ಒಂದ್ ವಾರ ನಾವು ಹೇಳಿದ್ದು (ಮಾತ್ರ) ತಿಂದ್ರೆ ಅದ್ಯಾಕ್ ಸಣ್ಣ ಆಗಲ್ಲ ನೋಡೇ ಬಿಡಣ

ಯಾವುದೇ ಅಡ್ಡ ಪರಿಣಾಮಾನೂ ಇರಲ್ಲ

ತೂಕ ಇಳಿಸೋಕೆ ದಿನಕ್ಕೊಂದ್ ಹೊಸ ಉಪಾಯ ಯೋಚ್ನೆ ಮಾಡ್ತಾ ಇದ್ದೀರಾ? ನಾನ್ ಯಾವಾಗ ಸಣ್ಣ ಆಗೋದು, ಯಾವಾಗ ನಂಗೆ ಇಷ್ಟ ಆಗೋ ಎಲ್ಲಾ ಬಟ್ಟೆಗಳನ್ನ ಹಾಕೋದು, ಹೀಗೆಲ್ಲ ಯೋಚ್ನೆ ಮಾಡಿ ತಲೆ ಕೆಡಿಸ್ಕೊಂಡಿದೀರಾ? 

ನಮ್ಮನ್ನ ದಪ್ಪ ಅಂತ ಆಡ್ಕೊಳ್ಳೋರ್ ಮುಂದೆ ಸಣ್ಣ ಆಗಿ ತೊರ್ಸೋಕೆ ಕಾಯ್ತಾ ಇದ್ದೀರಾ? ಹಾಗಿದ್ರೆ 7 ದಿನ ಸಾಕು, ವ್ಯಾಯಾಮ ಇಲ್ದೇ ಆರೋಗ್ಯಕರವಾಗಿ ಸಣ್ಣ ಆಗೋ ಉಪಾಯ ಇಲ್ಲಿದೆ ನೋಡಿ.

ಇಲ್ಲಿ ಹೇಳಿರೋ ಡಯೆಟ್ ಮಾಡಿ ನೋಡಿ...ಮುಖದಲ್ಲಿ ಸುಕ್ಕು ಕೂಡ ಬರ್ದೆಯಿರೋ ಹಾಗೆ ಸಣ್ಣ ಆಗ್ತೀರಿ. ಅದೂ ವಾರಕ್ಕೆ 5-8 ಕೆ. ಜಿ ತೂಕ ಸಲೀಸಾಗಿ ಇಳಿಸಬಹುದು.

1. ಮೊದಲ್ನೇ ದಿನ

ನಿಮ್ಮ ಡಯೆಟ್ನ ಮೊದಲ್ನೇ ದಿನ, ಸ್ವಲ್ಪ ಕಷ್ಟ ಅನ್ಸುದ್ರೂ ಇಷ್ಟ ಆಗೋ ಹಾಗೆ ಎಲ್ಲ ಹಣ್ಣನ್ನೂ ತಿನ್ನಬಹುದು. ಆದ್ರೆ ನೆನಪಿರಲಿ - ದ್ರಾಕ್ಷಿ, ಪಚ್ಚ ಬಾಳೆಹಣ್ಣು, ಹಲಸು ಅಥವಾ ಮಾವಿನ ಹಣ್ಣಿನ ಹಾಗೆ ಹಣ್ಣುಗಳನ್ನ ಆಯ್ಕೆ ಮಾಡದೆ ನೀರಿನ ಅಂಶ ಹೆಚ್ಚಿರೋ ನಿಂಬೆ, ಕಿತ್ತಳೆ, ಕಲ್ಲಂಗಡಿ ಹೀಗೆ ಹಣ್ಣುಗಳನ್ನ ಸೇವಿಸೋದ್ರಿಂದ ತೂಕ ಬೇಗ ಕಡಿಮೆ ಆಗುತ್ತೆ.

ಹಣ್ಣುಗಳನ್ನ ಸಣ್ಣ ಸಣ್ಣದಾಗಿ ಹೆಚ್ಚಿ ತಿನ್ನಬಹುದು ಆದ್ರೆ , ಹಣ್ಣು ಅಂದ್ರೆ ಹಣ್ಣು ಮಾತ್ರ ಅದರ ಮೇಲೆ ಉಪ್ಪು ಅಥವಾ ಮೆಣಸು ಹಾಕೋದು ಬೇಡ ಅಥವಾ ಸಕ್ಕರೆ ಹಾಕಿ ಪಾನಕ ಮಾಡ್ಕೊಂಡು ಕುಡಿಯೋದು ಬೇಡ. ನಿಮಗೆಷ್ಟು ಸಾರಿ ಬೇಕು ಅನ್ಸುತ್ತೋ ಅಷ್ಟು ಬಾರಿ ತಿನ್ನಬಹುದು.

ಹಣ್ಣಿನ ದಿನ ಹೀಗಿರುತ್ತೆ.

2. ಎರಡನೇ ದಿನ

ಈ ದಿನ ಬರೀ ತರಕಾರಿ ದಿನ. ಮೊದ್ಲೇ ಹೇಳಿದ ಹಾಗೆ ಎಷ್ಟು ಬೇಕಾದ್ರೂ ತರಕಾರಿ ತಿನ್ನಬಹುದು. ಇಲ್ಲೊಂದು ವಿಶೇಷ ಏನಪ್ಪಾ ಅಂದ್ರೆ ತರಕಾರಿನ ನಿಮಗೆ ಹಸಿಯಾಗಿ ತಿನ್ನೋಕೆ ಕಷ್ಟ ಆದ್ರೆ ಬೇಯಿಸಿ ತಿನ್ನಬಹುದು...ಸ್ವಲ್ಪ ಉಪ್ಪಿನ ಜೊತೆ.

ಇನ್ನೂ ಬೇಕು ಅಂದ್ರೆ ಇಡೀ ದಿನದಲ್ಲಿ ಒಂದು ಆಲೂಗಡ್ಡೆ ತಿನ್ನಬಹುದು. ಆಲೂಗಡ್ಡೇನಲ್ಲಿ ಕಾರ್ಬೋಹೈಡ್ರೇಟ್ ಅಂಶ ಇರೋದ್ರಿಂದ ನಿಮ್ಮ ಇಡೀ ದಿನದ ಕೆಲಸಗಳಿಗೆ ಶಕ್ತಿ ಇರುತ್ತೆ.

ತರಕಾರಿ ಹೆಚ್ಚು ಸೇವಿಸೋದ್ರಿಂದ ದೇಹಕ್ಕೆ ನಾರಿನ ಅಂಶ ಹೆಚ್ಚು ಸೇರುತ್ತೆ ತೂಕ ಇಳಿಸೋಕೆ ಹೆಚ್ಚು ಸಹಾಯ ಆಗುತ್ತೆ.  

3. ಮೂರನೇ ದಿನ

ಮೊದಲೆರಡು ದಿನಗಳು ತಿಂದ ಎಲ್ಲ ಹಣ್ಣು ತರಕಾರಿಗಳನ್ನ ಈ ದಿನ ತಿನ್ನಬಹುದು. ಹಣ್ಣುಗಳಿಂದ ಕಾರ್ಬೋಹೈಡ್ರೇಟ್ ಅಂಶ ಸಿಗೋದ್ರಿಂದ ಆಲೂಗಡ್ಡೆ ತಿನ್ನೋ ಅಗತ್ಯ ಇರಲ್ಲ.

ಎಷ್ಟು ಬೇಕು ಅನ್ಸುತ್ತೋ ತಿನ್ನಿ, ದಿನದಲ್ಲಿ ಸ್ವಲ್ಪ ಸ್ವಲ್ಪ ಅಂತ  ಒಂದು ಹತ್ತು ಸಾರಿ ತಿಂದ್ರು ಪರವಾಗಿಲ್ಲ. ಜೊತೇಲಿ ಹೆಚ್ಚು ನೀರು ಕುಡೀರಿ. 

ನಿಮ್ಮನ್ನ ನಿಮ್ಮ ರುಚಿಯಾದ ಊಟ ಕರೀತಿದ್ರೆ ಸಣ್ಣ ಆದ್ಮೇಲೆ ನಿನ್ನ ಹತ್ರ ಬರ್ತೀನಿ ಅಂತ ಖುಷಿ ಇಂದ ಹೇಳಿ.

4. ನಾಲ್ಕನೇ ದಿನ

ಬಾಳೆ ಹಣ್ಣು ತಿನ್ನ ಬಾರ್ದು ಅಂತ ನಿಮ್ಮನ್ನ 3 ದಿನ ತಡೆದಿದ್ವಿ, ಜೊತೇಲಿ ಹಾಲು ಕೂಡ ಕುಡಿಯೋಕೆ ಬಿಟ್ಟಿರಲಿಲ್ಲ, ಬೇಸರ ಆಗಿತ್ತ?

ಇವತ್ತು ಆರಾಮಾಗಿ 5-6 ಬಾಳೆಹಣ್ಣು 3-4 ಲೋಟ (200 ಮಿ.ಲಿ) ಹಾಲು ಕುಡಿಬಹುದು.

ಅಯ್ಯೊ!!3 ದಿನ ಮಾಡಿದ್ದೆಲ್ಲಾ ವ್ಯರ್ಥ ಆಗುತ್ತೆ...ಹಾಲು ಬಾಳೆಹಣ್ಣು ತಿಂದ್ರೆ... ಅಂತ ಅನ್ದ್ಕೊಬೇಡಿ. 3 ದಿನದಿಂದ ಉಪ್ಪು ಸ್ವಲ್ಪ ಮಾತ್ರ ದೇಹಕ್ಕೆ ಹೋಗಿರೋದ್ರಿಂದ ಸೋಡಿಯಂ ಕೊರತೆ ಇರುತ್ತೆ, ಅದರ ಜೊತೇಲಿ ಪೊಟ್ಯಾಸಿಯಂನ ದೇಹಕ್ಕೆ ಸೇರಿಸೋದಕ್ಕೆ ಈ ಡಯೆಟ್. 

5. ಐದನೇ ದಿನ

ನಿಮಗೆ ಹಬ್ಬ ನೋಡಿ!! ಉಪ್ಪು ಖಾರ ತಿನ್ನದೇ ನಾಲಿಗೆ ರುಚಿಗಾಗಿ ಕಾದಿದ್ರೆ, ಈದಿನ ಆರಾಮಾಗಿ ಟೊಮೇಟೊ ಹಾಗೆ ತರಕಾರಿ ಮಾತ್ರ ಹಾಕಿ ಸೂಪ್ ಮಾಡ್ಕೊಂಡ್ ಕುಡೀಬಹುದು.

ಆದ್ರೆ ನೆನಪಿರಲಿ ಇಡೀ ದಿನ 6 ಟೊಮೇಟೊ ಮಾತ್ರ ತಿನ್ನಬಹುದು. ಸ್ವಲ್ಪ ಮೆಣಸು ಸ್ವಲ್ಪ ಉಪ್ಪು ಅಷ್ಟೇ ಮತ್ಯಾವ ಮಸಾಲೆನೂ ಬಳಸೋಹಾಗಿಲ್ಲ.

ಐದನೇ ದಿನ ನೀರನ್ನ ಹೆಚ್ಚು ಕುಡೀರಿ.

6. ಆರನೇ ದಿನ

ನಿನ್ನೆ ಟೊಮೇಟೊ ಹೆಚ್ಚು ತಿಂದಿರೋದ್ರಿಂದ ಇಂದು ಟೊಮೇಟೊ ಬಂದ್!

ಇವತ್ತಿನ ಡಯೆಟ್ನಲ್ಲಿ ನೀವು ಮೊಳಕೆ ಕಾಳನ್ನ ತಿನ್ನಬಹುದು. ಅದನ್ನ ಉಪ್ಪಿನ ಜೊತೆ ಬೇಯಿಸಿ ಅಥವಾ ಹೆಚ್ಚು ನೀರನ್ನ ಹಾಕಿ ಸೂಪ್ ತರ ಮಾಡಿ ಕುಡೀಬಹುದು.

ಇವತ್ತು ಎಷ್ಟು ನೀರು ಕುಡೀತೀರೊ ಅಷ್ಟೂ ಒಳ್ಳೇದು. 

7. ಏಳನೇ ದಿನ

ಇವತ್ತು ಆರಾಮಾಗಿ ಊಟ ಮಾಡಬಹುದು ನೋಡಿ. ನೀವು ಇಡೀ ಜೀವನದ ರುಚಿಯಾದ ಅಡಿಗೇನ ಇವತ್ತು ತಿಂತೀರಿ :-)

ಸಣ್ಣದೊಂದು ಚಪಾತಿ + ತರಕಾರಿ ಪಲ್ಯ + ಸ್ವಲ್ಪ ಅನ್ನ...ಇವತ್ತಿನ ಊಟ. 2 ಸಾರಿ ತಿನ್ನಬಹುದು, ಜೊತೆಗೆ ಹೆಚ್ಚು ನೀರು ಕುಡೀರಿ. ಇನ್ನೂ ಸಾಲಲ್ಲ ಅಂದ್ರೆ ಕಡಿಮೆ ಸಕ್ರೆ ಹಾಕಿರೋ ಪಾನಕ ತಗೊಬಹುದು.

ಈ 7 ದಿನಗಳಲ್ಲಿ ನೀವು ಎಷ್ಟು ಕಡಿಮೆ ಆಗಿದೀರಾ ನೋಡ್ಕೊಳ್ಳಿ..... ಖುಷಿ ಆಗುತ್ತೆ!!!

ಇನ್ನು ಹೆಚ್ಚು ತೂಕ ಕಡಿಮೆ ಮಾಡೋಕೆ 45 ನಿಮಿಷ ವಾಕಿಂಗ್ ಮಾಡಬಹುದು.

ಕಡಿಮೆ ಆದ ತೂಕ ಹೆಚ್ಚಾಗದ ಹಾಗೆ ನೋಡ್ಕೊಳ್ಳೋದು ಮಾತ್ರ ನಿಮ್ಮ ಜವಾಬ್ದಾರಿ!!!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: