ಈ 11 ಉಪಾಯಗಳು ಗೊತ್ತಿದ್ದರೆ ನೀವು ಮಾನಸಿಕವಾಗಿ ಗಟ್ಟಿಯಾಗಿ ಏನು ಬೇಕಾದರೂ ಸಾಧಿಸ್ತೀರಿ

ಆಸೆ ತಡ್ಕೊಳೋದು ಕಲಿತುಕೊಳ್ಳಿ

"ಮನಸ್ಸಿದ್ದರೆ ಮಾರ್ಗ" ಅನ್ನೋದು ಹಳೇ ಗಾದೆ. ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡ್ಬೋದು ಅಂತ ದೊಡ್ಡೊರ್ ಹೇಳ್ತಾರೆ. ಆ ಮನಸ್ಸು ಗಟ್ಟಿಯಾಗಿರ್ಬೇಕು ತಾನೇ? ಹೇಗೆ ಮನಸ್ಸು ಗಟ್ಟಿ ಮಾಡ್ಕೊಳೋದು? ಹೇಳ್ತೀವಿ ಕೇಳಿ.

1. ತರ್ಕಬಧ್ಧವಾಗಿ ಯೋಚ್ನೆ ಮಾಡಿ, ಭಾವನಾತ್ಮಕವಾಗಿ ಬೇಡ

ನೀವು ಯೋಚ್ನೆ ಮಾಡೋವಾಗ  ಎಷ್ಟು ಭಾವನೆಗಳಿಂದ ದೂರ ಇರ್ತೀರೋ ಅಷ್ಟೂ ನಿಮ್ಮ ಮನಸ್ಸು ದೃಢವಾಗಿರುತ್ತೆ!

ಮೂಲ

2. ಬೇರೆಯವರ ಅಭಿಪ್ರಾಯಗಳು ನಿಮ್ಮ ಮೇಲೆ ಪ್ರಭಾವ ಬೀರದ ಹಾಗೆ ನೋಡಿಕೊಳ್ಳಿ

ಯಾರ ಅನಿಸಿಕೆ ಅಭಿಪ್ರಾಯಗಳು ಏನೇ ಇರಲಿ,  ಅದು ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿ ನಿಮ್ಮ ಸ್ವಂತಿಕೆಗೆ ದಕ್ಕೆ ಬಾರದ ಹಾಗೆ ನೋಡಿಕೊಳ್ಳಿ.

ಮೂಲ

3. ಆಸೆ ತಡ್ಕೊಳೋದು ಕಲಿತುಕೊಳ್ಳಿ

ಎಷ್ಟು ತಡ್ಕೋತೀರೋ ಅಷ್ತು ನಿಮ್ಮ ಮನಸ್ಸು ದೃಢವಾಗಿದೆ ಅಂತ ಅರ್ಥ. ಆಸೆಗಳ ಕಡೆ ಗಮನ ಕೊಡ್ತಾ ಇದ್ದಷ್ಟು ನೀವು ಮಾಡಬೇಕಾದ ಕೆಲಸದಿಂದ ಗಮನ ಸರಿದು ಹೋಗುತ್ತೆ. ಮನಸ್ಸು ಗಟ್ಟಿಯಾಗಿರಬೇಕಾದ್ದು ಆಸೆ ತಡೆದುಕೊಂಡು ಕೆಲಸ ಮಾಡೋದರಲ್ಲಿ.

ಮೂಲ

4. ನಿಮ್ಮ ಜೊತೆ ನೀವೇ ಆಗಾಗ ಮಾತಾಡಬೇಕು

ನಿಮಗೆ ಬೇಸರ ಅದಾಗಲೆಲ್ಲ "ಒಮ್ಮೆ ಪ್ರಯತ್ನಿಸು", "ನಿನ್ನಿದಾಗುತ್ತೆ", ಅಂತ ನಿಮಗೆ ನೀವೇ ಹೇಳಿಕೊಳ್ಳಿ, ಒಂದೆರಡು ಬಾರಿ ಪ್ರಯತ್ನಿಸಿ ನೋಡಿ, ಮನಸ್ಸು ಎಷ್ಟು ದೃಢವಾಗುತ್ತೆ ಅಂತ.

ಮೂಲ

5. ನಿಮ್ಮ ಭಾವನೆಗಳಲ್ಲಿ ಸಮತೋಲನ ಇರಲಿ

ಖುಷಿಲಿ ಹಾರೋ ಮನಸ್ಸು, ದುಃಖ ಆದಾಗ ನಲುಗುತ್ತೆ, ಈ ಭಾವನೆಗಳಲ್ಲಿ ಸಮತೋಲನ ಇದ್ರೆ ನಿಮ್ಮ ಮನಸ್ಸಿಗೆ ಒಳ್ಳೆದು.

ಮೂಲ

6. ನಿಮ್ಮ ಬಗ್ಗೆ ನಿಮಗೆ ಆತ್ಮವಿಶ್ವಾಸ ಇರಲಿ ಅನುಕಂಪ ಬೇಡ

ಯಾವುದೇ ಕ್ಷಣದಲ್ಲಾಗಲೀ, ಎಷ್ಟೇ ಕಷ್ಟದಲ್ಲಾಗಲಿ ನಿಮ್ಮ ಸಂಗಾತಿ ನಿಮ್ಮ ಅಂತ್ಮವಿಶ್ವಾಸವೇ ಹೊರತು ಅನುಕಂಪ ಅಲ್ಲ. ನಿಮ್ಮ ಬಗ್ಗೆ ನೀವು ಅನುಕಂಪ ತೋರಿಸುತ್ತಾ ಹೋದರೆ ನಿಮ್ಮ ಮನಸ್ಸಿಗೇ ಒಳ್ಳೇದಲ್ಲ. 

ಮೂಲ

7. ಜವಾಬ್ದಾರಿ ತೊಗೊಳ್ಳಿ, ಹಿಂಜರೀಬೇಡಿ

ನೀವು ಎಷ್ಟೇ ತಪ್ಪು ಮಾಡಿದ್ರೂ ಪರ್ವಾಗಿಲ್ಲ ಜವಾಬ್ದಾರಿ ತಗೊಳ್ಳೊದ್ರಿಂದ  ಹಿಂಜರಿಬೇಡಿ, ಜವಾಬ್ದಾರಿ ನಿಮ್ಮ ಮನಸ್ಸನ್ನ ಇನ್ನು ದೃಢವಾಗಿಸುತ್ತೆ. 

ಮೂಲ

8. ನಿಮ್ಮ ಅವಶ್ಯಕತೆಗೂ ಅನಿವಾರ್ಯತೆಗೂ ವ್ಯತ್ಯಾಸ ತಿಳ್ಕೊಳ್ಳಿ

ಬದುಕಲು ಯಾವುದು ಅನಿವಾರ್ಯ ತಿಳ್ಕೊಳ್ಳಿ, ಅದಕ್ಕೆ ಮಾತ್ರ ಪ್ರಾಮುಖ್ಯತೆ  ಕೊಡಿ ನಿಮ್ಮೆಲ್ಲ ಅವಶ್ಯಕತೆ ಅನಿವಾರ್ಯವಾಗದಿರಲಿ. 

ಮೂಲ

9. ಆಗಾಗ ಆಟ ಆಡಿ

ನಿಮ್ಮ ಮನಸ್ಸು ಆಟ ಆಡೋದ್ರಿಂದ ದೃಢವಾಗುತ್ತೆ. ಯಾವಿದಾದ್ರೂ ಆಟ ಮನಸ್ಸಿಟ್ಟು ಆಡಿ. 

ಮೂಲ

10. ಒಂದು ಸಲಕ್ಕೆ ಒಂದು ವಿಷಯದ ಕಡೆ ಗಮನ ಕೊಡಿ

ಹೆಚ್ಚು ಗಮನವಿಟ್ಟು ನೀವು ಒಮ್ಮೆ ಒಂದೇ ಕೆಲಸ ಮಾಡೋದ್ರಿಂದ ನಿಮ್ಮ ಮನಸ್ಸು ಹೆಚ್ಚು ದೃಢವಾಗುತ್ತೆ.

ಮೂಲ

11. ಕಾಲಕ್ರಮೇಣ ನಿಮ್ಮ ತೊಂದರೆಗಳು ಕಡಿಮೆ ಆಗೇ ಆಗ್ತವೆ ಅಂತ ಗೊತ್ತಿರಲಿ

ಯಾವುದೇ ಕಷ್ಟದ ಅಲೆ ಎದುರಾದ್ರೂನೂ ಅದು ಕಾಲ ಕಳೆದಹಾಗೆ ಮಾಸುತ್ತೆ ಅನ್ನೋದು ನೆನಪಿರಲಿ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: