ಜಯಲಲಿತಂಗೂ ಕನ್ನಡಕ್ಕೂ ಇರೋ ಈ ಸಂಬಂಧಕ್ಕೆ ಸಾವಿಲ್ಲ

ಮೈಸೂರಲ್ಲೇ ಉಳ್ಕೊಂಡಿದ್ದಿದ್ರೆ…

ಮೂಲ

ಜಯಲಲಿತಾ ಹುಟ್ಟಿದ್ದು ಮಂಡ್ಯದಲ್ಲಿ. ಮಂಡ್ಯಂ ಅಯ್ಯಂಗಾರರು ಅವರು.

ಕಾರಣಾಂತರದಿಂದ ಚೆನ್ನೈಗೆ ಹೋಗಬೇಕಾಗಿ ಬಂತು, ಇಲ್ಲದಿದ್ದರೆ ಮೈಸೂರು ಸಂಸ್ಥಾನದಲ್ಲೆ ಇರ್ತಾ ಇದ್ರೇನೋ. ಆಗ ತಮಿಳುನಾಡಿನ ಪುರಚ್ಚಿ ತಲೈವಿ ಆಗ್ತಿದ್ರೋ ಇಲ್ವೋ ಗೊತ್ತಿಲ್ಲ. ಮೈಸೂರಲ್ಲೇ ಉಳ್ಕೊಂಡಿದ್ದಿದ್ರೆ ಜಯಲಲಿತಾ ನಮ್ಮ ಸ್ಯಾಂಡಲ್ವುಡ್ಡಲ್ಲಿ ಮಿಂಚ್ತಾ ಇದ್ರು ಅನ್ನೋದ್ರಲ್ಲಿ ಸಂದೇಹ ಇಲ್ಲ. ಸುಮಾರು 1951 ಹೊತ್ತಿಗೆ ಚೆನ್ನೈಗೆ ಹೋದ ಜಯಲಲಿತಾ 1961ರಲ್ಲಿ ಎರಡು ಫಿಲಮ್ಮಲ್ಲಿ ಮಾಡುದ್ರು. ಒಂದು ಇಂಗ್ಲೀಷ್ದು - Epistle ಅಂತ.

ಅದನ್ನ ಲೆಕ್ಕಕ್ಕೆ ತೊಗೊಳ್ದೆ ನಾವು ಧೈರ್ಯವಾಗಿ ಹೇಳಬಹುದು:

1) ಜಯಲಲಿತಾ ಮೊದಲು ಮಾಡಿದ್ದು ಒಂದು ಅಣ್ಣೋರ ಫಿಲಮ್ಮಲ್ಲಿ: ಶ್ರೀಶೈಲ ಮಹಾತ್ಮೆ (1961)

ಅವರಮ್ಮ ಸಂಧ್ಯಾ ಅವರ ಜೊತೆ ಜಯಲಲಿತಾನೂ ಶೂಟಿಂಗಿಗೆ ಹೋಗ್ತಾ ಇದ್ರಂತೆ. ಆಗ ಆರೂರು ಪಟ್ಟಾಭಿ ಒಬ್ಬ ಬಾಲ ಕಲಾವಿದೆಯನ್ನ ಹುಡುಕ್ತಾ ಇದ್ರಂತೆ. ಒಂದ್ ದಿನ ಬೇರೆ ಒಬ್ಬಳು ಹುಡುಗಿ ಬರದೆ ಇದ್ದಿದ್ದಕೆ ಜಯಲಲಿತಂಗೆ ಬ್ರೇಕ್ ಸಿಕ್ಕಿದ್ದು! ಫಿಲಮ್ಮಲ್ಲಿ ಅಣ್ಣೋರು ಮಾಡಿದಾರೆ. ಆ ಫಿಲಮ್ಮಿಂದ ಒಂದ್ ಹಾಡು ನೋಡಿ.

2) ಆಮೇಲೆ 1964ರಲ್ಲಿ ಕಲ್ಯಾಣ್ ಕುಮಾರ್ ಜೊತೆ "ಮನೆ ಅಳಿಯ" ಅನ್ನೋ ಫಿಲಮ್ಮಲ್ಲಿ ಮಾಡುದ್ರು

ಅದರಲ್ಲಿ "ಪ್ರೀತಿಯ ಹೂಗಳ ಮುಡಿದವಳೇ" ಅನ್ನೋ ಈ ಹಾಡಲ್ಲಿ ನಿಮಗೆ ಜಯಲಲಿತಾ ಎಷ್ಟು ಚೆನ್ನಾಗಿ ಕಾಣ್ತಾರೆ ನೋಡಿ. ಈ ಫಿಲಮ್ಮಲ್ಲಿ ಬಾಲಕೃಷ್ಣ, ನರಸಿಂಹರಾಜು, ಕೆ.ಎಸ್.ಅಶ್ವತ್ಥ್ ಎಲ್ಲಾ ಮಾಡಿದಾರೆ. ಅದು ಇಲ್ಲರಿಕಂ ಅನ್ನೋ ತೆಲುಗು ಫಿಲಂ ರೀಮೇಕು.

3) ಅದೇ ವರ್ಷ "ಚಿನ್ನದ ಗೊಂಬೆ" ಅನ್ನೋ ಇನ್ನೊಂದು ಜಯಲಲಿತಾ ಫಿಲಂ ಬಂತು. ಬಿ.ಆರ್.ಪಂತುಲು ಅವರ ಈ ಫಿಲಮ್ಮು ತಮಿಳು, ತೆಲುಗು, ಹಿಂದೀಲೆಲ್ಲ ರೀಮೇಕಾಯಿತು.

ಇದರಲ್ಲಿ ಜಯಲಲಿತನ ಅಮ್ಮ ಸಂಧ್ಯಾ, ಎಂ.ವಿ.ರಾಜಣ್ಣ, ಕಲ್ಲ್ಪನಾ, ಎಲ್ಲಾ ಇದಾರೆ. ಅದರಿಂದ ಒಂದು ಹಾಡು ಕೇಳಿ. ಜಯಲಲಿತಾ - ಕಲ್ಯಾಣ್ ಕುಮಾರ್:

4) "ನಾನೇ ವೀಣೆ ನೀನೇ ತಂತಿ" ಅನ್ನೋ ಹಾಡು ಕೇಳಿದೀರಿ ತಾನೇ? ಅದರಲ್ಲಿ ಜಯಲಲಿತಾನೇ ಮಾಡಿರೋದು! ಫಿಲಂ ಹೆಸರು ಮಾವನ ಮಗಳು (1965)

ಇದರಲ್ಲೂ ಬಾಲಕೃಷ್ಣ, ನರಸಿಂಹರಾಜು, ಕೆ.ಎಸ್.ಅಶ್ವತ್ಥ್ ಎಲ್ಲಾ ಮಾಡಿದಾರೆ. ಈ ಹಾಡಂತೂ ಕನ್ನಡಿಗರು ಎಂದಿಗೂ ಮರೆಯೋಹಾಗಿಲ್ಲ…

ಈ ಹಾಡು ಬರೆದಿದ್ದು ಕುವೆಂಪು.

ಮೂಲ

ಹಾಡಿನ ಪೂರ್ಣ ಪಾಠ ಹೀಗಿದೆ:

ನಾನೇ ವೀಣೆ ನೀನೇ ತಂತಿ 
ಅವನೇ ವೈಣಿಕ ||ಪ||

ಮಿಡಿದನೆನಲು ರಸದ ಹೊನಲು 
ಬಿಂದು ಬಿಂದು ಸೇರಿಸಿಂತು 
ನಾದ ರೂಪ ತಾ ||೧||

ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯ ವೀಣಾ 
ಕಲ್ಲಿಜೇನ ಸೊಗದಸ್ನಾನ ಅಮೃತಪಾನ ||೨||

5) ಅದಾದಮೇಲೆ 1965ರಲ್ಲಿ "ನನ್ನ ಕರ್ತವ್ಯ" ಅನ್ನೋ ಫಿಲಮ್ಮಲ್ಲಿ ಮಾಡುದ್ರು ಜಯಲಲಿತಾ

ಮತ್ತೆ ಕಲ್ಯಾಣ್ ಕುಮಾರ್ ಜೊತೆ. "ನನ್ನಲ್ಲಿ ನೀನಾಗಿ…. ನಿನ್ನಲ್ಲಿ ನಾನಾಗಿ" ಅನ್ನೋ ಈ‌ ಹಾಡು ಎಷ್ಟು ಚೆನ್ನಾಗಿದೆ ನೋಡಿ:

6) ಆಮೇಲೆ ಕಟ್ಟಕಡೇದಾಗಿ "ಬದುಕುವ ದಾರಿ" ಅನ್ನೋ ಫಿಲಮ್ಮಲ್ಲಿ ಮಾಡಿದರು - ಮತ್ತೆ ಕಲ್ಯಾಣ್ ಕುಮಾರ್ ಜೊತೆ. ಇದು 1966ರಲ್ಲಿ ರಿಲೀಸಾಗಿದ್ದು.

ಅದರಲ್ಲಿ ಇಲ್ಲೂ ಇರುವೆ, ಅಲ್ಲೂ ಇರುವೆ ಅನ್ನೋ ಈ ಹಾಡು ಕೇಳಿ, ತುಂಬ ಚೆನ್ನಾಗಿದೆ:

ಹೋಗಿ ಬಾ ತಾಯಿ! ನಿನ್ನಂಥ ಮಂಡ್ಯದ ಹೆಣ್ಣಿನ ಬಗ್ಗೆ, ಅಪ್ಪಟ ಚಿನ್ನದ ಗೊಂಬೆಯ ಬಗ್ಗೆ ಯೋಚನೆ ಮಾಡ್ತಾ ಇದ್ದರೆ ನಮಗೆ ಕಣ್ಣಲ್ಲಿ ನೀರು ಬರುತ್ತೆ. ರಾಜಕೀಯ ನಿನ್ನಿಂದ ಕನ್ನಡಿಗರ ವಿರುದ್ಧವಾಗೂ ಮಾತಾಡಿಸಿತು. ಆದರೆ ನಾವು ಕನ್ನಡಿಗರು ಅದನ್ನ ನೆನಪಿಟ್ಟುಕೊಳ್ಳೋರಲ್ಲ. ಅದು ನಿನ್ನ ಬದುಕುವ ದಾರಿ. ಮೈಸೂರಿಂದ ಹೋಗಿ ತಮಿಳುನಾಡಲ್ಲಿ ನೆಲೆಸಿದ ಮೇಲೆ ತಮಿಳಿಗೆ, ತಮಿಳರಿಗೆ ನೆರವಾಗುವುದುನಿನ್ನ ಕರ್ತವ್ಯ. ಆದರೆ ನಮ್ಮ ಮಧ್ಯದಲ್ಲಿ ಏನೇ ಜಗಳ ತೋಟಿಗಳಿದ್ದರೂ ತಮಿಳರು ಕನ್ನಡಿಗರು ವೀಣೆ-ತಂತಿ ಇದ್ದಂಗೆ. ಈಗ ವೈಣಿಕನ ಮನೆಗೆ ಹೋಗಿದ್ದೀಯ ತಾಯಿ! ಇದೆಲ್ಲ ಶ್ರೀಶೈಲ ಮಹಾತ್ಮೆ! ಅದನ್ನ ಮೀರುವವರು ಯಾರು?

ಹೋಗಿ ಬಾ ಅಮ್ಮ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: