ಭಾರತೀಯ ರೈಲ್ವೇ ಬಗ್ಗೆ ಈ 11 ಸತ್ಯಗಳು ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲ

ಸಸ್ಪೆನ್ಷನ್ ಕಂಪನಾಂಕ 1.2 Hz ಇರೋದ್ರಿಂದ ಟ್ರೇನಲ್ಲಿ ನಿದ್ದೆ ಚೆನ್ನಾಗಿ ಬರುತ್ತೆ

ರೈಲಲ್ಲಿ ಓಡಾಡೋಷ್ಟು ಮಜಾ ಬೇರೆಲ್ಲೂ ಸಿಗಲ್ಲ. ಸ್ವಲ್ಪ ಟೈಮ್ ಜಾಸ್ತಿ ಆದ್ರೂ ಪರ್ವಾಗಿಲ್ಲ ಅಂದ್ಕೊಳ್ಳೋರು ಹೊಲ-ಗದ್ದೆ, ಕಾಡು-ಮೇಡು, ಬೆಟ್ಟ-ಗುಡ್ಡ ನೋಡ್ಕೋಂಡ್ ಟ್ರೇನಲ್ಲಿ ಹೋಗ್ಬೋದು. ಹೊಸ ದಾರಿ, ಹೊಸಹೊಸ ಜನ ಪರಿಚಯವಾಗ್ತಾರೆ. ಅದೆಲ್ಲಾ ಬಿಡಿ. ಗೊತ್ತಿರೋದೆ. ಆದರೆ ಭಾರತೀಯ ರೈಲ್ವೇ ಬಗ್ಗೆ ಬಹಳಷ್ಟು ವಿಷಯಗಳು ಗೊತ್ತಿರುತ್ತೆ. ಆದರೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲದೆ ಇರೋಂತ ಸಾಕಷ್ಟು ವಿಷಯ ಇದೆ.

1. ರಾಜಧಾನಿ ಎಕ್ಸ್‌ಪ್ರೆಸಲ್ಲಿ ಕೆಲಸ ಮಾಡೋ ಲೋಕೋ ಪೈಲೆಟ್‌ ಸಂಬಳ ತಿಂಗಳಿಗೆ 1 ಲಕ್ಷ ರೂಪಾಯಿ

ತುಂಬಾ ಜವಾಬ್ದಾರಿ ಇರೋಂತ ಕೆಲಸ, ಅದಕ್ಕೇ ಕೈತುಂಬ ಸಂಬಳ.

ಮೂಲ

2. ಟ್ರೇನಿನ ಸಸ್ಪೆನ್ಷನ್ ಕಂಪನಾಂಕ 1.2 Hz ಇರೋದ್ರಿಂದ ಟ್ರೇನಲ್ಲಿ ನಿದ್ದೆ ಚೆನ್ನಾಗಿ ಬರುತ್ತೆ

ಈ ಫ್ರೀಕ್ವೆನ್ಸಿ ಮನುಷ್ಯನಿಗೆ ಬಹಳ ಆರಾಮು ಕೊಡುತ್ತೆ. ಆದ್ರಿಂದ್ಲೇ ಬಹಳಷ್ಟು ಜನ ಟ್ರೇನ್ ಪ್ರಯಾಣದಲ್ಲಿ ಆರಾಮವಾಗಿ ಹಾಗೇ ನಿದ್ದೆಗೆ ಜಾರ್ಕೊಂಡ್ ಬಿಡ್ತಾರೆ.

ಮೂಲ

3. ಭಾರತೀಯ ರೈಲ್ವೆಯಲ್ಲಿರೋ 14,300 ಟ್ರೇನುಗಳು ಪ್ರತಿ ದಿನ ಓಡಾಡೋ ದೂರ ಚಂದ್ರನಿಗೆ ಮೂರುವರೆಯಷ್ಟು ದೂರ

ಮೂಲ

4. ಭಾರತೀಯ ರೈಲ್ವೆ ವೆಬ್‌ಸೈಟ್ಗೆ ಪ್ರತಿ ನಿಮಿಷಕ್ಕೆ 12 ಲಕ್ಷ ಹಿಟ್ಸ್ ಬರುತ್ತವೆ

ಪ್ರತಿ ದಿನ ಲಕ್ಷಾಂತರ ಜನ ವೆಬ್‌ಸೈಟಿಗೆ ಭೇಟಿ ಕೊಡ್ತಾರೆ ಅಂದ್ರೆ ಎಂಥ ಸರ್ವರ್‌ ಇರ್ಬೇಕು ನೋಡಿ!

ಮೂಲ

5. ಹಳೆ ಕಾಲದಲ್ಲಿ ಬೋಗಿಗಳನ್ನ ಕೂರ್ಸೋಕೆ ಆನೆಗಳನ್ನ ಬಳಸ್ತಿದ್ರು

ಈಗ ಪರಿಸ್ಥಿತಿ ಆ ರೀತಿ ಇಲ್ಲ, ಆದರೆ ಹಳೆ ಕಾಲದಲ್ಲಿ ಆನೆಗಳನ್ನ ಬಳಸ್ತಿದ್ರು.

ಮೂಲ

6. ಭಾರತದಲ್ಲಿ ಅತ್ಯಂತ ಉದ್ದವಾದ ಹೆಸರಿರೋ ರೈಲ್ವೇ ಸ್ಟೇಷನ್ನು ಅಂದ್ರೆ "ವೆಂಕಟನರಸಿಂಹರಾಜುವಾರಿಪೇಟ"

ಮೂಲ

7. ಅತ್ಯಂತ ಚಿಕ್ಕ ಹೆಸರಿನ ರೈಲ್ವೇ ಸ್ಟೇಷನ್ ’ಈಬ್’

ಈ ರೈಲ್ವೇ ಸ್ಟೇಷನ್ನು ಒಡಿಶಾದ ಝಾರ್ಸುಗೂಡದಲ್ಲಿದೆ. 

ಮೂಲ

8. ತುಂಬಾ ಲೇಟ್ ಟ್ರೇನು ಅಂದ್ರೆ ಗುವಾಹಟಿ-ಟ್ರಿವೇಂಡ್ರಂ ಎಕ್ಸ್‌ಪ್ರೆಸ್

ಎಲ್ಲಾ ಟ್ರೇನುಗಳು ಈ ತರಹ ಇರಲ್ಲ. ಆದರೆ ತುಂಬಾ ಲೇಟಾಗಿ ಬರೋಂತ ಟ್ರೇನು ಅಂದ್ರೆ ಇದೇ.  ಸರಾಸರಿ ಹತ್ತರಿಂದ ಹನ್ನೆರಡು ಗಂಟೆ ಲೇಟಾಗಿ ಬಂದು ದಾಖಲೆ ನಿರ್ಮಿಸಿದೆ. 

ಮೂಲ

9. ಅತ್ಯಂತ ದೂರ ಹೋಗೊಂತ ಟ್ರೇನು ವಿವೇಕ್ ಎಕ್ಸ್‌ಪ್ರೆಸ್: ಇದು 4273 ಕಿ.ಮೀ ದೂರ ಪ್ರಯಾಣ ಮಾಡುತ್ತೆ.

ದಿಬ್ರುಗರ್‌ನಿಂದ ಕನ್ಯಾಕುಮಾರಿತನಕ ಹೋಗೋ ವಿವೇಕ್ ಎಕ್ಸ್‌ಪ್ರೆಸ್ ಅತ್ಯಂತ ದೂರ ಪ್ರಯಾಣಿಸೋಂತ ಟ್ರೇನು. 

ಮೂಲ

10. ಎರಡು ಜಂಕ್ಷನ್ ಮಧ್ಯದಲ್ಲಿರೋ ಅತಿ ಕಡಿಮೆ ದೂರ ಅಂದ್ರೆ 3 ಕಿ.ಮೀ.

ನಾಗಪುರ ಮತ್ತೆ ಅಜನಿ ಜಂಕ್ಷನ್‌ಗಳ ನಡುವಿನ ಅಂತರ ಕೇವಲ 3 ಕಿ.ಮೀ. ಇದು ಅತ್ಯಂತ ಕಡಿಮೆ ದೂರದಲ್ಲಿರೋಂತ ಜಂಕ್ಷನ್‌ಗಳು.

ಮೂಲ

11. "ನವಪುರ" ರೈಲ್ವೇ ನಿಲ್ದಾಣ ಅರ್ಧ ಒಂದು ರಾಜ್ಯದಲ್ಲಿ ಅರ್ಧ ಇನ್ನೊಂದು ರಾಜ್ಯದಲ್ಲಿದೆ

ಹೌದು ಒಂದು ಹೆಜ್ಜೆ ಆಕಡೆ ಇಟ್ರೆ ಮಹಾರಾಷ್ಟ್ರ, ಇನ್ನೊಂದು ಹೆಜ್ಜೆ ಈ ಕಡೆ ಇಟ್ರೆ ಅದು ಗುಜರಾತ್. ಈ ರೀತಿ ಎರಡು ರಾಜ್ಯಗಳಲ್ಲಿ ಅರ್ಧರ್ಧ ಹಂಚಿಹೋಗಿರುವ ನಿಲ್ದಾಣದ ಹೆಸರು ನವಪುರ. 

ಮೂಲ

ಸಕ್ಕತ್ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: