ನಿಮಗೆ ಈ‌ 18 ಗುಣಗಳಿದ್ರೆ ಮಾಮೂಲಿ ಕೆಲಸ ಎಲ್ಲ ಆಗ್ಬರಲ್ಲ, ನೀವೇ ಏನಾರೂ ಮಾಡೋದು ವಾಸಿ

ಏನ್ ಗುರು ದಿನ ಅದೇ ಹಳೆ ಮುಖ, ಅದೇ ಜಾಗ, ಈ ಹಾಳ್ ಕೆಲಸ ಬೋರು

ಪ್ರತಿಯೊಬ್ಬರು ಒಂದೇ ತರ ಇರಲ್ಲ. ಮುಕ್ಕಾಲ್ವಾಸಿ ಜನ ಕೈತುಂಬಾ ದುಡ್ಡ್ ಸಿಗೋ ಕೆಲಸ ಇಷ್ಟ ಪಡ್ತಾರೆ. ಇನ್ನ ಸ್ವಲ್ಪ ಜನಕ್ಕೆ ಬೆಳಿಗ್ಗೆಯಿಂದ ಸಂಜೆ ತಂಕ ಆಫೀಸಲ್ಲಿ ಕೂತು ಕೆಲಸ ಮಾಡಕ್ಕೆ ಸುತಾರಾಂ ಇಷ್ಟ ಇರಲ್ಲ. ಬಾಸ್ ಹತ್ರ ಹೊಗಳುಸ್ಕೊಳೋದು, ಟೈಮ್ ಟೈಮಿಗೆ ಬರೋ ಕಾಫಿ, ಮದ್ಯದಲ್ಲಿ ಒಂದೆರಡ್ ದಿನ ರಜಾ ಇಷ್ಟೆಲ್ಲಾ ಸಾಕಾಗಲ್ಲ.

ಇಷ್ಟೇನಾ ಜೀವನ? ನಂಗಾಗಲ್ಲ, ನಾನೀತರ ಇರಕ್ಕಾಗಲ್ಲ ಅನ್ನೋವ್ರು ಇರ್ತಾರೆ. ನಾವು ಕೆಳ್ಗಡೆ ಕೊಟ್ಟಿರೋ 18 ಗುಣ ನಿಮಗಿದ್ರೆ ನೀವು ಆ ಥರಾನೇ ಅಂತ ತಿಳ್ಕೊಂಡ್ಬಿಡಿ. ನಿಮಗೆ ದಿನಾ ಒಂದೇ ಹೊತ್ತಿಗೆ ಆಫೀಸಿಗೆ ಹೋಗೋದು, ಸಂಜೆ ಒಂದೇ ಹೊತ್ತಿಗೆ ವಾಪಸ್ ಬರೋದು, ಇದೆಲ್ಲ ಸರಿ ಹೋಗಲ್ಲ.

1. ಟೈಮು ಅನ್ನೋ ಚೌಕಟ್ಟೇ ನಿಮಗೆ ಆಗ್ಬರಲ್ಲ

ನೀವು ಕೊಟ್ಟಿರೋ ಕೆಲಸ ಮುಗಿಸೇ ಮುಗುಸ್ತೀರಾ, ಆದ್ರೆ ನಿಮಗೆ ನಿಮ್ಮಿಷ್ಟದಂತೆ, ನಿಮಗೆ ಮನಸ್ ಬಂದಾಗ, ನಿಮಗೆ ಇಷ್ಟ ಆಗೋ ಟೈಮಲ್ಲಿ ಕೆಲಸ ಮಾಡಕ್ಕೆ ಬಿಟ್ಟಬಿಡ್ಬೇಕು ಇಲ್ಲ ಅಂದ್ರೆ 9 ರಿಂದ 5 ಚೊಂಬೇ. 

ಮೂಲ

2. ಫಾರ್ಮಲ್ಸ್ ಬಟ್ಟೆ, ಟೈ ಇವೆಲ್ಲ ಬೇಕಿಲ್ಲ ಅಂತೀರಿ

ಈ ಫಾರ್ಮಲ್ಸು ಅಂದ್ರೆ ನಿಮಗೆ ಮೈ ಉರಿಯತ್ತೆ, ಆರಾಮಾಗಿ ಜೀನ್ಸ್ ಹಾಕೊಂಡು, ಮಾಮೂಲಿ ಶರ್ಟು, ಇಷ್ಟಬಂದಿದ್ ಶೂ ಹಾಕ್ಕೊಂಡು ಮಾಡೋ ಕೆಲಸ ಮಾಡ್ಬೇಕು ಅನ್ನೋ ಆಸೆ ನಿಮ್ಮದು.

ಮೂಲ

3. ದಿನಕ್ಕೆ 8 ಗಂಟೆಕಾಲ ಒಂದೇ ಜಾಗದಲ್ಲಿ ನಿಮಗೆ ಇರಕ್ಕಾಗಲ್ಲ

ಒಂದೇ ಜಾಗದಲ್ಲಿ ಕೂತು 8 ಗಂಟೆಕಾಲ ಕೆಲಸ ಮಾಡು ಅಂದ್ರೆ ನಿಮಗೆ ಆಗಲ್ಲ, ಇದೇನೊಳ್ಳೆ ನಾಯಿ ಕಟ್ಟಾಕ್ದಂಗೆ ನನ್ನ ಕಟ್ಟಾಕ್ತಿದಾರೆ ಅಂತ ಅನ್ಸತ್ತೆ. 

ಮೂಲ

4. ಪ್ರಪಂಚ ಸುತ್ತಬೇಕು ಅಂತೀರ

ಹೊರಗಡೆ ಪ್ರಪಂಚ ಇಷ್ಟ್ ಚೆನಾಗ್ ಇರ್ಬೇಕಾದ್ರೆ ಅದೇ ಬೆಂಚು, ಕುರ್ಚಿ ಮುಂದೆ ಯಾವನ್ ಕೂರ್ತಾನೆ ಗುರು ಅಂತ ನಿಮಗೆ ಅನ್ಸತ್ತೆ. ಯಾವನ್ ದಿನ ಅದೇ ಹಳೆ ಮುಖ ನೋಡ್ಕೊಂಡು, ಹೇಳಿದ್ದನ್ನೇ ಮಾಡೋ ಪದ್ಧತೀಲಿ ಕೆಲಸ ಮಾಡ್ತಾನೆ ಅಂತ ಯೋಚ್ನೆ ಮಾಡೋವ್ರು ನೀವು.

ಮೂಲ

5. ಯಾವಾಗ್ಲೂ ಫೋನು ಕಂಪ್ಯೂಟರ್ರು ಅಂದ್ರೆ ನಿಮಗೆ ಕಿರಿ ಕಿರಿ ಅನ್ಸತ್ತೆ 

ಯಾವಾಗ್ಲೂ ಫೋನ್ ರಿಂಗಾಗ್ತಿದ್ರೆ ನಿಮಗೆ ಆಸ್ಪತ್ರೆ ಜ್ನ್ಯಾಪಕ ಬರತ್ತೆ! ನೀವು ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ನಿಮ್ಮನ ನಿಮ್ಮಿಷ್ಟದಂಗೆ ಬಿಟ್ಟಬಿಡ್ಬೇಕು ಅನ್ನೋರು ನೀವು.

ಮೂಲ

6. ಬೈಕೊಂಡು ಕೆಲಸ ಮಾಡೋವ್ರನ್ನ ಕಂಡ್ರೆ ನಿಮಗೆ ಉರ್ದೋಗತ್ತೆ 

ಅಯ್ಯೋ ಈ ಕೆಲ್ಸಕ್ಕೆ ಸೇರ್ಕೊಂಡ್ನಲ್ಲ ಅಂತ ಹೇಳ್ಕೊಂಡು ಮಾಡೋ ಕೆಲಸಾನ ಬೈಕೊಂಡು ಮಾಡೋವ್ರು ಅಂದ್ರೆ ನಿಮಗೆ ಆಗಲ್ಲ. ತನ್ನ ಕೆಲಸಾನ ಇಷ್ಟಪಟ್ಟು ಖುಷ್ ಖುಷಿಯಾಗಿ ಮಾಡೋವ್ರಿಗೆ ನೀವು ಸ್ಪೂರ್ತಿಯಾಗಿರ್ತೀರ, ಯಾಕಂದ್ರೆ ಇಷ್ಟ ಪಟ್ಟು ಕೆಲಸ ಮಾಡೋವ್ರು ತಾವು ಇಷ್ಟಪಟ್ಟಿದ್ದನ್ನೇ ಮಾಡ್ತಿರ್ತಾರೆ ಅದಕ್ಕೆ.

ಮೂಲ

7. ನಿಮ್ಮಿಷ್ಟದ ಕೆಲಸ ಮಾಡಕ್ಕೆ ನಿಮಗೆ ಕಾಯಕ್ಕಾಗಲ್ಲ 

ಪ್ರತಿದಿನ ಗಂಟೆ ಹೊಡೆದಾಗ ಆಫೀಸಿಂದ ಓಡೋಗಿ ನಿಮ್ಮಿಷ್ಟವಾದ ಕೆಲಸ ಮಾಡೋದು ನಿಮಗೆ ಇಷ್ಟ ಆಗಲ್ಲ. ನಿಮಗೆ ಮಾನ್ಸಾದಾಗೆಲ್ಲ ನಿಮ್ಮ್ ಕೆಲಸ ಮಾಡ್ಬೇಕು ಅಂತ ಅನ್ಸತ್ತೆ. ಉದಾ: ಚಿತ್ರ ಬಿಡ್ಸೋದು, ಹಾಡೋದು, ಕಾಡಲ್ಲಿ ಕ್ಯಾಂಪ್ ಹಾಕೋದು..

ಮೂಲ

8. ಬಾಸ್ಸು, ಮ್ಯಾನೇಜರ್ರು, ಸೀನಿಯರ್ರು ಈ ಪದ್ದತಿನೇ ನಿಮಗೆ ಇಷ್ಟ ಆಗಲ್ಲ 

ಬಾಸಿಗೆ ಬಕ್ಕಿಟ್ ಹಿಡಿಯದು ಇವೆಲ್ಲ ಆಗಲ್ಲ. ಈ ತರ ಕೆಲಸ ಮಾಡಿ ಉದ್ದಾರ ಆಗಕ್ಕಿಂತ ಹಾಳಾಗೋಗ್ತಿದೀನಿ ಅನ್ಸತ್ತೆ ನಿಮಗೆ.

ಮೂಲ

9. ಎಷ್ಟೇ ಕಷ್ಟಪಟ್ರೂ ಮಾಡ್ತಿರೋ ಕೆಲ್ಸಾನ ಇಷ್ಟಪಟ್ಟು ಮಾಡಕ್ಕಾಗ್ತಿರಲ್ಲ

ಕೆಲಸದ ಮದ್ಯದಲ್ಲಿ ನಿಮ್ಮ ಲೋಕದಲ್ಲಿ ಮುಳಗಿಹೋಗಿರ್ತೀರಿ, ಕಷ್ಟಾಪಟ್ಟು ನಿಮ್ಮ ಗಮನಾನ ಕೆಲಸದಕಡೆ ತರ್ತೀರಿ. ಎಲ್ಲಾದ್ರೂ ಹೊರಗಡೆ ಸುತ್ತಾಡಿಕೊಂಡು ಮಜಾ ಮಾಡ್ಕೊಂಡು ಬಂದ್ರೆ ಸಕತ್ತಾಗಿ ಕೆಲಸ ಮಾಡ್ತೀರಿ.

ಮೂಲ

10. ನಿಮ್ಮದೇ ಆದ ಕ್ರಿಯಾಶೀಲತೆಲಿ (ಕ್ರಿಯೇಟಿವಿಟಿಲೀ) ನೀವು ಕೆಲಸ ಮಾಡಬೇಕು 

ಎಲ್ಲೊ ಕೂತ್ಕೊಂಡು, ಯಾವನೋ ಆರ್ಡರ್ ಮಾಡೋದನ್ನ ಕೇಳ್ಕೊಂಡು ಮಾಡೋ ಕೆಲಸಕ್ಕಿಂತ, ನೀವೇ ಸ್ವಂತವಾಗಿ ನಿಮ್ಮಿಷ್ಟದ ಕೆಲಸಾನ ಮಾಡಕ್ಕೆ ನಿಮಗೆ ಇಷ್ಟ 

ಮೂಲ

11. ನೀವು ತುಂಬಾ ಅಚ್ಚುಕಟ್ಟಾಗಿ ಕೆಲಸ ಮಾಡ್ತೀರಾ 

ಕೆಲಸ ಮಾಡಕ್ಕೆ ನಿಮ್ಮನ್ನ ನಿಮ್ಮಷ್ಟಕ್ಕೆ ಬಿಟ್ಟಬಿಡ್ಬೇಕು. ಕಾಟಾಚಾರಕ್ಕೆ ನೀವು ಯಾವ್ ಕೆಲ್ಸಾನೂ ಮಾಡಲ್ಲ. ಒಂದೊಳ್ಳೆ ಫೋಟೋ ತೆಗೀಬೇಕು ಅಂತ ಸೂರ್ಯ ಮುಳ್ಗೋದನ್ನೇ ಕಾಯಕ್ಕೆ ರೆಡಿ ನೀವು.

ಮೂಲ

12. ನೀವು ಬೇಡದಿದ್ದ ವಿಚಾರಕ್ಕೆ ತಲೆ ಕೆಡಿಸ್ಕೊಳಲ್ಲ 

ಚಿಕ್ಕದಾಗಿರೋ ಜೀವ್ನಾನ ಖುಷ್ಯಾಗಿ ಕಳಿಬೇಕು. ಯಾವುದೊ ವಿಷ್ಯಕ್ಕೆ (ಅವ್ನ್ ಬಗ್ಗೆ, ಅವ್ಳ ಬಗ್ಗೆ) ತಲೆಕೆಡುಸ್ಕೊಳಲ್ಲ. ಗುಂಪುಗಾರಿಕೆ ಇಷ್ಟ ಆಗಲ್ಲ ನಿಮಗೆ.

ಮೂಲ

13. ಸೋಮವಾರ ಅಂದ್ರೆ ಅಸಹ್ಯ ಪಡ್ತೀರಾ 

ಥೂ! ಯಾಕಾದ್ರೂ ಈ ಸೋಮವಾರ ಬರತ್ತೋ ಅಂತ ಅನ್ಕೋತೀರಿ. ಸೋಮವಾರಾನು ಖುಷ್ಯಾಗಿ ಕೆಲ್ಸಕ್ಕೆ ಹೋಗೋ ಅಂತ ಕೆಲಸ ಬೇಗ ಹುಡುಕ್ಕೊಳಿ.

ಮೂಲ

14. ಸುತ್ತಾಡೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಪಡ್ತೀರಿ

ಸಮುದ್ರದಿಂದ ಆಕಾಶದ್ ತುದಿತಂಕ ನೋಡಕ್ಕೆ ಎಷ್ಟಿದೆ, ಇದನ್ನ ಬಿಟ್ಟು ಕಂಪ್ಯೂಟರ್ ಮುಂದೆ ಅಥವಾ ಯಾವ್ದೋ ರೂಮಲ್ಲಿ ಕೂತ್ಕೋಬೇಕಾ ಅಂತ ಯೋಚ್ನೆ ಮಾಡೋವ್ರು ನೀವು.

ಮೂಲ

15. ರೂಲ್ಸು ಅಂದ್ರೆ ನಿಮಗೆ ಆಗೋದೇ ಇಲ್ಲ 

ಯಾರೋ ಮಾಡ್ಬೇಡ ಅಂದಾಕ್ಷಣ ಸುಮ್ನಿರಕ್ಕಾಗಲ್ಲ, ಯಾಕ್ ಮಾಡ್ಬಾರ್ದು? ಮಾಡುದ್ರೆ ಏನಾಗತ್ತೆ ಅಂತ ನೀವೇ ಖುದ್ದಾಗಿ ತಿಳ್ಕೊಬೇಕು ಅಂತ ನಿಮ್ಮಾಸೆ.

ಮೂಲ

16. ಗುರಿಗಿಂತ ಕನಸೇ ಮುಖ್ಯ ಅಂತೀರಿ

ಈ ವರ್ಷ ಇದು ನನ್ನ ಗುರಿ ಇದು. ಈ ತರ ಎಲ್ಲ ಏನು ಇರಲ್ಲ, ಸಿಕ್ಕಾಪಟ್ಟೆ ಕನ್ಸ್ ಕಾಣ್ತೀರಿ. ಅದನ್ನ ಯಾವುದೇ ಬೇಜಾರಿಲ್ದೆ ಒಬ್ರೇ ನನಸ್ ಕೂಡ ಮಾಡ್ಕೋತೀರಿ.

17. ದುಡ್ಡಿಗಿಂತ ನೆಮ್ಮದಿ, ಸಂತೋಷಕ್ಕೆ ಜಾಸ್ತಿ ಬೆಲೆ ಕೊಡ್ತೀರಿ

ಕೆಲಸ ಮಾಡುದ್ಮೇಲೆ ದುಡ್ಡ್ ಬರೋದಕ್ಕಿಂದ ನಿಮಗೆ ಖುಷಿಯಾದ್ರೆ, ತೃಪ್ತಿಯಾದ್ರೆ ಅದೇ ನಿಮಗೆ ಗೆದ್ದಂಗೆ. ಸಂತೋಷಕ್ಕೆ, ನೆಮ್ಮದಿಗೆ ದುಡ್ಡಲ್ ಬೆಲೆ ಕಟ್ಟಕ್ಕಾಗತ್ತಾ ಅನ್ನೋರು ನೀವು.

ಮೂಲ

18. ನೀವು ಜೀವನಾನ ಬೇರೆ ದೃಷ್ಟೀಲೇ ನೋಡ್ತೀರಿ

ಬದುಕಕ್ಕೆ ದುಡುದ್ರೆ ಸಾಕು, ನಾ ಬದುಕಿರೋದೇ ದುಡಿಯಕ್ಕಲ್ಲ ಅಂತೀರಾ. ಜೀವನದಲ್ಲಿ ನೀವು ಮಾಡ್ಬೇಕು ಅನ್ಕೊಂಡಿರೋ ಕೆಲಸದ ಪಟ್ಟಿ ಸಿಕ್ಕಾಪಟ್ಟೆ ದೊಡ್ಡದಾಗಿರತ್ತೆ. ಭಾವನೆಗೆ ಬೆಲೆಕೊಟ್ಟು ಬದ್ಕೋರು ನೀವು. ನಿಮ್ಮ್ ಜೀವನ, ನೀವು ಹಾಗೆ ಬದುಕ್ಬೇಕು, ಅದೇ ನಿಮ್ಮಾಸೆ.

ಮೂಲ

ನೀವ್ ಹೀಗೆನಾ? ಹಾಗಾದ್ರೆ ನೀವೇ ಏನಾದ್ರೂ ಶುರು ಮಾಡೋದು ವಾಸಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಕಷ್ಟ ಬಂದಾಗ ಈ 12 ಸತ್ಯಗಳ್ನ ನೆನಪಿಸಿಕೊಂಡರೆ ಇನ್ನಷ್ಟು ಗಟ್ಟಿಯಾಗಿ ಹೊರಬರ್ತೀರಿ

ಸೋಲು ಗೆಲುವು ಎಲ್ಲಕ್ಕೂ ಮನಸ್ಸೇ ಕಾರಣ

ಕಷ್ಟ ಅನ್ನೋದ್ ಎಲ್ಲಾರ್ಗೂ ಬಂದೇ ಬರತ್ತೆ. ಒಂದೊಂದ್ಸಲ ಯಾವಾಗ್ ಮುಗ್ಯತ್ತಪ್ಪ ಅನ್ನೋ ಅಷ್ಟು ಕಷ್ಟಗಳು ಬರತ್ತೆ. 

ಆದ್ರೆ ನಮಗೆ ನಾವೇ ಈ 12 ಸತ್ಯಗಳ್ನ ಹೇಳ್ಕೊಂಡ್ ಸಮಾಧಾನ ಮಾಡ್ಕೊಂಡ್ರೆ ಕಷ್ಟಾನ ಎದುರಿಸೋ ಧೈರ್ಯ ಬರತ್ತೆ.

1. ಗೆಲ್ಲೋದಕ್ಕೆ ಸೋಲೋದಕ್ಕೆ ಎರಡಕ್ಕೂ ನಮ್ಮ ಮನಸ್ಸೇ ಕಾರಣ

ನಾವ್ ಮನಸ್ಸಿನಲ್ಲಿ ಏನ್ ಯೋಚ್ನೆ ಮಾಡ್ತೀವೋ ಅದೇ ತರ ನಡ್ಕೊಳ್ತೀವಿ. ನಮಗೆ ಅದೇ ತರ ಸಂದರ್ಭಗಳು ಒದಗಿ ಬರತ್ತೆ.

ನಾವು ಒಳ್ಳೇದನ್ನ ಯೋಚ್ನೆ ಮಾಡ್ತಾ, ಒಳ್ಳೇ ಕೆಲ್ಸಾನೇ ಯಾವಾಗ್ಲೂ ಮಾಡ್ತಾ ಇದ್ರೆ, ಮನಸ್ಸೂ ಒಳ್ಳೇದಾಗಿರತ್ತೆ. 

2. ನೋವು ಬರತ್ತೆ ಹಾಗೆ ಹೋಗತ್ತೆ

ಎಲ್ಲಾರ್ ಬದುಕಲ್ಲೂ ಒಂದಲ್ಲ ಒಂದು ತೊಂದ್ರೆ ಇದ್ದೇ ಇರತ್ತೆ, ಮನಸ್ಸಿಗೆ ನೋವು ತರೋ ಸಂದರ್ಭನೂ ಇದ್ದಿದ್ದೇ. ಇವೆಲ್ಲ ನಮ್ಮನ್ನ ಇನ್ನೂ ಗಟ್ಟಿ ಆಗ್ಸತ್ತೆ. ಕುಗ್ಗಕ್ಕೆ ಅವಕಾಶ ಕೊಡ್ಬಾರ್ದು ಅಷ್ಟೆ.

3. ಯೋಚ್ನೆ ಮಾಡೋದ್ರಿಂದ ಯಾವ ಸಮಸ್ಯೆನೂ ಪರಿಹಾರ ಆಗಲ್ಲ

ಯೋಚ್ನೆ ಮಾಡೋದ್ರಿಂದ ಯಾವ್ದೂ ಸರಿ ಹೋಗಲ್ಲ. ಅದ್ರಿಂದ ಮನಸ್ಸಿಗೆ ಮತ್ತೆ ದೇಹಕ್ಕೆ ಒತ್ತಡ ಜಾಸ್ತಿ ಆಗತ್ತೆ ಅಷ್ತೇ

4. ಕಷ್ಟ ಎದುರಿಸಕ್ಕೆ ಭಯಪಟ್ರೆ ಮುಂದೆ ಹೋಗಕ್ಕೆ ಆಗಲ್ಲ

ಕಷ್ಟ ಬಂತು ಅಂತ ಭಯದಿಂದ ಮನಸ್ಸು ಮುದುಡಿಕೊಂಡು ಕೂತ್ಕೋಂಡ್ರೆ ಯಾವ ಕೆಲ್ಸನೂ ಆಗಲ್ಲ.  ಹಿಂದೇನೆ ಉಳೀತೀವಿ.

ನಿಮಗೆ ಬೇಕಾಗಿರೋದೆಲ್ಲಾ ಭಯದ ಇನ್ನೊಂದು ಕಡೆ ಇದೆ. ಧೈರ್ಯವಾಗಿ ಮುನ್ನುಗ್ಗಿ ಗುರಿ ಸಾಧಿಸಿ.

5. ಅನುಭವಾನೇ ಇಲ್ದಿದ್ರೆ ಯಾವ್ದೇ ಪಾಠಾನೂ ಇರಲ್ಲ

ನಾವು ತುಂಬಾ ದ್ವೇಷ ಮಾಡೋಂಥ, ಮತ್ತೆ ನಮಗೆ ಬೇಡದೇ ಇರೋ ಅನುಭವಗಳೇ ನಮ್ಮನ್ನ ಗಟ್ಟಿಯಾಗಿ ನಿಲ್ಲೋಹಂಗೆ ಮಾಡೋದು.

6. ಪ್ರಯತ್ನಪಡದೆ ಯಾವ್ದೂ ಬದಲಾಗಲ್ಲ

ಬದಲಾವಣೆ ಅನ್ನೋದು ಏನಾದ್ರೂ ಮಾಡೋದಿಕ್ಕೆ ಸಂಬಂಧಿಸಿದ್ದು. ಸುಮ್ಮನೆ ಇರೋಕಲ್ಲ. ಯಾವುದೇ ವಿಚಾರಾನ ಬದಲಾಯಿಸಕ್ಕೆ ಪ್ರಯತ್ನ ಪಡ್ದೇ ಇದ್ರೆ ಏನೂ ಬದಲಾಗೋದೇ ಇಲ್ಲ.

7. ಆಗೋಗಿರೊದನ್ನ ಬದಲಾಯ್ಸಕ್ಕೂ ಆಗಲ್ಲ

ಆಗೋಗಿದ್ದು ಹಿಂದೆ ಸರಿದಿದ್ದು ಆಯ್ತು. ಅದನ್ನ ಬದಲಾಯ್ಸಕ್ಕೆ ಬ್ರಹ್ಮನಿಂದ್ಲೂ ಆಗಲ್ಲ

8. ರಾತ್ರೋರಾತ್ರಿ ಯಾವ್ದೇ ಕೆಲ್ಸ ಮುಗ್ಸಕ್ಕಾಗಲ್ಲ

ಯಾವ್ದೇ ಕೆಲ್ಸಾನೂ ಒಂದ್ ನಿಮಿಷದಲ್ಲಿ, ಒಂದ್ ದಿನದಲ್ಲಿ ಆಗೋದಿಲ್ಲ. ಸರಿಯಾಗಿ ಮಾಡ್ಬೇಕೂಂದ್ರೆ ಸಮಯ ಬೇಕು. ತಾಳ್ಮೆ ಇರ್ಬೇಕು. ದೊಡ್ಡ ದೊಡ್ಡ ಕನಸುಗಳನ್ನ ಸಾಧಿ ತೋರ್ಸ್ಬೇಕಾದ್ರೆ ಗುರಿ ಅಷ್ಟೆ ಅಲ್ಲ ಅದರ ಕಡೆ ಹೆಜ್ಜೆ ಹೆಜ್ಜೆನೂ ಮೆಲುಕು ಹಾಕ್ತ ಸರಿಯಾದ ದಾರೀಲಿ ನಡಿತಾ ಇದ್ದೀರಾ ಅಂತ ವಿಮರ್ಶೆ ಮಾಡೊ ಛಲ ಇರಲಿ. ಅತುರದಲ್ಲಿ ಮುಗ್ಸಕ್ಕೆ ಹೋಗಿ ಕೈ ಸುಟ್ಕೋಳೋದು ಸರಿಯಲ್ಲ.

9. ಎಲ್ಲಾ ಕೆಟ್ಟದ್ರಲ್ಲೂ ಒಳ್ಳೇದೇನೋ ಒಂದ್ ಇರತ್ತೆ

ಬರೀ ಕೆಟ್ಟದಾಗ್ತಾ ಇದೆ ಅಂತ ಆ ಟೈಮಲ್ಲಿ ಆಗೊ ಒಳ್ಳೇದನ್ನ ಗಮನ್ಸೋದೇ ಇಲ್ಲ ನಾವು. ಆದ್ರೆ, ಎಷ್ಟೇ ಕೆಟ್ಟದಾಗ್ತಾ ಇದ್ರೂ ಏನೋ ಒಂದ್ ಒಳ್ಳೇದ್ ಇದ್ದೇ ಇರತ್ತೆ.

10. ಸೋಲು ಗೆಲ್ಲೋದಿಕ್ಕೆ ಒಂದ್ ಮೆಟ್ಟಿಲು ಅಷ್ಟೇ

ಸೋತೋದೆ ಅಂತ ಆಕಾಶ ಏನೂ ತಲೆ ಮೇಲೆ ಬೀಳಲ್ಲ. ಸೋಲು ಅನ್ನೋದ್ ಗೆಲ್ಲಕ್ಕೆ ಒಂದೊಂದೇ ಮೆಟ್ಟಿಲು.

11. ಬಂದಿರೋ ಕಷ್ಟನ ಎದುರಿಸಕ್ಕೆ ನನ್ನ ಕೈಲಿ ಆಗತ್ತೆ

ಯಾರೋ ಏನೋ ಮಾಡಿದ್ರೂ ಅಂದ್ರೆ ಅದೆಲ್ಲಾ ನಮಗೂ ಆಗ್ಬೇಕೂಂತ ಏನೂ ಇಲ್ಲ. ಐದು ಬೆರೆಳೂ ಸಮ ಇರಲ್ಲ; ಹಾಗೆ ಇದೂನು. ಅವರಿವರಿಗೆ ಹೋಲಿಸಿಕೊಂಡ್ರೆ ನಿಮಗೆ ನೀವು ಅವಮಾನ ಮಾಡ್ಕೊಂಡ್ ಹಾಗೆ.

12. ಯಾರೂ ಒಂಟಿ ಅಲ್ಲ

ಈ ಪ್ರಪಂಚ್ದಲ್ಲಿ ಯಾರೂ ಒಂಟಿ ಅಲ್ಲ. ಏನೇನೆ ಅಡ್ಡಿ ಆತಂಕ ಬಂದ್ರೂ ಯಾರ್ದಾದ್ರೂ ಸಹಾಯ ಸಿಕ್ಕೇ ಸಿಗತ್ತೆ. ಎಲ್ಲಾರ್ಗೂ ಅವರವರ್ ಕಷ್ಟ ಇರತ್ತೆ. ಅದನ್ನ ಗೆದ್ದು ಬರೋ ದಾರಿ ನೋಡ್ಕೋಬೇಕು ಅಷ್ಟೇ.

ನೀವು ಎದುರಿಸ್ತಾ ಇರೋ ಸಂಕಷ್ಟ ಯಾವ್ದೇ ಇರ್ಲಿ – ಈ 12 ಸತ್ಯಗಳ್ನ ಹೇಳ್ಕೊಳಿ. ಮುನ್ನಗ್ಗಕ್ಕೆ ಧೈರ್ಯ ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: