ಜಾಸ್ತಿ ಏನ್ ಬೇಡ, ಬೆಳಗ್ಗೆ ಹಾಸಿಗೆಯಿಂದ ಏಳೋ ಮುಂಚೆ ಈ 6 ತರ ಮೈ ಬಗ್ಗಿಸಿ ಸಾಕು

ಇಡೀ ದಿನ ಆರಾಮಾಗಿರ್ತೀರಿ

ಪ್ರತಿದಿನ ಬೆಲ್ಗೆ ಎದ್ದು ಗಡಿಬಿಡಿಲಿ ರೆಡಿಯಾಗಿ ಆಫೀಸಿಗೆ ಹೋಗಿ ತಲೆಕೊಡೋ ಕೆಲಸ ಮಾಡ್ಕೊಂಡ್ ಕೂರೋದಕ್ ಮುಂಚೆ, ಎತ್ತಕ್ಷಣ ಈ 6 ತರ ಮೈ ಬಗ್ಸಿದ್ರೆ ಇಡೀ ದಿನ ಆರಾಮಾಗಿರ್ತೀರ, ಹಾಗೆ ತಲೆಬಿಸಿನೂ ಕಮ್ಮಿ ಆಗತ್ತೆ.

1. ಇಡೀ ಮೈಯನ್ನ  ಹೀಗ್ ಬಗ್ಸಿ, ಫ್ರೀ ಆಗತ್ತೆ 

ಇಲ್ಲಿ ಪೋಟದಲ್ಲಿ ಇರೋತರ ಮಾಡಿ, ಉಸಿರನ್ನ ಎಳ್ಕೊಳ್ತ  ನಿಮ್ಮ  ಬೆರಳನ್ನ ಜೋಡುಸ್ಕೊಂಡು  ತಲೆ ಹಿಂದಕ್ಕೆ ಕೈ ತೊಗೊಂಡೋಗಿ ಹಾಗೆ ನಿಮ್ಮ ಕಾಲಿನ ಬೆರಳನ್ನ ಎಷ್ಟಾಗತ್ತೋ ಅಷ್ಟು ಮುಂದಕ್ಕ್ ಚಾಚಿ ಹೀಗೆ ಮಾಡ್ಬೇಕಾದ್ರೆ ಮನ್ಸಲ್ಲೇ 5 ತಂಕ ಎಣಿಸಿ ಆಮೇಲೆ ಉಸಿರನ್ನ ಬಿಡ್ತಾ ಮಾಮೂಲಿಯಾಗಿ ಮಲ್ಕೊಳಿ. ಇದೆ ತರ 3 ಸತಿ ಮಾಡಿ . ರಾತ್ರಿ ಮಲಗಿದ್ದಾಗ ಮೈ ಬಿಗಿಯಾಗಿರತ್ತೆ ಹೀಗ್ ಮಾಡಿದಾಗ ಫ್ರೀ ಆಗತ್ತೆ.

ಮೂಲ

2. ನಂಬರ್ 4 ಕಾಣೊತರ ಮೈ ಬಗ್ಸಿ   

ನಿಮ್ಮ ಎಡಗಾಲಿನ ಪಾದಾನ ಬಲಗಾಲಿನ ಮಂಡಿಮೇಲೆ ಇಟ್ಕೊಳಿ, ಬಲಗಾಲನ್ನ ಆದಷ್ಟು ಎದೆ ಹತ್ರ ಎಳ್ಕೊಳಿ, ನಂಬರ್ 4 ಶೇಪಲ್ಲಿ ಇದ್ದಂಗೆ ಕಾಣತ್ತೆ (ಚಿತ್ರದಲ್ಲಿ ನೋಡಿ), ಹೀಗ್ ಮಾಡಿ 5 ಸತಿ ಉಸಿರಾಡಿ, ಆಮೇಲೆ ಇದೇತರ ಇನ್ನೊಂದ್ ಕಾಲಲ್ಲಿ ಮಾಡಿ, ಹೀಗ್ ಮಾಡುದ್ರೆ ಹಿಂಬಾಗದ್ ಮೂಳೆ, ಮಂಡಿ, ತೊಡೆನ ಆರಾಮಾಗಿರೋಹಾಗೆ ಮಾಡತ್ತೆ.

ಮೂಲ

3. ಕೂತಿರೋಹಾಗೆ ಬಗ್ಗಿ ನೆಲ ಮುಟ್ಟಿ 

ಕೂತಿರೋಹಾಗೆ ಬಗ್ಗಿ ನೆಲ ಮುಟ್ಟಿ, ಮಂಡಿ ಹಾಗೆ ಇರ್ಲಿ ಕೈಯಿಂದ ನೆಲ ಮುಟ್ಟಿ, ಬೆನ್ನನ್ನ ಚೆನಾಗ್ ಬಗ್ಸಿ , ತಲೆ ಮತ್ತೆ ಕೈ ನೆಲ ನೋಡ್ಲಿ, ೫ ಸತಿ ಉಸಿರಾಡಿ, ಹೀಗ್ ಮಾಡುದ್ರೆ ಬೆನ್ನು ಫ್ರೀ ಆಗತ್ತೆ, ತಲೆಗೆ ಹೊಸ ಆಕ್ಸಿಜನ್ ಹೋಗಿ ಫುಲ್ ಫ್ರೆಶ್ ಆಗ್ತೀರಾ, ಚೆನಾಗ್ ಎಚ್ರ ಆಗತ್ತೆ.

ಮೂಲ

4. ಮಂಡಿನ ಎದೆಗೊತ್ಕಳಿ 

 ಮಂಡಿನ ಎದೆ ಹತ್ರ ತೊಗೋಳಿ, ಕೈಯಿಂದ  ನಿಮ್ಮ್ ಮಂಡಿನ  ಎದೆಗೆ ಒತ್ತಿರೋಹಾಗೆ ತಬ್ಬಿಕೊಳ್ಳಿ, ಹೀಗೆ ೧೦ ಸತಿ ಉಸಿರಾಡಿ, ತಲೆ ಆರಾಮಾಗಿ ದಿಂಬು ಮೇಲೆ ಇರ್ಲಿ, ಹೀಗ್ ಮಾಡುದ್ರೆ ಬೆನ್ನಿನ ಕೆಲ್ಗಡೆ ಫ್ರೀ ಆಗತ್ತೆ, ಸರಿ ಈಗ ಎದ್ದು ಕೆಲಸ ಮಾಡೋಣ ಅಂತ ಅನ್ಸೋಹಂಗ್ ಮಾಡತ್ತೆ.

ಮೂಲ

5. ಟಿ ಶೇಪಲ್ಲಿ ಮೈ ಮುರೀರಿ 

ಹೇಗ್ ಮಲಗಿದೀರೋ ಹಾಗೆ ಇರಿ, ನಿಮ್ಮ್ ಸೊಂಟನ ತಿರುಗ್ಸಿ , ಕಾಲು ಒಂದರಮೇಲೊಂದು ಇರ್ಲಿ, ಒಂದ್ ಕೈನ ಇನ್ನೊಂದ್ಕಡೆ ಆರಾಮಾಗಿ ಚಾಚ್ಕೊಳಿ, ಆಗದಾದ್ರೆ ತಲೆನೂ ತಿರುಗ್ಸಿ (ಫೋಟೋ ನೋಡಿ) ಟಿ ಇರೋತರ ಇರ್ತೀರ, ಹೀಗೆ ೧೦ ಸತಿ ಉಸ್ರಾಡಿ, ಕುತ್ತಿಗೆ ಮೂಳೆ ಆರಾಮಾಗತ್ತೆ ಹಂಗೆ ಇಡೀ ದೇಹಕ್ಕೆ ರಕ್ತ ಚೆನ್ನಾಗಿ ಹರಿಯತ್ತೆ.  

ಮೂಲ

6. ಮೂಗನ್ನ ಮಂಡಿಗೆ ತಾಕ್ಸೋತರ ಬಗ್ಗಿ

ಕಾಲನ್ನ ಮುಂದಕ್ ಚಾಚಿ, ಉಸ್ರನ್ನ ಎಳ್ಕೊತಾ ಬೆನ್ನನ್ನ ಎತ್ತಿಕೊಂಡು  ಕೈಯನ್ನ ಚಾಚಿ ನಿಮ್ಮ ಪಾದಾನ ಹಿಡ್ಕೊಳಿ, ತಲೆಯಿಂದ ಮುಂದಕ್ಕೆ ಬಗ್ಗಿ, ಮೂಗು ಮಂಡಿಗೆ ತಾಕ್ಸೋತರ ಬಗ್ಗಿ ಉಸ್ರನ್ನು ಬಿಡಿ. ಉಸಿರನ್ನ ಎಳ್ಕೊಬೇಕ್ಕಾದ್ರೆ ಎಷ್ಟಾಗತ್ತೋ ಅಷ್ಟು ಬೆನ್ನನ್ನ ಎತ್ತಿ ಮುಂದಕ್ ಬಗ್ಗಿ. ಹೀಗೆ 10 ಸತಿ ಉಸ್ರಾಡಿ. ಕತ್ತು, ಬೆನ್ನು, ಮಂಡಿ , ಪಕ್ಕೆ, ಕಿಬ್ಬೊಟ್ಟೆ ಎಲ್ಲ ಫ್ರೀ ಆಗತ್ತೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ರಾಮಾಯಣ ಅರಿದು ಕುಡಿದಿದ್ದರೆ ಮಾತ್ರ ನಿಮಗೆ ಈ 10 ವಿಚಿತ್ರ ಸತ್ಯಗಳು ಗೊತ್ತಿರಕ್ಕೆ ಸಾಧ್ಯ

ಇಲ್ಲದಿದ್ದರೆ ಬಹಳ ಆಶ್ಚರ್ಯ ಆಗುತ್ತೆ

ಕೆಲವ್ರು ರಾಮಾಯಣ ಮತ್ತೆ ಮಹಾಭಾರತ ಅರಿದು ಕುಡಿದು ಬಿಟ್ಟಿದ್ದೀವಿ ಅಂತಿರ್ತಾರೆ. ಆದ್ರೂ ಕೆಲವೊಂದು ವಿಷಯಗಳು ಎಷ್ಟೋ ಮಂದಿಗೆ ಗೊತ್ತಿರಲ್ಲ. ವಾಲ್ಮೀಕಿ ಬರೆದಿರೋಂತ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಇಂದಿನವ್ರಿಗೂ ಆದರ್ಶ. ಈವತ್ತಿಗೂ ರಾಮಾಯಣ, ಅದ್ರ ಪಾತ್ರಗಳು ನಮಗೆಲ್ಲಾ ದಾರಿ ತೋರಿಸೋ ತರಹ ಇವೆ. ಆದ್ರೂ ರಾಮಾಯಣದ  ಬಗ್ಗೆ ಎಷ್ಟೋ ಸತ್ಯಗಳು ಜನಕ್ಕೆ ಗೊತ್ತಿರಲ್ಲ. ಮಹಾನ್ ಪಂಡಿತರಿಗೆ ಮಾತ್ರ ಗೊತ್ತಿರುವಂಥ 10 ವಿಚಿತ್ರ ಸತ್ಯಗಳನ್ನು ನಾವಿಲ್ಲಿ ಕೊಡ್ತಿದ್ದೇವೆ.

1. ರಾಮನಿಗೆ ಶಾಂತಾ ಅಂತ ಒಬ್ಬಳು ಅಕ್ಕ ಇರ್ತಾಳೆ

ದಶರಥನಿಗೆ ಕೌಸಲ್ಯೆಯಿಂದ ಹುಟ್ಟಿದ ಮಗಳು ಇವಳು. ಅಂಗದೇಶದ ರಾಜ ರೋಮಪಾದ ಅವಳನ್ನ ದತ್ತು ತೊಗೊಂಡಿರ್ತಾನೆ.

2. ರಾವಣನಿಗೆ 10 ತಲೆಗಳು ಬಂದದ್ದು ಈಶ್ವರನಿಂದ

ಈಶ್ವರನ ಪರಮ ಭಕ್ತನಾಗಿದ್ದ ರಾವಣ. ಘೋರ ತಪಸ್ಸು ಮಾಡಿ ತಲೆಯನ್ನೇ ಈಶ್ವರನಿಗೆ ಅರ್ಪಿಸಿದ್ದ. ಆದರೂ ತಲೆ ಮತ್ತೆ ಬೆಳೀತಿತ್ತಂತೆ. ಹತ್ತು ಸಲ ತಲೆ ಈಶ್ವರನಿಗೆ ಅರ್ಪಿಸಿದರೂ ಅದು ಮತ್ತೆಮತ್ತೆ ಬೆಳೀತಾನೇ ಇತ್ತಂತೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಎಲ್ಲಾ ಹತ್ತು ತಲೆಗಳನ್ನು ವಾಪಸ್ಸು ಕೊಟ್ನಂತೆ. ಹಾಗಾಗಿ ರಾವಣನಿಗೆ 10 ತಲೆಗಳು ಬಂದವು ಅಂತ ಪುರಾಣ ಹೇಳುತ್ತೆ.

3. ರಾವಣನಿಗಿಂತ ಮೊದಲು ಲಂಕೇನ ಕುಬೇರ ಆಳ್ತಿರ್ತಾನೆ

ಲಂಕೆಯನ್ನ ಕಟ್ಟಿ ಆಳ್ತಾ ಇದ್ದದ್ದು ಕುಬೇರ. ಅವನ ಮಲಣ್ಣ ರಾವಣ ಯುದ್ದ ಮಾಡಿ ಕುಬೇರನಿಂದ ಲಂಕೆಯನ್ನ ಕಿತ್ತುಕೊಂಡ ಅಂತ ಪುರಾಣ ಹೇಳುತ್ತೆ.

 

4. ಲಕ್ಷ್ಮಣ ಶೇಷನಾಗನ (ಆದಿಶೇಷನ) ಅವತಾರ

ವಿಷ್ಣುವಿನ ಅವತಾರ ರಾಮ ಅನ್ನೋದು ಎಲ್ರಿಗೂ ಗೊತ್ತು. ಆದರೆ ಶೇಷನಾಗನ ಅವತಾರ ಲಕ್ಷ್ಮಣ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ.   

5. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಲಕ್ಷ್ಮಣ ನಿದ್ದೇನೇ ಮಾಡಲ್ಲ

ಯಾಕಂದ್ರೆ ವನವಾಸದಲ್ಲಿದ್ದ ರಾಮ ಮತ್ತೆ ಸೀತೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋಬೇಕಾಗಿತ್ತು. ಅದಕ್ಕಾಗಿ ತನಗೆ ನಿದ್ದೆ ಬರದೆ ಇರೋಹಂಗೆ ನಿದ್ರಾದೇವಿಯ ವರ ಪಡ್ಕೊಂಡಿರ್ತಾನೆ ಲಕ್ಷ್ಮಣ.

6. ಶ್ರೀಕೃಷ್ಣನನ್ನ ಬೇಟೆಗಾರನಾಗಿ ಬಂದು ಕೊಂದದ್ದು ವಾಲಿ

ಮರದ ಕೆಳಗೆ ಮಲಗಿ ನಿದ್ದೆ ಮಾಡ್ತಿದ್ದಾಗ ಶ್ರೀಕೃಷ್ಣನನ್ನ ಜರಾ ಅನ್ನೋ ಬೇಟೆಗಾರ ಬಾಣಬಿಟ್ಟು ಕೊಂದ. ಈ ಬೇಟೆಗಾರ ಬೇರೆ ಯಾರು ಅಲ್ಲ, ವಾಲಿ ಅವತಾರ. 

7. ಲಕ್ಷ್ಮಣ ಸಾಯೋದು ರಾಮನ ಒಂದು ಮಾತಿಂದ

ಒಮ್ಮೆ ಯಮಧರ್ಮನನ್ನು ರಾಮ ಭೇಟಿಯಾಗಿ ನಮ್ಮಿಬ್ಬರ ಮಾತುಕತೆಗೆ ಯಾರೇ ಬಂದು ಅಡ್ಡಿಪಡಿಸಿದ್ರೂ ಅವರನ್ನ ಸಾಯಿಸಿಬಿಡು ಅಂತ ಕೇಳ್ಕೊಂಡಿದ್ದ. ಅದೇ ಟೈಮಿಗೆ ಪಾಪ ಲಕ್ಷ್ಮಣ ಬರ್ತಾನೆ. ರಾಮನನ್ನ ಮಾತಾಡ್ಬೇಕು ಅಂತಾನೆ. ಆಗ ರಾಮ ಹೇಳಿದಂಗೆ ಲಕ್ಷ್ಮಣನ್ನ ಯಮ ಸಾಯಿಸ್ತಾನೆ.

8. ಹನುಮಂತನಿಗೆ ಒಂದು ಹೂವಿನಿಂದ ಭಜರಂಗಬಲಿ ಅಂತ ಹೆಸರು ಬಂತು

ಸಿಂಧೂರ ಹೂವು ತಲೆ ಮೇಲೆ ಇದ್ದಷ್ಟು ಹೊತ್ತು ರಾಮ ಆರೋಗ್ಯವಾಗಿರ್ತಾನೆ ಅಂತ ಹನುಮಂತನಿಗೆ ಒಮ್ಮೆ ಸೀತೆ ಹೇಳಿದ್ಲು. ಅದನ್ನ ಕೇಳಿ ಹನುಮ ದೇಹವನ್ನೇ ಸಿಂಧೂರವಾಗಿ ಬದಲಾಯಿಸಿಕೊಂಡಿದ್ದ. ಭಜರಂಗ್ ಅಂದ್ರೆ ಸಿಂಧೂರ ಅಂತ ಅರ್ಥ. ತನ್ನನ್ನು ತಾನು ಸಿಂಧೂರವಾಗಿಸಿಕೊಂಡ ಕಾರಣ ಭಜರಂಗಬಲಿ ಅಂತ ಹೆಸರು ಬಂತು.

9. ಅಳಿಲು ಬೆನ್ನ ಮೇಲೆ ಮೂರು ಗೆರೆ ಇರೋದಕ್ಕೆ ರಾಮ ಕಾರಣ

ಲಂಕೆಗೆ ಹೋಗ್ಬೇಕಾದ್ರೆ ಕಪಿಸೈನ ರಾಮಸೇತು ಕಟ್ಟಿತು. ಅದನ್ನ ಕಟ್ಟಬೇಕಾದ್ರೆ ಅಳಿಲುಗಳು ಮಣ್ಣನ್ನ ತಂದುಕೊಡ್ತಿದ್ವು. ಇದನ್ನ ಕಂಡ ಕಪಿಸೈನ್ಯ ನಗಾಡ್ತಿತ್ತು. ಆದರೆ ರಾಮನು ಅವುಗಳ ಅಳಿಲು ಸೇವೆಯನ್ನ ತುಂಬಾ ಇಷ್ಟಪಟ್ಟಿದ್ದ. ಅಳಿಲನ್ನ ಎತ್ಕೊಂಡು ಬೆನ್ನು ಸವರಿದಾಗ ಈ ಮೂರು ಗೆರೆಗಳು ಮೂಡಿದ್ವಂತೆ. 

 

10. ಶೂರ್ಪಣಖೀಗೆ ಅಣ್ಣ ರಾವಣನ್ನ ಸಾಯಿಸಬೇಕು ಅನ್ನೋ ಬಯಕೆ ಇರುತ್ತೆ

ಇದು ನಿಜವಾಗ್ಲೂ ಅಚ್ಚರಿ ಪಡೋಂತ ಸಂಗತಿ. ಶೂರ್ಪಣಕಿಯ ಗಂಡ ದುಷ್ಟಬುದ್ಧಿ ಅನ್ನೋನ್ನ ರಾವಣ ಸಾಯಿಸಿರ್ತಾನೆ. ಕೆಲವು ರಾಮಾಯಣಗಳಲ್ಲಿ ರಾವಣನ ಮೇಲೆ ಸೇಡು ತೀರಿಸಿಕೊಳಕ್ಕೆ ಶೂರ್ಪಣಕಿ ದೊಡ್ಡ ನಾಟಕ ಮಾಡಿ, ಯುದ್ಧ ಆಗೋಹಾಗೆ ನೋಡ್ಕೊಂಡು ರಾವಣನ ಸಾವಿಗೆ ಕಾರಣ ಆಗ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: