ಎಲ್ಲರಿಗೂ ಬೇಕಾಗಿದ್ದ ಒಂದು ಮುಖ್ಯವಾದ ಫೀಚರ್ ವಾಟ್ಸಪ್ಗೆ ಬರ್ತಿದೆ (ಸಂಬಂಧಗಳ್ನ ಉಳಿಸಕ್ಕೆ)

ಈಗಿನ ಕಾಲದಲ್ಲಿ ಸಂಬಂಧಗಳು ಹಾಳಾಗೋದು ಬಹಳ ಸುಲಭ

ಇವತ್ತು ವಾಟ್ಸಪ್ ಯಾರ ಫೋನಲ್ಲಿ ಇಲ್ಲ ಹೇಳಿ? ಇತ್ತೀಚೆಗೆ ವೀಡಿಯೋ ಕಾಲಿಂಗ್ ಬೇರೆ ಬಿಟ್ಟಿದಾರೆ ಅಂದಮೇಲೆ ಜನ ಇದನ್ನ ಬಳಸೋದು ಇನ್ನೂ ಜಾಸ್ತಿ ಆಗುತ್ತೆ.

ಮೂಲ

ಆದರೆ ವಾಟ್ಸಪ್ನ ಸಾಮಾನ್ಯವಾಗಿ ಮೆಸೇಜ್ ಕಳ್ಸಕ್ಕೆ (ಮತ್ತೆ ಕಳಿಸಿದ್ದನ್ನ ಓದಕ್ಕೇ) ಜನ ಜಾಸ್ತಿ ಉಪಯೋಗಿಸೋದು. ಉಪಯೋಗಿಸುವಾಗ ನಿಮಗೆ ಒಂದು ಕೊರತೆ ಕಂಡುಬಂದಿರಬಹುದು. ಎನಾದರೂ ಕಳಿಸಿದ ಮೇಲೆ ಮುಗೀತು. ಅದು ಅವರಿಗೆ ಹೋಗಿ ಸೇರೇ ಸೇರುತ್ತೆ. ಅವರು ಓದಕ್ಕಿಂತ ಮುಂಚೆ ನಿಮ್ಮ ಸಂದೇಶ ಡಿಲೀಟೂ ಮಾಡಕ್ಕಾಗಲ್ಲ, ಬದಲಾಯಿಸಕ್ಕೂ ಆಗಲ್ಲ. ಹೌದಾ? ಇದರಿಂದ ಎಷ್ಟೋ ಸಲ ಕಳಿಸಬಾರದ ಸಂದೇಶ ಕಳಿಸಿ ಮುಜುಗರ ಆಗೋದರಿಂದ ಹಿಡಿದು ಸಂಬಂಧಗಳೇ ಹಾಳಾಗಿ ಹೋಗುವ ವರೆಗೂ ಅನಾಹುತಗಳಾಗಿವೆ.

ಈಗ ಅದೆಲ್ಲ ಬದಲಾಗೋದ್ರಲ್ಲಿದೆ.

ವರದಿಗಳ ಪ್ರಕಾರ ಇನ್ಮೇಲೆ ವಾಟ್ಸಪ್ಪಲ್ಲಿ ಕಳಿಸಿದ ಸಂದೇಶಗಳ್ನ ಡಿಲೀಟೂ ಮಾಡಬಹುದು, ಬದಲಾಯಿಸಲೂ ಬಹುದಂತೆ. ನಿಮ್ಮ ಸಂದೇಶ ತಲುಪಿ ಅದನ್ನ್ ಓದಾಗಿದ್ದರೂ ಮಾಡಬಹುದು.

ಟ್ವಿಟರ್ನಲ್ಲಿ @WABetaInfo ಅನ್ನೋರು ಈ ಫೀಚರ್ ಈಗಾಗಲೇ iOS ಬೀಟಾ ಆವೃತ್ತಿಗಳಲ್ಲಿ ಇದೆ ಅಂತ ತಿಳಿಸಿದಾರೆ. ಈ ಫೀಚರ್ ಇದ್ದರೂ ಅದನ್ನ ಡೀಫಾಲ್ಟಾಗಿ ಎನೇಬಲ್ ಮಾಡಿರಲ್ಲ.

ಈ ಹೊಸ ಫೀಚರ್ನ ಎನೇಬಲ್ ಮಾಡಿದರೆ ಕಳಿಸಿದ ಸಂದೇಶವನ್ನ ನಿಮ್ಮ ಫೋನು ಮತ್ತೆ ಅವರ ಫೋನು ಎರಡರಲ್ಲೂ ಡಿಲೀಟ್ ಮಾಡಬಹುದು ಅಥವಾ ಬದಲಾಯಿಸಬಹುದು. ಇದು ಚಿತ್ರಗಳು ಮತ್ತು ವೀಡಿಯೋಗಳಿಗೂ ಅನ್ವಯಿಸುತ್ತಂತೆ. ವಾಟ್ಸಪ್ ಗುಂಪುಗಳಿಗೂ ಅನ್ವಯಿಸುತ್ತಂತೆ.

ಸದ್ಯ! ಈಗ್ಲಾದರೂ ಬರ್ತಾ ಇದ್ಯಲ್ಲ! ಅಂದಹಾಗೆ, ನಿಮ್ಮ ಫೋನಲ್ಲಿ 30-6-2017 ಆದಮೇಲೆ ವಾಟ್ಸಪ್ ಬರುತ್ತಾ ಅಂತ ಚೆಕ್ ಮಾಡ್ಕೊಳಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಜಲ್ಲಿಕಟ್ಟು ನಿಲ್ಲಿಸಿದ್ದಕ್ಕೆ ತಮಿಳ್ರು ಬೀದೀಗ್ ಇಳ್ದಿದಾರೆ, ಆದರೆ ನಾವು ಸ್ವಲ್ಪ ಬೇರೆ ತರಹ

ನಮಗ್ಯಾಕೆ ಅವೆಲ್ಲ ಅಂತ

ತಮಿಳ್ರು ಜಾಣರು. ತಮ್ಮ ಸಂಸ್ಕೃತಿ ಮೇಲೆ ಯಾರೇ ದಾಳಿ ಮಾಡಲಿ, ಸುಮ್ನೆ ಇರಲ್ಲ.

ಈಗ ನೋಡಿ, ತಮಿಳ್ನಾಡಲ್ಲಿ ಬೀದೀಗಿಳಿದು ಜಲ್ಲಿಕಟ್ಟನ್ನ ಉಳಿಸಿಕೊಳೋ ಪ್ರಯತ್ನ ಮಾಡ್ತಾ ಇದಾರೆ.

ಆದರೆ ಈ ಜಲ್ಲಿಕಟ್ತಿನ ತರಹದ್ದೇ ನಮ್ಮದೂ ಒಂದು ಆಟ ಇದೆ - ಕಂಬಳ ಅಂತ. ಗೊತ್ತು ತಾನೇ? ನೀರು ತುಂಬಿರೋ ಕೆಸರು ಗದ್ದೆ ಅಥವಾ ನದಿ ದಡದ ಮರಳು ದಂಡೆ ಬದಿಯಲ್ಲಿ ಕೃತಕವಾಗಿ ಕಟ್ಟಿರೋ ಕೊಳದಲ್ಲಿ ಕೋಣಗಳ ರೇಸ್ ಅದು. ಕರ್ನಾಟಕದ ಕರಾವಳಿಯಲ್ಲಿ ಅನಾದಿಕಾಲದಿಂದ ನಡ್ಕೊಂಡ್ ಬಂದಿದೆ.

ನೆನಪಿಡಿ, ಸುಪ್ರೀಂ ಕೋರ್ಟು ಜಲ್ಲೀಕಟ್ಟಿನ ಮೇಲೆ ನಿಷೇಧ ಹೇರುವಾಗ ನಮ್ಮ ಕಂಬಳದ ಮೇಲೂ ಹೇರಿದೆ.

ಸುಪ್ರೀಂ ಕೋರ್ಟ್ ಆದೇಶ ಹೀಗಿದೆ:

"We, therefore, hold that Animal Welfare Board of India (AWBI)is right in its stand that jallikattu, bullock-cart race and such events per-se violate Sections 3, 11(1)(a) and 11(1)(m)(ii) of PCA Act and hence we uphold the notification dated 11.7.2011 issued by the Central Government, consequently, Bulls cannot be used as performing animals, either for the Jallikattu events or Bullock-cart Races in the State of Tamil Nadu, Maharashtra or elsewhere in the country."

ಇದರಲ್ಲಿ ಕಂಬಳ ಅಂತ ಹೆಸರಿಟ್ಟು ಹೇಳಿಲ್ಲ, ಆದರೆ "bullock-cart race and such events per-se" ಅಂದರೆ ಅದರಲ್ಲಿ ಕಂಬಳಾನೂ ಬರುತ್ತೆ.

ತಮಿಳ್ರು ಬೀದೀಗ್ ಇಳಿದು ತಮ್ಮ ಸಂಸ್ಕೃತಿ ತಾವು ಕಾಪಾಡ್ಕೋತಿದಾರೆ…

ಆದರೆ ಸದ್ಯಕ್ಕಂತೂ ನಾವು…

ಸ್ವಲ್ಪ…

… ಬೇರೆ ತರಹ. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: