ಪಾಕಿಸ್ತಾನದೋರಿಂದ ಹುಷಾರಾಗಿರಕ್ಕೆ ಮೊಬೈಲಿಂದ ಈ 4 ಆಪ್ ಕಿತ್ತಾಕಿ: ಕೇಂದ್ರ ಸರ್ಕಾರ

ಬೇಗ ಮಾಡಿ

ಮೊಬೈಲ್ ಫೋನ್ ನಮ್ಗೆ ಎಷ್ಟು ಹತ್ರ ಅಂದ್ರೆ ಅದ್ರಲ್ಲೇ ನಮ್ಮ ಸರ್ವಸ್ವಾನೂ ಇಟ್ಕೋಂಡು ಎಲ್ಲಾ ವ್ಯವಹಾರ ಮಾಡೊ ದಿನ ಇನ್ನೇನು ಭಾಳ ದೂರ ಇಲ್ಲ. ಅದಕ್ಕೆ ಇರ್ಬೇಕು, ಕಳ್ಳರ ನಿಗಾ ಕೂಡ ಮೊಬೈಲ್ ಮೇಲೆ ಬಿದ್ದಿದೆ.

ಮೂಲ

Abplive ವರದಿ ಪ್ರಕಾರ ಕೇಂದ್ರ ಗೃಹ ಮಂತ್ರಾಲಯ ಕೆಳಗಿನ ಎಚ್ಚರಿಕೆ ಕೊಟ್ಟಿದೆ:

ಪಾಕಿಸ್ತಾನಿ ಏಜೆಂಸಿಗಳು ಮೊಬೈಲ್ ಆಪ್ ಮೂಲಕ ಭಾರತೀಯರ ಸ್ಮಾರ್ಟ್ಫೋನ್ ಹ್ಯಾಕ್ ಮಾಡ್ತಿದಾರೆ. ಆದ್ದರಿಂದ ಕೆಳಗಿನ 4 ಆಪ್ ಏನಾದರೂ ನಿಮ್ಮ ಫೋನಲ್ಲಿದ್ರೆ ಈಗಿಂದೀಗ್ಲೆ ಡಿಲೀಟ್ ಮಾಡಿ:

  1. Topgun ಅನ್ನೋ ಆಟದ ಆಪ್
  2. Mpjunkie ಅನ್ನೋ ಮ್ಯೂಸಿಕ್ ಆಪ್
  3. Bdjunkie ಅನ್ನೋ ವೀಡಿಯೋ ಆಪ್, ಮತ್ತು
  4. Talking Frog ಅನ್ನೋ ಆಟ

ಇದಕ್ಕೆಲ್ಲಾ ನಾವು ಯಾಕೆ ಯೋಚ್ನೆ ಮಾಡ್ಬೇಕು ಅಂತೀರಾ? ಮೊಬೈಲ್ ಬ್ಯಾಂಕಿಂಗ್ ದಿನೇ ದಿನೇ ಹೆಚ್ತಾ ಇದೆ. ನೀವು ಈಗಲ್ಲದಿದ್ದರೆ ನಾಳೆ ಬಳಸಕ್ಕೆ ಶುರು ಮಾಡುದ್ರೆ ಆಗ ನೀವು ಕಷ್ಟಕ್ಕೆ ಸಿಕಾಕೊಳೋ ಸಾಧ್ಯತೆ ಇದೆ. ಈ ಆಪ್ಗಳ್ನ ಸದ್ಯಕ್ಕೆ ನಾವಂತೂ ಫೋನಿಗೆ ಹಾಕೊಂಡಿಲ್ಲ. ನಿಮ್ಮ ಫೋನಲ್ಲಿ? ಆದರೆ ಇನ್ಮೇಲೆ ಹಾಕೊಳಿ ಹಾಕೊಳಿ ಅಂತ ಫೋನಲ್ಲಿ ಬರಬಹುದು. ಆಗ ಎಚ್ಚರವಾಗಿರಿ, ನಿಮ್ಮ ನೆಂಟರಿಷ್ಟರಿಗೂ ತಿಳಿಸಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇಂಟರ್ವ್ಯೂ ಮಾಡೋರು ಉಪಯೋಗಿಸೋ ಈ 4 ಹಳೇ ತಂತ್ರಗಳಿಗೆ ರೆಡಿಯಾಗಿ ಹೋದ್ರೆ ಒಳ್ಳೇ ಸಂಬಳ

ಕೆಲಸ ಮಾಡೋದು ಮಾಡ್ತೀರಿ, ಕಡಿಮೆಗೆ ಯಾಕ್ ಮಾಡ್ಬೇಕು?

ಸಂಬಳದ ವಿಷ್ಯಕ್ಕೆ ಬಂದ್ರೆ ಪ್ರತಿಯೊಬ್ರೂ  ಸ್ವಲ್ಪ ಜಾಸ್ತಿನೇ ಬುದ್ಧಿವಂತರಾಗಬೇಕಾಗುತ್ತೆ. ನಮ್ ಕೆಲ್ಸ ನಾವ್ ಮಾಡಣ,ಅವರೆಷ್ಟ್ ಕೊಡ್ತಾರೋ ಕೊಡ್ಲಿ. ಅನ್ನೋ ಜಮಾನ ಈಗಿಲ್ಲ. ಹಾರ್ಡ್ವರ್ಕ್ ಮಾಡೋರ್ಗಿಂತ ಸ್ಮಾರ್ಟ್ ವರ್ಕ್ ಮಾಡೋರ್ನೆ ಎಲ್ರೂ ಮೆಚ್ಕೊಳ್ಳೋದು. ಈ ಸಲ ಕೆಲಸ ಬದಲಾಯ್ಸೋ ಸಮಯದಲ್ಲಿ ನಿಮ್ಮ ಬಾಸ್ ಜೊತೆ ಹೇಗೆಲ್ಲಾ ಮಾತಾಡಿದ್ರೆ ಒಳ್ಳೇದು ಅಂತ ತಿಳ್ಕೊಳ್ಳಿ. ತುಂಬಾ ಸಹಾಯ ಆಗುತ್ತೆ.

ಇನ್ನು ಹೊಸದಾಗಿ ಕೆಲಸಕ್ಕೆ ಸೇರೊರ್ಗಂತೂ ನಿಮ್ಮ ಕಂಪೆನಿ ಕೊಡೊ ಸಮಜಾಯಿಷಿ ಸಾಮಾನ್ಯವಾಗಿ ಹೀಗಿರುತ್ತೆ. " ಈ ಊರ್ನಲ್ಲಿ ಒಬ್ಬ ಫ್ರೆಶರ್ಗೆ ಈ ಪೋಸಿಶನ್ಗೆ ಕೊಡೋದು ಇಷ್ಟೇ. ಚೌಕಾಶಿಗೆಲ್ಲಾ ಅವಕಾಶನೇ ಇಲ್ಲ. ಹಾಗ್ ನೋಡಿದ್ರೆ ನಿಮ್ಮ ಎಕ್ಸ್ಪೀರಿಯನ್ಸ್ ಗೆ ಇದು ನಿಜ್ವಾಗ್ಲೂ ಒಳ್ಳೆ ಆಪರ್ರು" . ಈ ಮಾತನ್ನ ಕೇಳ್ತಿದಾಗೆ ಆ ತಕ್ಷಣ ಆ ಸಂಬಳಕ್ಕೆ ಒಪ್ಕೋಳ್ಳೋರೇ  ಜಾಸ್ತಿ.

ಸಾಮಾನ್ಯವಾಗಿ ಇಂಟರ್ವ್ಯೂನಲ್ಲಿ ಕೇಳೋ ಪ್ರಶ್ನೆ ಹೇಗಿರುತ್ತೆ? ನೀವ್ ಹೇಗೆಲ್ಲಾ ಉತ್ರ ಕೊಟ್ರೆ ಒಳ್ಳೇದು ಅನ್ನೋದನ್ನ ಹೇಳ್ತೀವಿ ಕೇಳಿ.

1. "ನಿಮಗೆ ಎಷ್ಟು ಸಂಬಳ ಬೇಕು?"

ಹೀಗೆ ಅವ್ರೆ ಕೇಳ್ತಿದಾರೆ ಅಂದ್ರೆ ನಾವ್ ಎಷ್ಟ್ ಕೇಳಿದ್ರೂ ಒಪ್ಕೋಳ್ತಾರೆ ಅಂತ ಏನೂ ಇಲ್ಲ. ಆದ್ರೆ ನಿಮ್ಮ ಮನಸ್ಸಲ್ಲಿರೋದೇನು ಅಂತ ತಿಳ್ಕೊಳ್ಳೋದು ಅವ್ರ ಉದ್ದೇಶ. ಅವ್ರು ಕೊಡ್ಬೇಕು ಅಂದ್ಕೊಂಡಿರೋದಕ್ಕಿಂತ ನೀವೇನಾದ್ರೂ ಕಡಿಮೆ ಕೇಳಿದ್ರೆ (ಅವ್ರು ಜಾಸ್ತಿ ಕೊಡೊ ಮನಸ್ಸಿದ್ರೂ ಕೂಡ) ನೀವು ಕೇಳಿದ್ದಷ್ಟಕ್ಕೆ ಒಪ್ಕೋಳ್ತಾರೆ. ಹಾಗ್ಯಾಕ್ ಮಾಡ್ಕೋಬೇಕು? ಈ ಪ್ರಶ್ನೆಗೆ ನೀವು ಹೀಗ್ ಹೇಳೋದೊಳ್ಳೆದು..

" ನನ್ನ ಪ್ರತಿಭೆ ಪ್ರದರ್ಶಿಸೋದಕ್ಕೆ ಒಂದೊಳ್ಳೆ ಅವಕಾಶಕ್ಕೋಸ್ಕರ ಕಾಯ್ತಿದೀನಿ. ಆ ವಿಚಾರಕ್ಕೆ ಬಂದ್ರೆ ನಿಮ್ಮ ಆಫರ್ ಒಳ್ಳೆಯದೇ ಆಗಿರುತ್ತೆ ಅನ್ನೋದು ನನ್ನ ನಂಬಿಕೆ".

ಅತ್ವಾ ಹೀಗೂ ಹೇಳ್ಬೋದು

" ಸ್ವಲ್ಪ ಹೆಚ್ಚು- ಕಡಿಮೆ ಆದ್ರೂ ಪರ್ವಾಗಿಲ್ಲ. ಸಧ್ಯಕ್ಕೆ ನನಗೆ ನನ್ನ  ಕೆಲಸದಲ್ಲಿ ಉನ್ನತವಾಗಿ ಬೆಳೀಬೇಕು ಅನ್ನೋದೇ ಮುಖ್ಯ. ಆದ್ರೂ ನನಗೆಷ್ಟು ಸಂಬಳ ಸಿಗಬೋದೋ ಸ್ವಲ್ಪ ತಿಳ್ಕೋಬೋದಾ?"

ಎಲ್ಲಾದಕ್ಕಿಂತಲೂ ಮೊದ್ಲು ಸ್ವಲ್ಪ ಕೆಲಸದ ಬಗ್ಗೆ ಕಂಪನಿ ಬಗ್ಗೆ ತಿಳ್ಕೊಂಡು ಇಂಟರ್ವ್ಯೂಗೆ  ಹೋಗೋದು ತುಂಬಾ ಒಳ್ಳೇದು. ಮೊದ್ಲೇ ಸಂಬಳದ ಬಗ್ಗೆ ವಿಷ್ಯ ಗೊತ್ತಿದ್ರೆ ಅದನ್ನ ಹೀಗೆ ಹೇಳ್ಬೋದು.

" ನನಗೆ ತಿಳಿದಿರೋ ಪ್ರಕಾರ ಈ ಕೆಲಸಕ್ಕೆ ಸುಮಾರು 65 ಸಾವಿರದಿಂದ 80 ಸಾವಿರದವರೆಗೂ ಆಫರ್ ಮಾಡ್ತಾರೆ. ಈ ಅಂದಾಜಿನಲ್ಲೇ ನಾನೂ ನನ್ನ ಸಂಬಳದ ನಿರೀಕ್ಷೆ ಮಾಡ್ತಾ ಇದೀನಿ".

ಮೂಲ

2. "ಈಗ ನಿಮಗೆ ಎಷ್ಟು ಸಿಗ್ತಾ ಇದೆ?"

ಸಾಮಾನ್ಯವಾಗಿ ಎಲ್ರೂ ಈ ವಿಷ್ಯದಲ್ಲೇ ಎಡವೋದು.  ಅವ್ರು ಕೇಳ್ತಿದಾರೆ ಅಂದ ಮಾತ್ರಕ್ಕೆ ನೀವು ನಿಮ್ ಸಂಬಳದ ವಿಷ್ಯ ಹೇಳ್ಳೇ ಬೇಕು ಅಂತೇನಿಲ್ಲ. ನಿಮ್ಮ ಸಧ್ಯದ ಸಂಬಳ ಗೊತ್ತಾಗ್ತಾ ಇದ್ದ ಹಾಗೆ ಅದಕ್ಕಿಂತ ಸ್ವಲ್ಪ ಜಾಸ್ತಿ ಕೊಟ್ಟು ಸುಮ್ಮನಾಗೋ ಸಂದರ್ಭನೆ ಜಾಸ್ತಿ. ಅದಿಕ್ಕೆ ಏನ್ಮಾಡೋದು ಗೊತ್ತಾ?

"ನನ್ನ ಈಗಿನ ಸಂಬಳದ ವಿಷ್ಯ ಇಲ್ಲಿಗೆ ಸರಿಹೊಂದೋದಿಲ್ಲ. ಯಾಕಂದ್ರೆ ನಾನು ಈವರೆಗೂ ಮಾಡ್ತಾ ಇದ್ದ ಕೆಲ್ಸನೇ ಬೇರೇ  ಮತ್ತೆ ಈಗ ಮಾಡೋಕೆ ಹೊರಟಿರೋ ಕೆಲಸದ ಜವಾಬ್ದಾರಿಗಳೇ ಬೇರೆ. ಒಮ್ಮೆ ಎಲ್ಲಾ ವಿಷ್ಯದಲ್ಲಿ ವಿವರ ಸಿಕ್ಕಿದ್ಮೇಲೆ ಅದಕ್ಕೆ ಸೂಕ್ತ ಅನ್ನಿಸೋ ಸಂಬಳ ತೊಗೊಳ್ಳೋಕೆ ನಾನು ಒಪ್ತಿನಿ.

ಅತ್ವಾ ಹೀಗೂ ಹೇಳ್ಬೋದು

"ಕ್ಷಮಿಸಿ ನಾನೀಗ ಕೆಲಸ ಮಾಡ್ತಾ ಇರೋ ಕಂಪೆನಿಯ ನಿಯಮದ ಪ್ರಕಾರ ನಮ್ಮ ಸಂಬಳದ ವಿಷ್ಯ ಯಾರ ಜೊತೆಗೂ ಚರ್ಚೆ ಮಾಡೋಹಾಗಿಲ್ಲ. ನಾನು ಯಾವತ್ತೂ ನಾನು ಕೆಲಸ ಮಾಡೋ ಕಂಪನಿಯ ನಿಯಮಗಳನ್ನ ಗೌರವಿಸ್ತೀನಿ."

ಮೂಲ

3. "ಸಂಬಳದ ವಿಷಯದಲ್ಲಿ ಚರ್ಚೆಗೆ ಅವಕಾಶ ಇಲ್ಲ"

ಕೆಲವೊಂದ್ಸಲ ಹೀಗೂ ಆಗುತ್ತೆ.  ಕೆಲವು ಕಂಪೆನಿಗಳು ಕಾಲೇಜುಗಳಿಂದ ಒಟ್ಟೊಟ್ಟಿಗೆ ಹೆಚ್ಚಿನ ಜನರನ್ನ ಕೆಲ್ಸಕ್ಕೆ ತೊಗೊಂಡ್ರೆ ಒಂದೇ ಅಂಕಿ- ಸಂಖ್ಯೆ ಇರೋ ಸಂಬಳವನ್ನ ಎಲರಿಗೂ ಆಫರ್ ಮಾಡ್ತಾರೆ. ಅದ್ರಲ್ಲಿ ಚರ್ಚೆಗೆ ಅವಕಾಶ ಇರೋದೇ ಇಲ್ಲ. ಆದ್ರೆ ಅಲ್ಲಿ ಬೇರೆ ಏನೇನೆಲ್ಲಾ ಅನುಕೂಲಗಳಿವೆ ಅನ್ನೋದನ್ನ ತಿಳ್ಕೊಂಡು ಅದರ ಉಪಯೋಗ ಪಡ್ಕೊಳ್ಳೋದೇ ಬುದ್ಧಿವಂತಿಕೆ.

ಉದಾಹರಣೆಗೆ; ರಜಾದಿನಗಳ ಬಗ್ಗೆ, ಮುಂದಿನ ಓದಿಗೆ ಕಂಪನಿ ಖರ್ಚು ನಿಭಾಯಿಸೋದರ ಬಗ್ಗೆ, ಹೆಚಿಚಿನ ಕೆಲ್ಸಕ್ಕೆ ಬೋನಸ್ ಕೊಡೋದರ ಬಗ್ಗೆ,  ಮನೆಯಿಂದ್ಲೇ ಕೆಲಸ ಮಾಡೋದು ಹೀಗೆ......

ತುಂಬಾ ದೊಡ್ಡ ಮೊತ್ತ ಅವ್ರು ಸಂಬಳದ ರೂಪದಲ್ಲಿ ಕೊಡದೆ ಇದ್ರೂ ಈ ಎಲ್ಲಾ ಅನುಕೂಲಗಳೂ ಸಾಕಷ್ಟು ಲಾಭನೆ ಕೊಡುತ್ವೆ. 

ಮೂಲ

4. "ಮುಂದೆ ತುಂಬಾನೇ ಒಳ್ಳೊಳ್ಳೆ ಅವಕಾಶಗಳಿವೆ, ಆಗ ಸಂಬಳ ಜಾಸ್ತಿ ಆಗುತ್ತೆ"

ಹೀಗೆ ಹೇಳ್ತಿದ್ದಾಗೇ ಥಾಂಕ್ಯೂ ಅಂತೇಳಿ   ಬರ್ಬಾರ್ದು. ಬದ್ಲಾಗಿ ಈ ವಿಷ್ಯ ಬರ್ತಾ ಇದ್ದ ಹಾಗೆ ನೀವು ಇನ್ನಷ್ಟು ಚುರುಕಾಗ್ಬೇಕು.

"ಸಧ್ಯದ ಮಟ್ಟಿಗೆ ಈ ಸಂಬಳದ ಬಗ್ಗೆ ನನಗೆಷ್ಟು ಖುಷಿ ಇದ್ಯೋ ನನ್ನ ಕೆಲ್ಸದಲ್ಲಿ  ನಾನು ತೋರ್ಸೋ ಶ್ರದ್ಧೆ ಬಗ್ಗೆನೂ ಅಷ್ಟೇ ನಂಬಿಕೆ ಇದೆ. ಕಂಪೆನಿಯ ವಿಷಯದಲ್ಲೂ ಸಾಕಷ್ಟು ತಿಳ್ಕೊಂಡಿದ್ದೀನಿ. ನನ್ನ ಕೆಲಸವನ್ನ ನೀವು ನಿಗದಿ ಮಾಡಿರೋ ಸಮಯಕ್ಕಿಂತಾನೂ ಮೊದ್ಲೇ ಅಚ್ಚುಕಟ್ಟಾಗಿ ನಿಭಾಯಿಸಿದ್ರೆ ನನ್ನ ಸಂಬಳದಲ್ಲಿ ಹೆಚ್ಚಿನ ಮೊತ್ತವನ್ನ ನಿರೀಕ್ಷೆ ಮಾಡಬೋದು ತಾನೇ? ಹೀಗೆ ಕೇಳ್ನೋಡಿ . ಅವ್ರು ಒಹೋ ಅದಕ್ಕೇನಂತೆ ಹಾಗೆ ಆಗ್ಲಿ ಅಂದ್ರೆ, ಒಂದು ಎಂಪ್ಲಾಯ್ಮೆಂಟ್ ಕಾಂಟ್ರಾಕ್ಟ್ ಗೆ ಸಹಿ ತೊಗೊಳ್ಳೋದನ್ನ ಮರೀಬೇಡಿ.

ಮೂಲ

ಕೆಲ್ಸದಲ್ಲಿ ಯಶಸ್ಸು ಗಳಿಸೋದ್ರ ಜೊತೆಗೆ ಒಳ್ಳೇ ಸಂಬಳ ಕೂಡ ನಿಮ್ಮದಾಗ್ಲಿ. ಜೀವನ ಸುಖಮಯವಾಗ್ಲಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: