ಮನೆ ಕ್ಲೀನ್ ಮಾಡಕ್ಕೆ ಕೆಮಿಕಲ್ಸ್ ಬದ್ಲು ನಿಂಬೇಹಣ್ಣು ಬಳಸಕ್ಕೆ ಬೇಕಾಗಿರೋ ಟ್ರೇನಿಂಗ್ ಕೊಡ್ತೀವಿ ಬನ್ನಿ

ಸುಮ್ನೆ ದುಡ್ಡು ಆರೋಗ್ಯ ಎಲ್ಲ ಹಾಳು ಮಾಡ್ಕೋಬೇಡಿ

ನಿಂಬೆ ಹಣ್ಣಿನ ಹುಳಿ ಅಂದ್ರೆ, ಅದ್ರ ಘಮ ಅಂದ್ರೆ ಯಾರಿಗ್ತಾನೆ ಇಷ್ಟ ಆಗಲ್ಲ ಹೇಳಿ. ನಮ್ಮ ಮನೆಗೆಲಸಕ್ಕೆ ನಾವು ಪ್ರತಿದಿನ ನಿಂಬೆ ಬಳಸ್ಬೋದು. ಹೇಗೆ ಅಂತ ಕೆಳಗಡೆ ಕೊಟ್ಟಿದೀವಿ ಓದಿ... 

ಮನೆ ಒಳಗೆ ಹೊರಗೆ ಘಮ್-ಘಮ ಅಂತ ಮಾಡಕ್ಕೆ...

1. ಸ್ಪ್ರೇ ಮಾಡೋ ಬಾಟ್ಲಿಲಿ ಅರ್ಧ ನೀರ್ ತುಂಬಿಸಿ ಒಂದೆರ್ಡ್ ಹನಿ ನಿಂಬೆ ರಸ ಹಿಂಡಿ ಚೆನಾಗ್ ಅಲ್ಲಾಡ್ಸಿ ಸ್ಪ್ರೇ ಮಾಡಿ, ಮನೆ ಘಮ್ ಅಂತ ಇರತ್ತೆ.

2. ನಿಂಬೆನ ಚಿಕ್ಕ ಚಿಕ್ಕ ಪೀಸ್ ಮಾಡಿ, ಆಮೇಲೆ ನಿಮ್ ಬೀರೂಲಿ, ಬಟ್ಟೆ ಇಡೋ ಜಾಗದಲ್ಲಿ, ಇಡಿ. ಬಟ್ಟೆ ಘಮ್ ಅಂತ ಇರತ್ತೆ.

3. ಒಣಗ್ಸಿರೋ ನಿಂಬೆ ಸಿಪ್ಪೇನಾ ಒಣಗಿರೋ ಹೂ/ಎಲೆ ಒಟ್ಟಿಗೆ ಮನೇಲಿ ಯಾವುದಾದ್ರೂ ಮೂಲೇಲಿ ಇಡಿ. ಇದಕ್ಕೆ ತಿಂಗಳಲ್ಲಿ ಮೂರ್ನಾಲ್ಕು ಸಲ ನಿಂಬೆ ಎಣ್ಣೆ ಸಿಡಿಸಿ. ಸದಾ ಮನೇಲಿ ಒಳ್ಳೆ ಘಮ ಇರತ್ತೆ.

4. ನಿಂಬೆಗೆ ಲವಂಗ ಚುಚ್ಚಿ, ರಿಬ್ಬನ್ ಕಟ್ಟಿ ನೇತಾಕಿ. ಮನೆಗೆ ಅಲಂಕಾರಾನೂ ಆಗತ್ತೆ, ಘಮಾನೂ ಇರತ್ತೆ.

5. ನಿಂಬೆ ಜ್ಯೂಸಿಗೆ ಒಂದ್ ಲೋಟ ನೀರ್ ಸೇರಿಸಿ ಅಡಿಗೆಮನೆ ಸಿಂಕಲ್ಲಿ ಹಾಕಿ. ಸಿಂಕಿನ ಪೈಪಿನಿಂದ ಬರೋ ವಾಸ್ನೆ ನಿಂತೋಗತ್ತೆ. 

6. ಮೀನು, ಈರುಳ್ಳಿ, ಬೆಳ್ಳುಳ್ಳಿ ಮುಟ್ಟಿ ನಿಮ್ಮ್ ಕೈ ಗಬ್ ಅಂತಿದ್ರೆ ನಿಂಬೆ ರಸದಲ್ಲಿ ಕೈ ತೊಳ್ಕೊಳಿ. ಸರಿ ಹೋಗತ್ತೆ 

7. ಟಿಶ್ಯೂ ಪೇಪರ್ಗೆ ನಿಂಬೆ ಎಣ್ಣೆ ಬಿಟ್ಟು ವ್ಯಾಕ್ಯೂಮ್ ಕ್ಲೀನರ್ ಬ್ಯಾಗಿಗೆ ಹಾಕಿ. ಬ್ಯಾಗಿಂದ ವಾಸ್ನೆ ಬರಲ್ಲ 

8. ನಿಂಬೆ ಕತ್ತರಿಸಿ ಫ್ರಿಡ್ಜಲ್ಲಿ ಇಡಿ. ಫ್ರಿಡ್ಜು ಘಮ್ ಅಂತಿರತ್ತೆ 

9. ಕಸದ ಬುಟ್ಟೀಲಿ ನಿಂಬೆ ಸಿಪ್ಪೆ ಹಾಕಿ ಅವಾಗವಾಗ ನೀರ್ ಚುಮುಕುಸ್ತಾ ಇರಿ. ವಾಸ್ನೆ ಬರಲ್ಲ.

10. ನಿಂಬೆ ಎಣ್ಣೆಗೆ ಲ್ಯಾವೆಂಡರ್ ಎಣ್ಣೆ ಸೇರಿಸಿ 125 ಗ್ರಾಂ ಬೇಕಿಂಗ್ ಸೋಡಾಗೆ ಸೇರಿಸಿ ಒಂದ್ ರಾತ್ರಿ ಇಟ್ಟು...ಕಾರ್ಪೆಟ್ಟು, ಮ್ಯಾಟು, ರಗ್ಗಿಗೆ ಹಾಕಿ. ಎಲ್ಲ ಘಮ್ಮಂತ ಇರತ್ತೆ.

ಮೂಲ

ಮನೆ ಕ್ಲೀನ್ ಮಾಡಕ್ಕೆ...

11. ಮನೇಲಿ ಎಲ್ಲೇ ಗ್ರೀಸ್ ಹತ್ತಿದ್ರೂ ನಿಂಬೆ ರಸ ಹಚ್ಚಿ. ಕ್ಲೀನ್ ಆಗತ್ತೆ.

12. ನೀರಿಗೆ ನಿಂಬೆರಸ, ಲ್ಯಾವೆಂಡರ್ ರಸ, ವಿನೆಗರ್ ಸೇರಿಸಿ ನೆಲ ಓರೆಸಿ. ಚೆನ್ನಾಗಿ ಕ್ಲೀನ್ ಆಗತ್ತೆ. ನಕಾರಾತ್ಮಕ ಶಕ್ತಿಗಳೆಲ್ಲಾ ಹೋಗತ್ತೆ.

13. ಮೈಕ್ರೋವೇವ್ ಓವೆನ್ನಿಗೆ ನಿಂಬೆ ಹಚ್ಚಿ ತೊಳೀರಿ. ಒಣಗಕ್ಕೆ ಬಿಡಿ, ಚೆನ್ನಾಗ್ ಕ್ಲೀನಾಗತ್ತೆ ಮತ್ತೆ ವಾಸ್ನೆ ಎಲ್ಲಾ ಹೋಗತ್ತೆ  

14. ನಲ್ಲಿ ಸಿಂಕ್ ಸುತ್ತ ಕಟ್ಕೊಂಡಿರೋ ಉಪ್ಪು ನೀರಿನ ಕಲೆಗಳನ್ನ ತೆಗ್ಯಕ್ಕೆ ಅರ್ಧ ನಿಂಬೆ ತೊಗೊಂಡು ಉಜ್ಜಿ. ಸ್ವಲ್ಪ ನೀರಿಂದ ತೊಳೀರಿ. ಶೈನಿಂಗ್ ಬರತ್ತೆ.

15. ನಿಂಬೆ ಹೋಳಿಂದ ಕಿಟಕಿ ಗಾಜು ಉಜ್ಜಿ. ಮೊದ್ಲು ಒದ್ದೆ ಬಟ್ಟೇಲಿ ಒರ್ಸಿ. ಆಮೇಲೆ ಒಣಗಿರೋ ಬಟ್ಟೇಲಿ ಓರ್ಸಿ. ಚೆನ್ನಾಗಿ ಕ್ಲೀನಾಗತ್ತೆ.

ಮೂಲ

ಏನಾದ್ರೂ ಫಳ್ ಫಳಾ ಅಂತ ಹೊಳೆಸಕ್ಕೆ... 

16. ಅಡುಗೆಮನೆ ಕಟ್ಟೆ, ಟೇಬಲ್ಲು...ಯಾವ ಜಾಗದಲ್ಲಿ ಕೈ ಗುರುತು ಬಿದ್ದಿರತ್ತೋ ಅಂತಾ ಜಾಗವನ್ನ ನಿಂಬೆ ಎಣ್ಣೆ ಹಾಕಿ ಒರೆಸಿ. ಮೇಣ ಬಿದ್ದು ಕಲೆಯಾಗಿದ್ದೂ ಕೂಡ ಹೋಗತ್ತೆ.

17. ತಾಮ್ರದ ಪಾತ್ರೆ, ಚಿನ್ನ ಬೆಳ್ಳಿ ಒಡವೆನೆಲ್ಲಾ ನಿಂಬೆ ರಸದ ಜೊತೆ ಅಡುಗೆ ಸೋಡ (ಬೇಕಿಂಗ್ ಸೋಡ) ಸೇರಿಸಿ ಉಜ್ಜಿ. ಸಕತ್ ಕ್ಲೀನ್ ಆಗತ್ತೆ.

18. ಮರದ ಫರ್ನಿಚರ್ ಪಾಲಿಷ್ ಮಾಡಕ್ಕೆ ನಿಂಬೆ ರಸ ಮತ್ತು ಆಲಿವ್ ಎಣ್ಣೆ ಸೇರಿಸಿ ಮಾಡಿ. ಮರ ಫಳ್- ಫಳ ಅಂತ ಹೊಳ್ಯತ್ತೆ.

19. ಅಲ್ಯುಮಿನಿಯಂ ಪಾತ್ರೆಗಳನ್ನ ನಿಂಬೆ ಹೋಳಿಂದ ಉಜ್ಜಿ. ಬಟ್ಟೇಲಿ ಒರೆಸಿ. ಚೆನ್ನಾಗಿ ಹೊಳ್ಯತ್ತೆ.

ಮೂಲ

ಸೋಂಕು ನಿವಾರಣೆಗೆ... 

20. ಕುಡಿಯೋ ನೀರನ್ನ ಇನ್ನೂ ಕ್ಲೀನ್ ಮಾಡ್ಬೇಕಂದ್ರೆ ಸ್ವಲ್ಪ ನಿಂಬೆ ರಸ ಹಿಂಡಿ. ಬ್ಯಾಕ್ಟೀರಿಯಾ ನಾಶ ಆಗತ್ತೆ.

21. ಅಡಿಗೆಮನೇಲಿ ಅಥವಾ ಬಚ್ಚಲುಮನೇಲಿ ಎಲ್ಲೆಲ್ಲಿ ಕೊಳೆ ಕೂತ್ಕೊಳತ್ತೋ ಅಲ್ಲೆಲ್ಲಾ ನಿಂಬೆ ರಸ ಹಿಂಡಿ. ಬ್ಯಾಕ್ಟೀರಿಯಾ, ವೈರಸ್ ದೂರ ಹೋಗತ್ತೆ.

22. ತರ್ಕಾರಿ ಹೆಚ್ಚೋ ಮಣೇ ಅಥವಾ ಈಳಿಗೆಮಣೇಗೆ ನಿಂಬೆ ತಿಕ್ಕಿ ತೊಳೀರಿ. ಹಳೇ ಪಳೇ ಕೊಳೇ ಎಲ್ಲಾ ಹೋಗತ್ತೆ.

ಮೂಲ

ಕಲೆ ತೆಗ್ಯಕ್ಕೆ... 

23. ಈರುಳ್ಳಿ ಅಥವಾ ಬದನೆಕಾಯಿ ಹೆಚ್ಚಿ ಕೈ ಕಪಾಹಿದ್ರೆ ನಿಂಬೆ ತಿಕ್ಕಿ. ಕೈ ಕ್ಲೀನಾಗತ್ತೆ.

24. ಶರ್ಟ್ಗೆ ಕಂಕಳ ಹತ್ರ ಬೆವರ ಕಲೆ ಹೋಗ್ಸಕ್ಕೆ ನಿಂಬೆ ತೊಗೊಂಡು ಚೆನ್ನಾಗಿ ತಿಕ್ಕಿ. ಕಲೆ ಹೋಗತ್ತೆ.

25. ಬಟ್ಟೆಗೆ ತುಕ್ಕು ಅಂಟಿಕೊಂಡಿದ್ರೆ ಆ ಜಾಗಕ್ಕೆ ಉಪ್ಪಾಕಿ, ಆಮೇಲೆ ನಿಂಬೆರಸ ಬಿಡಿ ಹಾಗೆ ಬಿಸ್ಲಲ್ಲಿ ಒಣಗಕ್ಕಿಡಿ. ಆಮೇಲೆ ತೊಳೀರಿ ಕ್ಲೀನಾಗಿರತ್ತೆ. 

26. ಪ್ಲಾಸ್ಟಿಕ್ ಡಬ್ಬಿಗೆ ಅಂಟು ಮೆತ್ತಿಕೊಂಡಿದ್ರೆ ನಿಂಬೆರಸ, ಬೇಕಿಂಗ್ ಸೋಡಾ ಸೇರಿಸಿ ಆಂಟಿರೋ ಜಾಗಕ್ಕೆ ಮೆತ್ತಿ. ಆಮೇಲೆ ತೋಳುದ್ರೆ ಕ್ಲೀನಾಗಿರತ್ತೆ.

ಮೂಲ

ಹುಳಗಳನ್ನ ಓಡ್ಸಕ್ಕೆ ನಿಂಬೆಹಣ್ಣು ಬಳ್ಸಿ

27. ಅಡಿಗೆಮನೆ ಶೆಲ್ಫಲ್ಲಿ ಸಾಕಷ್ಟು ಇರುವೆ, ಜಿರಳೆ ಸೇರತ್ತೆ. ಅಲ್ಲಲ್ಲಿ ನಿಂಬೆ ಣ್ಣೇನ ಬಟ್ಟೇಗೆ ಹಾಕೊಂಡು ಒರೆಸಿ. ಯಾವ್ ಹುಳಾನು ಬರಲ್ಲ.

28. ಇರುವೆ ಬರ್ಲೇಬಾರ್ದು ಅಂದ್ರೆ ಒಂದು ಕೊಳೆತ ನಿಂಬೆಹಣ್ಣನ್ನ ಹತ್ರ ಇಡಿ. ಕಿಟಕಿ, ಬಾಗಿಲು ಸಂಧಿ ಹತ್ರ ನಿಂಬೆ ರಸ ಹಿಂಡಿ, ಇರುವೆ ಜಿರಳೆಗೆ ಎಂಟೀನೇ ಇರಲ್ಲ.

29. ಒಳ್ಳೊಳ್ಳೆ ಸೀರೆ ಬಟ್ಟೆ ಇಡೊ ಜಾಗದಲ್ಲಿ ಒಂದು ಪ್ಯಾಕೆಟ್ಗೆ ಒಣಗಿರೋ ನಿಂಬೆ ಸಿಪ್ಪೆಗಳನ್ನ ತುಂಬಿಡಿ. ನುಸಿ ಬರಲ್ಲ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: