ಇಂಡೊನೇಷ್ಯಾನಲ್ಲಿ ಆಡೋ ಈ ಆಟ ನೋಡುವಾಗ ನಾನೇ ಆಡ್ತಿದೀನಿ ಅನ್ನಿಸಿ ತಲೆ ತಿರುಗುತ್ತೆ

ಚಿಕ್ಕೋರಾಗಿದ್ದಾಗ ಗೊತ್ತಿರಬೇಕಿತ್ತು. ಛೆ!

ಪ್ರಪಂಚದಲ್ಲಿ ಎಷ್ಟು ತರಹದ ಆಟಗಳಿವೆಯೋ ಏನೋ! ಆದ್ರೂ ಆಗಾಗ ಹೊಸ ಆಟಗಳ ಬಗ್ಗೆ ಅಲ್ಲಿ ಇಲ್ಲಿ ಸುದ್ದಿ ಬರ್ತಾನೇ ಇರುತ್ತೆ. ಇಲ್ಲಿ ನೋಡಿ, ಇಂಡೋನೇಷ್ಯಾನಲ್ಲಿ ಒಂದು ವಿಶೇಷವಾದ ಆಟ ಆಡ್ತಾರೆ. ನೋಡಕ್ಕೆ ಮಾಮೂಲಿ ರನ್ನಿಂಗ್ ರೇಸ್ ಇದ್ದಂಗಿದೆ, ಆದರೆ ಓಡಕ್ಕೆ ಮುಂಚೆ ಓಡಕ್ಕೆ ಅಸಾಧ್ಯವಾಗೋಹಾಗೆ ಮಾಡಿಸಿ ಬಿಡ್ತಾರೆ. ಇದರ ವಿಶೇಷ ಏನು ಅಂದ್ರೆ ಇದನ್ನ ನೋಡ್ತಾ ನೋಡ್ತಾ ನಮಗೇ ಆಟದಲ್ಲಿ ಇದೀವೇನೋ‌ ಅನ್ನಿಸುತ್ತೆ. ಅವರಿಗೆ ಆಗೋದು ನಮಗೂ ಆದಂಗಾಗುತ್ತೆ…

ಅಂದಹಾಗೆ ಇದೇ ತರಹದ ಆಟವನ್ನ ಸೇನಾ ಸಿಬ್ಬಂದಿಗಳ್ನ ಕೆಲಸಕ್ಕೆ ತೊಗೋಬೇಕಾದರೂ ಆಡಿಸ್ತಾರಂತೆ. ಇದನ್ನ ಫಿಲಿಪೀನ್ಸ್, ಬರ್ಮಾ ಮುಂತಾದ ಕಡೇನೂ ಆಡ್ತಾರಂತೆ.

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: