ಚಿಕ್ಕಮಗಳೂರು ಅನ್ನೋ ಸ್ವರ್ಗದಲ್ಲಿ ನೀವು ಈ 8 ಜಾಗ ನೋಡಿಲ್ಲದಿದ್ರೆ ಮೊದ್ಲು ನೋಡ್ಕೊಂಡ್ ಬನ್ನಿ

ಹಿತ್ತಲ ಗಿಡ ಮದ್ದಲ್ಲ ಅಂತ ನೋಡದೆ ಇರ್ತಾರೆ ಕಲವರು

ಮಲ್ನಾಡು, ಕಾಫಿ ನಾಡು, ಚಳಿ ಊರು, ಟೂರಿಸಮ್ ಗೆ ಸಿಕ್ಕಾಪಟ್ಟೆ ಹೆಸರುವಾಸಿಯಾಗಿರೋ ಜಾಗ ಚಿಕ್ಕಮಗಳೂರು. ನೀವು ಒಂದಲ್ಲ ಒಂದ್ಸತಿ ಇಲ್ಲಿಗೆ, ಇಲ್ಲಿನ ಸೊಬಗನ್ನ ಸವ್ಯಕ್ಕೆ ಬಂದೆ ಬರ್ತೀರಾ. ಆಗ ಈ 8 ಜಾಗಾನಾ ನೋಡಕ್ಕೆ ಮರೀಬೇಡಿ.

1. ಮುಳ್ಳಯ್ಯನಗಿರಿ 

ಮೂಲ

ನಿಮಗೆ ಬೇಸಗೆಲಿ, ಮಳೆಗಾಲದಲ್ಲಿ, ಚಳಿಗಾಲದಲ್ಲಿ ಎಲ್ಲ ಟೈಮಲ್ಲೂ ಇಲ್ಲಿ ಬಿಸಿಲು, ಮಳೆ, ಚಳಿ ಇದ್ದೆ  ಇರತ್ತೆ. ಹೆಣ್ಣಮಕ್ಳು ಮನ್ಸು ಬದ್ಲಾಗಕ್ಕಿಂತ ಬೇಗ ಇಲ್ಲಿ ವಾತಾವರಣ ಬದ್ಲಾಗತ್ತೆ. 1925 ಮೀಟರ್ ಎತ್ತರ ಇರೋ ಬೆಟ್ಟ, ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಬೆಟ್ಟ.

2. ದತ್ತ ಪೀಠ / ಬಾಬಾ ಬುಡನ್ ಗಿರಿ / ಚಂದ್ರದ್ರೋಣ ಪರ್ವತ 

ಮೂಲ

ಹಿಂದೂ-ಮುಸಲ್ಮಾನರ ಅಪೂರ್ವ ಸಂಗಮ ಅಂತ ಹೇಳುಸ್ಕೊಳೋ ಜಾಗ ಇದು. ಹಿಂದೂಗಳು ಪೂಜೆ ಮಾಡುವ ದತ್ತ ಪಾದುಕೆ, ಮುಸಲ್ಮಾನರು ಪೂಜಿಸುವ ಸಮಾಧಿ ಎರಡು ಒಂದೇ ಜಾಗದಲ್ಲಿ ಇರೋದು ಇಲ್ಲಿನ ವಿಶೇಷ. ಇದ್ರು ಜೊತೆಗೆ ಇಲ್ಲಿ ಸುತ್ತ ಮುತ್ತ ಇರೋ ಪರಿಸರ ನೋಡಕ್ಕೆ ಏನ್ ಚೆನ್ನಾಗಿದೆ ಗೊತ್ತ? ಹೋಗಿ ನೋಡ್ಕೊಂಡ್ ಬನ್ನಿ.

3. ಕುದ್ರೆಮುಖ 

ಮೂಲ

ಏನ್ ಹೇಳ್ಲಿ? ಫೋಟೋನಲ್ಲೇ ಎಸ್ಟ್ ಚೆನ್ನಾಗಿದೆ ಅಂತ ಗೊತಾಗ್ತಿದೆ ಅಲ್ವಾ? ಇಲ್ಲಿ ಬೆಟ್ಟ ಕುದುರೆ ಮುಖದ ಶೇಪಲ್ಲಿ ಇದೆ ಅದಕ್ಕೆ ಈ ಹೆಸರು. ಇದು ಕರ್ನಾಟಕದ ಮೂರನೇ  ಎತ್ತರದ ಪರ್ವತ.

4. ಶೃಂಗೇರಿ ಶಾರದಾಂಬೆ ದೇವಸ್ಥಾನ 

ಮೂಲ

ಶ್ರೀ ಆದಿಶಂಕರಾಚಾರ್ಯರು ಸ್ಥಾಪಿಸಿದ್ದು ಇದನ್ನ. ಇಲ್ಲಿಗೆ ಬಂದ್ರೆ ಬ್ರಹ್ಮ, ವಿಷ್ಣು, ಶಿವ, ಲಕ್ಷ್ಮಿ, ದುರ್ಗಿ, ಸರಸ್ವತಿ ಒಟ್ಟಿಗೆ  ಆಶೀರ್ವಾದ ಮಾಡ್ತಾರೆ ಅನ್ನೋ ನಂಬಿಕೆ. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡ್ಸೋದಕ್ಕೆ ಈ ಜಾಗ ಸಿಕ್ಕಾಪಟ್ಟೆ ಫೇಮಸ್ಸು. ಸುತ್ತಮುತ್ತ ಪಕ್ಷಿಧಾಮ, ಪುಷ್ಕರ್ಣಿ, ನದಿ ಇವೆಲ್ಲ ಇರೋದ್ರಿಂದ ಹೋಗಿಬಂದರೆ ಮನ್ಸಿಗೆ ನೆಮ್ಮದಿ ಸಿಗತ್ತೆ .

5. ಝರಿ ಫಾಲ್ಸ್ / ಅತ್ತಿಗುಂಡಿ ಫಾಲ್ಸ್ / ಸಗೀರ್ ಅಹ್ಮದ್ ಫಾಲ್ಸ್ / ಬಟರ್ ಮಿಲ್ಕ್ ಫಾಲ್ಸ್ 

ಮೂಲ

ಲೈಫಲ್ಲಿ ಒಂದ್ಸಲಿ ಈ ಫಾಲ್ಸ್ ನಾ ನೀವು ನೋಡ್ಲೆಬೇಕು. ಯಾವ್ ಬಿಸ್ಲೇರಿ ನೀರು ಇದ್ರಷ್ಟ ಪ್ಯೂರಾಗಿರಲ್ಲ. ಮೈ ಕೈ ನೋವಿದ್ರೆ ಈ ಫಾಲ್ಸ್ ಕೆಳಗಡೆ  ನಿಂತು ಮನೆಗ್ ಹೋಗಿ ಮಲ್ಕೊಳ್ಳಿ ಎಷ್ಟ್  ಆರಾಮ್ ಅನ್ಸತ್ತೆ ಅಂತ ಆಮೇಲ್ ನೀವೇ ಹೇಳ್ತೀರಾ.

6. ಭದ್ರ ಅಭಯಾರಣ್ಯ 

ಮೂಲ

ಇದು ಪ್ಲಾಸ್ಟಿಕ್ ಮುಕ್ತ ಜಾಗ. ನೀವೇನಾದ್ರು ಪಕ್ಷಿ ಪ್ರೇಮಿ ಆಗಿದ್ರೆ, ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ರೆ ನಿಮ್ ಕಣ್ಣಿಗೆ ಹಬ್ಬ. ಇನ್ನೂರಕ್ಕೂ ಹೆಚ್ಚು ಜಾತಿ ಪಕ್ಷಿ ಇಲ್ಲಿಗೆ ಬರತ್ತೆ. ಹುಲಿ, ಆನೆ, ಜಿಂಕೆ, ಕರಡಿ  ಓಡಾಟ ಮಾಮೂಲು. ಇಲ್ಲಿ ಉಡ, ಮೊಸಳೆ, ವಿಚ್ ವಿಚಿತ್ರವಾದ ಹಾವುಗಳು ಇರೋದ್ರಿಂದ ನೋಡಕ್ಕೆ ಸಖತ್ತಾಗಿರತ್ತೆ.

7. ಕಾಫಿ ನಾಡಿನ ಕಾಫಿ ಮ್ಯೂಸಿಯಂ 

ಮೂಲ

ತಲೆಬಿಸಿ ಆದಾಗ, ಟೆನ್ಶನ್ ಆದಾಗ, ಕಾಫಿ ಕುಡೀತೀರಾ ಅಲ್ವಾ? ಕಾಫಿ ಬಗ್ಗೆ ಇತಿಹಾಸ ತಿಳ್ಕೊಬೇಕು ಅಂದ್ರೆ, ಕಾಫಿ ಯಾಕೆ ಇಷ್ಟು ರುಚಿಯಾಗಿರತ್ತೆ, ಅದ್ರಲ್ಲೂ ಚಿಕ್ಕಮಗಳೂರಿನ ಕಾಫಿ ಇದ್ಯಲ್ಲ ಹೆಂಗ್ ಇಷ್ಟು ರುಚಿಯಾಗಿರತ್ತೆ ಹೀಗೆ ಕಾಫಿ ಬಗ್ಗೆ ತಿಳ್ಕೊಳಕ್ಕೆ ಇಲ್ಲಿಗೆ ಹೋಗ್ಲೇಬೇಕು.

8. ದೇವೀರಮ್ಮನ  ಬೆಟ್ಟ 

ಮೂಲ

ಬೆಟ್ಟದ ತುದೀಲಿರೋ ದೇವಸ್ಥಾನ ದೀಪಾವಳಿ ಟೈಮಲ್ಲಿ ಮಾತ್ರ ತೆಗೆಯೋದು. ಬೆಟ್ಟಾನ ರಾತ್ರಿಯಿಂದಾನೆ ಹತ್ತಕ್ಕೆ ಶುರು ಮಾಡ್ಬೇಕು. ಬೆಳ್ಗೆ ಹತ್ತಕ್ ಹೋದ್ರೆ ಭಯ ಆಗತ್ತೆ. ಅಷ್ಟ್ ಉದ್ದಕ್ ಇದೆ ಕಣ್ರೀ. ಪೂಜೆ ತುಂಬಾ ಚೆನಾಗ್ ನಡ್ಯತ್ತೆ ಒಂದ್ಸತಿ ನೋಡ್ಲೇಬೇಕು. 

ಚಿಕ್ಕಮಗಳೂರಿಗೆ ಹೋದ್ರೆ ಇದ್ಯಾವುದನ್ನ ಮರೀಬೇಡಿ. ಏನೇ ಆದರು ಮಲ್ನಾಡ್ ಚೆಂದನೇ ಚೆಂದ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಕಷ್ಟ ಬಂದಾಗ ಈ 12 ಸತ್ಯಗಳ್ನ ನೆನಪಿಸಿಕೊಂಡರೆ ಇನ್ನಷ್ಟು ಗಟ್ಟಿಯಾಗಿ ಹೊರಬರ್ತೀರಿ

ಸೋಲು ಗೆಲುವು ಎಲ್ಲಕ್ಕೂ ಮನಸ್ಸೇ ಕಾರಣ

ಕಷ್ಟ ಅನ್ನೋದ್ ಎಲ್ಲಾರ್ಗೂ ಬಂದೇ ಬರತ್ತೆ. ಒಂದೊಂದ್ಸಲ ಯಾವಾಗ್ ಮುಗ್ಯತ್ತಪ್ಪ ಅನ್ನೋ ಅಷ್ಟು ಕಷ್ಟಗಳು ಬರತ್ತೆ. 

ಆದ್ರೆ ನಮಗೆ ನಾವೇ ಈ 12 ಸತ್ಯಗಳ್ನ ಹೇಳ್ಕೊಂಡ್ ಸಮಾಧಾನ ಮಾಡ್ಕೊಂಡ್ರೆ ಕಷ್ಟಾನ ಎದುರಿಸೋ ಧೈರ್ಯ ಬರತ್ತೆ.

1. ಗೆಲ್ಲೋದಕ್ಕೆ ಸೋಲೋದಕ್ಕೆ ಎರಡಕ್ಕೂ ನಮ್ಮ ಮನಸ್ಸೇ ಕಾರಣ

ನಾವ್ ಮನಸ್ಸಿನಲ್ಲಿ ಏನ್ ಯೋಚ್ನೆ ಮಾಡ್ತೀವೋ ಅದೇ ತರ ನಡ್ಕೊಳ್ತೀವಿ. ನಮಗೆ ಅದೇ ತರ ಸಂದರ್ಭಗಳು ಒದಗಿ ಬರತ್ತೆ.

ನಾವು ಒಳ್ಳೇದನ್ನ ಯೋಚ್ನೆ ಮಾಡ್ತಾ, ಒಳ್ಳೇ ಕೆಲ್ಸಾನೇ ಯಾವಾಗ್ಲೂ ಮಾಡ್ತಾ ಇದ್ರೆ, ಮನಸ್ಸೂ ಒಳ್ಳೇದಾಗಿರತ್ತೆ. 

2. ನೋವು ಬರತ್ತೆ ಹಾಗೆ ಹೋಗತ್ತೆ

ಎಲ್ಲಾರ್ ಬದುಕಲ್ಲೂ ಒಂದಲ್ಲ ಒಂದು ತೊಂದ್ರೆ ಇದ್ದೇ ಇರತ್ತೆ, ಮನಸ್ಸಿಗೆ ನೋವು ತರೋ ಸಂದರ್ಭನೂ ಇದ್ದಿದ್ದೇ. ಇವೆಲ್ಲ ನಮ್ಮನ್ನ ಇನ್ನೂ ಗಟ್ಟಿ ಆಗ್ಸತ್ತೆ. ಕುಗ್ಗಕ್ಕೆ ಅವಕಾಶ ಕೊಡ್ಬಾರ್ದು ಅಷ್ಟೆ.

3. ಯೋಚ್ನೆ ಮಾಡೋದ್ರಿಂದ ಯಾವ ಸಮಸ್ಯೆನೂ ಪರಿಹಾರ ಆಗಲ್ಲ

ಯೋಚ್ನೆ ಮಾಡೋದ್ರಿಂದ ಯಾವ್ದೂ ಸರಿ ಹೋಗಲ್ಲ. ಅದ್ರಿಂದ ಮನಸ್ಸಿಗೆ ಮತ್ತೆ ದೇಹಕ್ಕೆ ಒತ್ತಡ ಜಾಸ್ತಿ ಆಗತ್ತೆ ಅಷ್ತೇ

4. ಕಷ್ಟ ಎದುರಿಸಕ್ಕೆ ಭಯಪಟ್ರೆ ಮುಂದೆ ಹೋಗಕ್ಕೆ ಆಗಲ್ಲ

ಕಷ್ಟ ಬಂತು ಅಂತ ಭಯದಿಂದ ಮನಸ್ಸು ಮುದುಡಿಕೊಂಡು ಕೂತ್ಕೋಂಡ್ರೆ ಯಾವ ಕೆಲ್ಸನೂ ಆಗಲ್ಲ.  ಹಿಂದೇನೆ ಉಳೀತೀವಿ.

ನಿಮಗೆ ಬೇಕಾಗಿರೋದೆಲ್ಲಾ ಭಯದ ಇನ್ನೊಂದು ಕಡೆ ಇದೆ. ಧೈರ್ಯವಾಗಿ ಮುನ್ನುಗ್ಗಿ ಗುರಿ ಸಾಧಿಸಿ.

5. ಅನುಭವಾನೇ ಇಲ್ದಿದ್ರೆ ಯಾವ್ದೇ ಪಾಠಾನೂ ಇರಲ್ಲ

ನಾವು ತುಂಬಾ ದ್ವೇಷ ಮಾಡೋಂಥ, ಮತ್ತೆ ನಮಗೆ ಬೇಡದೇ ಇರೋ ಅನುಭವಗಳೇ ನಮ್ಮನ್ನ ಗಟ್ಟಿಯಾಗಿ ನಿಲ್ಲೋಹಂಗೆ ಮಾಡೋದು.

6. ಪ್ರಯತ್ನಪಡದೆ ಯಾವ್ದೂ ಬದಲಾಗಲ್ಲ

ಬದಲಾವಣೆ ಅನ್ನೋದು ಏನಾದ್ರೂ ಮಾಡೋದಿಕ್ಕೆ ಸಂಬಂಧಿಸಿದ್ದು. ಸುಮ್ಮನೆ ಇರೋಕಲ್ಲ. ಯಾವುದೇ ವಿಚಾರಾನ ಬದಲಾಯಿಸಕ್ಕೆ ಪ್ರಯತ್ನ ಪಡ್ದೇ ಇದ್ರೆ ಏನೂ ಬದಲಾಗೋದೇ ಇಲ್ಲ.

7. ಆಗೋಗಿರೊದನ್ನ ಬದಲಾಯ್ಸಕ್ಕೂ ಆಗಲ್ಲ

ಆಗೋಗಿದ್ದು ಹಿಂದೆ ಸರಿದಿದ್ದು ಆಯ್ತು. ಅದನ್ನ ಬದಲಾಯ್ಸಕ್ಕೆ ಬ್ರಹ್ಮನಿಂದ್ಲೂ ಆಗಲ್ಲ

8. ರಾತ್ರೋರಾತ್ರಿ ಯಾವ್ದೇ ಕೆಲ್ಸ ಮುಗ್ಸಕ್ಕಾಗಲ್ಲ

ಯಾವ್ದೇ ಕೆಲ್ಸಾನೂ ಒಂದ್ ನಿಮಿಷದಲ್ಲಿ, ಒಂದ್ ದಿನದಲ್ಲಿ ಆಗೋದಿಲ್ಲ. ಸರಿಯಾಗಿ ಮಾಡ್ಬೇಕೂಂದ್ರೆ ಸಮಯ ಬೇಕು. ತಾಳ್ಮೆ ಇರ್ಬೇಕು. ದೊಡ್ಡ ದೊಡ್ಡ ಕನಸುಗಳನ್ನ ಸಾಧಿ ತೋರ್ಸ್ಬೇಕಾದ್ರೆ ಗುರಿ ಅಷ್ಟೆ ಅಲ್ಲ ಅದರ ಕಡೆ ಹೆಜ್ಜೆ ಹೆಜ್ಜೆನೂ ಮೆಲುಕು ಹಾಕ್ತ ಸರಿಯಾದ ದಾರೀಲಿ ನಡಿತಾ ಇದ್ದೀರಾ ಅಂತ ವಿಮರ್ಶೆ ಮಾಡೊ ಛಲ ಇರಲಿ. ಅತುರದಲ್ಲಿ ಮುಗ್ಸಕ್ಕೆ ಹೋಗಿ ಕೈ ಸುಟ್ಕೋಳೋದು ಸರಿಯಲ್ಲ.

9. ಎಲ್ಲಾ ಕೆಟ್ಟದ್ರಲ್ಲೂ ಒಳ್ಳೇದೇನೋ ಒಂದ್ ಇರತ್ತೆ

ಬರೀ ಕೆಟ್ಟದಾಗ್ತಾ ಇದೆ ಅಂತ ಆ ಟೈಮಲ್ಲಿ ಆಗೊ ಒಳ್ಳೇದನ್ನ ಗಮನ್ಸೋದೇ ಇಲ್ಲ ನಾವು. ಆದ್ರೆ, ಎಷ್ಟೇ ಕೆಟ್ಟದಾಗ್ತಾ ಇದ್ರೂ ಏನೋ ಒಂದ್ ಒಳ್ಳೇದ್ ಇದ್ದೇ ಇರತ್ತೆ.

10. ಸೋಲು ಗೆಲ್ಲೋದಿಕ್ಕೆ ಒಂದ್ ಮೆಟ್ಟಿಲು ಅಷ್ಟೇ

ಸೋತೋದೆ ಅಂತ ಆಕಾಶ ಏನೂ ತಲೆ ಮೇಲೆ ಬೀಳಲ್ಲ. ಸೋಲು ಅನ್ನೋದ್ ಗೆಲ್ಲಕ್ಕೆ ಒಂದೊಂದೇ ಮೆಟ್ಟಿಲು.

11. ಬಂದಿರೋ ಕಷ್ಟನ ಎದುರಿಸಕ್ಕೆ ನನ್ನ ಕೈಲಿ ಆಗತ್ತೆ

ಯಾರೋ ಏನೋ ಮಾಡಿದ್ರೂ ಅಂದ್ರೆ ಅದೆಲ್ಲಾ ನಮಗೂ ಆಗ್ಬೇಕೂಂತ ಏನೂ ಇಲ್ಲ. ಐದು ಬೆರೆಳೂ ಸಮ ಇರಲ್ಲ; ಹಾಗೆ ಇದೂನು. ಅವರಿವರಿಗೆ ಹೋಲಿಸಿಕೊಂಡ್ರೆ ನಿಮಗೆ ನೀವು ಅವಮಾನ ಮಾಡ್ಕೊಂಡ್ ಹಾಗೆ.

12. ಯಾರೂ ಒಂಟಿ ಅಲ್ಲ

ಈ ಪ್ರಪಂಚ್ದಲ್ಲಿ ಯಾರೂ ಒಂಟಿ ಅಲ್ಲ. ಏನೇನೆ ಅಡ್ಡಿ ಆತಂಕ ಬಂದ್ರೂ ಯಾರ್ದಾದ್ರೂ ಸಹಾಯ ಸಿಕ್ಕೇ ಸಿಗತ್ತೆ. ಎಲ್ಲಾರ್ಗೂ ಅವರವರ್ ಕಷ್ಟ ಇರತ್ತೆ. ಅದನ್ನ ಗೆದ್ದು ಬರೋ ದಾರಿ ನೋಡ್ಕೋಬೇಕು ಅಷ್ಟೇ.

ನೀವು ಎದುರಿಸ್ತಾ ಇರೋ ಸಂಕಷ್ಟ ಯಾವ್ದೇ ಇರ್ಲಿ – ಈ 12 ಸತ್ಯಗಳ್ನ ಹೇಳ್ಕೊಳಿ. ಮುನ್ನಗ್ಗಕ್ಕೆ ಧೈರ್ಯ ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: