2016ರಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರೋ ಈ 8 ನಟೀರ್ಗೆ ಒಳ್ಳೇ ಫ್ಯೂಚರ್ ಇದೆ

ಮುಂದಿನ ವರ್ಷ ಇವರದೇ

ಪ್ರತೀ ವರ್ಷದ ಹಾಗೆ ಈ ವರ್ಷ ಕೂಡ ಸ್ಯಾಂಡಲ್ವುಡ್ಗೆ ತುಂಬಾ ಹೊಸ ಹೊಸ ನಟೀರು ಬಂದಿದಾರೆ. ಅವರಲೆಲ್ಲಾ ಜನರ ಮನಸ್ಸಲ್ಲಿ ಒಂದು ಇಂಪ್ರೆಶನ್ ಮೂಡಿಸಿದಾರೆ. ಮೊಟ್ಟ ಮೊದಲ ಫಿಲಂನಲ್ಲೇ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ ಈ ನಟೀರು 2016ರ ಅತಿ ಮುಖ್ಯವಾದ ಹೊಸ ಮುಖಗಳು.

ರಶ್ಮಿಕ ಮಂದಣ್ಣ

ವಿರಾಜಪೇಟೆ ಬ್ಯೂಟಿ "ಕಿರಿಕ್ ಪಾರ್ಟಿ" ಫಿಲಂ ಮೂಲಕ ನಮ್ಮ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾಳೆ ಮಾಜಿ "ಟೈಮ್ಸ್ ಹೊಸ ಮುಖ". ಸೂಪರ್ ಲುಕ್ ಇರೋ ಹುಡುಗಿ. ಆಗ್ಲೇ ದರ್ಶನ್ ಜೊತೆ ಮುಂದಿನ ಫಿಲಂ ಮಾಡಕ್ಕೆ ಬುಕ್ ಆಗಿದಾಳೆ.

ಮೂಲ

ಕ್ರಿಶಿ ಥಾಪಂಡ

ಕೊಡುಗಿನವಳಾದ ಕ್ರಿಶಿ ಈ ವರ್ಷ "ಅಕಿರಾ" ಮೂಲಕ ಸ್ಯಾಂಡಲ್ವುಡ್ ಎಂಟ್ರಿ ಕೊಟ್ಟಿದ್ದು. ಮುಂದೆ "ಕಹಿ" ಚಿತ್ರದಲ್ಲಿ ಮಾಡಿದ ಪಾತ್ರ ಕೂಡ ಸೊಗಸಾಗಿತ್ತು. ಇನ್ನೂ ಹೆಚ್ಚು ಫಿಲಂಗಳಿಗೆ ಸೈನ್ ಮಾಡಿದ್ದಾಳಂತೆ.

ಮೂಲ

ಶ್ರದ್ಧಾ ಶ್ರೀನಾಥ್

ಯೂ - ಟರ್ನ್ ಫಿಲಂ ಮೂಲಕ ಭರ್ಜರಿ ಎಂಟ್ರಿ ಕೊಟ್ಟಳು. ಪವನ್ ಕುಮಾರ್ ಕೈ ಕೆಳಗೆ ಪಳಗಿರೋ ಈಕೆ ಸುಮ್ನೆ ಕಮರ್ಶಿಯಲ್ ಫಿಲಂಗಳಲ್ಲದೆ ಸೀರಿಯಸ್ ಆಗಿ ಪಾತ್ರಗಳಿರೋ ಫಿಲಂ ಮಾಡಕ್ಕೆ ಆಸೆಯಂತೆ. ಈಗಾಗಲೇ ತಮಿಳು, ತೆಲ್ಕುಗು ಫಿಲಂ ಸೈನ್ ಮಾಡಿದಾಳೆ.

ಮೂಲ

ದೀಪ್ತಿ ಸತಿ

ಕೇರಳದಲ್ಲಿ ಕಳೆದ ವರ್ಷ ಗೆದ್ದಿದ್ದ "ಮಿಸ್ ಮೋಸ್ಟ್ ಡಿಸೈರಬಲ್" ಈಕೆ ಸ್ಯಾಂಡಲ್ವುಡ್ಗೆ "ಜಾಗರ್" ಚಿತ್ರದ ಮೂಲಕ ಎಂಟ್ರಿ ಕೊಟ್ಟಳು. ಹೀರೋಗೋಸ್ಕರಾನೇ ಮಾಡಿದ ಆ ಫಿಲಂನಲ್ಲೂ ಈಕೆ ತನ್ನ ಸ್ಥಾನ ಭದ್ರ ಮಾಡ್ಕೊಂಡ್ಲು, ಹಾಗೆ ಚೆನ್ನಾಗಿ ಆಕ್ಟ್ ಮಾಡಿದ್ಲು. ಜನ ಮೆಚ್ಚಿದ್ರು.

ಮೂಲ

ನೇಹಾ ಶೆಟ್ಟಿ

ಮುಂಗಾರು ಮಳೆ 2 ಮೂಲಕ ನಮ್ಮ ಸ್ಯಾಂಡಲ್ವುಡ್ಗೆ ಬಂದ್ಲು. ಅದ್ರಲ್ಲಂತೂ ಭಾಳ ಮಸ್ತ್ ಆಕ್ಟಿಂಗ್ ಇತ್ತು. ನೇಹಾನೂ ಸಕತ್ತಾಗಿ ನಿಭಾಯಿಸಿದ್ಲು.

ಮೂಲ

ಆಶಿಕಾ

ಟೈಮ್ಸ್ ಫ್ರೆಶ್ ಫೇಸ್ ಕಿರೀಟ ಗೆದ್ದ ಆಶಿಕಾ "ಕ್ರೇಜಿ ಬಾಯ್" ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ್ದಿದ್ದು. ಬಬ್ಲಿ ಹುಡುಗಿ ಒಳ್ಳೆ ಆಕ್ಟಿಂಗ್ ಮಾಡಿ ಈಗ ಶಿವರಾಜ್ಕುಮಾರ್ ಮತ್ತೆ ಗಣೇಶ ಅಂತ ದೊಡ್ಡ ಸ್ಟಾರ್ ಜೊತೆ ಫಿಲಂ ಮಾಡಕ್ಕೆ ಹೊರಟಿದಾಳೆ.

ಮೂಲ

ಪೂಜಾ

ತಿಥಿ ಫಿಲಂ ಎಂಥಾ ಗ್ರಾಂಡಾಗಿ ಓಡ್ತು. ಆದ್ರೆ ಮುಗ್ಧ ಹುಡುಗಿ ಪೂಜಾ ಮಾತ್ರ ಸೈಲೆಂಟಾಗೇ ಎಲ್ಲಾರ್ ಮನಸ್ಸು ಗೆದ್ಲು. "ಬೆಸ್ಟ್ ಸಪೋರ್ಟಿಂಗ್ ಆಕ್ಟ್ರಸ್" ಅವಾರ್ಡ್ ಗೆದ್ದ್ಕೊಂಡ್ಲು. ಸ್ಯಾಂಡಲ್ವುಡ್ ಇವಳನ್ನ ಬಿಡಕ್ಕಾಗತ್ತಾ? ಅವಳು ಇನ್ನಷ್ಟು ಫಿಲಂ ಒಪ್ಪ್ಕೊಂಡಿದಾಳಂತೆ.

ಮೂಲ

ಸುಶ್ಮಿತ ಜೋಶಿ

"ರನ್ ಆಂಟನಿ" ಫಿಲಂನಲ್ಲಿ ಓಡಕ್ಕೆ ಶುರು ಮಾಡಿದ್ದು ಸುಷ್ಮಿತ. ಅಂತಾ ಏನೂ ರೋಲ್ ಇಳೆ ಹೋದ್ರೂ ಆ ಫಿಲಂನಲ್ಲಿ "ಜನಕ್ ಜನಕ್" ಹಾಡಿಂದ ಜನರ ಮನಸ್ಸ್ ಒಳಗೆ ಕೂತ್ಬಿಟ್ಲು. ಮತ್ತಷ್ಟು ಫೀಲಂ ಮಾಡಕ್ಕೆ ರೆಡಿ ಆಗಿದಾಳೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: