ಈ 13 ವಿಸ್ಮಯಗಳ್ನ ನೋಡಿ ಪ್ರಪಂಚದ ಬಗ್ಗೆ ನಿಮಗಿರೋ ಕೆಲವು ಅನಿಸಿಕೆಗಳ್ನ ಪ್ರಶ್ನೆ ಮಾಡ್ತೀರಿ

ಒಂದಕ್ಕಿಂತ ಒಂದು ನಂಬಕ್ಕಾಗಲ್ಲ, ಆದರೆ ನಿಜ

ನಾವು ಭೂಮಿ ಬಗ್ಗೆ ಮನುಷ್ಯನಿಗೆ ಎಲ್ಲ ಗೊತ್ತು ಅನ್ಕೋಬೋದು ಆದ್ರೆ ಈ ಪ್ರಕೃತಿ ಎಷ್ಟ್  ವಿಚಿತ್ರ ಅಂದ್ರೆ ಯಾರಿಗೂ ಗೊತ್ತಾಗಲ್ಲ, ತಕ್ಕಮಟ್ಟಕೆ ಗೊತ್ತಿರಬೋದು ಆದ್ರೆ ಕೆಳ್ಗಡೆ ಕೊಟ್ಟಿರೋ ಈ ವಿಷಯಗಳನ್ನ ನೋಡಿ ಖಂಡಿತ ಆಶ್ಚರ್ಯ ಆಗೇ ಆಗತ್ತೆ.

1. ವಾಷಿಂಗ್ಟನ್ ಡಿಸಿಲಿ ಹಡಗಿನ ಸುತ್ತ ಬೆಂಕಿ ಕಾಣುಸ್ಕೊಳತ್ತೆ

ಓಬೀರಾಯನ ಕಾಲದವರು ನಂಬೋ ಮಾತು, ಅವರ ಹಿರಿಯ ನಾವಿಕ ಸಂತ ಎಲ್ಮೊ ಏನಾದ್ರು ಎಚ್ಚರಿಕೆ ಕೊಡ್ಬೇಕು ಅಂದ್ರೆ ಹಡಗಿನ ಕಂಬಗಳ ಹತ್ರ ಕುಣಿದಾಡೊ ಬೆಂಕಿ ಹತ್ತುಸ್ತಾನಂತೆ. ಹಡಗಿನ ಸುತ್ತ, ಕಂಬದ ಸುತ್ತ ಬೆಂಕಿ ಕಾಣುಸ್ಕೊಳೋದು ಉಂಟು. ಜಾರ್ಜ್ ಟೌನ್ ವಾಷಿಂಗ್ಟನ್ ಡಿಸಿಲಿ ಈ ಥರ ನಡಿಯುತ್ತೆ.

ಮೂಲ

2. ಅಂಟಾರ್ಕ್ಟಿಕಾಲಿ ಹಿಮ ತುಂಬಿರೋ ಬೆಟ್ಟದಿಂದ ಜ್ವಾಲಾಮುಖಿ ಬರತ್ತೆ  

ಅಂಟಾರ್ಕ್ಟಿಕ್ನಲ್ಲಿ ಎರೆಬಸ್ ಬೆಟ್ಟದಿಂದ ಯಾವಾಗ್ಲೂ ಜ್ವಾಲಾಮುಖಿ ಬರತ್ತೆ ಆದ್ರೆ ಈ ಬೆಟ್ಟ ಯಾವಾಗ್ಲೂ ಹಿಮದಿಂದ  ಮುಚ್ಚೋಗಿರತ್ತೆ.

ಮೂಲ

3. ಅಂಟಾರ್ಕ್ಟಿಕಾಲಿ  ಪ್ರಕೃತಿ ಸೃಷ್ಟಿಮಾಡೋ ಬೆಳಕಿನ ಕಂಬಿ 

ಸೂರ್ಯ, ಚಂದ್ರ ಅಥವಾ ಊರಲ್ಲಿರೋ ಯಾವದಾದ್ರು ಬೆಳಕು ಗಾಳೀಲಿರೋ ಮಂಜಿಗೆ ಬಡಿದಾಗ ಈ ಥರ ಕಾಣ್ಸತ್ತೆ. ಎಸ್ಟ್ ಚೆನ್ನಾಗಿದೆ ಅಲ್ವಾ. ನೋಡಕ್ಕೆ ಒಂತರ ಮಜಾ. 

ಮೂಲ

4. ಫಿನ್ಲ್ಯಾಂಡಿನ ಕೆರೇಲಿ ಸಿಗೋ ಶಾವಿಗೆ 

ಫಿನ್ಲ್ಯಾಂಡಲ್ಲಿ ಯಾವನೋ ಒಬ್ಬಂಗೆ ಅವ್ನ್ ಮನೆ ಹತ್ರ ಇರೋ ಕೆರೇಲಿ ಶಾವಿಗೆ ಸಿಕ್ತಂತೆ, ಆಮೇಲ್ ಗೊತಾಯ್ತು ಇದು ಶಾವಿಗೆ ಅಲ್ಲ ಮಂಜು ಅಂತ. ಮಂಜು ನೀರಿಗೆ ಬಿದ್ದು ಕರಗಕ್ಕೆ ಮುಂಚೆ ಗಾಳಿ, ನೀರು ಅಲ್ಲಾಡಿದಾಗ ಈ ತರ ಆಗತ್ತಂತೆ. 

ಮೂಲ

5. ರಷ್ಯಾದಲ್ಲಿ ಕುಣಿದಾಡೊ ಕಾಡು

ರಷ್ಯಾದಲ್ಲಿ ಒಂದ್ ಕಾಡಲ್ಲಿ ಎಲ್ಲ ಮರಾನೂ ಇಲ್ಲಿ ಫೋಟೋದಲ್ಲಿ ಇರೋತರ ಬಕ್ಕೊಂಡಿದ್ಯಂತೆ, ವಿಜ್ಞಾನಿಗಳು ಇನ್ನು ಕಾರಣ ಕಂಡುಹಿಡಿಲ್ಲ. ಕೆಲವ್ರು ಸಮುದ್ರದಿಂದ ಸಿಕ್ಕಾಪಟ್ಟೆ ಜೋರಾಗಿ ಬೀಸೋ ಗಾಳಿ ಅಂತಾರೆ, ಕೇಳುವರು ಪ್ಯಾರಾಸೈಟೆ ಅಂತಾರೆ, ನಮ್ ತಾತನ ಕಾಲದವರು ದೆವ್ವ ಭೂತದ ಕಾಟ ಅಂತಾರೆ.

ಮೂಲ

6. ಕಲರ್ ಕಲರ್ರಾಗಿ ಕಾಣೋ ಮಿಂಚು, ಸಿಡಿಲು 

ಇದನ್ನ ಅನ್ಯ ಗ್ರಹದಿಂದ ಬರ್ತಿರೋ ಪ್ರಾಣಿಗಳ ಗಾಡಿ ( ಆಕಾಶನೌಕೆ ) ಅನ್ಕೊಂಡಿದ್ರಂತೆ. ಆದ್ರೆ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದಾಗ ಗೊತ್ತಾಯ್ತನಂತೆ ಇವೆಲ್ಲ ಸಿಡಿಲು, ಮಿಂಚಿನ ಸಂಬಂಧಿಕರು ಅಂತ 

ಮೂಲ

7. ಮೆಕ್ಸಿಕೋಲಿ ಕೆಂಪಾಗಿರೋ ಸಮುದ್ರ 

ಸಮುದ್ರದತ್ರ ಇರೋ ಕೆಂಪಾದ ಪಾಚಿಯಿಂದ ಈ ಥರ ಆಗತ್ತಂತೆ. ಇದ್ರಿಂದ ಸಮುದ್ರದ ಪ್ರಾಣಿಗೆ ತೊಂದ್ರೆ. ನೀರಲ್ಲಿರೋ ಆಮ್ಲಜನಕ ಕಮ್ಮಿಯಾಗಿ ಹೈಡ್ರೋಜನ್ ಸಲ್ಫೈಡ್ ಮತ್ತೆ ಅಮೋನಿಯಾ ಜಾಸ್ತಿಯಾಗಿ ಮೀನೆಲ್ಲ ಸತ್ತೋಗತ್ತೆ.

ಮೂಲ

8. ಜೆರ್ಮನಿಯ ಬ್ರೋಕನ್ ಬೆಟ್ಟದಲ್ಲಿರೋ ದೆವ್ವ 

ನೀವೇನಾದ್ರು ಬೆಟ್ಟದ್ಮೇಲಿದ್ದು ಸೂರ್ಯನ ಆಚೆಕಡೆ ನೋಡುದ್ರೆ ನಿಮ್ಮ ನೆರಳು ನಿಮ್ಮೆದುರಿಗೆ ಇದ್ದು ಕಾಮನಬಿಲ್ಲಿಂದ ಸುತ್ತಿಕೊಂಡಿರತ್ತೆ, ಹಿಮ ಮತ್ತೆ ಬೆಳಕು ಸೇರಿದಾಗ ನಿಮ್ಮ ನೆರಳೆ ಹಿಂಗೇ ಕಾಣತ್ತೆ. ಜೆರ್ಮನಿಯ ಬ್ರೋಕನ್ ಬೆಟ್ಟದಲ್ಲಿ ಇದು ಮಾಮೂಲು, ಮುಂಚೆ ಇದನ್ನ ದೆವ್ವ, ಭೂತ ಅಂತ ಅನ್ಕೊಂಡಿದ್ರಂತೆ.

ಮೂಲ

9. ಥೈಲ್ಯಾಂಡಲ್ಲಿ ನಾಗದೇವತೆಗಳು ಎಸಿಯೋ ಬೆಂಕಿಚೆಂಡು ಚೆಂಡು 

ಥೈಲ್ಯಾಂಡಿನ ಮೆಕಾಂಗ್ ನದಿಯಿಂದ ಬೆಂಕಿಚೆಂಡು 30-50 ಅಡಿ ಎತ್ತರಕ್ಕೆ ಹಾರತ್ತಂತೆ. ವಿಜ್ಞಾನಿಗಳು ನೀರೊಳಗಡೆ ಇರೋ ಗ್ಯಾಸಿಂದ ಹಾರೋ ಜ್ವಾಲೆ ಅಂತಾರೆ. ಜನ ಮಾತ್ರ ನೀರೊಳಗಡೆ ಇರೋ ನಾಗದೇವತೆ ( ಅರ್ಧ ಮನುಷ್ಯ ಅರ್ಧ ಹಾವು ) ಎಸೆಯೋದು ಅಂತ ನಂಬಿ ಅಕ್ಟೋಬರ್ ತಿಂಗಳಲ್ಲಿ ಹಬ್ಬಾನೇ ಮಾಡ್ತಾರೆ 

ಮೂಲ

10. ಅಸ್ಸಾಮಿನ ಜಟಿಂಗ ಕಣಿವೆಲಿ ಪ್ರಜ್ಞೆತಪ್ಪಿ ಬಿಳೋ ಹಕ್ಕಿಗಳು 

ಇಲ್ಲಿ ಹಕ್ಕಿಗಳು ಜಾಸ್ತಿ ಎತ್ರಕ್ಕೆ ಹಾರದೆ ಇಲ್ಲ. ಎಷ್ಟೋ ಹಕ್ಕಿಗಳು ಪ್ರಜ್ಞೆತಪ್ಪಿ ಬಿದ್ದೋಗತ್ತೆ. ಹಕ್ಕಿಗಳು ಸೂರ್ಯನ ಬೆಳಕು ಮತ್ತೆ ಭೂಮಿಯ ಗುರುತ್ವಕರ್ಷಣೆ ಶಕ್ತಿಯಿಂದ ತಮ್ಮ ದಾರಿ ಹುಡುಕ್ಕೋಳತ್ತೆ ಆದ್ರೆ ಇಲ್ಲಿ ಪ್ರಕೃತಿ ವಿಚಿತ್ರ ನಡಿತಿದೆ.

ಮೂಲ

11. ನಾರ್ತ್ ಯೂರೋಪಿನ ಬಾಲ್ಟಿಕ್ ಸಮುದ್ರದಲ್ಲಿ ಕೂತಿರೋ ವಿಚಿತ್ರವಾದ ವಸ್ತು 

ಈ ವಸ್ತು ಏನು ಅಂತ ಇನ್ನು ವಿಜ್ಞಾನಿಗಳು ಕಂಡುಹಿಡಿದಿಲ್ಲ. ಹಿಮ ಕರಗಿರೋದು ಅಂತ ಕೆಲವ್ರು ಹೇಳುದ್ರೆ ಇನ್ನು ಕೆಲವ್ರು ನಾಜಿ ತಂಡತ ಮಿಲಿಟರಿ ವಸ್ತು ಅಂತಾರೆ.

ಮೂಲ

12. ಇದ್ದಕ್ಕಿದ್ದಂತೆ ಐಸಾಗೋ ಆರ್ಕ್ಟಿಕ್ ಸಮುದ್ರದ ಬುಡ 

ಉಪ್ಪಿನಂಶ ನೀರಲ್ಲಿ ವ್ಯತ್ಯಾಸ ಆಗೋದ್ರಿಂದ ನೀರು ಒಂದೊಂದ್ ಜಾಗದಲ್ಲಿ ಒಂದೊಂದ್ಸತಿ ಐಸಾಗತ್ತೆ. ನೋಡಕ್ಕೆ ಇದ್ದಕ್ಕಿದ್ದಂತೆ ಸಮುದ್ರದ ಬುಡ ಐಸಾದಂಗೆ ಕಾಣತ್ತೆ. ಈ ಥರ ಐಸಾದಾಗ ಐಸನ್ನ ಮುತ್ತುಸ್ಕೊಳೋ ಎಲ್ಲ ಜೀವಗಳು ಸತ್ತೋಗತ್ತೆ. ಹಿಂಗಾಗತ್ತೆ ಆಗಬೋದು ಅಂತ ೧೯೭೪ರಲ್ಲಿ ಹೇಳುದ್ರು ಆದ್ರೆ ೨೦೧೧ರಲ್ಲಿ ಅಪ್ಪಿತಪ್ಪಿ ಬಿಬಿಸಿ ಕ್ಯಾಮರಾಗೆ ವಿಡಿಯೋ ಸಿಕ್ತು.

ಮೂಲ

13. ನದೀಲಿ ರೌಂಡಾಗಿ ಸುತ್ತೋ ಐಸು

ಎಡ್ಡಿ ಹರಿವಿನಿಂದ ನದೀಲಿ ಐಸು ರೌಂಡಾಗಿ ಸುತ್ತತ್ತೆ. ಸುತ್ತಿ ಸುತ್ತಿ ಐಸಿನ ಮೂಲೆ ಸವೆದುಹೋಗಿ ಐಸು ಗುಂಡಾಗಿರತ್ತೆ. ನಾರ್ತ್ ಅಮೇರಿಕಾ, ರಷ್ಯಾ, ಇಂಗ್ಲೆಂಡ್, ಜೆರ್ಮನಿಲಿ ಇದನ್ನ ನೋಡಬಹುದು 

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಾನು ಜೀವನದಲ್ಲಿ ಹಿಂದೆ ಬೀಳ್ತಾ ಇದೀನಿ ಅನ್ನೋ ಮುಳ್ಳು ಚುಚ್ತಾ ಇದ್ರೆ ಈ 30 ಮಾತು ನೆನಪಿಸಿಕೊಳ್ಳಿ

ವೇದಾಂತ ಗೀದಾಂತ ಅಲ್ಲ, ಸಿಂಪಲ್ ವಿಷಯಗಳು

ನಮ್ಮ ಪ್ರಕಾರ ನಾವು ಜೀವನದಲ್ಲಿ ಎಷ್ಟೇ ಗೆಲುವು ಸಾಧಿಸಿದ್ದರೂ… ನಮ್ಮ ಪ್ರಕಾರ ನಮಗೆ ಬೇಕಾದ್ದೆಲ್ಲ ಇದ್ದರೂ… ಬೇಕಾದೋರೆಲ್ಲ ಇದ್ದರೂ… ಜೀವನ ಒಂದೊಂದ್ಸಲ ನಮಗೆ "ನೀನು ಹಿಂದೆ ಬಿದ್ದಿದೀಯ" ಅನ್ನೋ ಸಂದೇಶ ಕೊಡುತ್ತೆ. ಈ ಸ್ಪರ್ಧಾತ್ಮಕ ಜಗತ್ತಿನ ವಿಚಿತ್ರ ಇದು. ಇಂಥ ಪ್ರಪಂಚದಲ್ಲಿ ಅನವಶ್ಯಕವಾಗಿ ಕೀಳರಿಮೆ ಮೂಡಬಾರದು ಅನ್ನೋದಾದರೆ ಈ 30 ಮಾತು ನೆನಪಿಸಿಕೊಳ್ಳಿ. ಇವೆಲ್ಲ ಏನು ದೊಡ್ಡ ವೇದಾಂತ ಅಲ್ಲ, ಆದರೂ ನಿಮಗೆ ತುಂಬ ಉಪಯೋಗಕ್ಕೆ ಬರುತ್ತವೆ:

  1. ನೀವು ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿದೀರಿ.
  2. ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿಲ್ಲ ಅನ್ನಿಸಿದರೆ ಇನ್ನೇನ್ ಮಾಡ್ಬೋದು ಅಂತ ಯೋಚನೆ ಮಾಡಿ, ಕೆಲಸದಲ್ಲಿ ತೊಡಗಿಕೊಳ್ಳಿ.
  3. ತುಂಬಾ ಅನುಭವ ಇರೋರು ಅಥವಾ ನಿಮಗಿಂತ ತುಂಬಾ ಹಿಂದೆ ಶುರು ಮಾಡ್ಕೊಂಡೋರ್ನ ನೋಡಿ ನಾನು ಹಿಂದೆ ಇದೀನಿ ಅನ್ಕೋಬೇಡಿ. ಅವರ ಜೊತೆ ಪೈಪೋಟಿಗೆ ಇಳಿಯೋದು ಪೆದ್ದತನ.
  4. ಎಲ್ಲರಿಗೂ ಅವರದೇ ಆದ ವೇಗ ಅಂತ ಇರುತ್ತೆ.
  5. ನಿಮಗೆ ತುಂಬ ಇಷ್ಟವಿದ್ದ ಕೆಲಸ ಸಿಗದೆ ಹೋದರೆ ನೀವು ವೇಸ್ಟು ಅಂತೆನಲ್ಲ. ಜಾತಕ ಹೊಂದಲಿಲ್ಲ ಅಂತ ಅರ್ಥ!
  6. ಈಗಲೂ ನೀವು ತುಂಬಾ ಜನರಿಗಿಂತ ಮುಂದಿದೀರಿ. ನೀವು ಹಿಂದೆ ಆಗಿದ್ದ ವ್ಯಕ್ತೀನೂ ಆ ಪಟ್ಟಿಯಲ್ಲಿ ಇದಾನೆ/ಳೆ.
  7. ನಿಮಗೆ ಯಾವ ತರಹದ ಭವಿಷ್ಯ ಬೇಕಾದರೂ ರೂಪಿಸಿಕೊಳಕ್ಕೆ ಅನುಮತಿ ಇದೆ.
  8. ಜೀವನ ಅಂದ್ರೆ ಹೀಗೇ ಇರಬೇಕು ಅಂತೆನಿಲ್ಲ, ನೀವು ನಡೆಸಿದ್ದೇ ಜೀವನ.
  9. ಮೂವತ್ತನೇ ವಯಸ್ಸಿಗಿಂತ ಮುಂಚೆ ಮದುವೆ ಆಗದೆ ಹೋದರೆ ಮುಗೀತು ಕಥೆ ಅನ್ಕೋಬೇಡಿ.
  10. ಏನಾದರೂ ಆಗಿಬಿಡೋಷ್ಟು ಶ್ರಮ ಪಟ್ಟು ಕೆಲಸ ಮಾಡಿ ಉಪಯೋಗ ಇಲ್ಲ. ಅದರಿಂದ ಸಿಗೋದು ಗೆಲುವಲ್ಲ, ನಿಃಶಕ್ತಿ.
  11. ಮನಸ್ಥಿತಿ ಸರಿಯಾಗಿಲ್ಲದೆ ಇದ್ದರೆ ನಿಮಗೆ ನೀವೇ ಎಷ್ಟು ಹೇಳಿಕೊಂಡರೂ ಸ್ಫೂರ್ತಿ ಬರಲ್ಲ.
  12. ನಿಮ್ಮ ವಯಸ್ಸು ಇಪ್ಪತ್ತು-ಚಿಲ್ಲರೆ ಆದರೆ ನಿಮ್ಮ ಮುಂದೆ ಇನ್ನೂ ಇಡೀ ಜೀವನವೇ ಇದೆ, ಅದರಲ್ಲಿ ಎಂಥ ಅದ್ಭುತಗಳಾಗುತ್ತವೆ ಅಂತ ಈಗಲೇ ಹೇಳಕ್ಕಾಗಲ್ಲ.
  13. ನಿಮಗೆ ಬೇಕಾದ ಸ್ಫೂರ್ತಿ ಸಿಕ್ಕಿಲ್ಲದೆ ಇರಕ್ಕೆ ಕಾರಣ ಸರಿಯಾದ ವ್ಯಕ್ತಿ ಇನ್ನೂ‌ ಸಿಕ್ಕಿಲ್ಲದೆ ಇರೋದು ಅನ್ನಿಸುತ್ತೆ.
  14. ಯಾವಾಗಲೂ ಹೀಗೇ ತುಸುಕ್ ಅಂತ ಕೂತಿರಲ್ಲ  ನೀವು.
  15. ನಿಮ್ಮ ಭಾವನೆಗಳು ಇನ್ನಷ್ಟು ಕೆಲಸ ಮಾಡೋದಕ್ಕೆ ಪ್ರೇರಣೆ ಆಗಬೇಕು, ಕಡಿಮೆ ಕೆಲಸ ಮಾಡಕ್ಕಲ್ಲ.
  16. ಸರಿಯಾದ ಜೀವನ, ತಪ್ಪು ಜೀವನ ಅಂತ ಏನೂ ಇರಲ್ಲ.
  17. ಸಮಯ ನಿಮ್ಮ ಹತೋಟಿಗೆ ಮೀರಿದ್ದು.
  18. ಮುಂದಿನ 24 ಗಂಟೆ ಬಗ್ಗೆ ಯೋಚನೆ ಮಾಡಿ. ಅದರಲ್ಲಿ ಸಾಧಿಸಕ್ಕೆ ಆಗೋದನ್ನೆಲ್ಲ ಸಾಧಿಸಿ.
  19. ಸಾಮಾಜಿಕ ತಾಣಗಳಲ್ಲಿ ಜನ ಬರೀ ಒಳ್ಳೇ ಸುದ್ದಿಗಳು, ಒಳ್ಳೇ ಫೋಟೋಗಳ್ನೇ ಹಂಚಿಕೊಳ್ಳೋದು. ಒಳಗೆ ಏನಿರುತ್ತೋ ಯಾರಿಗ್ ಗೊತ್ತು?
  20. ಇಲ್ಲೀವರೆಗೆ ನೀವು ಏನೇನು ಸಾಧಿಸಿದ್ದೀರಿ ಅಂತ ಮೆಲಕು ಹಾಕಿ.
  21. ಸದ್ಯಕ್ಕೆ ಒಂದು ದಿನಕ್ಕಿಂತ ಹೆಚ್ಚು ಪ್ಲಾನ್ ಮಾಡಬೇಡಿ.
  22. ಇನ್ನೂ ಮಾಡಕ್ಕೆ ತುಂಬಾ ಇದೆ ಅಂತ ಯೋಚನೆ ಮಾಡ್ಕೊಂಡ್ ಕೂತ್ಕೋಬೇಡಿ. ಅದರಿಂದ ಕೆಲಸ ಬೇಗೇನು ಆಗಲ್ಲ.
  23. ಬೇಕಾದಾಗ ಸಲಹೆ, ಸಹಾಯ ಕೇಳೋದ್ರಿಂದ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ, ಇನ್ನಷ್ಟು ಗಟ್ಟಿ ಆಗ್ತೀರಿ.
  24. ನಿಮಗೆ ಸಹಾಯ ಮಾಡ್ದೋರ್ನ ನೆನಪಿಸಿಕೊಳ್ಳಿ. ಆಗ ಗೊತ್ತಾಗುತ್ತೆ, ನೀವು ಒಂಟಿ ಅಲ್ಲ ಅಂತ.
  25. ಕೆಲಸ ಮುಂದಕ್ಕೆ ಹೋಗ್ತಿಲ್ಲ ಅಂದಾಗ ನಿಮ್ಮ ಪ್ರಕಾರ ಅದ್ಭುತವಾಗಿ ಕೆಲಸ ಮಾಡೋರು ಯಾರನ್ನಾದರೂ ನೆನಪಿಸಿಕೊಳ್ಳಿ. ಆಗ ಮುಂದಕ್ಕೆ ಹೋಗುತ್ತೆ.
  26. ಕಾಲೇಜ್ ಮುಗಿಸಿದ ತಕ್ಷಣ ಕೆಲಸ ಸಿಕ್ಕಿಲ್ಲದೆ ಹೋದರೆ ನೀವು ವೇಸ್ಟು ಅಂತಲ್ಲ. ನಿಮಗೆ ಸರಿ ಹೋಗೋ‌ ಕೆಲಸಗಳು ಇನ್ನೂ‌ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಂತ ಅರ್ಥ.
  27. ಚೆನ್ನಾಗಿ ಜೀವನ ಮಾಡೋದು ಅಂದ್ರೆ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡೋದು.
  28. ನಿಮ್ಮ ತಂದೆ-ತಾಯಿ ಹೇಳಿದ್ದನ್ನೇ ನೀವು ಮಾಡಬೇಕು ಅಂತಿಲ್ಲ. ನಿಮ್ಮ ದಾರಿ ನೀವು ಕಂಡ್ಕೊಳಿ.
  29. ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಮನಸ್ಸು ಬದಲಾಯಿಸಿ. ಬೇಡ ಅನ್ನೋನ್ ಯಾವನು?
  30. ಎಲ್ಲಾ ಬೇಗ್-ಬೇಗ ಮಾಡೋದೇ ಪ್ರಗತಿ ಅನ್ನೋದು ಮೂರ್ಖತನ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: