ನೀವು ಒಪ್ಪದೆ ಇರಬಹುದು, ಆದರೆ ಈ 24 ಗುರುತುಗಳು ಸುಳ್ಳು ಹೇಳಲ್ಲವಲ್ಲ?

ವಿಷಯಾನೇ ಹಂಗೆ

ಎಲ್ಲರ ಜೀವನದಲ್ಲೂ ಈ ಅನುಭವ ಆಗೇ ಆಗಿರುತ್ತೆ. ಕೆಲವರು ಒಪ್ಪಲ್ಲ, ಅಷ್ಟೇ :-) ನೀವ್ ಏನೇ ಹೇಳಿ, ಕೆಳಗೆ ಕೊಟ್ಟಿರೋ ತರಹ ಎಲ್ಲಾ ನಿಮಗೆ ಆಗ್ತಿದ್ರೆ ನಿಮಗೆ ಲವ್ವಾಗಿದೆ ಅಂತರ್ಥ!

1. ದಿನದ 24 ಗಂಟೇನೂ ಅವನ/ಳ ಬಗ್ಗೇನೇ ಯೋಚನೆ ಮಾಡೋದು

ಮೂಲ

2. ಮೆಸೇಜ್ ಕಳ್ಸಕ್ಕೆ ಮೊದ್ಲು ಕಳ್ಸಲಾ ಬೇಡವಾ ಕಳ್ಸಲಾ ಬೇಡವಾ ಅಂತ ಯೋಚನೆ ಮಾಡೋದು

3. ನಿಮ್ಮ ಫೊನ್ ರಿಂಗಾದಾಗ್ಲೆಲ್ಲಾ ಅವಳೇ/ನೇ ಅನ್ನಿಸೋದು

ಮೂಲ

4. ದಿನಕ್ಕೆ ಒಂದ್ಸಲ ಆದರೂ ಮಾತಾಡ್ಲಿಲ್ಲಾಂದ್ರೆ ಏನೋ ಕಳ್ಕೂಂಡಂಗೆ ಆಗೋದು

5. ಮಾತಾಡಕ್ಕೆ ಏನೂ ಇಲ್ದೇ ಹೋದ್ರೂ ಹೊಸ ನೆಪ ಹುಡುಕ್ಕೊಂಡು ಮಾತಾಡೋದು

6. ಅವನ/ಳ ನೆನಪಿಗೋಸ್ಕರ ಅದು ಇದು ಕೂಡಿಟ್ಕೊಳೋದು

ಉದಹರಣೆಗೆ ಚಾಕೋಲೇಟ್ ಕವರು, ಹೋಟೆಲ್ ಹೋಗಿದ್ದು ನೆನಪಿಗೆ ಟಿಶ್ಯು ಪೇಪರ್, ಮೊದಲು ನೋಡಿದ್ದ ಮೂವಿ ಟಿಕೆಟ್ ಇಟ್ಕೊಳೋದು.....

7. ಭವಿಷ್ಯದ ಬಗ್ಗೆ ನೀವು ಕಾಣೋ ಕನುಸಲ್ಲಿ ಅವರು ಕಾಣಿಸೋದು

ಮುಂದೆ ನೆಡಿಯೋ ಎಲ್ಲಾ ಘಟನೆಗಳಲ್ಲೂ ಅವರ ಜೊತೆನೇ ಇದ್ರೆ ಹೇಗಿರುತ್ತೆ ಅಂತ ಕನಸುಕಾಣೋದು.

ಮೂಲ

8. ಅವಳ/ನ ನೆನಪು ಮಾಡ್ಕೊಂಡ ತಕ್ಷಣ ನಿಮ್ಮ ಹೃದಯ ಒಂದ್ ಕ್ಷಣ ನಿಂತಂಗೆ ಆಗೋದು

9.  ಏನೇನೋ ನೆನಪಿಸಿಕೊಂಡು ಸುಮ್-ಸುಮ್ನೆ ನಗೋದು…

10. ಅವಳಿಗೆ/ನಿಗೆ ಏನೇನು ಇಷ್ಟ ಅಂತ ತಿಳ್ಕೋಳಕ್ಕೆ ಶುರು ಮಾಡೋದು

11. ಅವಳಿಗೆ/ನಿಗೆ ಏನಾದ್ರು ವಿಶೇಷವಾದ ಗಿಪ್ಟ್ ಕೊಡಬೇಕೂಂತ ಆನ್ಲೈನ್ ನಲ್ಲಿ ಸಿಕ್ಕಾಪಟ್ಟೆ ಹುಡುಕಾಡೋದು

12. ಅವಳಿಗೆ/ನಿಗೆ ಇಷ್ಟ ಆಗೋದನ್ನೆಲ್ಲಾ ನೀವು ಇಷ್ಟ ಪಡಕ್ಕೆ ಶುರು ಮಾಡೋದು

13. ಮೀಟ್ ಮಾಡಕ್ಕೆ ಹೋಗೊವಾಗ ಸಕ್ಕತ್ ಚೆನ್ನಾಗಿರೋ ಬಟ್ಟೆ ಹಾಕೊಳೋದು

ಮೂಲ

14.  ಯಾವಾಗ್ಲೂ ಅವನ/ಳ ಬಗ್ಗೇನೇ ಮಾತಾಡ್ತಿರೋದು

15. ನೋಡಿದ್ದೇ ತಡ ’ವಾವ್ ಸಕ್ಕತ್ತಾಗಿ ಕಾಣ್ತಿದಾಳೆ/ನೆ’ ಅನ್ನಿಸೋದು

16. ಅವಳೂ/ನೂ ನಿಮ್ಮನ್ನ ಪ್ರೀತಿಸ್ತಾಳಾ/ನಾ ಅಂತ ತಿಳ್ಕೊಳಕ್ಕೆ ಅವಳ/ನ ಹಾವಭಾವ ಗಮನಿಸಕ್ಕೆ ಶುರು ಮಾಡೋದು

17. ಸಿಕ್ಕಾಪಟ್ಟೆ ಕೆಲಸ ಇದ್ರೂನು ಅವಳ/ನ ಬಗ್ಗೆ ಯೋಚನೆ ಮಾಡೋದು

ಮೂಲ

18. ಬೇಟಿಮಾಡಕ್ಕೆ ಸಿಗೋ ಒಂದು ಅವಕಾಶನೂ ಬಿಡದೆ ಇರೋದು

19. ಅವಳ/ನ ಹೆಸರು ಕೇಳಿದ್ದೇ ತಡ ಒಳಗೊಳಗೇ ಖುಷಿ ಆಗೋದು

20. ನೀವು ಮೊದಲಸಲ ಪ್ರೀತಿಯಿಂದ ತಬ್ಬಿಕೊಂಡಿದ್ದು ಆಗಾಗ ನೆನಪಾಗೋದ

ಮೂಲ

21. ಕನ್ನಡಿ ಮುಂದೆ ಜಾಸ್ತಿ ಟೈಮ್ ಕಳೆಯೋದು

ಮೂಲ

22. ಯಾವಾಗ್ಲೂ ಚೆನ್ನಾಗಿ ಕಾಣೋ ಪ್ರಯತ್ನ ಮಾಡೋದು

23. ಏನಾದರೂ ಓದುವಾಗಲೂ, ಫಿಲಂ ಗಿಲಂ ನೋಡುವಾಗಲೂ ಅವಳದೇ/ನದೇ ನೆನಪಾಗೋದು

24. ಎಲ್ಲಕ್ಕಿಂತ ಹೆಚ್ಚಾಗಿ ಈ ಅಂತೆಕಂತೇನ ನೀವು ಓದ್ತಾ ಇರೋದೂ ಒಂದು ಮುಖ್ಯವಾದ ಗುರುತು!

ಅಲೆಲೇ... ಮುಖದ್ ಮೇಲೆ ನಗು ನೋಡು!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: