ಫೋನ್ ಜೊತೆ ನಿಮ್ಮ ಸಂಬಂಧದಿಂದ ನಿಮ್ಮ ಆರೋಗ್ಯಕ್ಕೆ ಏನಾಗ್ತಿದೆ ಅಂತ ಹೇಳಿಬಿಡ್ತೀವಿ ಕೇಳಿ

ತಂತ್ರಜ್ಞಾನದಿಂದ ನಮಗೆ ಉಪಯೋಗ ಆಗಬೇಕು, ಅಪಾಯ ಅಲ್ಲ

ಇತ್ತೀಚೆಗೆ ಫೋನ್ನ ಇಂಟರ್ನೆಟ್ಗೆ ಬಳಸೋದು ಬಹಳ ಜಾಸ್ತಿ ಆಗಿದೆ. ಆದರೂ ಅದನ್ನ ಮಾತಾಡಕ್ಕೆ ಬಳಸೋದು ನಿಂತಿಲ್ಲ. ನೀವು ಫೋನಲ್ಲಿ ಹೇಗೆ ಮಾತಾಡ್ತೀರಿ, ಫೋನ್ ಎತ್ತುಕೊಳಕ್ಕೆ ಎಷ್ಟು ಸಮಯ ತೊಗೋತೀರಿ ಅನ್ನೋದರಿಂದೆಲ್ಲ ನಿಮ್ಮ ಆರೋಗ್ಯದ ಮೇಲೆ ಫೋನ್ ಎಂಥ ಪರಿಣಾಮ ಬೀರ್ತಾ ಇದೆ ಅಂತ ಹೇಳಬಹುದು. ಕೆಳಗೆ 8 ಪ್ರಶ್ನೆ ಇದೆ. ಜಾಸ್ತಿ ಯೋಚನೆ ಮಾಡದೆ "ಹೂಂ" ಅಥವಾ "ಉಹೂಂ" ಅಂತ ಹೇಳ್ಕೋತಾ ಹೋಗಿ. ಎಷ್ಟು "ಹೂಂ" ಇದೆ ಅಂತ ಎಣಿಸಿಕೊಳ್ಳಿ, ಉತ್ತರ ಕೆಳಗೆ ಸಿಗುತ್ತೆ.

1. ಫೋನ್ ರಿಂಗಾದಾಗ ತೊಗೊಳಕ್ಕೆ ಹಿಂಜರಿಕೆ ನಾ?

ನಿಮ್ಮ ಮನೆಯೋರು, ಸ್ನೇಹಿತರು ಯಾರೇ ಫೋನ್ ಮಾಡಿರ್ಲಿ ಆ ಕರೆ ನೀವು ತೆಗೆಯಲ್ವಾ? ರಿಂಗ್ ಆದಷ್ಟು ಹೊತ್ತು ನಿಮ್ಮಲ್ಲಿರೋ ತಳಮಳ ನಿಂತ ತಕ್ಷಣ ಕಡಿಮೆ ಆಗುತ್ತಾ? ಮತ್ತೆ ರಿಂಗ್ ಆಗ್ಬಹುದು ಅನ್ನೋ ಭಯ ನಿಮ್ಮನ್ನ ಕಾಡುತ್ತಾ?

ಮೂಲ

2. ವಾಪಸ್ಸು ಕಾಲ್ ಮಾಡಕ್ಕೆ ತುಂಬ ಹೊತ್ತು ತೊಗೋತೀರಾ?

ಬಂದ ಫೋನ್ ತುಂಬ ಮುಖ್ಯ ಆಗಿದ್ದು ನೀವು ಅವ್ರ ಹತ್ರ ಮಾತಾಡ್ಲೇಬೇಕಾದಂತ ಪರಿಸ್ಥಿತಿ ಇದ್ದಾಗ ನೀವು ಕರೆ ಮಾಡೋಕೆ ತುಂಬ ತಡ ಮಾಡ್ತೀರಾ? ತೀರಾ ಮುಖ್ಯ ಪರಿಸ್ಥಿತಿಲೂ ಗಂಟೆ ಗಟ್ಟಲೆ ಕಾಯ್ತೀರಾ?

ಮೂಲ

3. ಯಾಕ್ ಫೋನ್ ತೊಗೊಂಡಿಲ್ಲ ಅಂತ ಕೇಳಿದಾಗ ಪದೆ ಪದೆ ಅದೇ ನೆಪ ಹೇಳ್ತೀರಾ?

"ಫೋನ್ ಮನೆಲಿ ಮರ್ತಿದ್ದೆ", "ಸೈಲೆಂಟ್ ನಲ್ಲಿ ಇತ್ತು" ಈ ನೆಪಗಳು ನಿಮ್ಗೆ ಸಾಮನ್ಯ ಆಗೋಗಿದ್ಯಾ?

ಮೂಲ

4. ಬೇಕೂಂತ ಫೋನ್ ಸೈಲೆಂಟ್ ನಲ್ಲೇ ಇಟ್ಟಿರ್ತೀರಾ?

ಯಾವುದೋ ಮುಖ್ಯವಾದ ಕೆಲಸದಲ್ಲಿದೀರಿ ಅಂತ್ಲೋ ಅಥ್ವಾ ನಿಮ್ಮ ಸುತ್ತ ಇರೋರಿಗೆ ತೊಂದ್ರೆ ಆಗುತ್ತೆ ಅಂತ್ಲೋ ನೀವು ಫೋನ್ ನ ಸೈಲೆಂಟ್ ಇಡೋದು ಬೇರೆ. ಅದರ ಬದಲು ಫೋನ್ ರಿಂಗ್ ಆಗೋದು ನಿಮ್ಗೆ ಕೇಳಕ್ಕೇ ಇಷ್ಟ ಇಲ್ಲ ಅಂತ ಸೈಲೆಂಟ್ ನಲ್ಲಿ ಇಡೋರಾ ನೀವು?

ಮೂಲ

5. ನಿಮ್ಮ ಫೋನ್ ತುಂಬಾ ಬರೀ ಮಿಸ್ಡ್ ಕಾಲ್ ತುಂಬ್ಕೊಂಡಿದ್ಯಾ?

ಮಿಸ್ಡ್ ಕಾಲ್ ಪಟ್ಟೀನಾ ನೋಡ್ದೇ ಇದ್ರೆ ಅಥವಾ ಡಿಲೀಟ್ ಮಾಡಿದಾಗ ಸಮಾಧಾನ ಸಿಗುತ್ತಾ?

ಮೂಲ

6. ನಿಮ್ಮ ಫ್ರೆಂಡ್ಸು ನೀವು ಫೋನೇ ತೆಗ್ಯಲ್ಲ ಅಂತ ಬೈತಾರಾ?

ಹೀಗೆ ಬೇಕು ಅಂತ ಮಾಡ್ತಿದೀರಾ?

ಮೂಲ

7. ಯಾರು ಫೋನ್ ಮಾಡಿದಾರೆ ಅಂತ ಗೊತ್ತಾಗದೆ ಹೋದ್ರೆ ಎತ್ತಲ್ವಾ?

ಯಾರು ಫೋನ್ ಮಾಡಿದ್ರು ಅಂತ ಮಾತ್ರ ಸರಿಯಾಗಿ ಗೊತ್ತಗದೆ ಹೋದ್ರೆ ಎತ್ತಕ್ಕೆ ಹಿಂಜರಿಕೆ ನಾ?

ಮೂಲ

8. ನಿಮಗೆ ಮೆಸೇಜ್ ಕಳಿಸೋದೆ ಅರಾಮ್ ಅನ್ನಿಸುತ್ತಾ?

ಏನೇ ಮುಖ್ಯಾವಾದ ವಿಷ್ಯ ಇದ್ರೂ ಫೋನ್ ಮಾಡೋಕಿಂತ ಮೆಸೇಜ್ ಕಳಿಸೋದೆ ಅನುಕೂಲ ಅನ್ನಿಸುತ್ತಾ? ಮೆಸೇಜ್ ಅನ್ನೋದು ಇಲ್ಲದೆ ಹೋಗಿದ್ರೆ ನಿಮಗೆ ಬಹಳ ಕಷ್ಟ ಆಗ್ತಿತ್ತು ಅನ್ನಿಸುತ್ತಾ?

ಮೂಲ

9. ಹೊತ್ತಲ್ಲದ ಹೊತ್ತಲ್ಲಿ, ಸಲ್ಲದ ಜಾಗದಲ್ಲೆಲ್ಲ ಇಂಟರ್ನೆಟ್ ಬಳಸ್ತೀರಾ?

ರಾತ್ರಿ 2 ಗಂಟೆಗೆ ಮೇಲ್ ಚೆಕ್ ಮಾಡೋದು, ವಾಟ್ಸಪ್ ನೋಡೋದು… ಬಚ್ಚಲು ಮನೆಯಲ್ಲೆಲ್ಲ ಫೋನ್ ಹಿಡ್ಕೊಂಡು ಕೂತ್ಕೊಳೋದು… ಇದೆಲ್ಲ ಮಾಡ್ತೀರಾ?

ಮೂಲ

ಮೇಲಿನ ಪ್ರಶ್ನೆಗಳಲ್ಲಿ 5 ಅಥವಾ ಹೆಚ್ಚು ಪ್ರಶ್ನೆಗಳಿಗೆ ನಿಮ್ಮ ಉತ್ತರ "ಹೂಂ" ಆಗಿದ್ದರೆ ಇಲ್ಲಿ ಒತ್ತಿ:

1-4  ಪ್ರಶ್ನೆಗಳಿಗೆ ನಿಮ್ಮ ಉತ್ತರ "ಹೂಂ" ಆಗಿದ್ದರೆ ಇಲ್ಲಿ ಒತ್ತಿ:

ಎಲ್ಲಾ ಪ್ರಶ್ನೆಗಳಿಗೂ ನಿಮ್ಮ ಉತ್ತರ "ಉಹೂಂ" ಆಗಿದ್ದರೆ ಇಲ್ಲಿ ಒತ್ತಿ:

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: