ಹೊಕ್ಕಳಿಗೆ ಆರೈಕೆ ಮಾಡ್ಕೊಂಡು ಈ 8 ತೊಂದರೆಯಿಂದ ಪಾರಾಗ್ಬೋದು ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಒಣಗಿದ ತುಟಿ ಸಾಫ್ಟ್ ಆಗತ್ತೆ

ಮೈನಲ್ಲಿರೋ ಹೊಕ್ಕಳು ದೇವರು ನಮ್ಗೆ ಕೊಟ್ಟಿರೋ ವರ. ತಾಯಿಯಿಂದ ಮಗು ಹುಟ್ಟೊ ಘಳಿಗೆಯಿಂದ ಹೊಕ್ಕಳು ತನ್ನ ಕೆಲ್ಸ ಶುರು ಆಗತ್ತೆ. ವಿಜ್ನಾನದ ಪ್ರಕಾರ ಒಬ್ಬ ಮನುಷ್ಯ ಸತ್ತ ಮೇಲೂ 3 ಘಂಟೆಗಳ ಕಾಲ ಹೊಕ್ಕಳ ಹತ್ರ ಬೆಚ್ಚಗಿರತ್ತಂತೆ. ಆಯುರ್ವೇದದಲ್ಲಿ ನಾಭಿಗೆ ಭಾಳ ಮುಖ್ಯ ಪಾತ್ರ ಇದೆ. ಚೈನೀಸ್ ಮೆಡಿಸಿನ್ ಪ್ರಕಾರ ಹೊಕ್ಕಳು ನಮ್ ದೇಹದಲ್ಲಿರೋ ಮೇಜರ್ ಎನರ್ಜಿ ಪಾಯಿಂಟ್. ಎಷ್ಟೋ ಆರೋಗ್ಯದ ತೊಂದ್ರೆಗಳನ್ನ ಇದ್ರಿಂದ ಹೋಗ್ಸ್ಕೊಬೋದು. ಹಳ್ಳಿಗಳ ಕಡೆ ಈಗಲೂ ತಕ್ಷಣ ಡಾಕ್ಟರು, ಆಸ್ಪತ್ರೆ ಅಂತ ಓಡಿ ಹೋಗ್ದೆ ಹೀಗೆ ಮಾಡ್ಕೊತಾರಂತೆ.

ಹೊಕ್ಕಳ ಹಿಂದೆ 72,000 ರಕ್ತನಾಳ ಹಾದು ಹೋಗತ್ತಂತೆ. ಹೀಗಾಗಿ ಹೊಕ್ಕಳಿಗೆ ಹಚ್ಚಿದ್ದು ಯಾವ ರಕ್ತನಾಳ ಒಣಗಿರತ್ತೋ ಅಲ್ಲಿಗೆ ಹೋಗತ್ತಂತೆ. ಎಳೆ ಮಕ್ಕಳು ಹೊಟ್ಟೆ ನೋವು ಅಂತ ಅಳ್ತಿದ್ರೆ ಸ್ವಲ್ಪ ಎಣ್ಣೆ ಜೊತೆ ಇಂಗು ಮಿಕ್ಸ್ ಮಾಡಿ ಹಚ್ಚ್ತೀವಿ. ಅಗ ನೋವು ಶಮನ ಆಗತ್ತಲ್ಲಾ ಅದೇ ತರ ನಮ್ ಹೊಕ್ಕಳಿಗೆ ಹಚ್ಚಿದ್ದು ಕೆಲ್ಸ ಮಾಡತ್ತೆ!

ಹಚ್ಚೋ ವಿಧಾನ ಹೇಗೆ ಅಂದ್ರೆ... ರಾತ್ರಿ ಹೊತ್ತು ಮಲ್ಕೊಬೇಕಾದ್ರೆ 2-3 ಡ್ರಾಪ್ ಹೊಕ್ಕಳ ಒಳಗೆ ಹಾಕಿ ನಂತರ ಕೈಯಿಂದ ಸುತ್ತ 1 ರಿಂದ 1.5 ಅಡಿ ಅಗಲಕ್ಕೆ ವೃತ್ತಾಕಾರವಾಗಿ ಮಸಾಜ್ ಮಾಡ್ಕೊಳಿ.

1. ಮುಖದ ಮೇಲಿನ ಕಪ್ಪು ಛಾಯೆ, ಅಲ್ಲಲ್ಲಿ ಕಪ್ಪು ಚುಕ್ಕಿಗಳಿದ್ರೆ ಹೊಕ್ಕಳಿಗೆ ನಿಂಬೆ ಎಣ್ಣೆ ಹಚ್ಚಿ

ಮೂಲ

2. ಮುಖದ ಮೇಲೆ ಬಿಳಿ ಮಚ್ಚೆಗಳಿದ್ರೆ ಬೇವಿನ ಎಣ್ಣೆ ಹಚ್ಚಿ

ಮೂಲ

3. ಚರ್ಮ ಸಾಫ್ಟ್ ಆಗ್ಬೇಕು, ಕಣ್ಣಿನ ಡ್ರೈನೆಸ್ ಹೋಗ್ಬೇಕು, ಉಗುರು ಫಂಗಸ್ ಕಮ್ಮಿ ಆಗ್ಬೇಕು ಅಂತಿದ್ರೆ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಹಚ್ಚಿ

ಮೂಲ

4. ಮುಖ ಶೈನಿಂಗ್ ಬರ್ಬೇಕು ಗ್ಲೋ ಆಗ್ಬೇಕು ಅಂದ್ರೆ ಬಾದಾಮಿ ಎಣ್ಣೆ ಹಚ್ಚಿ

ಮೂಲ

5. ತುಟಿ ಬಿರುಕು ಬಿಟ್ಟಿದ್ರೆ, ಸಂಧಿ ನೋವಿದ್ರೆ, ಸುಸ್ತು, ಚಳಿ ಅನ್ಸ್ತಿದ್ರೆ ಸಾಸಿವೆ ಎಣ್ಣೆ ಹಚ್ಚಿ

ಮೂಲ

6. ಮುಟ್ಟಿನ ನೋವು ಕಾಲು ಸೆಳೆತ ಕಮ್ಮಿ ಮಾಡ್ಕೊಳಕ್ಕೆ ಚೂರು ಬ್ರಾಂದಿ ತೊಗೊಂಡು ಹತ್ತಿ ಅದ್ದಿ ಹಿಂಡಿ ಹೊಕ್ಕಳಿಗೆ ಹಚ್ಚಿಟ್ಟುಕೊಳ್ಳಿ

ಮೂಲ

7. ನೆಗಡಿ, ಶೀತ ಹೋಗಿಸ್ಕೊಳ್ಳಕ್ಕೆ 50% ಆಲ್ಕೊಹಾಲ್ ಬಾಟಲಿ ತೊಗೊಂಡು ಹತ್ತಿ ಅದ್ದಿ ಹಿಂಡಿ ಹೊಕ್ಕಳಿಗೆ ಹಚ್ಚಿ

ಮೂಲ

8. ಮಂಡಿ ನೋವು ಕಮ್ಮಿ ಆಗಕ್ಕೆ ಹರಳೆಣ್ಣೆ ಹಚ್ಚಿ

ಮೂಲ

ಹೀಗೆ ಒಂದೆರಡು ವಾರ ಮಾಡಿ ನೋಡಿ, ನಿಮ್ಮ ಎನರ್ಜಿ ಲೆವೆಲ್ ಜಾಸ್ತಿ ಆಗತ್ತಂತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: