ಜಯಲಲಿತಾ ಚಿಕ್ಕ ಹುಡುಗಿ ಆಗಿದ್ದಾಗ ಮೈಸೂರು ಬಿಟ್ಟು ಚೆನ್ನೈಗೆ ಹೋದ ಕಥೆ

1949-51ರ ಮಾತು

ಜಯಲಲಿತಾ ಅವರಪ್ಪ ಜಯರಾಂ ಅಯ್ಯಂಗಾರ್ರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ತುಂಬಾ ಬೇಕಾಗಿದ್ದೋರು

ಎಷ್ಟೇ ಆದರೂ ರಾಜವೈದ್ಯ ಎನ್. ರಂಗಾಚಾರ್ ಅವರ ಮಗ ಅವರು.

ಮೂಲ

ಜಯರಾಮ್ ಅವರಿಗೆ ಇಬ್ಬರು ಹೆಂಡ್ತೀರು. ಒಬ್ಬರ ಹೆಸರು ಜಯ, ಇನ್ನೊಬರ ಹೆಸರು ಸಂಧ್ಯಾ ಅಂತ. ಸಂಧ್ಯಾ ಅವರ ಮಗಳು ಜಯಲಲಿತಾ.

ಕೆಳಗಿನ ಫೋಟೋನಲ್ಲಿ ಮಧ್ಯದಲ್ಲಿ ಜಯಲಲಿತಾ; ಅವರ ಎಡಗಡೆಗೆ ತಾಯಿ ಸಂಧ್ಯಾ; ಬಲಗಡೆಗೆ ಗುರು ಸರಸಾ ಇದಾರೆ. ಇದು ಜಯಲಲಿತಾ ಅವರ ಅರಂಗೇಟ್ರಂ ಸಮಾರಂಭದಲ್ಲಿ ತೆಗೆದ ಫೋಟೋ.

ಮೂಲ

ಜಯಲಲಿತಂಗೆ 11 ವರ್ಷ ಆಗೋ ತನಕ ಅಮ್ಮ ಮಗಳು ಬೆಂಗಳೂರಲ್ಲಿದ್ದರಂತೆ. ಜಯರಾಂಗೆ ಇಬ್ಬರು ಹೆಂಡ್ತೀರಾದರೂ ಸಂಧ್ಯಾ ಅವರ ಕೈಯಲ್ಲೇ ಗಂಡನ ಆಸ್ತಿ ಎಲ್ಲಾ ಇತ್ತು.

ಇಬ್ಬರು ಹೆಂಡತೀರ್ಗೂ ಜಗಳ ಶುರು ಆಗಿ 1949-51ರಲ್ಲಿ ಮೊದಲನೆ ಹೆಂಡತಿ ಜಯ ಕೋರ್ಟಿಗೆ ಹೋದರಂತೆ. ಎಲ್ಲಿ? ಮೈಸೂರಲ್ಲಿ.

ಕೋರ್ಟು ಇಬ್ಬರು ಹೆಂಡ್ತೀರ್ಗೂ ಸಮವಾಗಿ ಆಸ್ತಿ ಸಿಗಬೇಕು ಅಂತ ತೀರ್ಪು ಕೊಡ್ತು. ಆದರೆ ಸಂಧ್ಯಾ ಅವರಿಗೆ ಈ ತೀರ್ಪು ಹಿಡಿಸಲಿಲ್ಲ.

ಕೋಪದಿಂದ ಸಂಧ್ಯಾ ಮೈಸೂರು ಬಿಟ್ಟು ಚೆನ್ನೈಗೆ ಹೋದರು. ಅಲ್ಲಿ ಅವರ ತಂಗಿ ಅಂಬುಜಾ ಅಂತ ಇದ್ದರು. ಅವರ ಜೊತೆ ಸೇರ್ಕೊಂಡು ಸಿನಿಮಾ ವಲಯದಲ್ಲಿ ಹೆಸರು ಮಾಡಕ್ಕೆ ಶುರು ಮಾಡಿದರು.

ಮೂಲ

ಅಮ್ಮನ ಜೊತೆ ಮಗಳೂ ಹೋಗಿ ಮುಂದೆ ಸಿನಿಮಾನಲ್ಲಿ ಮಿಂಚಿದಳು.

ಹೀಗಾಗಿ ಜಯಲಲಿತಾ ತಮಿಳ್ನಾಡಿಗೆ ಹೋಗಿದ್ದು. ಇಲ್ಲದಿದ್ದರೆ ಮೈಸೂರಲ್ಲೇ ಇರ್ತಾ ಇದ್ರು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: