ಈ ಫೋಟೋ ಪೂರ್ತಿ ನೋಡಿ ಚಪ್ಪಲಿ ಯಾವ ಬಣ್ಣ ಅಂತ ಹೇಳಿಬಿಡಿ ಸಾಕು

ನಿಮ್ಮ ಫ್ರೆಂಡ್ಸು ಇದನ್ನ ನೋಡಿ ಬೇರೆ ಬೇರೆ ಉತ್ತರ ಕೊಡದಿದ್ರೆ ಕೇಳಿ

ಒಂದೊಂದ್ಸಲ ನಮ್ಮ ಕಣ್ಣು ಹೆಂಗೆ ಮೋಸ ಮಾಡುತ್ತೆ ಅಂತ ಹೇಳಕ್ಕಾಗಲ್ಲ. ನಮಗೆ ಒಂಥರ ಕಂಡಿದ್ದು ಇನ್ನೊಬ್ಬರಿಗೆ ಬೇರೆ ತರಹ ಕಾಣಬಹುದು.

ಈ ಚಪ್ಪಲಿ ಸ್ವಲ್ಪ ಚೆನ್ನಾಗಿ ನೋಡ್ಕೊಳಿ:

ಈಗ ಹೇಳಿ - ಈ ಚಪ್ಪಲಿ ಯಾವ ಬಣ್ಣ?

ಈ ಪ್ರಶ್ನೆಗೆ ಒಬ್ಬೊಬ್ರು ಒಂದೊಂದ್ ಉತ್ತರ ಕೊಡ್ತಿದಾರೆ ಅಂದ್ರೆ ನಂಬ್ತೀರಾ? ಪ್ರಪಂಚದಲ್ಲಿ ಈ ಚಿಕ್ಕ ಪ್ರಶ್ನೆಯ ಬಗ್ಗೆ ಒಮ್ಮತ ಇಲ್ಲ!

ನನಗಂತೂ ಇದರಲ್ಲಿ ಬಿಳಿ + ಚಿನ್ನದ ಬಣ್ಣ ಕಾಣ್ತು. ನನ್ನ ಬೆಸ್ಟ್ ಫ್ರೆಂಡೇ ಕೈ ಕೊಟ್ಲು - ಅವಳಿಗೆ ನೀಲಿ ಮತ್ತೆ ಬೂದು ಕಾಣಿಸ್ತಂತೆ! ಎಂಥ ಚಿಕ್ಕ ಪ್ರಶ್ನೆ, ಆದ್ರೂ ಇಷ್ಟೆಲ್ಲ ಗೊಂದಲ!

ನೀವು ಇದನ್ನ ನಿಮ್ಮ ಫ್ರೆಂಡ್ಸ್ ಜೊತೆ ಹಂಚಿಕೊಂಡು ಕೇಳಿ, ಅವರು ಕೊಡೋ ಉತ್ತರಗಳ್ನ ಕೇಳಿ ನಿಮಗೆ ಶಾಕಾಗೋದು ಗ್ಯಾರಂಟಿ.

ಇದೊಂಥರ ಕಣ್ ಮೋಸ ಕಣ್ರೀ.

ಚಿತ್ರಗಳ ಮೂಲ: ಟ್ವಿಟರ್

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: