ಬೇರೆ ದೇಶಗಳಲ್ಲಿರೋ ಈ ಹಳೇ ಹಿಂದೂ ದೇವಾಲಯಗಳ ಕಥೆ ಕೇಳಿ ಬಹಳ ಹೆಮ್ಮೆ ಪಡ್ತೀರಿ

ಎಲ್ಲೆಲ್ಲಿಗೆ ಹರಡಿದೆ ನಮ್ಮ ಸಂಸ್ಕೃತಿ ನೋಡಿ

ಇತಿಹಾಸ ತಜ್ಞರ ಪ್ರಕಾರ ವೇದದ ಕಾಲದಲ್ಲಿ ಹಿಂದೂ ದೇವಸ್ಥಾನಗಳು ಅಷ್ಟಾಗಿ ಇರ್ಲಿಲ್ವಂತೆ. 1951ರಲ್ಲಿ ಒಬ್ಬ ಫ್ರೆಂಚ್ ಪುರಾತತ್ವ ಶಾಸ್ತ್ರಜ್ಞ ಆಫ್ಘಾನಿಸ್ತಾನದಲ್ಲಿ ಅತೀ ಹಳೆ ದೇವಸ್ಥಾನದ ಅವಶೇಷಗಳ್ನ ಕಂಡು ಹಿಡಿದ.

ವೇದಗಳ ಕಾಲ ಮುಗಿಯೋ ಹೊತ್ತಿಗೆ ನಿಧಾನವಾಗಿ ಮೂರ್ತಿ ಪೂಜೆ ಬಗ್ಗೆ ಜನರಿಗೆ ಗೊತ್ತಾಗಕ್ಕೆ ಶುರುವಾಗಿದೆ. ಆಮೇಲೇನೇ ದೇವಸ್ಥಾನಗಳ್ನ ಕಟ್ಟೋಕೆ ಶುರು ಮಾಡಿದ್ದು. ಬರೀ ನಮ್ಮ ದೇಶದಲ್ಲಿ ಮಾತ್ರ ಅಲ್ಲ, ಪ್ರಪಂಚದ ಬೇರೆ ಕಡೇನೂ ಅತ್ಯದ್ಭುತ ದೇವಸ್ಥಾನಗಳ ಅವಶೇಷಗಳು ಸಿಕ್ಕಿದೆ. ಆ ತರ ಸಿಕ್ಕಿರೋದು ಯಾವ ಯಾವ ಮೂಲೆಲಿದೆ ಅಂತ ಕೇಳಿ ಖಂಡಿತಾ ಆಶ್ಚರ್ಯ ಪಡ್ತೀರಿ. ಓದಿ ನೋಡಿ...

ಪಾಳು ಬಿದ್ದಿರೋ ದೇವಾಲಯಗಳು - ಕಾಂಬೋಡಿಯಾ

ಕಾಂಬೋಡಿಯಾ ಮಧ್ಯಭಾಗದಲ್ಲಿರೋ ಸಿಮ್ ಕ್ಯಾಂಪ್ ಅನ್ನೊ ಊರಲ್ಲಿ ಬೇಕಾದಷ್ಟು ಹಿಂದೂ ಮತ್ತು ಬೌದ್ಧ ದೇವಸ್ಥಾನಗಳಿವೆ. ಇದೇ ಜಾಗದಲ್ಲಿ "ಅಂಗ್ಕೊರ್ ವಾಟ್" ಅನ್ನೋ ದೇವಸ್ಥಾನ ಸುಮಾರು 900 ವರ್ಷಗಳಿಂದ 1 ಚದರ ಮೈಲು ಹರಡಿಕೊಂಡಿದೆ. ಸ್ವಲ್ಪ ಬಣ್ಣ ಮಾಸೋಗಿದ್ರು ಕೆತ್ತನೆಗಳೆಲ್ಲಾ ಇನ್ನೂ ಹೊಸದರಂತಿದೆ. ಹಿಂದೂ ಪುರಾಣಗಳ್ನ ದೊಡ್ಡ ಗೋಡೆ ಮೇಲೆ ಕೆತ್ತಿದ್ದಾರೆ. ಶಿವ ಮತ್ತು ವಿಷ್ಣು ದೇವ್ರನ್ನ ತುಂಬಾ ಭಕ್ತಿ ಗೌರವದಿಂದ ಇಲ್ಲಿ ಆರಾಧಿಸ್ತಾರೆ.

ಮೂಲ

ಪುರಾತನ ಹಿಂದೂ ದೇವಸ್ಥಾನ - ಬಾಲಿ, ಇಂಡೋನೇಷ್ಯಾ

ಇಂಡೋನೇಷ್ಯಾದ ದ್ವೀಪದಲ್ಲಿರೋ ಡೆನ್ ಪಾಸರ್ ನಲ್ಲಿ ಮೋರಿಗೆ ಗುಂಡಿ ತೆಗೀವಾಗ ಕೆಲಸಗಾರರಿಗೆ ಹಿಂದೂ ದೇವಾಲಯದ ಕಲ್ಲಿನ ಕೆತ್ತನೆಗಳು ಸಿಕ್ಕಿದ್ವಂತೆ. ತಜ್ಞರು ಹೇಳೋ ಪ್ರಕಾರ ಇಲ್ಲಿ ಸಿಕ್ಕಿರೋ ಕಲ್ಲುಗಳು ಸುಮಾರು 13-15ನೇ ಶತಮಾನಕ್ಕೆ ಸೇರಿರೋದಂತೆ.

ಮೂಲ

ಮುಕ್ತಿ ಗುಪ್ತೇಶ್ವರ ದೇವಸ್ಥಾನ - ಮಿಂಟೋ, ಆಸ್ಟ್ರೇಲಿಯಾ

ಇಲ್ಲಿ ನಾವು ಕೊನೆಯ ಹಾಗೂ 13ನೇ ಜ್ಯೋತಿರ್ಲಿಂಗ ನೋಡ್ಬಹುದು.  ಜೊತೆಗೆ ದೇವರನ್ನ ಹಾಡಿ ಹೊಗಳಲು 7996 ಶ್ಲೋಕಗಳನ್ನ ಎಂಟು ಸಂಪುಟಗಳಲ್ಲಿ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ 1999ರಲ್ಲಿ ಶಿವರಾತ್ರಿ ದಿನ ಅಡಿಪಾಯ ಹಾಕಿದ್ರಂತೆ. ಈ ದೇವಸ್ಥಾನ ಕೂಡ ಬೇರೆ 12 ಜ್ಯೋತಿರ್ಲಿಂಗಗಳ್ನ ಹೋಲೊ ತರಾನೇ ಮಾಡಿದ್ದಾರೆ ಹಾಗು ಇದೊಂದೇ ಮನುಷ್ಯ ಗುಹೆ ರೂಪದಲ್ಲಿ ಕಟ್ಟಿರೋ ದೇವಸ್ಥಾನ.   

ಮೂಲ

ಮುನೇಶ್ವರಂ ದೇವಾಲಯ - ಮುನ್ನೇಶ್ವರಂ, ಶ್ರೀಲಂಕಾ

ಈ ದೇವಸ್ಥಾನ ರಾಮಾಯಣ ನಡೆದಿರೊ ಕಾಲದಿಂದನೂ ಇದೆ ಅಂತ ಜನ ನಂಬಿದ್ದಾರೆ. ರಾವಣನನ್ನು ಕೊಂದ ಮೇಲೆ ರಾಮ ಇಲ್ಲಿ ಶಿವನನ್ನು ಪೂಜಿಸುತ್ತಿದ್ದನಂತೆ.  ಈ ದೊಡ್ಡ ಕಟ್ಟಡದೊಳಗೆ 5 ಚಿಕ್ಕ ದೇವಾಲಯಗಳಿವೆ, ಅದರಲ್ಲಿ ಮಧ್ಯದಲ್ಲಿರೊ ದೊಡ್ಡ ದೇವಸ್ಥಾನ ಶಿವನದ್ದು.  ಇದನ್ನು ಪೋರ್ಚುಗೀಸರ ಕಾಲದಲ್ಲಿ 2 ಸಲ ಹಾಳು ಮಾಡಿದ್ರಂತೆ. ಕೊನೆಗೆ ಜೆಸ್ಯೂಟ್ನರು ಮತ್ತೆ ಕಟ್ಟಿಸಿ ಹೊಸ ರೂಪ ಕೊಟ್ಟಿದ್ದಾರೆ. 

ಮೂಲ

ವಿಷ್ಣು ದೇವಾಲಯ - ರಷ್ಯಾ

ರಷ್ಯಾದ ವೋಲ್ಗಾ ಭಾಗದ ಒಂದು ಹಳ್ಳೀಲಿ ನೆಲ ಅಗೆಯುವಾಗ ಈ ವಿಷ್ಣುವಿನ ವಿಗ್ರಹ ಸಿಕ್ಕಿದ್ದಂತೆ. ಸುಮಾರು 7-10ನೇ ಶತಮಾನಕ್ಕೆ ಸೇರಿದೆ ಅಂತ ಹೇಳಿದ್ದಾರೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: