಿ ನೋಡಿದ್ರೆ ಗೊತ್ತಾಗುತ್ತೆ!

ಮೂಲ

12. ಇದನ್ನ ಅರ್ಥ ಮಾಡ್ಕೊಳ್ಳಕ್ಕಂತೂ ನಿಮಗೆ ಜಾಸ್ತಿನೇ ಟೈಮ್ ಬೇಕಾಗಬಹುದು..ನೋಡಿ ನೋಡಿ!

ಮೂಲ

13. ಇವಳ ಡ್ರೆಸ್ ಚಿಂಪಾಂಜಿಗೆ ಹೇಗೆ ಹೋಯ್ತು...ಕ್ಯಾಮೆರಾ ಕೋನದಲ್ಲಿ ನೋಡಿದ್ರೆ ಅರ್ಥವಾಗುತ್ತೆ

ಮೂಲ

14. ಯಾರೋ ಪೇಂಟಿಂಗ್ ಮಾಡಿರ್ಬೇಕು ಅಂದ್ಕೋಬೇಡಿ, ಬೀದಿದೀಪದ ಪ್ರತಿಬಿಂಬ ಬಿದ್ದು ಕಾರು ಸ್ಮೈಲ್ ಕೊಡೋ ತರ ಕಾಣ್ತಿದೆ ಅಷ್ಟೇ

ಮೂಲ

15. ಪುಷ್ಪಕ ವಿಮಾನ ಅಂದ್ಕೊಂಡ್ರಾ...ನೀರಿನ ಮೇಲಿರೋ ಗುಡ್ಡ ರೀ ಇದು

ಮೂಲ

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: