ಈ 13 ಪ್ರಾಣಿಗಳಿಗೆ ಪ್ರಪಂಚ ಹೆಂಗ್ ಕಾಣ್ಸುತ್ತೆ ಅಂತ ಗೊತ್ತಾದಾಗ ನಿಮಗೆ ಜ್ಞಾನೋದಯ ಆಗುತ್ತೆ

ಹಸುಗೆ ಎಲ್ಲ ಸ್ವಲ್ಪ ದೊಡ್ಡದಾಗೇ ಕಾಣ್ಸದು

ಯಾವತ್ತಾದ್ರೂ ನಿಮ್ಮನೆ ನಾಯಿ ಕಣ್ಣಿಗೆ ನೀವ್ ಹೇಗ್ ಕಾಣ್ತೀರ ಅಂತ ಯೋಚ್ನೆ ಮಾಡಿದೀರಾ? ಯಾವತ್ತಾದ್ರೂ ಒಂದ್ ದುಂಬಿಗೆ ನಮ ಪ್ರಪಂಚ ಹೇಗ್ ಕಾಣ್ಸತ್ತೆ ಅಂತ ಯೋಚ್ನೆ ಮಾಡಿದೀರಾ? ಒಂದೊಂದ್ ಪ್ರಾಣಿ ಪ್ರಪಂಚನಾ ಒನ್ನೊಂಥರ ನೋಡತ್ತೆ. ಕೆಲವೊಂದಕ್ಕೆ ನಮಗಿಂತ  ಜಾಸ್ತಿನೇ ಕಾಣತ್ತೆ. ಈಗ ಈ ೧೩ ಪ್ರಾಣಿ ಕಣ್ಣಿಗೆ ಹೇಗ್ ಕಾಣ್ಸತ್ತೆ ನಮ್ ಪ್ರಪಂಚ ಅಂತ ತಿಳ್ಕೊಳಿ .

1. ನಾಯಿಗೆ ಬೆಳಗ್ಗೆ ನೋಡಿದ್ದೆಲ್ಲ ಸ್ವಲ್ಪ ಮಂಜ್- ಮಂಜು. ರಾತ್ರಿ ಭಾಳ ತೀಕ್ಷ್ಣ

ನಾಯಿಗೆ ನೋಡಿದ್ದೆಲ್ಲ ಸ್ವಲ್ಪ ಮಂಜ್-ಮಂಜಾಗ್ ಕಾಣತ್ತೆ. ಬಣ್ಣಗಳ ವ್ಯತ್ಯಾಸ ಅಷ್ಟೇನೂ ಗೊತ್ತಾಗಲ್ಲ, ಎಲ್ಲಾ ಬಣ್ಣಾನೂ ಸ್ವಲ್ಪ ತಿಳಿಯಾಗಿ, ಮಂಜಾಗಿ ಕಾಣ್ಸತ್ತೆ.

ಇವಕ್ಕೆ ಗ್ರಹಣ ಶಕ್ತಿ ಜಾಸ್ತಿ. ಒಂದ್ ನೊಣ ಮುಂದೆ ಇದ್ರು ಕಮಕ್-ಕಿಮಕ್ ಅಂದ್ರು ಇದರ ಕಣ್ಣಿಗೆ ಗೊತ್ತಾಗತ್ತೆ.

ಮೂಲ  

2. ಮೀನಿಗೆ  ಹತ್ರ ಇರೋದೆಲ್ಲ ಭೂತಗನ್ನಡಿಲಿ ಕಾಣಿಸೋ ಹಾಗೆ ಕಾಣತ್ತೆ 

ಮಾಮೂಲಿ ಟ್ಯಾಂಕಲ್ಲಿರೋ ಮೀನಿನ ಕಣ್ಣಿಗೆ ಅಲ್ಟ್ರಾವೈಲೆಟ್ ಕಿರಣದ ತೀಕ್ಷ್ಣತೆ ಇರತ್ತೆ,  

ಹತ್ರ ಇರೋದೆಲ್ಲಾ ದೊಡ್ಡದಾಗಿ ಕಾಣ್ಸತ್ತೆ. ಅದಕ್ಕೆ ಏನೋ ಇವು ಯಾವಾಗ್ಲೂ ಆಶ್ಚರ್ಯ ಪಡೋತರ ಕಣ್ಣು ಅಗಲ ಮಾಡ್ಕೊಂಡು ನೋಡ್ತಿರತ್ತೆ.

ಮೂಲ

3. ಹಕ್ಕಿಗೆ ಕಣ್ಣಿಗೆ ನಮಗಿಂತ ಜಾಸ್ತಿ ಬಣ್ಣ ಗೊತ್ತಾಗತ್ತೆ 

ಈ ಗೂಬೆಜಾತಿಗೆ ಸೇರೋ ಹಕ್ಕಿಗೆ ಬೆಳಕಿಲ್ಲದಿದ್ರೂ ಕಣ್ಣ್  ಚೆನಾಗ್ ಕಾಣ್ಸತ್ತೆ. ಬೇರೆ ಹಕ್ಕಿಗೆಲ್ಲ್ಲಾ ಅಲ್ಟ್ರಾವೈಲೆಟ್ ಕಿರಣದಲ್ಲಿ ಮನುಷ್ಯರಿಗೂ ಕಾಣಿಸದೇರೋ ಬಣ್ಣಗಳೆಲ್ಲಾ ಕಾಣ್ಸತ್ತೆ.

ಮೂಲ

4. ಹಾವಿಗೆ ಬೆಳಿಗ್ಗೆ ಕಣ್ಣೇ ಕಾಣ್ಸಲ್ಲ 

ಹಾವಿನ ಕಣ್ಣು ಸ್ವಲ್ಪ ಮಂದಾನೆ. ಆದ್ರೆ ಇವಕ್ಕೆ ರಾತ್ರಿ ಹೊತ್ತಲ್ಲಿ ಈ ಥರ್ಮಲ್ ರಾಡಿಯೇಷನ್ನು, ಈಗಿರೋ ಆಧುನಿಕ ಇನ್ಫ್ರಾ-ರೆಡ್ ತಂತ್ರಜ್ಞಾನಕ್ಕಿಂತ 10 ಪಟ್ಟು ಚೆನಾಗ್ ಕಾಣತ್ತೆ. 

ಇವು ಬರಿ ಚಲನವಲನದಿಂದ ಏನಾಗ್ತಿದೆ ಅಂತ ತಿಳ್ಕೊಳದು. ಬೆಳಗೊತ್ತಲ್ಲಿ ಇದ್ರು ಮುಂದಿರೋ ಬೇಟೆ ಮಿಸ್ಕಾಡ್ದೆ ಇದ್ರೆ ಇವಕ್ಕೆ ಏನು ಗೊತ್ತಾಗಲ್ಲ.

ಮೂಲ

5. ಇಲಿ, ಹೆಗ್ಗಣಕ್ಕೆ ಎಲ್ಲ ಎರಡೆರಡು ಕಾಣತ್ತೆ. ಇವಕ್ಕೆ ಕಣ್ಣು ಮಂದಾನೆ 

ಇವು ಒಂದು ಕಣ್ಣನ್ನ ಒಂದ್ಕಡೆ ತಿರುಗ್ಸಿ ಇನ್ನೊಂದ್ ಕಣ್ಣಲ್ಲಿ ಇನ್ನೊಂದನ್ನ ನೋಡಬೋದು. ಅದಕ್ಕೆ ಎಲ್ಲಾ ಎರಡೆರಡು ಕಾಣತ್ತೆ. ಇವಕ್ಕೆ ಇಡೀ ಪ್ರಪಂಚ ಹಸ್ರು ಮತ್ತೆ ನೀಲಿ ಬಣ್ಣದಲ್ಲೇ ಕಾಣಿಸೋದು.

ಮೂಲ

6. ಹಸುಗೆ ಎಲ್ಲ ಸ್ವಲ್ಪ ದೊಡ್ಡದಾಗೇ ಕಾಣ್ಸದು

ಇವಕ್ಕೆ ತಾವು ಮೇಯಕ್ಕೋಗೋ ಗದ್ದೆ, ಮೇವಿರೋ ಜಾಗಾ ಕೆಂಪಾಗಿ, ಕೇಸರಿ ಬಣ್ಣದಲ್ಲಿ ಕಾಣ್ಸತ್ತೆ

ಮೂಲ

7. ಕುದುರೆ ತನ್ನ ಮೂಗ್ಮುಂದೆ ಇರೋದ್ ಬಿಟ್ಟು ಇನ್ನೆಲ್ಲ ಕಾಣ್ಸತ್ತೆ

ಕುದುರೆ ಕಣ್ಣು ತಲೆ ಪಕ್ಕ ಇರತ್ತೆ, ಏನಾದ್ರು ಅನಾಹುತ ಇದ್ರೆ ಇವಕ್ಕೆ ಟಕ್ಕಂತ ಗೊತಾಗೋಗತ್ತೆ.

ಮೂಲ

8. ದುಂಬಿಗೆ ನಮಗಿಂತ ಚೆನ್ನಾಗಿ ಕಣ್ಣ್ ಕಾಣ್ಸತ್ತೆ 

ನಮ್ಮ್ ಕಣ್ಣಿಗೆ ಗೊತ್ತಾಗಕ್ಕೂ ಮೂರ್ಪಟ್ಟ ಬೇಗ ಇವಕ್ಕೆ ಗೊತ್ತಾಗಿರತ್ತೆ. ಇವಕ್ಕೆ ಅಲ್ಟ್ರಾವೈಲೆಟ್ ಕಿರಣಗಳೂ ಕಾಣ್ಸತ್ತೆ 

ಮೂಲ

9. ನೊಣಕ್ಕೆ  ಪ್ರಪಂಚ ಸ್ವಲ್ಪ ನಿದಾನಕ್ಕೆ ನಡೀತಿರೋತರ ಕಾಣತ್ತೆ

ಸಾವಿರಾರು ಸಣ್ಣ-ಸಣ್ಣ ಕಣ್ಣಿದ್ದು ಅವೆಲ್ಲ ಒಂದೊಂದ್ ಚಿತ್ರ ಕೊಟ್ಟು, ಅದೆಲ್ಲ ಸೇರಿ ಒಂದ್ ಚಿತ್ರ ಆದಾಗ ಹೇಗ್ ಕಾಣತ್ತೋ ಹಾಗೆ ಇವಕ್ಕೆ  ಪ್ರಪಂಚ ಕಾಣ್ಸದು. ಇವಕ್ಕೆ ಅಲ್ಟ್ರಾವೈಲೆಟ್ ಕಿರಣಗಳೂ ಕಾಣ್ಸತ್ತೆ. 

ಮೂಲ

10. ಶಾರ್ಕ್ ಕಣ್ಣಿಗೆ ಯಾವ್ ಬಣ್ಣಾನೂ ಕಾಣ್ಸಲ್ಲ 

ನೀರೊಳ್ಗಡೆ ನಮಗಿಂತ ಚೆನ್ನಾಗಿ ಇವಕ್ಕೆ ಕಣ್ಣು ಕಾಣ್ಸತ್ತೆ

ಮೂಲ

11. ಊಸರವಳ್ಳಿಗೆ ಸುತ್ತ 360 ಡಿಗ್ರಿ ಕಾಣ್ಸತ್ತೆ

ಇವು ಬಣ್ಣ ಬದ್ಲುಸದಷ್ಟೇ ಅಲ್ಲ ಎರಡು ಕಣ್ಣನ್ನು  ಸ್ವತಂತ್ರವಾಗಿ ತಿರ್ಗುಸ್ಕೊಳತ್ತೆ.

ಮೂಲ

12. ಹಲ್ಲಿಗೆ ರಾತ್ರಿ ಮಾತ್ರ ಕಣ್ಣು ಚೆನ್ನಾಗಿ ಕಾಣತ್ತೆ 

ನಮಗಿಂತ 350 ಪಟ್ಟು ಚೆನ್ನಾಗಿ ಇವಕ್ಕೆ ಕಣ್ಣು ಕಾಣ್ಸತ್ತೆ 

ಮೂಲ

13. ಚಿಟ್ಟೆಗೆ ನಮಗಿಂತ ಜಾಸ್ತಿ ಬಣ್ಣಗಳು ಕಾಣ್ಸತ್ತೆ

ಇವುಗಳ ಕಣ್ಣು ಸಿಕ್ಕಾಪಟ್ಟೆ ಚುರುಕು. ಇವಕ್ಕೆ ಅಲ್ಟ್ರಾವೈಲೆಟ್ಟ್ ಕಿರಣಗಳೂ ಕಾಣ್ಸತ್ತೆ .

ಮೂಲ

ನಾವು ನೋಡೋ ಪ್ರಪಂಚಾನೇ ಪ್ರಪಂಚ ಅನ್ಕೊಂಡಿರ್ತೀವಿ… ಪ್ರಪಂಚ ಬೇರೆಬೇರೆ ಪ್ರಾಣಿಗಳಿಗೆ ಬೇರೆ ಬೇರೆ ತರಹ ಕಾಣುತ್ತೆ ಅಂತ ಅರ್ಥ ಆದ್ಮೇಲೆ ಅದೊಂಥರಾ ಜ್ಞಾನೋದಯಾನೇ… ಅಲ್ವಾ? ಇದೆ ಜ್ಞಾನ ಮನುಷ್ಯನಿಗೂ ಅನ್ವಯಿಸುತ್ತೆ. ಒಬ್ಬೊಬ್ಬ ಮನುಷ್ಯಾನೂ ಬೇರೆಬೇರೆ. ಒಬ್ಬೊಬ್ಬ ಮನುಷ್ಯಾನೂ ಪ್ರಪಂಚವನ್ನ ನೋಡೋ ರೀತಿ ಬೇರೆಬೇರೆ…

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: