ಕ್ಲಾಸಿಗೆ ಲೇಟಾಗಿ ಹೋಗೋರ್ನ ಅನಾದಿಕಾಲದಿಂದ ಕಾಪಡ್ಕೊಂಡ್ ಬಂದಿರೋ 7 ಶ್ರೇಷ್ಠವಾದ ಕಾರಣಗಳು

ಯಾವತ್ತೂ ಕೈ ಕೊಡಲ್ಲ

1. ಗಾಡಿ ಪಂಚರ್ ಆಗಿತ್ತು

ಗಾಡಿ ಇರತ್ತೋ ಇಲ್ವೋ ಟೈರಂತೂ ಸುಮಾರ್ಸತಿ ಪಂಚರ್ ಆಗಿರತ್ತೆ ! ಪಾಪ ಯಾವ ಮೇಷ್ಟ್ರಾದ್ರೂ ಸರಿ ಅನ್ನಲೇಬೇಕು.

2. ಬಸ್ ಮಿಸ್ಸಾಯ್ತು / ಲೇಟಾಯ್ತು

ಕೆಲವೊಮ್ಮೆ ನಿಜ್ವಾಗ್ಲೂ ಆಗಿರತ್ತೆ ಆದ್ರೆ ಈ ಕಾರಣನಾ ಯಾವತ್ತೂ ಯಾರು ಒಪ್ಕೋಳಲ್ಲ. ಬರಿ ಓಳು ಅಂತಾರೆ.

3. ಪ್ರಿನ್ಸಿಪಾಲ್ ಕರ್ದಿದ್ರು

ಸುಮ್ನೆ ಹೇಳಕ್ಕೇನು ಮೇಷ್ಟ್ರೇನ್ ಹೋಗಿ ಪ್ರಿನ್ಸಿ ಹತ್ರ ಕೇಳ್ತಾರ ??

4. ಅಲಾರಂ ಹೊಡೀಲಿಲ್ಲ

ರಾತ್ರಿ ಮಲಗಿದ್ದು ಲೇಟ್ ಆಗಿತ್ತು...ಅಲಾರಾಂ ಇಟ್ಟಿದ್ದೆ...ಆದ್ರೂ ಅದು ಹೊಡಿಲಿಲ್ಲ ಸಾರ್...ಸಾರೀ.

5. ಪ್ರಾಕ್ಟೀಸ್ ಇತ್ತು

ಕಾಲೇಜ್ನಲ್ಲಿ ಯಾವದಾದ್ರು ಫಂಕ್ಷನ್ ಇದ್ರೆ ಸಾಕು ಎಲ್ರು ಕಲಾವಿದ್ರಾಗಿ ಪ್ರಾಕ್ಟೀಸ್ ಮಾಡ್ತಾರಪ್ಪೋ. ಪಾಪ ಮೇಷ್ಟ್ರು...ಸರಿ ಅಂತ ಕ್ಲಾಸ್ಸಿಗೆ ಸೇರುಸ್ಕೊಳ್ಳೇಬೇಕು.

6. ತುಂಬಾ ಹೊಟ್ಟೆ ಹಸೀತಿತ್ತು, ತಿಂಡಿ ತಿನ್ನಕ್ ಹೋಗಿದ್ದೆ

ಮನುಷ್ಯತ್ವ ಇರೋ ಯಾವ್ ಮೇಷ್ಟ್ರು ಈ ಕಾರಣಾನ ಹೇಳ್ದಾಗ ಬಯ್ಯೋಲ್ಲ.

7. ಟ್ರಾಫಿಕ್ ಜಾಮಾಗಿತ್ತು 

ಇದು ಬೆಂಗ್ಳೂರಲ್ಲಿರೋರ್ ಡೈಲಾಗ್. ಯಾರೇ ಆದ್ರೂ ನಂಬ್ಲೇಬೇಕು.ಹನುಮಂತನ ಬಾಲಕ್ಕಿಂತ ಉದ್ದವಾದ ಟ್ರಾಫಿಕ್ಕು.

ನಿಮ್ಮ ಫೇವರೆಟ್ ಕಾರಣ ಯಾವುದು? ಮೇಲೆ ನಾವು ಕೊಟ್ಟಿಲ್ಲದೆ ಹೋದ್ರೆ ಲಾಗಿನ್ ಆಗಿ ಕಾಮೆಂಟಲ್ಲಿ ಹಾಕಿ ಮತ್ತೆ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: