ಹಸಿರು ತೋರಣದಿಂದ ನಮಗೆ ಹೇಗೆ ಒಳ್ಳೇದಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಅದು ಬರೀ ಅಲಂಕಾರಕ್ಕಲ್ಲ

ನಮ್ಮ ಸಂಸ್ಕೃತಿಯಲ್ಲಿ ಬಾಗಿಲಿಗೆ ಹಸಿರು ತೋರಣ ಕಟ್ಟೋದು ಸಾಮಾನ್ಯ. ಹಬ್ಬ ಹರಿದಿನಗಳಲ್ಲಿ ಇದರ ಪಾತ್ರ ಎಷ್ಟು ಮುಖ್ಯ ಅಂತ ನಿಮಗೆ ಗೊತ್ತೇ ಇದೆ. ನಮ್ಮನೆಗೆ ಬರೋ ಅತಿಥಿಗಳನ್ನ ಸ್ವಾಗತಿಸೊದು ಈ ಹಸಿರು ತೋರಣಾನೆ. ಹಸಿರು ತೋರಣದ ಮೇಲೆ ಅದೊಂದು ಮಲ್ಲಿಗೆ ಬಾಗಿಲಿಗೆ ಎಷ್ಟು ಚೆನ್ನಾಗ್ ಕಾಣ್ಸುತ್ತೆ ಅಲ್ವಾ! ಆದ್ರೆ ಯಾವತ್ತಾದ್ರೂ ಯೋಚ್ನೆ ಮಾಡಿದೀರಾ? ಎಷ್ಟೊಂದು ತರಹ ಎಲೆಗಳು ಸಿಗುತ್ತವೆ… ಆದ್ರೆ ಅದರಲ್ಲಿ ಮಾವಿನ ಎಲೇನೇ ಯಾಕೆ ತೋರಣಕ್ಕೆ ಬಳಸ್ತೀವಿ? ಅದರ ಜೊತೆ ಯುಗಾದಿಲಿ ಬೇವಿನ ಸೊಪ್ಪು ಬೇರೆ ಸೇರಿಸ್ತೀವಲ್ಲ, ಯಾಕೆ ಅಂತ?

ವಸಂತ ಋತೂಲಿ ಸೊಂಪಾಗಿ ಬೆಳೆಯೋ ಮಾವಿನ ಸೊಪ್ಪಿಗೆ ಬಹಳ ಔಷಧಿ ಗುಣಗಳಿವೆ. ಜೊತೆಗೆ ಬೇವಿನ ಸೊಪ್ಪು ಸೇರಿಸಿದ್ರೆ ಇನ್ನೂ ಒಳ್ಳೇದು.

ಮೂಲ

ಹಸಿರು ತೋರಣ ಮನೆಯೊಳಗೆ ಬರೋ ಗಾಳೀನ ಶುಧ್ಧ ಮಾಡುತ್ತೆ

ಮನೆ ಬಾಗಿಲಿಗೆ ಈ ಸೊಪ್ಪಿನ ತೋರಣ ಕಟ್ಟೋದ್ರಿಂದ ಬೀಸೋ ಗಾಳಿ ಈ ಸೊಪ್ಪುಗಳನ್ನ ಸೊಕಿ ಮನೆಗೆ ತಲುಪೋದ್ರಿಂದ ಮನೆಗೆ ಯಾವುದೇ ರೋಗಾಣುಗಳು ಗಾಳಿ ಜೊತೆ ಒಳಗೆ ಬರಲ್ಲ ಅಂತ.

ಮಾವು, ಬೇವು - ಈ ಎರಡು ಸೊಪ್ಪಿಗೆ ಗಾಯ ವಾಸಿ ಮಾಡೋ ಗುಣ ಇದೆ

ಮುಂಚೆಲ್ಲ ಮನೇಲಿ ಅರಿಶಿಣ ಬಿಟ್ರೆ ಗಾಯಕ್ಕೆ ಹಾಕೋಕೆ ಬೇರಾವ ಆಯಿಂಟ್ಮೆಂಟ್ ಇರ್ತಿರ್ಲಿಲ್ಲ ನೋಡಿ ಹಾಗಾಗಿ ಈ ತೋರಣ ಕಟ್ತಿದ್ರು. ಒಣಗಿದ ಮಾವು ಬೇವನ್ನ ಸಮ ಪ್ರಮಾಣದಲ್ಲಿ ಪುಡಿಮಾಡಿ ಅದಕ್ಕೆ ಸ್ವಲ್ಪ ಅರಿಶಿಣ ಸೇರಿಸಿಟ್ರೆ ಸಾಕು, ಈ ಮಿಶ್ರಣ  ನಿಮಗೆ ಯಾವುದೇ ಗಾಯ ಆದ್ರೂ ಅದನ್ನ ಒಂದೇ ದಿನದಲ್ಲಿ ವಾಸಿ ಮಾಡುತ್ತೆ.

ಮೂಲ

ಈಗ ಗೊತ್ತಾಯ್ತಾ ನಿಮಗೆ ನಮ್ಮ ಸಂಪ್ರದಾಯಗಳು ಆರೋಗ್ಯದ ದೃಷ್ಟಿಯಿಂದ ಎಷ್ತು ಒಳ್ಳೇದು ಅಂತ?

ನಾವಂತೂ ಈ ಸಲ ಹಬ್ಬಕ್ಕೆ ಪ್ಲಾಸ್ಟಿಕ್ ತೋರಣ ಹಾಕಲ್ಲ! ನೀವು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: