ನಿಮಗೆ ಈ 8 ಮ್ಯಾಜಿಕ್ ತಂತ್ರಗಳು ಗೊತ್ತಿದ್ರೆ ಸೂಪರ್ಮಾರ್ಕೆಟ್ಟಲ್ಲಿ ನಿಮ್ಮ ಕ್ಯೂ ಬೇಗ ಮುಂದಕ್ಕೆ ಹೋಗುತ್ತೆ

ಸುಮ್ಮನೆ ಅಲ್ಲಿ ಯಾಕ್ರೀ ನಿಂತುಕೋಬೇಕು?

ಗಡಿಬಿಡಿಲಿ ಮನೆಗೆ ಒಂದಿಷ್ಟು ಸಾಮಾನು ತಗೊಂಡು ಹೋಗ್ಬೇಕು ಅಂತ ಸೂಪರ್ಮಾರ್ಕೆಟ್ಗೆ ಹೋಗ್ತೀವಿ, ಆದರೆ ಅಲ್ಲಿ ತೊಗೊಳೋದೆಲ್ಲ ತೊಗೊಂಡ್ಮೆಲೆ ಕ್ಯೂ ಇರುತ್ತಲ್ಲ, ಅದೊಳ್ಳೆ ತಲೆನೋವು ಮಾರ್ರೆ. ನಾವು ಸರಿಯಾಗಿ ಕ್ಯೂ ಆಯ್ಕೆ ಮಾಡ್ಕೊಳ್ಲಿಲ್ಲ ಅಂದ್ರೆ ಸಕ್ಕತ್ ಸಮಯ ಹಾಳಾಗುತ್ತೆ. ಆದರೆ ಬೇಜಾರ್ ಮಾಡ್ಕೋಬೇಡಿ, ಅಂತೆಕಂತೆ ನಿಮ್ಮ ಸಹಾಯಕ್ಕೆ ಇದೆ. ಇಲ್ಲಿ ನೋಡಿ, ನಿಮಗೆ ಈ ತಂತ್ರಗಳು ಗೊತ್ತಿದ್ದರೆ ಇನ್ಮೇಲೆ ನೀವು ಎಂದಿಗೂ ನಿಧಾನವಾಗಿ ಮುಂದಕ್ಕೆ ಹೋಗೋ ಕ್ಯೂ ಆಯ್ಕೆ ಮಾಡ್ಕೊಳಲ್ಲ… ನೋಡೋಣ್ವಾ ಯಾವ ತಂತ್ರಗಳು ಅಂತ?

1. ಜಾಸ್ತಿ ಸಾಮಾನು ಕೊಂಡ್ಕೊಂಡಿರೋರ ಕ್ಯೂನಲ್ಲಿ ನಿಲ್ಲಿ

ಇದೇನು ಉಲ್ಟಾ ಹೇಳ್ತಿದೀವಿ ಅಂದುಕೊಂಡ್ರಾ? ಇಲ್ಲಾ ರೀ..... ಸಂಶೋಧನೆಗಳು ಹೇಳೋ ಪ್ರಕಾರ ಜನ ಹೆಚ್ಚು ಸಾಮಾನು ಕೊಂಡೋರ ಹಿಂದೆ ನಿಲ್ಲಲ್ಲ. ಕಡಿಮೆ ಸಾಮಾನಿರೋರ ಲೈನಲ್ಲಿ ಹೆಚ್ಚು ಜನ ಇರ್ತಾರೆ! ಒಬ್ಬ ವ್ಯಕ್ತಿ ಅವರನ್ನೆಲ್ಲಾ ಮತಾಡಿಸಿ, ಸಮಾನು ಲೆಕ್ಕ ಹಾಕಿ, ದುಡ್ಡು ಕಾಸು ಎಲ್ಲ ವ್ಯವಹಾರ ಮಾಡೊಕೆ ಸಕ್ಕತ್ ಸಮಯ ಹಿಡಿಯುತ್ತೆ! ಹಾಗಾಗಿ ಹೆಚ್ಚು ಸಾಮಾನಿದ್ದು ಕಡಿಮೆ ಜನ ಇರೋ ಕ್ಯೂನಲ್ಲಿ ನಿಲ್ಲಿ ಕೆಲ್ಸಾ ಬೇಗ ಆಗುತ್ತೆ.

ಮೂಲ

2. ಎಡಗೈ ಬಳಸೋ ಕ್ಯಾಶಿಯರ್ ಸಿಕ್ಕರೆ ಬಿಡಬೇಡಿ, ಅಲ್ಲೇ ನಿಂತುಕೊಳ್ಳಿ

ಪ್ರಪಂಚದಲ್ಲಿ ಬಲಗೈ ಬಳಸೋರೇ ಹೆಚ್ಚು ಹಾಗಾಗಿ ಅವರು ಬಲಗೈ ಬಳಸೋರ ಹತ್ತಿರ ಹೋಗೊದು ಹೆಚ್ಚು. ನೀವು ಎಡಗೈ ಬಳಸೋ ಕ್ಯಾಶಿಯರ್ ಹತ್ರ ಹೋದ್ರೆ ಕೆಲ್ಸ ಸಲೀಸು - ಯಾಕಂದ್ರೆ ಜಾಸ್ತಿ ಜನ ಇರಲ್ಲ ಅಂಥ ಕ್ಯೂನಲ್ಲಿ!

ಮೂಲ

3. ಕ್ಯಾಶಿಯರ್ ಹೆಂಗಸಾದರೆ ವಾಸಿ

ಹೆಣ್ಣು ಮಕ್ಕಳು ಬೇಗ ಕ್ಯಾಶಿಯರ್ ಕೆಲಸ ಮಾಡ್ತಾರೆ ಅಂತ ಸಂಶೋಧನೆಗಳು ಹೇಳುತ್ವೆ. ಆದ್ರೆ ಜಾಸ್ತಿ ಮಾತಾಡೋ ಹೆಣ್ಣುಮಕ್ಕಳಾದ್ರೆ ಹುಷಾರು! ಸಮಯ ಇನ್ನೂ ಹೆಚ್ಚಾಗಬಹುದು.

ಮೂಲ

4. ನಿಮ್ಮ ಮುಂದೆ ಕ್ಯೂ ನಿಂತಿರೋ ವ್ಯಕ್ತೀನ ಅರ್ಥ ಮಾಡ್ಕೊಳ್ಳಿ

ಇದು ಹೇಗೆ ಅಂತ ಯೋಚ್ನೆ ಮಾಡ್ತಿದ್ರೆ, ನಿಮ್ಮ ಮುಂದೆ ನಿಂತಿರೋರು ತುಂಬಾ ವಯಸ್ಸಾದೋರಾದ್ರೆ ಅವರಿಂದ ನಿಮಗೂ ತಡ ಆಗುತ್ತೆ ಯಾಕೆಂದ್ರೆ ಅವರು ಕೆಲ್ಸಗಳನ್ನ ಅಷ್ಟ್ ಬೇಗ ಮಾಡಲ್ಲ ನೋಡಿ.

ಮೂಲ

5. ಒಂದೇ ಕ್ಯೂ ಹಲವಾರು ಕ್ಯಾಶಿಯರ್ ಗಳ ಕಡೆಗೆ ಹೊಗ್ತಿದ್ರೆ ಅಲ್ಲಿ ನಿಲ್ಲಿ

ಒಂದೇ ಕ್ಯೂ ಹಲವಾರು ಕ್ಯಾಶಿಯರ್ ಗಳ ಕಡೆಗೆ ಹೋಗ್ತಿದ್ರೆ ಆ ಕ್ಯೂ ಬೇಗ ಹೊಗುತ್ತೆ ಜೊತೆಗೆ ಪಕ್ಕದ ಕ್ಯೂ ಮುಂದೆ ಹೋಗ್ತಿದೆ ಅನ್ನೋ ಯೋಚ್ನೆ ನಿಮ್ಮನ್ನ ಕಾಡಲ್ಲ.

ಮೂಲ

6. ಪೂರ್ತಿ ಕಾಣೋ ಕ್ಯೂ ಇದ್ದರೆ ವಾಸಿ

ನಿಮ್ಮ ಕ್ಯೂ ನಲ್ಲಿ ಮಧ್ಯೆ ಗೋಡೆ ಅಥವಾ ಕಂಬ ಅಥವಾ ತಿರುವಿದ್ರೆ  ಹೆಚ್ಚು ಹೊತ್ತು ನೀವು ಕ್ಯೂನಲ್ಲಿ ಇರಬೇಕಾಗಿ ಬರಬಹುದು.

ಮೂಲ

7. ನೀವು ಕ್ಯಾಶಿಯರ್ ಮುಂದೆ ಬಂದಾಗ ಬೇಗ ಕೆಲಸ ಆಗ್ಬೇಕಾದ್ರೆ ಕೆಲವು ತಯಾರಿಗಳ್ನ ಮಾಡ್ಕೊಳಿ

* ಬಿಲ್ ಮಾಡೋಕೆ ಸಹಾಯ ಆಗೋ ಹಾಗೆ ನಿಮ್ಮ ವಸ್ತುಗಳ ಟ್ಯಾಗ್ ಹೊರಗೆ ಕಾಣೊಹಾಗಿರ್ಲಿ.

* ಬಟ್ಟೆಗಳನ್ನ ತಗೊಂಡಿದ್ರೆ ಹ್ಯಾಂಗರ್ ತೆಗೆದಿಟ್ಟರೆ ಕೆಲಸ ಸಲೀಸು.

* ನೀವು ಇಬ್ಬರು ಮೂರು ಜನ ಇದ್ರೆ ಒಬ್ಬೊಬ್ರು ಒಂದೊಂದು ಕ್ಯೂನಲ್ಲಿ ನಿಲ್ಲಿ, ಆಗ ಕೆಲಸ ಬೇಗಾಗುತ್ತೆ

ಮೂಲ

8. ಜಾಸ್ತಿ ಸಾಮನಿದ್ದು ಕಡಿಮೆ ಜನ ಇರೋ ಕ್ಯೂ ಆಯ್ಕೆ ಮಾಡ್ಕೊಳಿ

ಕೆಲವರ ಪ್ರಕಾರ ಯಾರಿಗಾದ್ರೂ ತಡ ಆಗೋ ಸಣ್ಣ ಕ್ಯೂ ಮತ್ತೆ ಬೇಗ ಮುಗಿಯೋ ದೊಡ್ಡ ಕ್ಯೂ ಮಧ್ಯೆ ಆಯ್ಕೆ ಕೊಟ್ರೆ ಅವರು ತಡ ಆದ್ರೂ ಪರವಾಗಿಲ್ಲ ಸಣ್ಣ ಕ್ಯೂ ಇದ್ರೆ ಒಳ್ಳೇದು ಅಂತಾರಂತೆ.

ಜೊತೇಲಿ ತಾವು ಕಾದದ್ದಕ್ಕಿಂತ ಹೆಚ್ಚು ಸಮಯ ಕಾದ್ವಿ ಅಂದುಕೋತಾರಂತೆ.

ಮೂಲ

ಏನೇ ಆದ್ರೂ ಕ್ಯೂ ನಿಲ್ಲೋದು ಕಷ್ಟ, ಆ ಕಷ್ಟ ಈ ತಂತ್ರಗಳಿಂದ ಕಡಿಮೆ ಆಗುತ್ತೆ. ಇನ್ನೊಂದು ವಿಷಯ: ಕ್ಯೂ ದೊಡ್ಡದಿದ್ದರೂ ನಿಮಗೆ ಜಾಸ್ತಿ ಕಾದಂಗೆ ಆಗಲೇಬೇಕು ಅಂತಿಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: