ಮಂಗಳೂರಿನ ಅಶ್ವತ್ಥ್ ಕಂಡ್ ಹಿಡ್ದಿರೋ ಈ ಪ್ಲಾಸ್ಟಿಕ್ ಕವರ್ನ ಯಾರು ಬೇಕಾದರೂ ತಿನ್ನಬಹುದು

ಕರ್ನಾಟಕ ಸರ್ಕಾರ ಇದರ ಬಳಕೆಗೆ ಒಪ್ಪಿಗೆ ಕೊಟ್ಟಿದೆ

ಪ್ಲಾಸ್ಟಿಕ್ ನಿಷೇಧ ಮಾಡೋ ನಿರ್ಧಾರ ಹಲವು ಪರಿಸರ ಪ್ರೇಮಿಗಳಿಗೆ ಸಂತೋಷ ತಂದಿದ್ದೇನೋ ನಿಜ ಆದರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ದೆ ಈ ನಿಷೇದ ಜಾರಿ ಆದಾಗ ತೊಂದರೆಗಳಾದದ್ದಂತೂ ಇದೆ .

ದಿನಸೀ ಸಾಮನು ಅಥ್ವಾ ತರಕಾರಿಗಳನ್ನ ಕೈಲಿ ಹಿಡ್ಕೊಂಡು ಹೊಗೊಕೆ ಕಷ್ಟ! ದಿನಾ ಹೊರಗೆ ಹೋಗೋವಾಗ ಒಂದು ಕೈ ಚೀಲ ತಗೊಂಡು ಹೋಗೊ ಅಭ್ಯಾಸ ಈಗಿನವರಿಗೆ ಇಲ್ಲ ನೋಡಿ.

"ಮಂಗಳೂರಿನಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧ ಆದದ್ದು 2012 ರಲ್ಲಿ. ಆದ್ರೆ ನಿಷೇಧ ಮಾಡೋ ಮುಂಚೆ ಯಾವುದೇ ಪರ್ಯಾಯ ವ್ಯವಸ್ಥೆ ಇರ್ಲಿಲ್ಲ. ಜನಕ್ಕೆ ಸಾಮಾನು ಮನೆಗೆ ತಗೊಂಡ್ಬರೋದು ದೊಡ್ಡ ಸಾಮಸ್ಯೆ ಆಗಿತ್ತು. ಒಂದು ಕೆ. ಜಿ ಸಕ್ಕರೆ ಕೊಂಡಾಗಲೂ 5-10 ರುಪಾಯಿ ಕೊಟ್ಟು ಕವರ್ ಕೊಳ್ಳೋದು ಎಲ್ಲರಿಗೂ ಆಗದ ಮಾತು. ಹಾಗಗಿ ಬದಲಿ ವ್ಯವಸ್ಥೆ ಮಾಡೋಕೆ ಮುಂದಾದೆ" - ಅಂತಾರೆ ಈ 25ರ ಹುಡುಗ.

4 ವರ್ಷ ಸಂಶೊಧನೆ ಮಾಡಿದ್ಮೇಲೆ ಹೊರಬಂದಿದ್ದೇ "ಎನ್ವಿ ಗ್ರೀನ್" ಅನ್ನೋ ಹೆಸರಿನ ಪೂರ್ತಿ ಆರ್ಗ್ಯಾನಿಕ್ ಪ್ಲಾಸ್ಟಿಕ್ಕು.

ಮೂಲ

ಪ್ಲಾಸ್ಟಿಕ್ ನ ಹಾಗೆ ಕಾಣೋ ಇದನ್ನ ಮಾಡಿರೋದು ಗಂಜಿ ಹಾಗೆ ತರಕಾರಿ ಎಣ್ಣೆಯಿಂದ.ಒಂದು ಲೋಟ ನೀರಲ್ಲಿ ಈ ಕವರ್ ನ ನೆನೆಸಿಟ್ರೆ ಒಂದು ದಿನದಲ್ಲೇ ಕರಗುತ್ತಂತೆ. ಅದೇ ಬಿಸಿನೀರಲ್ಲಿ ನೆನೆಸಿಟ್ರೆ 15 ಸೆಕೆಂಡ್ ಗಳಲ್ಲೆ ಕರಗುತ್ತಂತೆ! ಇದು ಭೂಮೀಲಿ ಒಂದಾಗೋಕೆ 180 ದಿನ ಹಿಡಿಯುತ್ತಂತೆ. ಇದನ್ನ ಎಸೆದ್ರೆ ಪರಿಸರಕ್ಕೆ ಹಾನಿನೂ ಇಲ್ಲ, ಪ್ರಾಣಿಗಳು ತಿನ್ನೋಕೆ ಪ್ರಯತ್ನ ಮಾಡಿದ್ರೆ ಅವಕ್ಕೆ ತೊಂದ್ರೆನೂ ಆಗಲ್ಲ.

ಅಶ್ವತ್ಥ್ ಅವ್ರು ಹೇಳೋ ಪ್ರಕಾರ, ಇದನ್ನ ಮಾಡೋ ವಿಧಾನ ಬೇರೆ ಪ್ಲಾಸ್ಟಿಕ್, ಬಟ್ಟೆ ಬ್ಯಾಗ್ ಗಳಿಗಿಂತ ಬೇರೆ. ಇದನ್ನ ಮಾಡೋಕೆ 12 ಪದಾರ್ಥಗಳನ್ನ ಬಳಸ್ತಾರಂತೆ- ಆಲೂಗಡ್ಡೆ, ಮರಗೆಣಸು, ಜೋಳ, ಗಂಜಿ, ತರಕಾರಿ ಎಣ್ಣೆ, ಬಾಳೆ ಹಣ್ಣು, ಹೂವಿನ ಎಣ್ಣೆ ಮುಂತಾದವು.

ಎಲ್ಲಾ ಪದರ್ಥಗಳನ್ನ ಮೊದ್ಲು ನೀರಿನ ಜೊತೆ ರುಬ್ಬಿ ಆಮೇಲೆ 6 ಹಂತಗಳಲ್ಲಿ ಅದನ್ನ ತಯಾರ್ ಮಾಡ್ತಾರೆ!

ಮೂಲ

"ನಾವು ರಾಸಾಯನಿಕ ಪದಾರ್ಥಗಳನ್ನ ಬಳಸೋದೇ ಇಲ್ಲ.ಈ ಕವರ್ ಗಳ ಮೇಲೆ ಬಳಸಿರೋ ಬಣ್ಣ ಕೂಡ ರಸಾಯನಿಕ ಅಲ್ಲ. ಜೊತೇಲಿ ಇದರ ಬೆಲೆ ಬೇರೆ ಪ್ಲಾಸ್ಟಿಕ್ ಗಿಂತ 35% ಹೆಚ್ಚದ್ರೆ ಆದ್ರೆ ಬಟ್ತೆ ಬ್ಯಾಗ್ ಗಿಂತ 500% ಕಡಿಮೆ. ಅಂದ್ರೆ ಸುಮಾರು 13 ಇಂಚು 16 ಇಂಚು ಇರೋ ಕವರ್ 3 ರುಪಾಯಿ ಆದ್ರೆ ಅದೇ ಗಾತ್ರದ ಪ್ಲಾಸ್ಟಿಕ್ 2 ರುಪಾಯಿ ಆಗುತ್ತೆ" ಅಂದ್ರು ಅಶ್ವತ್ಥ್.

ಕರ್ನಾಟಕ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಲಿ ಇದರ ಬಳಕೆಗೆ ಒಪ್ಪಿಗೆ ಕೊಟ್ಟಿದೆ

ಹಲವು ಪರೀಕ್ಷೆಗಳನ್ನ ಮಾಡಿ ಇದ್ರಲ್ಲಿ ಪ್ಲಾಸ್ಟಿಕ್ ಅಂಶ ಇಲ್ಲ ಅಂತಾದ್ಮೇಲೆ ಇದರ ಬಳಕೆಗೆ ಒಪ್ಪಿಗೆ ಕೊಟ್ಟಿದೆ.

ಏನು ಪರೀಕ್ಷೆ ಮಾಡಿದ್ದಾರೆ ಗೊತ್ತಾ?

ಒಂದು ಕಾದ ಕಬ್ಬಿಣನ ಇದರ ಮೇಲಿಟ್ಟಿದ್ರಂತೆ, ಇದು ಬೇರೆ ಪ್ಲಾಸ್ಟಿಕ್ ತರ ಕೆಟ್ಟ ವಾಸನೆ ಬರಲಿಲ್ಲವಂತೆ.

ಇದನ್ನ ತೋರ್ಸಕ್ಕೆ ಸ್ವತಃ ಅಶ್ವತ್ಥ್ ಅವ್ರೆ ಇದನ್ನ ಬಿಸಿನೀರಲ್ಲಿ ನೆನೆಸಿ ಕುಡಿದು ತೋರಿಸಿದಾರೆ!

ಮೂಲ

60 ಜನರ ತಂಡದ ಜೊತೆ ಅಶ್ವತ್ಥ್ ಈಗ ಬೆಂಗಳೂರ್ ನಲ್ಲೆ ಒಂದು ಕಾರ್ಖಾನೆ ಶುರು ಮಾಡಿದ್ದಾರಂತೆ ಅದು ತಿಂಗಳಿಗೆ ಸುಮಾರು 1000 ಮೆಟ್ರಿಕ್ ಟನ್ ಕವರ್ ಹೊರತರುತ್ತಂತೆ.

"ನಮಗೆ ನಮ್ಮ ರೈತರನ್ನ ಇದ್ರಲ್ಲಿ ಸೇರಿಸ್ಕೊಬೇಕು ಅನ್ನೋ ಆಸೆ ಇತ್ತು. ಅವ್ರು ಬೆಳೆಯೋ ತರಕಾರಿಗಳನ್ನ ಇದ್ರಲ್ಲಿ ಬಳಸ್ಕೊತೀವಿ. ಆದ್ರೆ ಅವ್ರಿಗೆ ಬೀಜಗಳನ್ನ ಹಂಚೋ ಯೋಜನೆ ಕೂಡ" ಅಂತಾರೆ.

ಸಧ್ಯಕ್ಕೆ ಈ ಕವರ್ ಕತಾರ್ ಮತ್ತೆ ದುಬೈನಲ್ಲಿ ಮಾತ್ರ ಸಿಗ್ತಿದೆ.

ಅಶ್ವತ್ಥ್ ಹೇಳೋ ಪ್ರಕಾರ ಬೆಂಗಳೂರ್ ಗೆ ತಿಂಗಳಿಗೆ 30000 ಮೆಟ್ರಿಕ್ ಟನ್ ಕವರ್ ಬೇಕಂತೆ. ಹಾಗಾಗಿ ಅವ್ರು ಮತ್ತಷ್ಟು ತಯಾರ್ ಮಾಡೋ ಯೋಜನೆಲಿ ಇದಾರಂತೆ. ಜೊತೇಲಿ ಈ ಡಿಸೆಂಬರ್ ನಿಂದ ಮೆಟ್ರೋ ರಿಲಯನ್ಸ್ ಗಳಲ್ಲಿ ಸಿಗುತ್ತಂತೆ.

ಸರ್ಕಾರಿ ಮಾಹಿತಿಗಳ ಪ್ರಕಾರ ಭಾರತದಲ್ಲಿ ದಿನಕ್ಕೆ 15000 ಟನ್ ಪ್ಲಾಸ್ಟಿಕ್ ಕಸವಾಗಿ ಉತ್ಪತ್ತಿ ಆಗುತ್ತಂತೆ, ಅದ್ರಲ್ಲಿ ಸುಮಾರು 9000 ಟನ್ ಸಂಸ್ಕಾರ ನಡೀತಿದ್ಯಂತೆ ಆದ್ರೆ 6000 ಟನ್ ಶೇಖರಣೆ ಇನ್ನೂ ಆಗ್ತಾ ಇಲ್ಲ.

ಮೂಲ

ಇದು ಎಲರಿಗೂ ಸಿಗೋ ಹಾಗಾದ್ರೆ ಪರಿಸರಕ್ಕೂ ಒಳ್ಳೇದು ನಮಗೂ ಸಹಾಯ ಆಗುತ್ತೆ.

ಅಂದಹಾಗೆ  ನಾವು ಎಲ್ಲೆಲ್ಲಿ ಪ್ಲಾಸ್ಟಿಕ್ ಬಳಸ್ತಿದೀವಿ, ಅದರಿಂದ ಏನೇನ್ ಕಾದಿದೆ ಅಂತ ಸ್ವಲ್ಪ ನೋಡಿ. ಹಾಗೇ ಪ್ಲಾಸ್ಟಿಕ್ ತಿಂದು ಅರಗಿಸಿಕೊಳ್ಳೋ ಹುಳ ಪತ್ತೆಯಾಗಿದೆ. ಇದು ಸಮಸ್ಯೆಯೋ ಪರಿಹಾರವೋ ಅಂತ ನೀವೇ ಹೇಳಬೇಕು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಾನು ಜೀವನದಲ್ಲಿ ಹಿಂದೆ ಬೀಳ್ತಾ ಇದೀನಿ ಅನ್ನೋ ಮುಳ್ಳು ಚುಚ್ತಾ ಇದ್ರೆ ಈ 30 ಮಾತು ನೆನಪಿಸಿಕೊಳ್ಳಿ

ವೇದಾಂತ ಗೀದಾಂತ ಅಲ್ಲ, ಸಿಂಪಲ್ ವಿಷಯಗಳು

ನಮ್ಮ ಪ್ರಕಾರ ನಾವು ಜೀವನದಲ್ಲಿ ಎಷ್ಟೇ ಗೆಲುವು ಸಾಧಿಸಿದ್ದರೂ… ನಮ್ಮ ಪ್ರಕಾರ ನಮಗೆ ಬೇಕಾದ್ದೆಲ್ಲ ಇದ್ದರೂ… ಬೇಕಾದೋರೆಲ್ಲ ಇದ್ದರೂ… ಜೀವನ ಒಂದೊಂದ್ಸಲ ನಮಗೆ "ನೀನು ಹಿಂದೆ ಬಿದ್ದಿದೀಯ" ಅನ್ನೋ ಸಂದೇಶ ಕೊಡುತ್ತೆ. ಈ ಸ್ಪರ್ಧಾತ್ಮಕ ಜಗತ್ತಿನ ವಿಚಿತ್ರ ಇದು. ಇಂಥ ಪ್ರಪಂಚದಲ್ಲಿ ಅನವಶ್ಯಕವಾಗಿ ಕೀಳರಿಮೆ ಮೂಡಬಾರದು ಅನ್ನೋದಾದರೆ ಈ 30 ಮಾತು ನೆನಪಿಸಿಕೊಳ್ಳಿ. ಇವೆಲ್ಲ ಏನು ದೊಡ್ಡ ವೇದಾಂತ ಅಲ್ಲ, ಆದರೂ ನಿಮಗೆ ತುಂಬ ಉಪಯೋಗಕ್ಕೆ ಬರುತ್ತವೆ:

 1. ನೀವು ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿದೀರಿ.
 2. ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿಲ್ಲ ಅನ್ನಿಸಿದರೆ ಇನ್ನೇನ್ ಮಾಡ್ಬೋದು ಅಂತ ಯೋಚನೆ ಮಾಡಿ, ಕೆಲಸದಲ್ಲಿ ತೊಡಗಿಕೊಳ್ಳಿ.
 3. ತುಂಬಾ ಅನುಭವ ಇರೋರು ಅಥವಾ ನಿಮಗಿಂತ ತುಂಬಾ ಹಿಂದೆ ಶುರು ಮಾಡ್ಕೊಂಡೋರ್ನ ನೋಡಿ ನಾನು ಹಿಂದೆ ಇದೀನಿ ಅನ್ಕೋಬೇಡಿ. ಅವರ ಜೊತೆ ಪೈಪೋಟಿಗೆ ಇಳಿಯೋದು ಪೆದ್ದತನ.
 4. ಎಲ್ಲರಿಗೂ ಅವರದೇ ಆದ ವೇಗ ಅಂತ ಇರುತ್ತೆ.
 5. ನಿಮಗೆ ತುಂಬ ಇಷ್ಟವಿದ್ದ ಕೆಲಸ ಸಿಗದೆ ಹೋದರೆ ನೀವು ವೇಸ್ಟು ಅಂತೆನಲ್ಲ. ಜಾತಕ ಹೊಂದಲಿಲ್ಲ ಅಂತ ಅರ್ಥ!
 6. ಈಗಲೂ ನೀವು ತುಂಬಾ ಜನರಿಗಿಂತ ಮುಂದಿದೀರಿ. ನೀವು ಹಿಂದೆ ಆಗಿದ್ದ ವ್ಯಕ್ತೀನೂ ಆ ಪಟ್ಟಿಯಲ್ಲಿ ಇದಾನೆ/ಳೆ.
 7. ನಿಮಗೆ ಯಾವ ತರಹದ ಭವಿಷ್ಯ ಬೇಕಾದರೂ ರೂಪಿಸಿಕೊಳಕ್ಕೆ ಅನುಮತಿ ಇದೆ.
 8. ಜೀವನ ಅಂದ್ರೆ ಹೀಗೇ ಇರಬೇಕು ಅಂತೆನಿಲ್ಲ, ನೀವು ನಡೆಸಿದ್ದೇ ಜೀವನ.
 9. ಮೂವತ್ತನೇ ವಯಸ್ಸಿಗಿಂತ ಮುಂಚೆ ಮದುವೆ ಆಗದೆ ಹೋದರೆ ಮುಗೀತು ಕಥೆ ಅನ್ಕೋಬೇಡಿ.
 10. ಏನಾದರೂ ಆಗಿಬಿಡೋಷ್ಟು ಶ್ರಮ ಪಟ್ಟು ಕೆಲಸ ಮಾಡಿ ಉಪಯೋಗ ಇಲ್ಲ. ಅದರಿಂದ ಸಿಗೋದು ಗೆಲುವಲ್ಲ, ನಿಃಶಕ್ತಿ.
 11. ಮನಸ್ಥಿತಿ ಸರಿಯಾಗಿಲ್ಲದೆ ಇದ್ದರೆ ನಿಮಗೆ ನೀವೇ ಎಷ್ಟು ಹೇಳಿಕೊಂಡರೂ ಸ್ಫೂರ್ತಿ ಬರಲ್ಲ.
 12. ನಿಮ್ಮ ವಯಸ್ಸು ಇಪ್ಪತ್ತು-ಚಿಲ್ಲರೆ ಆದರೆ ನಿಮ್ಮ ಮುಂದೆ ಇನ್ನೂ ಇಡೀ ಜೀವನವೇ ಇದೆ, ಅದರಲ್ಲಿ ಎಂಥ ಅದ್ಭುತಗಳಾಗುತ್ತವೆ ಅಂತ ಈಗಲೇ ಹೇಳಕ್ಕಾಗಲ್ಲ.
 13. ನಿಮಗೆ ಬೇಕಾದ ಸ್ಫೂರ್ತಿ ಸಿಕ್ಕಿಲ್ಲದೆ ಇರಕ್ಕೆ ಕಾರಣ ಸರಿಯಾದ ವ್ಯಕ್ತಿ ಇನ್ನೂ‌ ಸಿಕ್ಕಿಲ್ಲದೆ ಇರೋದು ಅನ್ನಿಸುತ್ತೆ.
 14. ಯಾವಾಗಲೂ ಹೀಗೇ ತುಸುಕ್ ಅಂತ ಕೂತಿರಲ್ಲ  ನೀವು.
 15. ನಿಮ್ಮ ಭಾವನೆಗಳು ಇನ್ನಷ್ಟು ಕೆಲಸ ಮಾಡೋದಕ್ಕೆ ಪ್ರೇರಣೆ ಆಗಬೇಕು, ಕಡಿಮೆ ಕೆಲಸ ಮಾಡಕ್ಕಲ್ಲ.
 16. ಸರಿಯಾದ ಜೀವನ, ತಪ್ಪು ಜೀವನ ಅಂತ ಏನೂ ಇರಲ್ಲ.
 17. ಸಮಯ ನಿಮ್ಮ ಹತೋಟಿಗೆ ಮೀರಿದ್ದು.
 18. ಮುಂದಿನ 24 ಗಂಟೆ ಬಗ್ಗೆ ಯೋಚನೆ ಮಾಡಿ. ಅದರಲ್ಲಿ ಸಾಧಿಸಕ್ಕೆ ಆಗೋದನ್ನೆಲ್ಲ ಸಾಧಿಸಿ.
 19. ಸಾಮಾಜಿಕ ತಾಣಗಳಲ್ಲಿ ಜನ ಬರೀ ಒಳ್ಳೇ ಸುದ್ದಿಗಳು, ಒಳ್ಳೇ ಫೋಟೋಗಳ್ನೇ ಹಂಚಿಕೊಳ್ಳೋದು. ಒಳಗೆ ಏನಿರುತ್ತೋ ಯಾರಿಗ್ ಗೊತ್ತು?
 20. ಇಲ್ಲೀವರೆಗೆ ನೀವು ಏನೇನು ಸಾಧಿಸಿದ್ದೀರಿ ಅಂತ ಮೆಲಕು ಹಾಕಿ.
 21. ಸದ್ಯಕ್ಕೆ ಒಂದು ದಿನಕ್ಕಿಂತ ಹೆಚ್ಚು ಪ್ಲಾನ್ ಮಾಡಬೇಡಿ.
 22. ಇನ್ನೂ ಮಾಡಕ್ಕೆ ತುಂಬಾ ಇದೆ ಅಂತ ಯೋಚನೆ ಮಾಡ್ಕೊಂಡ್ ಕೂತ್ಕೋಬೇಡಿ. ಅದರಿಂದ ಕೆಲಸ ಬೇಗೇನು ಆಗಲ್ಲ.
 23. ಬೇಕಾದಾಗ ಸಲಹೆ, ಸಹಾಯ ಕೇಳೋದ್ರಿಂದ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ, ಇನ್ನಷ್ಟು ಗಟ್ಟಿ ಆಗ್ತೀರಿ.
 24. ನಿಮಗೆ ಸಹಾಯ ಮಾಡ್ದೋರ್ನ ನೆನಪಿಸಿಕೊಳ್ಳಿ. ಆಗ ಗೊತ್ತಾಗುತ್ತೆ, ನೀವು ಒಂಟಿ ಅಲ್ಲ ಅಂತ.
 25. ಕೆಲಸ ಮುಂದಕ್ಕೆ ಹೋಗ್ತಿಲ್ಲ ಅಂದಾಗ ನಿಮ್ಮ ಪ್ರಕಾರ ಅದ್ಭುತವಾಗಿ ಕೆಲಸ ಮಾಡೋರು ಯಾರನ್ನಾದರೂ ನೆನಪಿಸಿಕೊಳ್ಳಿ. ಆಗ ಮುಂದಕ್ಕೆ ಹೋಗುತ್ತೆ.
 26. ಕಾಲೇಜ್ ಮುಗಿಸಿದ ತಕ್ಷಣ ಕೆಲಸ ಸಿಕ್ಕಿಲ್ಲದೆ ಹೋದರೆ ನೀವು ವೇಸ್ಟು ಅಂತಲ್ಲ. ನಿಮಗೆ ಸರಿ ಹೋಗೋ‌ ಕೆಲಸಗಳು ಇನ್ನೂ‌ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಂತ ಅರ್ಥ.
 27. ಚೆನ್ನಾಗಿ ಜೀವನ ಮಾಡೋದು ಅಂದ್ರೆ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡೋದು.
 28. ನಿಮ್ಮ ತಂದೆ-ತಾಯಿ ಹೇಳಿದ್ದನ್ನೇ ನೀವು ಮಾಡಬೇಕು ಅಂತಿಲ್ಲ. ನಿಮ್ಮ ದಾರಿ ನೀವು ಕಂಡ್ಕೊಳಿ.
 29. ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಮನಸ್ಸು ಬದಲಾಯಿಸಿ. ಬೇಡ ಅನ್ನೋನ್ ಯಾವನು?
 30. ಎಲ್ಲಾ ಬೇಗ್-ಬೇಗ ಮಾಡೋದೇ ಪ್ರಗತಿ ಅನ್ನೋದು ಮೂರ್ಖತನ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: