ಮನುಷ್ಯ ಮಾಡಿರೋ ಈ 13 ಮಹಾನ್ ಕೆಲಸಗಳು ಆಕಾಶದಿಂದ ಹೆಂಗ್ ಕಾಣ್ತವೆ ಅಂತ ಸ್ವಲ್ಪ ನೋಡೀಪ್ಪಾ

ಕ್ಯಾಲಿಫೋರ್ನಿಯಾನಲ್ಲಿ ಏರೋಪ್ಲೇನುಗಳ ಸ್ಮಶಾನ ಒಂದಿದೆ ಅಂದ್ರೆ ನಂಬ್ತೀರಾ?

ಪ್ರಕೃತಿಯ ಒಂದು ಗುರುತೇನಪ್ಪಾ ಅಂದ್ರೆ ಅದರಲ್ಲಿ ಮನುಷ್ಯ ಹುಡುಕುವಂಥ ಕ್ರಮಬದ್ಧತೆ ಇರೋದಿಲ್ಲ. ಮನುಷ್ಯ ಒಂದು ಗೆರೆ ಎಳೆದರೆ ಅದು ನೇರವಾಗಿರುತ್ತೆ. ಒಂದು ವೃತ್ತ ಬರೆದರೆ ಅದು ಪರ್ಫೆಕ್ಟಾಗಿರುತ್ತೆ. ಆದರೆ ಪ್ರಕೃತಿ ಹೀಗಲ್ಲ. ಇಂಥದ್ದರಲ್ಲಿ ಮನುಷ್ಯ ಮಾಡಿರುವಂಥ ಕೆಲವು ಕೆಲಸಗಳು ನಿಜಕ್ಕೂ ಹೇಗೆ ಕಾಣ್ತವೆ ಅಂತ ನೋಡಿ ಆಶ್ಚರ್ಯ ಪಡ್ತೀರಿ. ಅಂಥ 13 ಫೋಟೋಗಳ್ನ ಕೆಳಗೆ ಕೊಟ್ಟಿದೀವಿ ನೋಡಿ.

1. ತೋಟ ಗದ್ದೆಗಳು - ಟೆಕ್ಸಾಸ್, ಅಮೇರಿಕಾ

ನಮ್ಮ ಸೈನಿಕರು ಗಡಿಕಾಯೊವಾಗ ಹಕ್ಕೊತಾರಲ್ಲಾ ಬಟ್ಟೆ? ಅದು ಈ ದೃಶ್ಯ ನೋಡೇ ವಿನ್ಯಾಸ ಮಾಡಿರ್ಬೇಕು ಅನ್ಸುತ್ತಾ? 

ನಾವು ಅಳೆದು ತೂಗಿ ಮಾಡಿದ್ರೂ ಇಷ್ಟು ಚೆಂದದ ದೃಶ್ಯ ಬಿಡಿಸೋದು ಕಷ್ಟ ಅಲ್ವ.....

2. ಜೆಮೊಸೊಲಾರ್ ಥೆರ್ಮೋಸೊಲಾರ್ ಪ್ಲಾಂಟ್ - ಸ್ಪೇನ್

ಅಯ್ಯೋ! ನಮ್ಮನೆ ಫ್ಯಾನ್ ಹಾಗೆ ಕಾಣ್ಸುತ್ತೆ ಅನ್ಕೊಂಡ್ರಾ? ಉಪ್ಪಿಂದ ಸೌರ ಶಕ್ತೀನ ಬಳಸೋ ಹೊಸ ಪ್ರಯತ್ನ ಇಲ್ಲಿ ನಡೀತಿದೆ.

3. ಟ್ಯೂಲಿಪ್ ತೋಟ - ನೆದರ್ಲ್ಯಾಂಡ್ಸ್

ಯಾವುದೋ ಕುಂಚದಲ್ಲಿ ಮೂಡಿಬಂದ ಬಣ್ಣದ ಚಿತ್ರದ ಹಾಗೆ ಕಾಣುತ್ತೆ ಅಂದುಕೊಂಡ್ರಾ? ಇಡೀ ಹೂದೋಟ ಕಣ್ರೀ..

4. ಅಂಟ್ವೆರ್ಪ್ ಬಂದರು - ಬೆಲ್ಜಿಯಂ

ಏನೇ ಆಗ್ಲಿ ಪ್ರಕೃತಿನ ನೋಡೋದೇ ಚಂದ ರೀ, ಎಷ್ಟು ನೋಡಿದ್ರು ಕಡಿಮೆ ಆಗೋದೇ ಇಲ್ಲ. ಇನ್ನೂ ನೋಡ್ಬೇಕು ಅನ್ಸತ್ತೆ.

5. ವಿಲ್ಲಾ - ಅಬು ದಾಬಿ

ನಮ್ಮ ದಸರಾ ಹಬ್ಬದಲ್ಲಿ ಬೋಂಬೆ ಕೂರಿಸೋವಾಗ ಬೆಂಕಿಪೊಟ್ಟಣ ಜೋಡಿಸಿ ನಗರ ಮಾಡಿದ ಹಾಗಿದೆ ಇದು ನೋಡೋಕೆ. 

6. ಡೆಲ್ರೆ ಬೀಚು - ಫ್ಲೋರಿಡಾ

ಅಚ್ಚುಕಟ್ಟಾಗಿ ಜೋಡಿಸಿಟ್ಟ ಮನೆಗಳನ್ನ ನೋಡಿದ್ರೆ ಹೀಗೂ ಇರಬಹುದಾ? ಅಂತ ಆಶ್ಚರ್ಯ ಆಗತ್ತೆ.

7. ಜ್ಯಾಕ್ಸನ್ ವಿಲ್ - ಫ್ಲೋರಿಡಾ

ಏನೇ ಹೇಳಿ ಮನುಷ್ಯ ಮಾಡಿರೋ ಸೌಕರ್ಯ ನಮ್ಮ ಕೆಲಸ ಸುಲಭ ಮಾಡೋದರ ಜೊತೆಗೆ ಕಣ್ಣು ಮನಸ್ಸಿಗೆ ಮುದ ಕೊಡ್ತಿದೆ.

8. ಮನೆಗಳು - ಅರಿಜೋನ

ಇವೆಲ್ಲಾ ಮನೇನಾ? ಆಶ್ಚರ್ಯ ಆಗತ್ತೆ ಅಲ್ವಾ?

9. ಇಪನೆಮಾ ಬೀಚ್ - ಬ್ರೆಜಿಲ್

ನಿಜ್ವಾಗ್ಲೂ ಹೀಗೆಲ್ಲ ಇರೋಕೆ ಸಾಧ್ಯನಾ!! ಇದೊಂದು ಅಪರೂಪದ ಕಲಾಕೃತಿನೇ ಸರಿ.

10. ಬ್ಲ್ಯಾಕ್ ರಾಕ್ ಮರಳುಗಾಡು, ನೆವಡಾ

ವರ್ಷಕ್ಕೆ ಒಂದು ಸಾರಿ ಜನರೆಲ್ಲಾ ಸೇರಿ ಆಚರಿಸೋ ಬರ್ನಿಂಗ್ ಮ್ಯಾನ್ ಹಬ್ಬದ ಸಂಭ್ರಮ ಹೀಗೆ ಕಾಣತ್ತೆ ನೋಡಿ.

11. ವಿಮಾನದ ಸ್ಮಶಾನ - ಕ್ಯಾಲಿಫೋರ್ನಿಯಾ

ನಮ್ಮನೆ ಮಕ್ಳು ಆಟ ಸಾಮಾನು ಜೋಡಿಸಿದ ಹಾಗಿಲ್ವಾ? ಬೇಡದೇರೋ ವಿಮಾನಗಳನ್ನ ಇಲ್ಲಿ ನಿಲ್ಸ್ತಾರಂತೆ.

12. ಮರಳುಗಾಡು - ಸೌದಿ ಅರೇಬಿಯಾ

ಪ್ರಕೃತಿಗೆ ಪ್ರಕೃತಿನೇ ಸಾಟಿ... ಏನಂತೀರಿ?

13. ಒಳಚರಂಡಿ ಲೈನ್ - ಇರಾನ್

ಜೀವಶಾಸ್ತ್ರದ ಯಾವುದೋ ಜೀವಿ ಕಾಣೊ ಹಾಗೆ ಅನ್ಸತ್ತಾ? ಇದು ಒಳಚರಂಡಿ ವ್ಯವಸ್ಥೆ ಕಣ್ರೀ!! 

ನೀವು ಈ ಜಾಗಗಳನ್ನ ಹುಡುಕ್ಕೊಂಡ್ ಹೋದ್ರು ಈ ರೀತಿ ನೋಡಕ್ಕೆ ಸಿಗಲ್ಲ... ಯಾಕೆಂದ್ರೆ ಇದು ಆಕಾಶದಿಂದ ಮಾತ್ರ ಕಾಣ್ಸೋ ದೃಶ್ಯಗಳು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಾನು ಜೀವನದಲ್ಲಿ ಹಿಂದೆ ಬೀಳ್ತಾ ಇದೀನಿ ಅನ್ನೋ ಮುಳ್ಳು ಚುಚ್ತಾ ಇದ್ರೆ ಈ 30 ಮಾತು ನೆನಪಿಸಿಕೊಳ್ಳಿ

ವೇದಾಂತ ಗೀದಾಂತ ಅಲ್ಲ, ಸಿಂಪಲ್ ವಿಷಯಗಳು

ನಮ್ಮ ಪ್ರಕಾರ ನಾವು ಜೀವನದಲ್ಲಿ ಎಷ್ಟೇ ಗೆಲುವು ಸಾಧಿಸಿದ್ದರೂ… ನಮ್ಮ ಪ್ರಕಾರ ನಮಗೆ ಬೇಕಾದ್ದೆಲ್ಲ ಇದ್ದರೂ… ಬೇಕಾದೋರೆಲ್ಲ ಇದ್ದರೂ… ಜೀವನ ಒಂದೊಂದ್ಸಲ ನಮಗೆ "ನೀನು ಹಿಂದೆ ಬಿದ್ದಿದೀಯ" ಅನ್ನೋ ಸಂದೇಶ ಕೊಡುತ್ತೆ. ಈ ಸ್ಪರ್ಧಾತ್ಮಕ ಜಗತ್ತಿನ ವಿಚಿತ್ರ ಇದು. ಇಂಥ ಪ್ರಪಂಚದಲ್ಲಿ ಅನವಶ್ಯಕವಾಗಿ ಕೀಳರಿಮೆ ಮೂಡಬಾರದು ಅನ್ನೋದಾದರೆ ಈ 30 ಮಾತು ನೆನಪಿಸಿಕೊಳ್ಳಿ. ಇವೆಲ್ಲ ಏನು ದೊಡ್ಡ ವೇದಾಂತ ಅಲ್ಲ, ಆದರೂ ನಿಮಗೆ ತುಂಬ ಉಪಯೋಗಕ್ಕೆ ಬರುತ್ತವೆ:

  1. ನೀವು ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿದೀರಿ.
  2. ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿಲ್ಲ ಅನ್ನಿಸಿದರೆ ಇನ್ನೇನ್ ಮಾಡ್ಬೋದು ಅಂತ ಯೋಚನೆ ಮಾಡಿ, ಕೆಲಸದಲ್ಲಿ ತೊಡಗಿಕೊಳ್ಳಿ.
  3. ತುಂಬಾ ಅನುಭವ ಇರೋರು ಅಥವಾ ನಿಮಗಿಂತ ತುಂಬಾ ಹಿಂದೆ ಶುರು ಮಾಡ್ಕೊಂಡೋರ್ನ ನೋಡಿ ನಾನು ಹಿಂದೆ ಇದೀನಿ ಅನ್ಕೋಬೇಡಿ. ಅವರ ಜೊತೆ ಪೈಪೋಟಿಗೆ ಇಳಿಯೋದು ಪೆದ್ದತನ.
  4. ಎಲ್ಲರಿಗೂ ಅವರದೇ ಆದ ವೇಗ ಅಂತ ಇರುತ್ತೆ.
  5. ನಿಮಗೆ ತುಂಬ ಇಷ್ಟವಿದ್ದ ಕೆಲಸ ಸಿಗದೆ ಹೋದರೆ ನೀವು ವೇಸ್ಟು ಅಂತೆನಲ್ಲ. ಜಾತಕ ಹೊಂದಲಿಲ್ಲ ಅಂತ ಅರ್ಥ!
  6. ಈಗಲೂ ನೀವು ತುಂಬಾ ಜನರಿಗಿಂತ ಮುಂದಿದೀರಿ. ನೀವು ಹಿಂದೆ ಆಗಿದ್ದ ವ್ಯಕ್ತೀನೂ ಆ ಪಟ್ಟಿಯಲ್ಲಿ ಇದಾನೆ/ಳೆ.
  7. ನಿಮಗೆ ಯಾವ ತರಹದ ಭವಿಷ್ಯ ಬೇಕಾದರೂ ರೂಪಿಸಿಕೊಳಕ್ಕೆ ಅನುಮತಿ ಇದೆ.
  8. ಜೀವನ ಅಂದ್ರೆ ಹೀಗೇ ಇರಬೇಕು ಅಂತೆನಿಲ್ಲ, ನೀವು ನಡೆಸಿದ್ದೇ ಜೀವನ.
  9. ಮೂವತ್ತನೇ ವಯಸ್ಸಿಗಿಂತ ಮುಂಚೆ ಮದುವೆ ಆಗದೆ ಹೋದರೆ ಮುಗೀತು ಕಥೆ ಅನ್ಕೋಬೇಡಿ.
  10. ಏನಾದರೂ ಆಗಿಬಿಡೋಷ್ಟು ಶ್ರಮ ಪಟ್ಟು ಕೆಲಸ ಮಾಡಿ ಉಪಯೋಗ ಇಲ್ಲ. ಅದರಿಂದ ಸಿಗೋದು ಗೆಲುವಲ್ಲ, ನಿಃಶಕ್ತಿ.
  11. ಮನಸ್ಥಿತಿ ಸರಿಯಾಗಿಲ್ಲದೆ ಇದ್ದರೆ ನಿಮಗೆ ನೀವೇ ಎಷ್ಟು ಹೇಳಿಕೊಂಡರೂ ಸ್ಫೂರ್ತಿ ಬರಲ್ಲ.
  12. ನಿಮ್ಮ ವಯಸ್ಸು ಇಪ್ಪತ್ತು-ಚಿಲ್ಲರೆ ಆದರೆ ನಿಮ್ಮ ಮುಂದೆ ಇನ್ನೂ ಇಡೀ ಜೀವನವೇ ಇದೆ, ಅದರಲ್ಲಿ ಎಂಥ ಅದ್ಭುತಗಳಾಗುತ್ತವೆ ಅಂತ ಈಗಲೇ ಹೇಳಕ್ಕಾಗಲ್ಲ.
  13. ನಿಮಗೆ ಬೇಕಾದ ಸ್ಫೂರ್ತಿ ಸಿಕ್ಕಿಲ್ಲದೆ ಇರಕ್ಕೆ ಕಾರಣ ಸರಿಯಾದ ವ್ಯಕ್ತಿ ಇನ್ನೂ‌ ಸಿಕ್ಕಿಲ್ಲದೆ ಇರೋದು ಅನ್ನಿಸುತ್ತೆ.
  14. ಯಾವಾಗಲೂ ಹೀಗೇ ತುಸುಕ್ ಅಂತ ಕೂತಿರಲ್ಲ  ನೀವು.
  15. ನಿಮ್ಮ ಭಾವನೆಗಳು ಇನ್ನಷ್ಟು ಕೆಲಸ ಮಾಡೋದಕ್ಕೆ ಪ್ರೇರಣೆ ಆಗಬೇಕು, ಕಡಿಮೆ ಕೆಲಸ ಮಾಡಕ್ಕಲ್ಲ.
  16. ಸರಿಯಾದ ಜೀವನ, ತಪ್ಪು ಜೀವನ ಅಂತ ಏನೂ ಇರಲ್ಲ.
  17. ಸಮಯ ನಿಮ್ಮ ಹತೋಟಿಗೆ ಮೀರಿದ್ದು.
  18. ಮುಂದಿನ 24 ಗಂಟೆ ಬಗ್ಗೆ ಯೋಚನೆ ಮಾಡಿ. ಅದರಲ್ಲಿ ಸಾಧಿಸಕ್ಕೆ ಆಗೋದನ್ನೆಲ್ಲ ಸಾಧಿಸಿ.
  19. ಸಾಮಾಜಿಕ ತಾಣಗಳಲ್ಲಿ ಜನ ಬರೀ ಒಳ್ಳೇ ಸುದ್ದಿಗಳು, ಒಳ್ಳೇ ಫೋಟೋಗಳ್ನೇ ಹಂಚಿಕೊಳ್ಳೋದು. ಒಳಗೆ ಏನಿರುತ್ತೋ ಯಾರಿಗ್ ಗೊತ್ತು?
  20. ಇಲ್ಲೀವರೆಗೆ ನೀವು ಏನೇನು ಸಾಧಿಸಿದ್ದೀರಿ ಅಂತ ಮೆಲಕು ಹಾಕಿ.
  21. ಸದ್ಯಕ್ಕೆ ಒಂದು ದಿನಕ್ಕಿಂತ ಹೆಚ್ಚು ಪ್ಲಾನ್ ಮಾಡಬೇಡಿ.
  22. ಇನ್ನೂ ಮಾಡಕ್ಕೆ ತುಂಬಾ ಇದೆ ಅಂತ ಯೋಚನೆ ಮಾಡ್ಕೊಂಡ್ ಕೂತ್ಕೋಬೇಡಿ. ಅದರಿಂದ ಕೆಲಸ ಬೇಗೇನು ಆಗಲ್ಲ.
  23. ಬೇಕಾದಾಗ ಸಲಹೆ, ಸಹಾಯ ಕೇಳೋದ್ರಿಂದ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ, ಇನ್ನಷ್ಟು ಗಟ್ಟಿ ಆಗ್ತೀರಿ.
  24. ನಿಮಗೆ ಸಹಾಯ ಮಾಡ್ದೋರ್ನ ನೆನಪಿಸಿಕೊಳ್ಳಿ. ಆಗ ಗೊತ್ತಾಗುತ್ತೆ, ನೀವು ಒಂಟಿ ಅಲ್ಲ ಅಂತ.
  25. ಕೆಲಸ ಮುಂದಕ್ಕೆ ಹೋಗ್ತಿಲ್ಲ ಅಂದಾಗ ನಿಮ್ಮ ಪ್ರಕಾರ ಅದ್ಭುತವಾಗಿ ಕೆಲಸ ಮಾಡೋರು ಯಾರನ್ನಾದರೂ ನೆನಪಿಸಿಕೊಳ್ಳಿ. ಆಗ ಮುಂದಕ್ಕೆ ಹೋಗುತ್ತೆ.
  26. ಕಾಲೇಜ್ ಮುಗಿಸಿದ ತಕ್ಷಣ ಕೆಲಸ ಸಿಕ್ಕಿಲ್ಲದೆ ಹೋದರೆ ನೀವು ವೇಸ್ಟು ಅಂತಲ್ಲ. ನಿಮಗೆ ಸರಿ ಹೋಗೋ‌ ಕೆಲಸಗಳು ಇನ್ನೂ‌ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಂತ ಅರ್ಥ.
  27. ಚೆನ್ನಾಗಿ ಜೀವನ ಮಾಡೋದು ಅಂದ್ರೆ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡೋದು.
  28. ನಿಮ್ಮ ತಂದೆ-ತಾಯಿ ಹೇಳಿದ್ದನ್ನೇ ನೀವು ಮಾಡಬೇಕು ಅಂತಿಲ್ಲ. ನಿಮ್ಮ ದಾರಿ ನೀವು ಕಂಡ್ಕೊಳಿ.
  29. ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಮನಸ್ಸು ಬದಲಾಯಿಸಿ. ಬೇಡ ಅನ್ನೋನ್ ಯಾವನು?
  30. ಎಲ್ಲಾ ಬೇಗ್-ಬೇಗ ಮಾಡೋದೇ ಪ್ರಗತಿ ಅನ್ನೋದು ಮೂರ್ಖತನ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: