ಶಕುನಿ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲದಿರೋ ಈ 12 ವಿಷಯ ಕೇಳಿ ಆಶ್ಚರ್ಯ ಪಟ್ಕೋತೀರಿ

ಅವನ ಹೆಸರಲ್ಲಿ ಒಂದು ದೇವಸ್ಥಾನ ಇದೆ

ಮನೆಮನೆಗೂ ಟಿವಿ ಪರಿಚಯ ಆದ್ ಕಾಲದಿಂದ ಇಲ್ಲೀವರ್ಗೂ ಎಲ್ಲರೂ ಮೆಚ್ಕೊಂಡಿದ್ದ ಧಾರಾವಾಹಿಗಳಲ್ಲಿ ಮಹಾಭಾರತನೂ ಒಂದು. ಅದ್ರಲ್ಲೂ ಶಕುನಿ ಪಾತ್ರ ನೋಡಿದೋರೆಲ್ಲಾ ಯಾರಾದ್ರೂ ಸ್ವಲ್ಪ ಲೆಕ್ಕಚಾರ ಮಾಡಿ ತಮ್ಮ ಕೆಲ್ಸ ಸಾಧಿಸ್ಕೊಂಡ್ರೆ ಅಯ್ಯಪ್ಪಾ ಒಳ್ಳೆ ಶಕುನಿ ವಂಶದೋನು ಅಂತಾರೆ. ಅದೆಲ್ಲಾ ಏನೇ ಇರ್ಲಿ ಶಕುನಿ ಬಗ್ಗೆ ನಮಗೆ ನಿಮಗೆ ಗೊತ್ತಿಲ್ದೆ ಇದ್ದ ಈ ವಿಷ್ಯ ಗೊತ್ತಾದ್ಮೇಲೆ ನಿಜವಾಗ್ಲೂ ಆಶ್ಚರ್ಯ ಪಡ್ತೀರಿ...ಮುಂದೆ ಓದಿ...

1. ಶಕುನಿ ಪಾಂಡವರನ್ನ ದ್ವೇಷ ಮಾಡ್ತಿರ್ಲಿಲ್ಲ, ಅವನಿಗಿದ್ದ ಒಬ್ಬನೇ ಒಬ್ಬ ಶತ್ರು ಭೀಷ್ಮ

ಗಾಂಧಾರ ಸಣ್ಣ ದೇಶ. ಭೀಷ್ಮನ ಸಾರಥ್ಯದಲ್ಲಿ ಕೌರವ ದೇಶ ಬಲವಾಗಿತ್ತು. ಶಕುನಿಗೆ ತನ್ನ ಪ್ರೀತಿಯ ತಂಗಿ ಗಾಂಧಾರಿನ ಕುರುಡ ರಾಜ ದೃತರಾಷ್ಟ್ರ ಮದುವೆ ಆಗೋ ಹಾಗೆ ಮಾಡಿದ್ದು ಭೀಷ್ಮನೆ ಅನ್ನೋ ಕಾರಣಕ್ಕೆ ಭೀಷ್ಮನ ಬಗ್ಗೆ ತುಂಬಾ ಕೋಪ ದ್ವೇಷ ಇತ್ತು. ಮದ್ವೆ ಮುಂಚೆ ಯುದ್ಧ ಮಾಡಿ ಗಾಂಧಾರ ಸೋತಿತ್ತು. ಹೇಗಾದ್ರೂ ಭೀಷ್ಮನ ವಂಶ ಕುರುಕುಲ ನಾಶ ಮಾಡ್ಬೇಕು ಅನ್ನೋದೇ ಶಕುನಿ ಜೀವಮಾನದ ಗುರಿ ಆಗಿತ್ತು. ಅವನು ಪಾಂಡವರ ವಿರೋಧಿ ಅಲ್ಲದಿದ್ರೂ ತನ್ನ ಗುರಿ ಸಾಧಿಸ್ಕೊಳ್ಳೋಕೆ ಅವರನ್ನೇ ದಾಳವಾಗಿ ಬಳಸ್ಕೊಂಡ ಅಷ್ಟೇ.

ಮೂಲ

2. ಬರೀ ಹಿಂದಿಂದ ಸಂಚು ಮಾಡ್ತಿದ್ದ ಶಕುನಿ ಖಂಡಿತ ಹೇಡಿ ಅಲ್ಲ

ಶಕುನಿಯ ಮಗ ಉಲೂಕ ತನ್ನದೇ ಆದ ಗಾಂಧಾರ ದೇಶವನ್ನ ಆಳ್ತಾ ಇದ್ದಾಗ ಶಕುನಿ ಆ ದೇಶದಲ್ಲಿ ಮಹಾರಾಜನಾಗಿ ಮೆರೀಬೋದಾಗಿತ್ತು. ಆದ್ರೆ ಶಕುನಿ ಹಾಗ್ ಮಾಡದೆ ಪಾಂಡವರು ಅಜ್ಞಾತವಾಸ ಮುಗ್ಸಿ ಬರೋದನ್ನೇ ಕಾದಿದ್ದು ಭೀಷ್ಮನ ವಿರುದ್ಧ ತನ್ನ ಸೇಡು ತೀರಿಸ್ಕೊಳ್ಳೋಕೆ ಕೌರವರ ಜೊತೇನೇ ಉಳ್ಕೊಂಡ.

ಮೂಲ

3. ಕೆಟ್ಟ ಯೋಚ್ನೆ ಮಾಡೋ ದೂರ್ತರೆಲ್ಲಾ ಕ್ಷುದ್ರ ದೇವತೆ ಆರಾಧನೆ ಮಾಡೊ ಹಾಗೆ ಶಕುನಿ ಮಾಡ್ತಿರ್ಲಿಲ್ಲ

ಶಕುನಿ ತಂಗಿ ಗಾಂಧಾರಿ ಶ್ರೀ ಕೃಷ್ಣನ ಭಕ್ತೆ. 

ರಾವಣನ ಹಾಗೆ ಶಕುನಿಯ ಆರಾಧ್ಯ ದೈವ ಕೂಡ ಆ ಮಹಾದೇವ ಶಿವನೇ.

ಮೂಲ

4. ಕೃಷ್ಣಂಗೆ ಗೊತ್ತಾಗದ ಹಾಗೆ ಶಕುನಿ ಎಲ್ಲಾ ತರದ ಸಂಚು ಮಾಡ್ತಿದ್ದ

 ಶ್ರೀ ಕೃಷ್ಣ ಇರೋವಾಗ ತಾನೇನೆ ತಲೆ ಉಪಯೋಗ್ಸಿದ್ರೂ ಕೆಲ್ಸಕ್ಕೆ ಬರಲ್ಲ. ಎಲ್ಲಾ ತಲೆಕೆಳಗಾಗೋಗುತ್ತೆ ಅನ್ನೋದು ಶಕುನಿಗೆ ಗೊತ್ತಿತ್ತು. ಅದ್ರಿಂದಾನೇ ಶ್ರೀ ಕೃಷ್ಣ ಇಲ್ದೇ ಇರೋ ಸಮಯ ನೋಡ್ಕೊಂಡೇ ಎಲ್ಲಾ ತರದ ಮೋಸ ಮಾಡ್ತಿದ್ದ. ನರಿ ಬುದ್ದಿ ಎಲ್ಲಿಗೆ ಹೋಗತ್ತೆ ಅಲ್ವಾ?

ಮೂಲ

5. ದ್ವಾಪರ ಯುಗದ ಆಗುಹೋಗುಗಳ ರೂವಾರಿ ಶಕುನಿ 

ದ್ವಾಪರ ಯುಗ ಅಂದ್ರೆ ಅಣ್ಣ - ತಮ್ಮಂದಿರೇ ವಿರೋಧಿಗಳಾಗಿ ದ್ವೇಷ ಕಾರಿದ ಯುಗ. ಅಣ್ಣ - ತಮ್ಮಂದಿರಾಗಿ ಒಟ್ಟಾಗಿರಬೇಕಾಗಿದ್ದ ಪಾಂಡವರು ಕೌರವರ ನಡುವೆ ನಡೆದುಹೋದ ಕುರುಕ್ಷೇತ್ರ ಯುದ್ದಕ್ಕೆ ಕಾರಣ ಆಗೋ ಹಾಗೆ ಇವರ ಮಧ್ಯೆ  ವಿಷದ ಬೀಜ ಬಿಟ್ಟಿದ್ದು, ದ್ವೇಷ ಬೆಳೆಯೋಕೆ ಕಾರಣ ಆಗಿದ್ದು ಎಲ್ಲಾ ಶಕುನಿನೇ.

ಮೂಲ

6. ಶಕುನಿ ದ್ವಾಪರ ಯುಗದ ವಿಲನ್ ಆದ್ರೇನಂತೆ ರಾವಣನ ಹಾಗೆ ಶಕುನಿಗೂ ಒಂದು ದೇವಸ್ಥಾನ ಇದೆ

ಕೇರಳದ ಪವಿತ್ರೇಶ್ವರಮ್ ಅನ್ನೋ ಜಾಗದಲ್ಲಿ ಶಕುನಿಗೂ ಒಂದು ದೇವಸ್ಥಾನ ಇದೆ.ಭಾಳ ಹಳೇದು. ಸ್ಥಳೀಯ ಕುರುವಾರ ಜನಾಂಗದೋರು ಶಕುನಿ ಪೂಜೆ ಮಾಡ್ತಾ ಬಂದಿದ್ದಾರೆ. ಅಲ್ಲಿ ಶಕುನಿ ಉಪ್ಯೋಗಿಸುತ್ತಿದ್ದ ಒಂದು ಕಿರೀಟ ಇದ್ಯಂತೆ. ಇದೇ ಜಾಗದಲ್ಲಿ ಶಕುನಿಗೆ ಮೋಕ್ಶ ಸಿಕ್ಕಿದ್ದು, ಮತ್ತೆ ಅವನು ದೇವತೆಯಾಗಿದ್ದು ಅಂತ ನಂಬಿಕೆ ಇದೆ. 

ಮೂಲ

7. ಪಗಡೆ ಆಟ ಆಡೋವಾಗ ಶಕುನಿ ತನಗೆ ಬೇಕಾದ ಹಾಗೆ ದಾಳ ಬಿಳೊ ಹಾಗೆ ಮಾಡ್ತಿದ್ದ

ನಮ್ಮೆಲ್ರಿಗೂ ಇದರ ಬಗ್ಗೆ ಸಾಕಷ್ಟು ಗೊತ್ತಿದೆ. ಈ ದಾಳದ ಬಗ್ಗೆ ತುಂಬಾನೆ ಕತೆಗಳಿವೆ. ಕೆಲವರ ಪ್ರಕಾರ ಶಕುನಿ ಆಡ್ತಾ ಇದ್ದ ದಾಳ ಅವರ ಅಪ್ಪನ ಕಾಲಿನ ಮೂಳೆಯಿಂದ ಮಾಡಿದ್ದು, ಮತ್ತೆ ಕೆಲವರ ಪ್ರಕಾರ ಆ ದಾಳದಲ್ಲಿ ಅವರ ತಂದೆಯ ಅಸ್ತಿ ತುಂಬಿತ್ತು ಅನ್ನೋದು.

ಆದ್ರೆ ನಿಜವಾಗ್ಲೂ ಶಕುನಿ ಒಬ್ಬ ಮನಸಿನ ಮಾಂತ್ರಿಕ. ಎದುರಿಗಿರೋರು ಯಾರೇ ಆದ್ರು ಅವ್ರಿಗೆ ಏನೋ ಒಂಥರ ಭ್ರಮೆ ತಟ್ಟೊ ಹಾಗೆ ಮಾಡ್ತಿದ್ದ. ತಾವು ಸೋತು ಹೋದ ಹಾಗೆ ಶಕುನೀನೇ ಗೆದ್ದ ಹಾಗೆ ಭ್ರಮೆ ಆಗೋ ಹಾಗೆ ಮಾಡ್ತಿದ್ದ.

ಮೂಲ

8. ಬರೀ ದಾಳದಿಂದಾನೇ ಕುರುಕ್ಷೇತ್ರ ಯುದ್ಧ ಮಾಡಿಸಿಬಿಟ್ಟ ಶಕುನಿ

ಶಕುನಿ ದುರ್ಬುದ್ಧಿ ನೋಡಿ ದ್ವೇಷಿಸ್ತೀರೋ ಅಥವಾ ಚಾಣಾಕ್ಷ ಬುದ್ಧಿಗೆ ಶಹಬ್ಬಾಸ್ ಅಂತಿರೋ ಗೊತ್ತಿಲ್ಲ, ಆದ್ರೆ ಶಕುನಿಯ ಪಾತ್ರವನ್ನ ಮಾತ್ರ ಕಡೆಗಣಿಸೋದಿಕ್ಕೆ ಸಾಧ್ಯ ಇಲ್ಲ.

ಕುರುಕ್ಷೇತ್ರ ಯುದ್ಧದ ಮೂಲ ಕಾರಣ ವ್ಯಕ್ತಿ ಶಕುನೀನೇ ಆಗಿದ್ರೂ, ಬರೀ ತನ್ನ ಪಗಡೆ ದಾಳವನ್ನ ಉಪಯೋಗ್ಸಿ ಅಷ್ಟೊಂದು ಜನ ಅತಿರಥ ಮಹಾರಥರನ್ನ ಯುದ್ಧಕ್ಕೆ ಸಿದ್ಧರಾಗೋಹಾಗೆ ಮಾಡಿದ್ದು  ನಿಜ್ವಾಗ್ಲೂ ಆಶ್ಚರ್ಯ ಆಗುತ್ತೆ.

ಮೂಲ

9. ಅರಗಿನ ಮನೇಲಿ ಪಾಂಡವರನ್ನ ಕೊಲ್ಲಕ್ಕೆ ಪುರೋಚನನ್ನ ನೇಮಿಸಿದ್ದ

ಅಷ್ಟೇ ಅಲ್ಲ ದುರ್ಯೋಧನ ಚಿಕ್ಕ ಹುಡುಗ ಆಗಿದ್ದಾಗ್ಲೇ ಭೀಮನ ಊಟಕ್ಕೆ ವಿಷ ಬೆರೆಸೋದಕ್ಕೂ ಹೇಳ್ಕೊಟ್ಟಿದ್ದ. ಆ ವಯಸ್ಸಿಂದಾನೆ ಅವ್ರ ಮಧ್ಯೆ ದ್ವೇಷದ ಬೀಜ ಬಿತ್ತೋಕೆ ಶುರು ಮಾಡಿದ್ದ.

ಮೂಲ

10. ಯುದ್ಧದ ನೀತಿ ನಿಯಮನೆಲ್ಲಾ ಬಿಟ್ಹಾಕಿ ಅಭಿಮನ್ಯುನ ಕೊಲ್ಲಿ ಅಂದಿದ್ದು ಶಕುನಿ

ಮೂಲ

11. ಶಕುನಿಗೆ 100 ಜನ ಸೋದರಳಿಯಂದ್ರು ( ಕೌರವರು - ತಂಗಿ ಮಕ್ಳು) ಅಷ್ಟೆ ಅಲ್ಲ 99 ಜನ ಅಣ್ಣಂದಿರೂ ಇದ್ರು

ಸುಭಲ ರಾಜನ 100 ನೇ ಮಗ ಶಕುನಿ. ಅಷ್ಟೂ ಮಕ್ಕಳಲ್ಲಿ ಇವನೋಬ್ನೇ ಗಾಂಧಾರಿ ಜೊತೆ ಉಳ್ಕೊಂಡಿದ್ದು. ಭಾಳ ಬುದ್ದಿವಂತ ಕೂಡ. ತನ್ನನ್ನ ತಾನೇ ಸೌಬಲ ಅಂತ ಕೂಡ ಕರ್ಕೋಳ್ತಿದ್ದ.  

ಶಕುನಿ ಸೇರಿ ನೂರು ಮಂದಿ ಗೂ ಗಾಂಧಾರಿನ ಹುಟ್ಟು ಕುರುಡ ದೃತರಾಷ್ಟ್ರನ ಜೊತೆ ಮದುವೆ ಮಾಡಿಕೊಡೋದು ಇಷ್ಟವಿರಲಿಲ್ಲ. ವಿಧಿಯಿಲ್ಲದೆ ಗಾಂಧಾರ ರಾಜ ಮಗಳನ್ನ ಧಾರೆ ಎರೆದುಕೊಟ್ಟಿದ್ದ. ಗಾಂಧಾರ ಸಹೋದರರು ಕುರುಕುಲದ ಮೇಲೆ ಯುದ್ಧ ಮಾಡಿ ಸೆರೆಯಾಳಾದ್ರು. ಸೆರೆಮನೇಲಿ ಎಲ್ಲ್ರಿಗೂ ಸೇರಿ 100 ಅಗುಳು ಅನ್ನ ಮಾತ್ರ ತಿನ್ನಕ್ಕೆ ಕೊಡ್ತಿದ್ರು. ಒಬ್ಬೊಬ್ಬರಿಗೆ ಒಂದೊಂದು ಅಗುಳು ಅಷ್ಟೇ. ಅದಕ್ಕೆ ಎಲ್ಲಾ ಸೇರಿ ಒಂದು ಪ್ಲ್ಯಾನ್ ಮಾಡಿ ಅವರಲ್ಲಿ ಸಿಕ್ಕಾಪಟ್ಟೆ ಬುದ್ದಿವಂ ಅಂದ್ರೆ ಶಕಿನು. ಅವನಿಗೆ ಎಲ್ಲಾ ತಿನ್ನು ಅಂತ ಹೇಳಿ ಮಿಕ್ಕೋರೆಲ್ಲಾ ಸತ್ತರು. ಶಕುನಿ ಹೊಟ್ಟೆ ಒಳಗೆ ಕಿಡಿ ಕಾರ್ತಾ ಊಟ ಮಾಡ್ತಿದ್ದ. ಮುಂದೆ ದುರ್ಯೋಧನನ ಜೊತೆ ಸೇರ್ಕೊಂಡು ಅವನ ತಲೆ ಕೇಡೆಸಿ ಸೇಡು ತೀರ್ಸ್ಕೊಂಡೇ ಬಿಟ್ಟ.

ಮೂಲ

12. ಶಕುನಿಗೆ ಇಬ್ರು ಮಕ್ಕಳು - ಉಲೂಕ ಮತ್ತು ವ್ಯಕಾಸುರ

ಯಾವಾಗ್ಲೂ ಹಸ್ಥಿನಾಪುರದಲ್ಲೇ ಇರ್ತಾ ಇದ್ದ ಶಕುನಿ ತನ್ನ ದೇಶ ಗಾಂಧಾರಕ್ಕೆ ಹೋಗಿದ್ದೆ ಕಡಿಮೆ. ಗಾಂಧಾರ ದೇಶದಲ್ಲಿ ಉಲೋಕನ ಜೊತೆ ವೃಕಾಸುರ ಅನ್ನೋ ಮಗನೂ ಕೂಡ ಇದ್ದ. ಅವರೇ ರಾಜ್ಯ ಆಳ್ತಾ ಇದ್ರು.

ಮೂಲ

ಶಕುನಿ ಬುದ್ದಿ ಮೀರ್ಸೋರು ಯಾರು? 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬೆಳ್-ಬೆಳಗ್ಗೆ 20 ನಿಮಿಷ ಹೀಗ್ ಕಳೆದರೆ ಇಡೀ ದಿನ ಲವಲವಿಕೆ ಮತ್ತು ಸಂತೋಷಗಳು ನಿಮ್ನ ಬಿಟ್ಟು ಹೋಗಲ್ಲ

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತೋರು ಬಿಚ್ಚಿಟ್ಟ ಗುಟ್ಟು

ಇಂಥದ್ದು ನಡೆದೇ ಇರುತ್ತೆ - ಬೆಳ್ ಬೆಳಿಗ್ಗೆನೇ ಯಾವ್ದೂ ನೀವಂದ್ಕೊಂಡ ಹಾಗೆ ನಡೀತಿರೊಲ್ಲ. ನೀವಿಟ್ಟ ಸಮಯಕ್ಕೆ ಅಲಾರ್ಮು ಹೊಡ್ದಿರೊಲ್ಲ, ಅಥವಾ ನೀವೇ ತಪ್ಪಾಗಿ ಅಲಾರ್ಮ್ ಸೆಟ್ ಮಾಡಿರ್ತೀರ. ಅಯ್ಯಯ್ಯೋ ಲೇಟ್ ಆಯ್ತು ಅಂದ್ಕೊಂಡು ಬೇಗ ಸ್ನಾನ ಮಾಡಿ ತಿಂಡಿ ರೆಡಿ ಮಾಡೋಕೆ ಹೋದ್ರೆ ಅದು ಸೀದು ಹೋಗುತ್ತೆ. ಇಸ್ತ್ರಿ ಹಾಕೋಕೆ ಹೋದಾಗ ಕರೆಂಟು ಕೈ ಕೊಡುತ್ತೆ. ಸರಿ, ಆ ದಿನ ಪೂರ್ತಿ ಎಲ್ಲವೂ ಹಾಳು. ನೀವು ಮುರ್ಫಿ ಅನ್ನೋನು ಹೇಳಿರೋದು ಕೇಳಿರ್ಬಹುದು - ಏನಾದ್ರು ಹಾಳಾಗೋ ಚಾನ್ಸ್ ಇದ್ರೆ, ಅದು ಹಾಳಾಗಿಯೇ ಆಗುತ್ತೆ. ಒಟ್ನಲ್ಲಿ ಬೆಳ್ ಬೆಳಿಗ್ಗೆ ಕೆಟ್ಟದಾಗಿ ಶುರುವಾದ್ರೆ ಅವತ್ತು ಪೂರ್ತಿ ಮುರ್ಫಿ ಹೇಳಿದ್ದು ನಿಜ ಆಗ್ತಾ ಹೋಗುತ್ತೆ. ಇದಕ್ಕೆ ಪರಿಹಾರ ಇದೆ - ದಿನವೂ ಬೆಳಿಗ್ಗೆ ಬರೀ ಇಪ್ಪತ್ತು ನಿಮಿಷ ಈ ರೀತಿ ಕಳ್ದ್ರೆ ಇಡೀ ದಿನ ಸಕತ್ತಾಗಿರುತ್ತೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತು ಸಂತೋಷ, ನೆಮ್ಮದಿಗಳ ಬಗ್ಗೆ ರಿಸರ್ಚ್ ಮಾಡ್ತಿರೋ ಶಾನ್ ಏಚರ್ ಅನ್ನೋನು ಹೇಳಿರೋ ಪ್ರಕಾರ ಬೆಳಿಗ್ಗೆ ನೀವು ಪಾಸಿಟಿವ್ ಆಗಿದ್ರೆ ಆ ದಿವ್ಸ ಖಷಿಯಾಗಿರ್ತೀರಿ. ಪಾಸಿಟಿವಿಟಿ ಹೆಚ್ಚಾದ್ರೆ ನಿಮ್ ಮಿದುಳು ಖುಷ್ ಖುಷಿಯಾಗಿರುತ್ತೆ. ಖುಷಿಯಾಗಿದ್ದಾಗ ಮಿದುಳು ಚೆನ್ನಾಗಿ ಕೆಲಸ ಮಾಡುತ್ತೆ, ಎಷ್ಟು ಕಷ್ಟ ಇದ್ರೂ ಟೆನ್ಷನ್ ತೆಗೊಳೊಲ್ಲ. ಆ 20 ನಿಮಿಷ ಏನು ಮಾಡ್ಬೇಕು ಅಂತ ಹೇಳ್ತಾರೆ ಅನ್ನೋದನ್ನ ಓದ್ಕೊಳ್ಳಿ.

1) 2 ನಿಮಿಷ ಹಿಂದಿನ್ ದಿವ್ಸ ಏನೇನು ಒಳ್ಳೇದಾಯ್ತು ಅನ್ನೋದನ್ನ ನೆನೆಸ್ಕೋಬೇಕು

ನಾವು ಮಿದುಳಿಗೆ ಮೋಸ ಮಾಡ್ಬಹುದು. ಖುಷಿಯಾಗಿದ್ದೀನಿ ಅಂತ ನಿಮ್ಗೆ ನೀವೇ ಹೇಳ್ಕೊಂಡ್ರೆ ಅದು ನಿಜಕ್ಕೂ ಖುಷಿಯಾಗಿ ಬಿಡುತ್ತೆ. ಹಿಂದಿನ್ ದಿನ ಖುಷಿ ಕೊಡೋ ಅಂಥದ್ದು ಏನಾಯ್ತು ಅಂತ ನೆನಪು ಮಾಡ್ಕೊಂಡು ಬರ್ದಿಟ್ಕೊಳ್ಳಿ. ಹಿಂದಿನ್ ದಿನದ ಖುಷೀನ ಎರಡು ನಿಮಿಷ ಮತ್ತೆ ಅನುಭವ್ಸಿ. ಇದರಿಂದ ನಿಮ್ ಮಿದುಳು ಪಾಸಿಟಿವ್ ಆಗುತ್ತೆ. ಮೊದ್ಲೇ ಹೇಳಿದ್ ಹಾಗೆ, ಮಿದುಳು ಪಾಸಿಟಿವ್ ಆಗಿದ್ರೆ ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

2) 2 ನಿಮಿಷ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋಬೇಕು

ನಾವು ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋದು ಕಡಿಮೆ. ಬೆಳ್ ಬೆಳಿಗ್ಗೆ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳಿ. ನೆನೆಸ್ಕೊಳ್ಳೋದಷ್ಟೆ ಅಲ್ಲ, ಅವ್ರು ನಿಮ್ ಮುಂದೆ ಇದ್ರೆ ಅವ್ರಿಗೆ ಹೇಳಿ. ಅಥ್ವಾ ಈಮೇಲೋ ಮೆಸೇಜೋ ಮಾಡಿ. ಇದರಿಂದ ಎರಡು ರೀತಿ ಪ್ರಯೋಜನ ಇದೆ - ಈ ರೀತಿ ಒಳ್ಳೆ ಕೆಲ್ಸ ಮಾಡಿದ್ದೀನಿ ಅಂತ ನೀವು ಖುಷಿಯಾಗ್ತೀರಿ, ಅಲ್ಲದೆ ಬೇರೆಯವ್ರ ಜೊತೆ ನಿಮ್ ಸಂಬಂಧ ಗಟ್ಟಿಯಾಗುತ್ತೆ. ಇದರಿಂದ ಮಿದುಳು ಖುಷಿಯಾಗುತ್ತೆ, ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

3) 2 ನಿಮಿಷ ನಿಮ್ಗಿರೋ ಭಾಗ್ಯ ನೆನೆಸ್ಕೋಬೇಕು

ಡಿ.ವಿ.ಗುಂಡಪ್ಪ 'ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ' ಅಂತ ಹೇಳಿದ್ದಾರೆ. ಹೀಗೆ ನಿಮ್ ಬದುಕಲ್ಲಿ ನಿಮ್ಗೆ ದಕ್ಕಿರೋ ಭಾಗ್ಯಗಳ್ನ ನೆನೆಸ್ಕೋಬೇಕಂತೆ ಬೆಳಿಗ್ ಬೆಳಿಗ್ಗೆ. ಇದರಿಂದ ಮಿದುಳು ಪಾಸಿಟಿವ್ ಆಗುತ್ತೆ. ಬದುಕಲ್ಲಿ ಏನೇನಿದೆ ಅಂತ ನೋಡೋದ್ರಿಂದ, ಏನೇನಿಲ್ಲ ಅಂತ ಕೊರಗೋದು ತಪ್ಪುತ್ತೆ. ಲೋಟ ಅರ್ಧ ಖಾಲಿಯಾಗಿದೆ ಅಂತ ಕೊರಗೋ ಬದ್ಲು ಅರ್ಧ ಲೋಟ ನೀರಿದ್ಯಲ್ಲ ಅಂತ ಖುಷಿ ಪಡ್ಬೇಕು. ಇಂಥ ಆಶಾವಾದದಿಂದ ಇಡೀ ದಿನ ಚೆನ್ನಾಗಿ ಕಳಿಯುತ್ತೆ. ನೀವು ಅಂದ್ಕೊಂಡ ಕೆಲಸ ಎಲ್ಲ ಮಾಡಿ ಮುಗಿಸ್ಬಹುದು.

ಮೂಲ

4) 12 ನಿಮಿಷ ವ್ಯಾಯಾಮ ಮಾಡ್ಬೇಕು

ಮನುಷ್ಯನ್ ದೇಹದಲ್ಲಿ 'ಎಂಡಾರ್ಫಿನ್' ಅನ್ನೋ ಹಾರ್ಮೋನು ಇದ್ದಷ್ಟು ಅವ್ನು ಖುಷಿಯಾಗಿರ್ತಾನಂತೆ. ನಾವು ಜಾಗಿಂಗ್, ಯೋಗಾಸನ, ವ್ಯಾಯಾಮ್ ಮಾಡೋವಾಗ್ಲೂ ಈ ಎಂಡಾರ್ಫಿನ್ ದೇಹದಲ್ಲಿ ಹೆಚ್ಚಾಗುತ್ತೆ. ಇದರಿಂದ ಟೆನ್ಷನ್ ಕಡಿಮೆ ಆಗಿ, ಮಿದುಳು ಅದರ ಪೂರ್ತಿ ತಾಕತ್ತು ತೋರ್ಸುತ್ತೆ. ಅಲ್ಲದೆ ನೀವು ನಿಮ್ ಬಗ್ಗೆ ಯೋಚ್ನೆ ಮಾಡೋದನ್ನ ಕಲೀತೀರಿ. ದಿವ್ಸ ವ್ಯಾಯಾಮ ಮಾಡೋದ್ರಿಂದ, ಹಿಡಿದ ಕೆಲ್ಸಾನ ಕಷ್ಟ ಬಿದ್ದು ಪೂರ್ತಿ ಮಾಡ್ಬೇಕು ಅನ್ನೋದೂ ಮಿದುಳಿಗೆ ಅರ್ಥ ಆಗುತ್ತೆ. ಇದೆಲ್ಲ ಪಾಸಿಟಿವಿಟಿ ಹೆಚ್ಸುತ್ತೆ.

ಮೂಲ

5) 2 ನಿಮಿಷ ಧ್ಯಾನ ಮಾಡ್ಬೇಕು

ಎರಡೇ ಎರಡು ನಿಮಿಷ ಧ್ಯಾನ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಒಂದು ಕಡೆ ಶಾಂತವಾಗಿ ಕೂತು, ನಿಮ್ ಉಸಿರಾಟದ್ ಮೇಲೆ ನಿಮ್ ಗಮನ ಇಡಿ. ಬೇರೆ ಯಾವುದ್ರ ಬಗ್ಗೆನೂ ಯೋಚ್ನೆ ಮಾಡ್ಬೇಡಿ. ಇದ್ರಿಂದ ಕೈಯಲ್ಲಿರೋ ವಿಷಯದ್ ಬಗ್ಗೆ ಮಾತ್ರ ಯೋಚ್ನೆ ಮಾಡೋ ಶಕ್ತಿ ಹೆಚ್ಚಾಗುತ್ತೆ. ದಿವ್ಸ ಇದನ್ನ ಅಭ್ಯಾಸ ಮಾಡ್ಕೊಂಡ್ರೆ ನಿಧಾನಕ್ಕೆ ಪಾಸಿಟಿವಿಟಿ ಹೆಚ್ಚಾಗುತ್ತೆ.

ಮೂಲ

ಬೆಳಿಗ್ಗೆ ಸ್ವಲ್ಪ ಜಾಸ್ತಿ ಟೈಮ್ ಇದ್ದ ದಿವ್ಸ ಬೇಕಿದ್ರೆ ಇದನ್ನೆಲ್ಲ ಜಾಸ್ತಿ ಹೊತ್ತು ಮಾಡ್ಬಹುದು. ಈ ಅಭ್ಯಾಸಗಳನ್ನ ರೂಢಿ ಮಾಡ್ಕ್ಕೊಂಡ್ರೆ ನೀವು ಹೆಚ್ಚು ಪಾಸಿಟಿವ್ ಆಲೋಚನೆಗಳನ್ನ ಮಾಡ್ತೀರಿ. ನಿಮ್ಮ ದಿನವೂ ಚೆನ್ನಾಗಿರುತ್ತೆ. ಅಂದ್ಕೊಂಡ ಕೆಲ್ಸ ಎಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತೀರಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: