ಹೊಸ 2000 ₹ ನೋಟ್ ಬಗ್ಗೆ ಕೆಲವರಿಗೆ ಡೌಟಿತ್ತು, ಈಗದು ನಿಜಾನೇ ಅಗೋಹಂಗಿದೆ

ಅಥವಾ ನಿಮಗೇ ಅನ್ನಿಸಿತ್ತಾ?

ಮೂಲ

ಈ ನೋಟ್ ಹಿಂಪಡೆ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಮುಂದಿನ ಹೆಜ್ಜೆ ಏನಿರಬಹುದು ಅನ್ನೋ ಪ್ರಶ್ನೆ ಎಲ್ಲರ ತಲೇಲೂ ಓಡ್ತಿದೆ. ಇವತ್ತು ಆ ಪ್ರಶ್ನೆಗೆ ಒಬ್ಬ ಮುಖ್ಯವಾದ RSS ಚಿಂತಕ ಉತ್ತರ ಕೊಟ್ಟಿರೋಹಂಗೆ ಕಾಣ್ತಿದೆ.

ಇಂಡಿಯಾ ಟುಡೇ ಜೊತೆ ಮಾತಾಡ್ತಾ ಎಸ್. ಗುರುಮೂರ್ತಿ ಅವರು ದೇಶಕ್ಕೆ ಕಡಿಮೆ ಬೆಲೆಯ ನೋಟುಗಳೇ ವಾಸಿ ಅನ್ನೋ ವಾದ ಮುಂದಿಟ್ಟಿದಾರೆ. ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ಗುರುಮೂರ್ತಿ ಅವರು ಸರ್ಕಾರಕ್ಕೆ ಈ ವಿಷಯವಾಗಿ ಸಲಹೆಗಳ್ನ ಕೊಡ್ತಾ ಬಂದಿದಾರೆ.

ಅವರ ಪ್ರಕಾರ 2000 ರೂ ನೋಟುಗಳು ಜಾಸ್ತಿ ದಿನ ಇರಲ್ಲ!

ನಿಧಾನವಾಗಿ ಈ ನೋಟುಗಳ್ನ ತೆಗೆದು ಹಾಕ್ತಾರೆ ಅಂತ ಇಂಡಿಯಾ ಟುಡೇಗೆ ಸಂದರ್ಶನದಲ್ಲಿ ಹೇಳಿದಾರೆ ಗುರುಮೂರ್ತಿ. "ಹೊಸ ನೋಟ್ ಬಿಟ್ಟರೆ ಅದರ ಖೋಟಾ ನೋಟ್ ಮಾಡಕ್ಕೆ ಸುಮಾರು 7 ವರ್ಷ ಬೇಕಾಗುತ್ತೆ. ಅದಕ್ಕಿಂತ ಮುಂಚೇನೇ 2000 ರೂ ನೋಟುಗಳ್ನ ಹಿಂಪಡೆದುಕೊಳ್ಳಬೇಕು. ಸರ್ಕಾರಕ್ಕೆ ಬೇಕಾದಷ್ಟು 500 ಮತ್ತೆ 1000 ರೂ ನೋಟುಗಳ್ನ ಪ್ರಿಂಟ್ ಮಾಡಕ್ಕೆ ಆಗ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ. ಅದು ಆಗಲ್ಲ ಅಂತಾನೇ 2000 ರೂ ನೋಟು ಬಿಟ್ಟಿರೋದು. ಅದು ತಾತ್ಕಾಲಿಕ ಮಾತ್ರ."

ಆದರೆ ಮುಂದಿನ ಸಲ 2000 ರೂ ನೋಟುಗಳ್ನ ಹಿಂಪಡೆಯುವ ಮುಂಚೆ ಅದು ಲೀಗಲ್ ಟೆಂಡರ್ ಅಲ್ಲ ಅಂತ ಘೋಷಿಸೋ ಬದಲು ನಿಧಾನವಾಗಿ ಬ್ಯಾಂಕುಗಳಿಗೆ ಬಂದ 2000 ರೂ ನೋಟುಗಳ್ನ ಮತ್ತೆ ಮಾರುಕಟ್ಟೆಗೆ ಹಿಂತಿರುಗಿಸಲ್ಲವಂತೆ.

ಇದು ಹೀಗಾಗುತ್ತೆ ಅಂತ ನಿಮಗೇ ಅನ್ನಿಸಿರಬಹುದು… ಅಥವಾ ಬೇರೆಯೋರು ಯಾರಾದರೂ ನಿಮಗೆ ಹೇಳಿರಬಹುದು. ಒಟ್ನಲ್ಲಿ ಅದು ನಿಜಾನೇ ಆಗೋಹಂಗಿದೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ತೀರಾ ಕಡಿಮೆ ಖರ್ಚಲ್ಲಿ ಕೂದಲು ಚೆನ್ನಾಗಾಗಬೇಕು ಅಂದ್ರೆ ಈ 13 ಪದಾರ್ಥ ಉಪಯೋಗಿಸಿ ನೋಡಿ

ಎಲ್ಲ ಸಾಮಾನ್ಯವಾಗಿ ಮನೇಲೇ ಇರುತ್ತೆ

ತಲೆತುಂಬ ಕೂದಲು ಇರ್ಬೇಕು ಅನ್ನೋದು ಎಲ್ರ ಆಸೆ. ಆದರೆ ನಾನಾ ಕಾರಣಗಳಿಂದ ಈವತ್ತು ಕೂದಲು ಉದುರೋ ಸಮಸ್ಯೆ ಜಾಸ್ತಿ ಆಗ್ತಿದೆ. ನಾವು ಬಳಸೋಂತ ಶಾಂಪೂಗಳು, ಎಣ್ಣೆಗಳು, ಕಣ್ತುಂಬ ನಿದ್ದೆ ಇಲ್ದೆ ಇರೋಂತದ್ದು, ಮಾಲಿನ್ಯ, ಪೌಷ್ಠಿಕ ಆಹಾರ ಕೊರತೆ, ಹಾರ್ಮೋನ್ ಏರುಪೇರಾಗೋದು, ಮಾನಸಿಕ ಸಮಸ್ಯೆ, ಒತ್ತಡಗಳಿಂದ ಕೂದಲು ಉದುರುತ್ತೆ. ಕೂದಲ ಆರೋಗ್ಯಾನ ಕಾಪಾಡ್ಕೊಳ್ಳೋದು ಈವತ್ತಿನ ದಿನಗಳಲ್ಲಿ ನಿಜವಾಗ್ಲೂ ಸವಾಲಾಗೋಗಿದೆ. ಕೂದ್ಲ ಆರೋಗ್ಯವನ್ನ ಕಾಪಾಡ್ಕೊಳ್ಳೋಕೆ ಮನೆಯಲ್ಲೇ ಸಾಕಷ್ಟು ಪದಾರ್ಥಗಳು ಸಿಕ್ತಾವೆ. ಈವತ್ತು ಕೂದಲ ಆರೋಗ್ಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡೋ ಜನ ಇದಾರೆ. ಆದ್ರೆ ಕಡಿಮೆ ಖರ್ಚಲ್ಲೇ ಕೂದಲನ್ನ ಕಾಪಾಡ್ಕೋಬೋದು... ಹೇಗೆ ಅಂತ ನೋಡಿ...

1. ಹರಳೆಣ್ಣೆ

ಇದ್ರಲ್ಲಿ ಒಮೆಗಾ 6 ಮತ್ತೆ ರಿಸಿನೋಲೆಕ್ ಆಸಿಡ್ ಇರೊದ್ರಿಂದ ಕೂದಲು ದಟ್ಟವಾಗಿ, ಉದ್ದವಾಗಿ ಮತ್ತೆ ಹೊರಳು ಬರೋದಕ್ಕೆ ಕಾರಣವಾಗತ್ತೆ. ನೆತ್ತಿಯಲ್ಲಿರೋ ಸಹಜವಾದಂತ ಎಣ್ಣೆಯನ್ನ ಇದು ಕಾಪಾಡುತ್ತೆ. ಬೆಳಗ್ಗೆ ಹರಳೆಣ್ಣೆ ತಲೆಗೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡ್ಕೋಬೇಕು. ಆಮೇಲೆ ಉಗುರು ಬೆಚ್ಚಗಿನ ನೀರಲ್ಲಿ ಸೀಗೆಕಾಯಿ ಹಾಕ್ಕೊಂಡು ತಲೆಸ್ನಾನ ಮಾಡ್ಬೇಕು.

2. ಈರುಳ್ಳಿ ರಸ

ಒಂದು ಮೀಡಿಯಂ ಗಾತ್ರ ಇರೋಂತ ಈರುಳ್ಳಿ ತಗೊಳ್ಳಿ. ಅದ್ರಿಂದ ಜ್ಯೂಸ್ ತೆಗೆದು ನೇರವಾಗಿ ತಲೆಗೆ ಹಚ್ಚಿಕೊಳ್ಳಿ. ಈರುಳ್ಳಿ ಜ್ಯೂಸಲ್ಲಿ ಹೆಚ್ಚಾಗಿ ಸಲ್ಫರ್ ಇರೋದ್ರಿಂದ ನೆತ್ತಿಯಲ್ಲಿ ರಕ್ತಸಂಚಾರವನ್ನ ಇದು ಹೆಚ್ಚಿಸುತ್ತೆ. ತಲೆಕೂದಲಲ್ಲಿರೋ ವೈರಾಣು, ಹೇನುಗಳನ್ನ ಇದು ಸಾಯ್ಸತ್ತೆ. ಈರುಳ್ಳಿ ಜ್ಯೂಸನ್ನ ಹಚ್ಚಿಕೊಂಡ್ ಮೇಲೆ ಕೆಲ ಗಂಟೆಗಳ ಕಾಲ ಹಾಗೇ ಬಿಟ್ಟು ಆಮೇಲೆ ಸ್ನಾನ ಮಾಡ್ಬೇಕು. 

3. ಕೊಬ್ಬರಿ ಹಾಲು

ಕೊಬ್ಬರಿ ತುರಿಯನ್ನು ಚೆನ್ನಾಗಿ ಹಿಂಡಿ ಅದರ ಹಾಲಿಗೆ ಅರ್ಧ ನಿಂಬೆ ರಸ ಮತ್ತೆ 4 ಹನಿ ಲ್ಯಾವೆಂಡರ್ ಆಯಿಲ್ ಬೆರೆಸಿ. ತಲೆಬುಡಕ್ಕೆ ಚೆನ್ನಾಗಿ ಹಚ್ಚಿ 4-5 ಗಂಟೆಗಳ ಕಾಲ ಹಾಗೇ ಬಿಡಿ. ಕೊಬ್ಬರಿ ಹಾಲಲ್ಲಿ ಕಬ್ಬಿಣಾಂಶ, ಪೊಟ್ಯಾಶಿಯಂ, ಸಹಜವಾದಂತ ಕೊಬ್ಬಿನಂಶಳು ಇರೋದ್ರಿಂದ ಕೂದಲು ಉದುರೋದನ್ನ ತಡೆಯುತ್ತೆ.

4. ಲೋಳೆಸರದ ಜೆಲ್

ಕೂದಲು ಉದುರೋದನ್ನ ತಡೆಯೋ ಗುಣ ಲೋಳೆಸರದಲ್ಲಿದೆ. ಇದು ಕೂದಲ ಬೆಳವಣಿಗೆಗೂ ಸಹಕಾರಿ. ಲೋಳೆಸರ ಜೆಲ್ಲಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡ್ಕೊಂಡು ಒಂದೆರಡು ಗಂಟೆ ಹಾಗೇ ಬಿಟ್ಟು ಸ್ನಾನ ಮಾಡಿ. ನೀರು ತುಂಬಾ ಬಿಸಿ ಇರ್ಬಾದ್ರು, ಉಗುರು ಬೆಚ್ಚಗಿದ್ರೆ ಸಾಕು.

5. ಬೆಟ್ಟದ ನೆಲ್ಲಿಕಾಯಿ ತಿರುಳು

ಕೂದಲು ಉದುರೋದಕ್ಕೆ ಮುಖ್ಯವಾದಂತ ಕಾರಣ ಅಂದ್ರೆ ವಿಟಮಿನ್ ಸಿ ಕೊರತೆ. ಬೆಟ್ಟದ ನೆಲ್ಲಿಕಾಯಲ್ಲಿ ವಿಟಮಿನ್ ಸಿ ಅಂಶ ತುಂಬಾನೇ ಇರತ್ತೆ. ಬೆಟ್ಟದ ನೆಲ್ಲಿಕಾಯಿ ಬೀಜ ತೆಗೆದು ತಿರುಳನ್ನ ತಗೊಂಡು ಅದಕ್ಕೆ ನಿಂಬೆರಸ ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಒಂದೆರಡು ಗಂಟೆ ಬಿಟ್ಟು ತಲೆಸ್ನಾನ ಮಾಡಿ. 

6. ಮೆಂತ್ಯೆಸೊಪ್ಪು

ಕೂದಲ ಬೆಳವಣಿಗೆಗೆ ಇದೊಂಥರಾ ದಿವ್ಯೌಷಧಿ ಇದ್ದಂಗೆ. ಇದ್ರಲ್ಲಿ ಪ್ರೋಟೀನು ಮತ್ತೆ ನಿಕೋಟಿನಿಕ್ ಆಸಿಡ್ ಜಾಸ್ತಿ ಇರೋದ್ರಿಂದ ಕೂದಲು ಸೊಂಪಾಗಿ ಬೆಳೆಯೋ ಹಂಗೆ ಮಾಡುತ್ತೆ. ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತರ ಮಾಡ್ಕೊಳ್ಳಿ. ಇದಕ್ಕೆ ಕೊಬ್ಬರಿ ಎಣ್ಣೆ ಹಾಕಿ ತಲೆಗೆ ಹಚ್ಚಿಕೊಂಡು ಅರ್ಧಗಂಟೆ ಬಳಿಕ ಸ್ನಾನ ಮಾಡಿ.

7. ಗ್ರೀನ್ ಟೀ 

ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಜಾಸ್ತಿ ಇರೋದ್ರಿಂದ ಇದು ಕೂದಲ ಬೆಳವಣಿಗೆಗೆ ಮತ್ತೆ ಕೂದಲು ಉದುರೋದನ್ನ ತಡೆಯುತ್ತೆ. ಉಪಯೋಗಿಸಿರೋಂತ ಗ್ರೀನ್ ಟೀ ಅಥವಾ ಟೀ ಬ್ಯಾಗುಗಳಿಂದ ಅದನ್ನ ತೆಗೆದು ತಗೆಲೆ ಹಚ್ಚಿಕೊಂಡು ಅರ್ಧಗಂಟೆ ಬಳಿಕ ಸ್ನಾನ ಮಾಡಿದ್ರೆ ಕೂದಲು ಉದುರೋದು ತಪ್ಪುತ್ತೆ.

ಮೂಲ

8. ಜ್ಯೇಷ್ಠಮಧು ಬೇರು

ಜ್ಯೇಷ್ಠಮದು ಬೇರಲ್ಲಿ ತಲೆತುರಿಕೆಯನ್ನ ಕಡ್ದಿಮೆ ಮಾಡೋಂತ ಗುಣ ಇದೆ. ಇದು ತಲೆಹೊಟ್ಟನ್ನೂ ಕಡಿಮೆ ಮಾಡುತ್ತೆ. ಜ್ಯೇಷ್ಠಮಧು ಬೇರು ಮತ್ತೆ ಅದಕ್ಕೆ ಒಂದು ಕಪ್ ಹಾಲು ಬೆರಸಿ ಪೇಸ್ಟ್ ತರ ಮಾಡ್ಕೊಂಡು ತಲೆಗೆ ಹಚ್ಕೋಬೇಕು. ರಾತ್ರಿಯಲ್ಲಾ ಹಾಗೇ ಬಿಟ್ಟು ಬೆಳಗ್ಗೆ ಮೈಲ್ಡ್ ಆಗಿರೋಂತ ಶಾಂಪೂನಲ್ಲಿ ತಲೆಸ್ನಾನ ಮಾಡ್ಕೊಂಡ್ರೆ ತಲೆಹೊಟ್ಟು ಸಮಸ್ಯೆ ಹೋಗುತ್ತೆ.

9. ಬೇವಿನ ಸೊಪ್ಪು

ಬೇವಲ್ಲಿ ರಕ್ತಸಂಚಾರ ಜಾಸ್ತಿ ಮಾಡುವ ಮತ್ತೆ ಕೂದಲ ಬುಡವನ್ನ ದೃಢ ಮಾಡೋಂತ ಗುಣ ಇದೆ. ತಲೆಹೊಟ್ಟು, ಹೇನು ಬಾಧೆಗೆ ಇದು ರಾಮಬಾಣ ಇದ್ದಂತೆ. ಒಂದು ಅಳತೆ ನೀರಿಗೆ 10-12 ಬೇವಿನ ಎಲೆ ಹಾಕಿ ಅರ್ಧದಷ್ಟು ಪ್ರಮಾಣ ಆಗೋವರ್ಗೂ ಕುದುಸಿ. ತಣ್ಣಗಾದ ಮೇಲೆ ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿ. 

10. ಬೀಟ್-ರೂಟ್ ಸೊಪ್ಪು

ಇದರಲ್ಲಿರೋ ಪ್ರೋಟೀನ್, ಪೊಟ್ಯಾಶಿಯಂ, ವಿಟಮಿನ್ ಬಿ ಮತ್ತೆ ಸಿ ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೇದು. ಬೀಟ್-ರೂಟ್ ಸೊಪ್ಪನ್ನ ತೆಗೆದುಕೊಂಡು ನೀರಲ್ಲಿ ಕುದುಸಿ. ಆ ನೀರು ಅರ್ಧ ಪ್ರಮಾಣಕ್ಕೆ ಬರೋವರೆಗೂ ಕುದುಸಿ. ಆಮೇಲೆ ಆ ಎಲೆಗಳ ಜೊತೆಗೆ ಗೋರಂಟಿ ಬೆರಸಿ ಚೆನ್ನಾಗಿ ರುಬ್ಬಿಕೊಳ್ಳಿ. ನೆತ್ತಿಗೆ ಹಚ್ಚಿಕೊಂಡು 20-13 ನಿಮಿಷದ ನಂತ್ರ ಸ್ನಾನ ಮಾಡಿ.ಹಾಗ್ ನೋಡಿ ನಿಮ್ ಕೂದ್ಲು ಹೆಂಗ್ ಇರುತ್ತೆ ಅಂತ.

11. ಮೊಟ್ಟೆಯ ಬಿಳಿಲೋಳೆ

ಇದ್ರಲ್ಲಿರೋ ವಿಟಮಿನ್, ಪ್ರೋಟೀನ್, ಸಹಜ ಎಣ್ಣೆಗಳು ಕೂದಲಿಗೆ ಒಳ್ಳೆ ಪೋಷಣೆ ಕೊಡ್ತಾವೆ. ಎರಡು ಮೊಟ್ಟೆ ತಗೊಂಡು ಅದ್ರಿಂದ ಬಿಳಿಲೋಳೆಯನ್ನ ಸಪರೇಟ್ ಮಾಡ್ಕೊಳ್ಳಿ. ಅದನ್ನ ಚೆನ್ನಾಗಿ ಕಲೆಸಿ ತಲೆಗೆ ಹಚ್ಚಿಕೊಂಡು 20 ನಿಮಿಷದ ಬಳಿಕ ಸ್ನಾನ ಮಾಡಿದ್ರೆ ಕೂದಲು ಸೊಂಪಾಗಿ ಬೆಳೆಯತ್ತೆ.

12. ನಿಂಬೆರಸ

ಎಣ್ಣೆ ಕೂದಲಿರೋರಿಗೆ ಇದು ಒಳ್ಳೇ ಮನೆಮದ್ದು. ಕೂದಲ ಬುಡವನ್ನ ದೃಢ ಮಾಡೋಂತ ಗುಣ ಇದ್ರಲ್ಲಿದೆ. 2-3 ನಿಂಬೆಹಣ್ಣು ತಗೊಂಡು ರಸ ತೆಗೀರಿ. ಅದನ್ನ ಉಗುರುಬೆಚ್ಚಗಿನ ನೀರಲ್ಲಿ ಬೆರಸಿ ತಲೆಗೆ ಹಚ್ಚಿಕೊಳ್ಳಿ. ಐದು ನಿಮಿಷದ ಬಳಿಕ ಸ್ನಾನ ಮಾಡಿ. 

13. ಬೆಳ್ಳುಳ್ಳಿ

ಕೂದಲು ಚೆನ್ನಾಗಿ ಬೆಳೆಯಕ್ಕೆ ಮತ್ತೆ ಉದುರೋದನ್ನ ತಡೆಯೋಂತ ಶಕ್ತಿ ಇದ್ರಲ್ಲಿದೆ. 7-8  ಬೆಳ್ಳುಳ್ಳಿ ಎಳೆಗಳನ್ನ ಚೆನ್ನಾಗಿ ಜಜ್ಜಿಕೊಂಡು ಆಲೀವ್ ಆಯಿಲ್ ಜೊತೆಗೆ ಕುದಿಸಿ. ಅದನ್ನ ಚೆನ್ನಾಗಿ ತಲೆಗೆ ಹಚ್ಚಿಕೊಳ್ಳಿ. ಅಥವಾ ಬೆಳ್ಳುಳ್ಳಿ ರಸ ತೆಗೆದು ಅಷ್ಟೇ ಪ್ರಮಾಣದ ಜೇನುತುಪ್ಪ ಅಥವಾ ಕೊಬ್ಬರಿ ಹಾಲಿಗೆ ಬೆರಸಿ ಹಚ್ಕೋಬೋದು. ವಾರದಲ್ಲಿ ಎರಡು, ಮೂರು ಸಲ ಈ ರೀತಿ ಮಾಡೋದ್ರಿಂದ ಕೂದಲು ಉದುರೋದು ತಪ್ಪತ್ತೆ.  

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: