ಈಗಿನ್ ಕಾಲದಲ್ಲಿ ಸಂಸಾರ ಚೆನ್ನಾಗ್ ನಡೀಬೇಕಾದ್ರೆ ಗಂಡ-ಹೆಂಡತಿಗೆ ಈ 6 ವಿಷಯ ಗೊತ್ತಿರಬೇಕು

ಸಂಬಂಧ ಉಳಿಯತ್ತೆ, ಬೆಳೆಯುತ್ತೆ

ಮದುವೆ ಅನ್ನೋದು ಜನ್ಮ ಜನ್ಮದ ಅನುಬಂಧ. ಬ್ರಹ್ಮ ಸ್ವರ್ಗದಲ್ಲಿ ಜೋಡಿ ಮಾಡಿ ಕಳ್ಸಿರ್ತಾನೆ. ಅದೂ ಒಂದು ಜನ್ಮಕ್ಕಲ್ಲ ಏಳೇಳು ಜನುಮಕ್ಕೂ ಒಬ್ಬನೇ/ ಒಬ್ಬಳೇ ಸಂಗಾತಿ ಅನ್ನೋ ಮಾತುಗಳನ್ನೆಲ್ಲ ನಾವು ಕೇಳ್ತಾನೆ ಇರ್ತೀವಿ. ಆದರೂ ಇತ್ತೀಚೆಗೆ ವಿಚ್ಛೇದನಗಳು ಜಾಸ್ತಿ ಆಗಿವೆ.

ಮದುವೇಲಿ ಮುಂಚಿನ ಆಸಕ್ತಿ ಇಲ್ಲ, ನಂಬಿಕೆ ಇಲ್ಲ, ಎಲ್ಲೊ ಒಂದೊಂದು ಸಾರಿ ಮದುವೆ ತನ್ನ ಅರ್ಥ ಕಳೆದುಕೊಳ್ತಾ ಇದೆಯೇನೊ ಅನ್ಸುತ್ತೆ. ಸಣ್ಣ ಪುಟ್ಟ ಕಾರಣಗಳಿಗೂ ದೂರ ಆಗೋದು ಸರ್ವೇಸಾಮಾನ್ಯ ಆಗಿಹೋಗಿದೆ. 

ಎಲ್ಲಾ ಸಂಬಂಧಗಳೂ ಕ್ಷೀಣಿಸ್ತಾ ಇರೊ ಸಮಯದಲ್ಲಿ, ಸ್ವಲ್ಪ ಸಮಯ, ಸ್ವಲ್ಪ ಸಂಯಮ ಹಾಗೆ ತಾಳ್ಮೆಯಿಂದ ಯೋಚ್ನೆ ಮಾಡಿದ್ರೆ ಎಷ್ಟೋ ಸಂಬಂಧಗಳು ಉಳಿಯುತ್ವೆ. ಹಲವಾರು ವಿಚೇದನದ ದಾರಿ ಹಿಡಿದ ದಂಪತಿಗಳು ಇನ್ನೋಂದು ಬಾರಿ ಯೋಚ್ನೆ ಮಾಡಿ ಸಂಬಂಧ ಉಳಿಸಿಕೊಂಡದ್ದೂ ಇದೆ.

1. ಏನೇ ಆದರೂ ಮಾತಾಡಕ್ಕೆ ಹಿಂಜರೀಬೇಡಿ

ನಿಮ್ಮ ದಿನ ಎಷ್ಟೇ ಬ್ಯುಸಿ ಇದ್ರೂ, ಮನೆ ತುಂಬಾ ಜನ ಇದ್ರೂ, ಪ್ರತೀದಿನ ಒಂದು 15 ನಿಮಿಷ ಆದ್ರೂ ನಿಮ್ಮ ಸಂಗಾತಿಗೆ ಸಮಯ ಕೊಡಿ.  ಈ 15 ನಿಮಿಷ ನಿಮ್ಮಿಬ್ಬರ ಸಂಬಂಧಕ್ಕಷ್ಟೇ ಮೀಸಲು ಕೆಲಸ ಕಾರ್ಯ ಮಿಕ್ಕವರ ಮಾತಿಗಲ್ಲ.

ಮೂಲ

2. ಒಬ್ಬರಿಗೊಬ್ರು ಗೌರವ ಕೊಡಿ

ನಿಮ್ಮ ಸಂಬಂಧ  ಜೀವಂತವಾಗಿಡೋದಕ್ಕೆ ನೀವು ಒಬ್ಬರನ್ನೊಬ್ಬರು ಎಷ್ಟು ಗೌರವಿಸ್ತೀರೋ ಅಷ್ಟೂ ಒಳ್ಳೆದು. ಕೇವಲ ವ್ಯಕ್ತಿ ಅಲ್ಲದೆ ಅವರ ಅಭಿಪ್ರಾಯನ ಕೂಡ ಗೌರವಿಸ ಬೇಕು.

ನಿಮ್ಮ ಸಂಗಾತಿ ಸದಾ ನೀವು ಹೇಳಿದ ಹಾಗೆ ಇರಬೇಕು ಅನ್ನೋದು ತಪ್ಪು. ನಿಮ್ಮ ನಿರ್ಧಾರದಲ್ಲಿ ನಿಮ್ಮ ಸಂಗಾತಿ ಪಾತ್ರಾನೂ ಇರಲಿ.

ಮೂಲ

3. ಆದಷ್ಟು ಹೊಂದಾಣಿಕೆ ಮಾಡ್ಕೊಳಿ

ಜೊತೆಲಿ ಜೀವನ ಮಾಡೋ ನಿರ್ಧಾರ ನಿಮ್ಮದಾದ ಮೇಲೆ ಸ್ವಲ್ಪ ಹೊಂದಾಣಿಕೆ ಅತ್ಯಗತ್ಯ. ಮದುವೆಗೆ ಮುಂಚೆ ಇದ್ದ ಜೀವನ ಬೇರೆ. ಮದುವೆಗೆ ಮುಂಚೆ ನಾನು ಇದ್ದದ್ದು ನಂತರ ನಾವು ಆಗುತ್ತೆ. ನಾವು ಅನ್ನೊ ಜೀವನದಲ್ಲಿ ಇಬ್ಬರೂ ಇಂದೊಂದು ಹೆಜ್ಜೆ ಮುಂದು ಬಂದು ಹೊಂದಾಣಿಕೆ ಮಾಡ್ಕೊಂಡ್ರೆ ಜೀವನ ಸುಖಮಯ ಆಗಿರುತ್ತೆ.

ಮೂಲ

4. ಹಣಕಾಸಿನ ವಿಚಾರ ಇಬ್ರಿಗೂ ತಿಳಿದಿರ್ಲಿ

ಗಂಡ-ಹೆಂಡತಿ ಇಬ್ಬರೂ ದುಡಿತಿದೀರಿ ಸರಿ, ನಿಮ್ಮಿಬ್ಬರಿಗೂ ಆರ್ಥಿಕ ಸ್ವತಂತ್ರ ಇದೆ ಅದೂ ಸರಿ, ಆದ್ರೆ ನೀವು ಮಾಡೋ ಖರ್ಚು ವೆಚ್ಚ ಇಬ್ಬರಿಗೂ ತಿಳಿದಿದ್ರೆ ಸಂಬಂಧ ಚೆನ್ನಾಗಿರುತ್ತೆ.

ಮೂಲ

5. ಅತ್ತೆ ಮಾವನ ಜೊತೆ ಒಳ್ಳೆ ಸಂಬಂಧ ಇರ್ಲಿ

ನಿಮಗೆ ಇಷ್ಟಾನೋ ಕಷ್ಟನೋ ನಿಮ್ಮ ಅತ್ತೆ ಮಾವ ನಿಮ್ಮ ಸಂಗಾತಿಗೆ ಎಷ್ಟು ಮುಖ್ಯ ಅನ್ನೋದು ನೆನಪಿರಲಿ. ಹಾಗಾಗಿ  ಇಬ್ಬರೂ ಅವರವರ ಅತ್ತೆ ಮಾವನ ಜೊತೆ ನಗ್ತಾ ಮಾತಾಡಿ, ಆಗಾಗ ಹೊರಗಡೆ ಸುತ್ತಾಡಿ, ಜೊತೇಲಿ ಊಟ ಮಾಡಿ. ನಿಮ್ಮ ಸಂಗಾತಿ ನಿಮ್ಮ ಪರವಾಗಿ ಇಲ್ಲದಾಗಲೂ ಕೂಡ ನಿಮ್ಮ ಅತ್ತೆ ಮಾವ ನಿಮ್ಮ ಪರ ಇರಬಹುದು! ನೆನಪಿರಲಿ.

ಮೂಲ

6. ಗಂಡ-ಹೆಂಡ್ತಿ ಮಧ್ಯದಲ್ಲಿ ಮೊದಲಿದ್ದ ಪ್ರೀತಿ-ಪ್ರಣಯ ಕಳ್ಕೋಬೇಡಿ

ನೀವು ಮದುವೆ ಆಗಿ ಎಷ್ಟೇ ವರ್ಷ ಆಗಿದ್ರೂ ಪರವಾಗಿಲ್ಲ ನಿಮ್ಮೋರು ಚೆನ್ನಾಗಿ ಕಂಡಾಗ ಹೇಳಿ. ನಿಮ್ಮ ಪ್ರೀತಿನ ಆಗಾಗ ತೋರ್ಸಿ. ನಿಮ್ಮ ಲೈಂಗಿಕ ಸಂಬಂಧ ಕೂಡ ಮುಖ್ಯ.

ಮೂಲ

ಟ್ರೈ ಮಾಡಿ ನೋಡಿ, ನಿಮ್ಮ ಸಂಬಂಧ ಇನ್ನೂ ಸುಂದರವಾಗಿರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: