ಶಂಕರಣ್ಣ ಆದ್ಮೇಲೆ ಸುದೀಪ್ಗೆ ಸಿಕ್ಕಿರೋ ಈ ವಿಶೇಷ ಸ್ಥಾನಮಾನದ ಬಗ್ಗೆ ಯಾರಿಗೂ ಗೊತ್ತಾಗಿಲ್ಲ

ಒಬ್ಬರಿಗಿಂತ ಒಬ್ಬರು

ಶಂಕರಣ್ಣನ್ನ ಜನ ಎಷ್ಟು ಇಷ್ಟ ಪಡ್ತಿದ್ರು ಅನ್ನೋದಕ್ಕೆ ಅವರ ಅಭಿಮಾನಿಗಳು ಈಗಲೂ ಅವರ ಚಿತ್ರ ಬಿಡಿಸ್ತಾ ಇರೋದೆ ಸಾಕ್ಷಿ.

ಉದಾಹರಣೆಗೆ ಇಲ್ಲಿ ನೋಡಿ, 2011ರಲ್ಲಿ ನಿಶಾ ಅನ್ನೋರು ಬಿಡ್ಸಿರೋದು:

ಮೂಲ

ಇನ್ನೊಂದು ಉದಾಹರಣೆ… ಇದು ಯಾರು ಬಿಡ್ಸಿರೋದೋ ಗೊತ್ತಿಲ್ಲ:

ಮೂಲ

ಶಂಕ್ರಣ್ಣನ ಇಂಥ ಸ್ಕೆಚ್ಚುಗಳಿಗೆ ಕೊನೇನೇ ಇಲ್ಲ.

ಶಂಕ್ರಣ್ಣ ಆದ್ಮೇಲೆ ಜನ ಯಾರ ಸ್ಕೆಚ್ ಮಾಡಿ ಮಾಡಿ ಹಾಕ್ತಿದಾರೆ ಗೊತ್ತಾ? ಇಲ್ಲಿ ನೋಡಿ:

ಇದನ್ನ @UravKiccha ಅನ್ನೋರು ಮಾಡಿರೋದು:

ಹೌದು, ಕಿಚ್ಚ! ಈ ಸ್ಥಾನಮಾನ ಸುದೀಪ್ಗೆ ಸಿಕ್ಕಿರೋದು ಯಾರ ಕಣ್ಣಿಗೂ ಬಿದ್ದಿಲ್ಲ ಅನ್ನಿಸುತ್ತೆ!

ಬೇರೆ ಸ್ಟಾರ್ಗಳಿಗಿಂತ ಸುದೀಪ್ ಟ್ವಿಟರಲ್ಲಿ ಅಭಿಮಾನಿಗಳ ಜೊತೆ ಜಾಸ್ತಿ ಮಾತಾಡ್ತಾರೆ ಅನ್ನಬಹುದು. ಜನ "ಹಾಯ್ ಅನ್ನಿ ಅಣ್ಣಾ!" ಅಂದರೆ ಸುದೀಪ್ ಹಾಯ್ ಅನ್ನದೆ ಇರಲ್ಲ, ಅಥವಾ ಇನ್ನೇನಾದರೂ ಒಳ್ಳೇ ಮಾತು ಹೇಳದೆ ಇರಲ್ಲ. ಅದಕ್ಕೇ ಅಂತ ಕಾಣುತ್ತೆ, ಸುದೀಪ್ ಪೆನ್ಸಿಲ್ ಸ್ಕೆಚ್ಚುಗಳು ಟ್ವಿಟರ್ನಲ್ಲಿ ತುಂಬಿ ತುಳುಕಾಡ್ತಾ ಇವೆ. ಇನ್ನೊಂದಿಷ್ಟು ನೋಡಿ, ಆಗ ನಿಮಗೇ ಗೊತ್ತಾಗುತ್ತೆ ಶಂಕರಣ್ಣ ಆದ್ಮೇಲೆ ಕಿಚ್ಚನ್ ಪೆನ್ಸಿಲ್ ಸ್ಕೆಚ್ಚೇ ಜಾಸ್ತಿ ಅಂತ:

ಸುಶ್ರುತ ಅನ್ನೋರು ನೋಡಿ, 3D ಸ್ಕೆಚ್ ಮಾಡಿದಾರೆ:

ಸ್ವಯಂ ದೇವ ಕಿಚ್ಚನ್ನೆ ನೇರವಾಗಿ ಕೇಳಿದಾರೆ… ಹೆಂಗಿದೆ ಹೇಳಣ್ಣಾ ಅಂತ:

ನಾಗರಾಜ್ ಸರೂರ್ ಮಾಡಿರೋದು ನೋಡಿ:

ಶಂಕರಮೂರ್ತಿಗಳು:

ಗಣೇಶ್:

ಮಲ್ಲೇಶ್ ಅವರು ಬರೆದಿರೋದು ಸ್ವಲ್ಪ ಎಡವಟ್ಟಾಗಿದೆ, ಆದರೆ ನೂರಕ್ಕೆ ನೂರು ಅಭಿಮಾನಿ ಮಾತ್ರ:

ಚೇತು ಅವರಂತೂ ಡೌಟಿದ್ರೆ ನೋಡ್ಕೊಳಿ ಅಂತ ನಿಜವಾದ ಫೋಟೋ ಜೊತೆ ಹಾಕಿದಾರೆ:

ರಾಹುಲ್ದೂ ಸ್ವಲ್ಪ ಮಠ ಆಗಿದೆ, ಆದರೂ ಪ್ರೀತಿಗೇನು ಕಡಿಮೆ ಇಲ್ಲ:

ಆದರ್ಶ್ ಬರೆದಿರೋದು ನೋದಿ ಕಿಚ್ಚ ಮೆಚ್ಚಿದಾರೆ:

ಶ್ರೀನಿಧಿ ಅನ್ನೋರು ಬರೆದಿರೋದನ್ನ ಯೋಗೇಶ್ ಹಂಚಿಕೊಂಡಿದೋರ್ದ್ರಲ್ಲಿ ಎಲ್ಲಾ ಓಕೆ, ಆದ್ರೆ ಮುಖ ಸ್ವಲ್ಪ ನಾಟೋಕೆ:

6 ವರ್ಶದ ಮಗೂಗೂ ಇದು ಹತ್ಕೊಂಡಿದೆ:

ಇಲ್ಲಿಗೆ ಮುಗೀತು ಅನ್ಕೋಬೇಡಿ, ಈ ಸ್ಕೆಚ್ ಮಾಡೋ ಅಂಟು ಎಲ್ಲರಿಗೂ ಅಂಟುಕೋತಿದೆ…

ಕೆಲವರು ಕಿಚ್ಚನ್ ಸ್ಕೆಚ್ ಮಾಡೋದು ಹೆಂಗೆ ಅಂತ ವೀಡಿಯೋಗಳನ್ನೇ ಮಾಡಿ ಹಾಕ್ತಿದಾರೆ...

ಇಲ್ಲಿ ನೋಡಿ, ದರ್ಶನ್ ಅನ್ನೋರು ಮಾಡಿರೋದು:

ಇದು ಕಿಚ್ಚನ್ ಸ್ಕೆಚ್ ಬಗ್ಗೆ, ಅಷ್ಟೆ. ಅವರ ಅಭಿಮಾನಿಗಳು ತಾವೇ ಕಿಚ್ಚನ್ ತರಹ ನಡ್ಕೊಂಡು ವೀಡಿಯೋ ತೆಗೆದು ಹಾಕ್ತಿರೋದು ನೋಡಿದರೆ ಇನ್ನೂ ಮಜಾ ಬರುತ್ತೆ ನೋಡಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: