ನಿಮ್ಮ ಫೋನು ಈ ಪಟ್ಟಿಗೆ ಸೇರಿದ್ರೆ 30-6-2017 ಆದಮೇಲೆ ಅದರಲ್ಲಿ ವಾಟ್ಸಪ್ ಬರಲ್ಲ

ಬೇರೆ ಫೋನ್ ತೊಗೋಬೇಕಾ ನೋಡಿ

ಈವತ್ತು ವಾಟ್ಸಾಪ್ ಇಲ್ಲಾ ಅಂದ್ರೆ ಆಗಲ್ಲ ಅನ್ನೋಂತ ಪರಿಸ್ಥಿತಿ ಇದೆ. ಪ್ರಪಂಚದಲ್ಲಿ ಸರಿಸುಮಾರು ನೂರು ಕೋಟಿ ಜನ ವಾಟ್ಸಾಪ್ ಬಳಸ್ತಿದ್ದಾರೆ. ಈ ಆಪ್‌ನ ವಿಶೇಷ ಅಂದ್ರೆ ಎಲ್ಲಾ ಅಪರೇಟಿಂಗ್ ಸಿಸ್ಟಂಗಳಲ್ಲೂ ಕೆಲಸ ಮಾಡೋದು. ಅದು ಆಂಡ್ರಾಯ್ಡ್, ಐಫೋನ್, ಬ್ಲ್ಯಾಕ್ ಬೆರ್ರಿ, ವಿಂಡೋಸ್‌ನಿಂದ ಸಿಂಬಿಯಾನ್ ಓಎಸ್‌ತನಕ ಕೆಲಸ ಮಾಡುತ್ತೆ. ಕಳೆದ ತಿಂಗಳು ವಿಡಿಯೋ ಕಾಲ್ ಮತ್ತೆ ಜಿಫ್ ಸಪೋರ್ಟ್ ಮಾಡೋ ವರ್ಷನ್ ಬಿಡ್ತು. ಮುಂದೆ ವಿಡಿಯೋ ಸ್ಟ್ರೀಮಿಂಗ್ ಆಯ್ಕೆ ಪರಿಚಯಿಸ್ತಾ ಇದೆ.

ಕೆಲವೊಂದು ಹಳೆ ಫೋನ್‌ಗಳಲ್ಲಿ ಇನ್ಮೇಲೆ ವಾಟ್ಸಾಪ್ ಕೆಲಸ ಮಾಡಲ್ಲ. ಈ ವರ್ಷದ ಕೊನೆಗೆ ಹಳೆ ಆಪರೇಟಿಂಗ್ ಸಿಸ್ಟಂ ಇರೋಂತ ಸ್ಮಾರ್ಟ್‍ಫೋನ್‌ಗಳಿಗೆ ಸೇವೆ ನಿಲ್ಲಿಸ್ತಾರಂತೆ. ಆಂಡ್ರಾಯ್ಡ್, ಐಓಎಸ್, ಬ್ಲ್ಯಾಕ್‍ಬೆರ್ರಿ ಮತ್ತೆ ಸಿಂಬಿಯಾನ್‌ನ ಹಳೇ ಓಎಸ್ ಇರೋಂತ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ.  

2009ರಲ್ಲಿ ಟಾಟ್ಸಾಪ್ ರಿಲೀಸ್ ಆದಾಗ ನೋಕಿಯಾ ಮತ್ತೆ ಬ್ಲ್ಯಾಕ್ ಬೆರ್ರಿ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ.70ರಷ್ಟು ಬಳಕೆ ಆಗ್ತಿತ್ತು. ಆದರೆ ಈಗ ಶೇ.99.5ರಷ್ಟು ಆಂಡ್ರಾಯ್ಡ್ ಮತ್ತೆ ಐಓಎಸ್ ಇರೋ ಸೆಟ್‌ಗಳಲ್ಲಿ ವಾಟ್ಸಾಪ್ ಇದೆ. ವಾಟ್ಸಾಪ್ ರಿಲೀಸ್ ಆಗಿ ಏಳು ವರ್ಷ ಆಗಿದೆ. ಇದೀಗ ಅಪ್‌ಡೇಟ್ ಆಗುತ್ತಿದ್ದು ಹಳೇ ಆಪರೇಟಿಂಗ್ ಸಿಸ್ಟಂ ಇರೋಂತ ಫೋನ್‍ಗಳಿಗೆ ಸೇವೆ ನಿಲ್ಲಿಸ್ತಿದೆ. ಹೇಳಿದೆ. ಯಾವ್ಯಾವ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ ಅಂತ ಒಂದ್ಸಲ ಚೆಕ್ ಮಾಡ್ಕೊಳ್ಳಿ.  

ಬ್ಲ್ಯಾಕ್‍ಬೆರ್ರಿ ಓಸ್ ಮತ್ತೆ ಬ್ಲ್ಯಾಕ್‌ಬೆರ್ರಿ ಫೋನ್: ಈಗ ಬಳಸ್ತಾ ಇರೋಂತ ಬಹಳಷ್ಟು ಬ್ಲ್ಯಾಕ್‌ಬೆರ್ರಿ ಫೋನ್‌ಗಳಲ್ಲಿ ಇನ್ಮೇಲೆ ವಾಟ್ಸಾಪ್ ಕೆಲಸ ಮಾಡಲ್ಲ. ಬ್ಲ್ಯಾಕ್‌ಬೆರ್ರಿ ಝಡ್10, ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ ಮತ್ತೆ ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್. ಜೂನ್ 30, 2017ಕ್ಕೆ ಈ ಸೆಟ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ.

1) ನೋಕಿಯಾ ಮತ್ತೆ ಸಿಂಬಿಯಾನ್ S60

ನೋಕಿಯಾ ಹಳೆ ಫೋನ್‍ಗಳು, ಹೈ ಎಂಡ್ ಫೋನ್ 41 ಮೆಗಾಫಿಕ್ಸೆಲ್‌ನ ನೋಕಿಯಾ ಪ್ಯೂರ್‌ವ್ಯೂವ್ 808 ಫೋನಲ್ಲೂ ಕೆಲಸ ಮಾಡಲ್ಲ.

ಮೂಲ

2) ಆಂಡ್ರಾಯ್ಡ್ 2.1 ಮತ್ತೆ ಆಂಡ್ರಾಯ್ಡ್ 2.2

ಆಂಡ್ರಾಯ್ಡ್ ಹಳೆ ಆವೃತ್ತಿಗಳಿವು. ಇದಕ್ಕೆ ಫ್ರೊಯೋ ಅಂತ ಹೆಸರಿಟ್ಟಿದ್ರು. ಈಗ ಯಾರೂ ಈ ಓಎಸ್ ಇರೋಂತ ಸೆಟ್‍ಗಳನ್ನ ಬಳಸ್ತಿಲ್ಲ. ಐದು ವರ್ಷ ಅಥವಾ ಅದಕ್ಕಿಂತ್ಲೂ ಹಳೇದಾದ ಸೆಟ್‌ಗಳಲ್ಲಿ ಈ ಓಎಸ್ ಇದ್ರೆ ಅವು ಕೆಲಸ ಮಾಡಲ್ಲ.

ಮೂಲ

3) ವಿಂಡೋಸ್ ಫೋನ್ 7

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಕ್ಕೆ ಹೊರಟ ವಿಂಡೋಸ್ ಫೋನ್ 7 ನಿರೀಕ್ಷೆಗಳು ತಲೆಕೆಳಗಾದವು. ಜನಕ್ಕೆ ಅದು ಇಷ್ಟ ಆಗ್ಲಿಲ್ಲ. ಈಗ್ಲೂ ಲುಮಿಯಾ 510, 710 ಮತ್ತೆ 810 ಫೋನ್‌ಗಳನ್ನ ಬಳಸ್ತಿದ್ದಾರೆ. ಅವುಗಳಲ್ಲಿ ಇನ್ಮೇಲೆ ವಾಟ್ಸಾಪ್ ಕೆಲಸ ಮಾಡಲ್ಲ. 

ಮೂಲ

4) ಐಫೋನ್ 3GS/iOS 6

2012ರಲ್ಲಿ iOS 6 ಬಿಡುಗಡೆಯಾಗಿತ್ತು. ಐಫೋನ್ 4Sನ್ನ ಈಗ್ಲೂ ಕೆಲವರು ಬಳಸ್ತಿದ್ದಾರೆ. ಆ ಸೆಟ್ಟಲ್ಲಿ ಇನ್ಮೇಲೆ ವಾಟ್ಸಾಪ್ ಕೆಲಸ ಮಾಡಲ್ಲ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: