ಉಪ್ಪು ನಿವಾಳಿಸಿ ದೃಷ್ಟಿ ತೆಗೆಯೋದು ಯಾಕೆ ಕೆಲಸ ಮಾಡುತ್ತೆ ಅಂತ ತಿಳ್ಕೊಳಿ

ಮೂಢನಂಬಿಕೆ ಅಂದುಬಿಡೋದು ಸುಲಭ, ಆದರೆ ಕೆಲಸ ಮಾಡೋದಂತೂ ನಿಜ

ತಾಯಿ ಆದೋಳು ಮಕ್ಕಳಿಗೆ ಉಪ್ಪು ನಿವಾಳಿಸಿ ದೃಷ್ಟಿ ತೆಗೆಯೋದು ನೋಡಿರ್ತೀರಿ. ದೊಡ್ಡೊರಿಗೂ ತೆಗೀತಾರೆ - ಕೆಟ್ಟ ದೃಷ್ಟಿ ಬೀಳದಿರಲಿ ಅಂತ.

ಈಗಿನ ಕಾಲದಲ್ಲಿ ಇದನ್ನೆಲ್ಲ ಮೂಢನಂಬಿಕೆ ಅನ್ನೋದು ಒಂಥರಾ ಫಾಶನ್ ಆಗೋಗಿದೆ. ಆದರೆ ಅದರಿಂದ ಉಪಯೋಗ ಇರೋದಂತೂ ಖಂಡಿತ. ಹೇಗೆ ಅಂತೀರಾ?

ನಮ್ಮ ಸುತ್ತ ನಮ್ಮ ದೇಹದಿಂದ ಹೊರಹೊಮ್ಮಿರುವ ಒಂದು ಪ್ರಭಾವಳಿ ಇರುತ್ತೆ. ಅದು ನಮ್ಮ ಕಣ್ಣಿಗೆ ಕಾಣಿಸಲ್ಲ.

ಹೊರಗಿನ ಕೆಟ್ಟದ್ದು ಒಳ್ಳೇದು ಇದನ್ನ ಪ್ರವೇಶ ಮಾಡೋದ್ರಿಂದ ನಮ್ಮ ಪ್ರಭಾವಳಿಯಲ್ಲಿ ವ್ಯತ್ಯಾಸಗಳು ಆಗುತ್ವೆ. ಆ ವ್ಯತ್ಯಾಸಗಳು ನಮಗೇ ಗೊತ್ತಿಲ್ಲದ ಹಾಗೆ ನಮ್ಮ ದೇಹ ಹಾಗೆ ಮನಸ್ಸಿನ ಮೇಲೆ ಪ್ರಭಾವ ಬೀರ್ತವೆ.

ಮೂಲ

ದೃಷ್ಟಿ ಆದ್ರೆ ಮಕ್ಕಳು ಅಳುತ್ವೆ, ಊಟ ಸರಿಯಾಗಿ ಮಾಡಲ್ಲ, ದೊಡ್ದೊರಿಗೆ ಮೈ ಕೈ ನೋವು ಕಾಣಿಸಿಕೊಳ್ಳುತ್ತೆ, ಕೆಲವೊಮ್ಮೆ ಏನೂ ಮಾಡೋಕೆ ಮನಸ್ಸಿರಲ್ಲ, ಸುಸ್ತು, ಸಂಕಟ. ದೇಹದಲ್ಲಿ ಇನ್ನೂ ಏನೇನೋ ಏರುಪೇರುಗಳು ಆಗಬಹುದು.

ಹೀಗೆಲ್ಲ ಆದಾಗ ಉಪ್ಪು ನಿವಾಳಿಸಿ ದೃಷ್ಟಿ ತೆಗೀತಾರೆ... ಸ್ವಲ್ಪ ಹೊತ್ತಲ್ಲಿ ಎಲ್ಲಾ ಸರಿ ಹೋಗುತ್ತೆ. ಯಾಕೆ?

ಮೂಲ

ಕಲ್ಲುಪ್ಪಿಗೆ ಕೆಟ್ಟ (ನಕಾರಾತ್ಮಕ) ಶಕ್ತಿ ಎಳ್ಕೊಳೋ ಶಕ್ತಿ ಇದೆ.

ನಿಮ್ಮ ಪ್ರಭಾವಳಿಯ ಸುತ್ತ ಉಪ್ಪನ್ನ ನೀವಳಿಸಿದಾಗ ಅಲ್ಲಿ ಅಕಸ್ಮಾತ್ ಆ ಶಕ್ತಿ ಇದ್ರೆ ಅದನ್ನ ಎಳ್ಕೊಳುತ್ತೆ.

ಕೆಟ್ಟ ಶಕ್ತೀನ ಎಳೆದು ನಿವಾಳಿಸಿ ನೀರಲ್ಲಿ ಉಪ್ಪನ್ನ ಹಾಕಿದಾಗ ನಿಮ್ಮ ಪ್ರಭಾವಳಿ ಅದರಿಂದ ಮುಕ್ತವಾಗುತ್ತೆ. ಹಾಗಾಗಿ ನಿಮಗೆ ಆಗ್ತಿರೋ ಸಂಕಟ ಕಡಿಮೆ ಆಗುತ್ತೆ.

ಈ ಪ್ರಭಾವಳಿ ಕಣ್ಣಿಗೆ ಕಾಣಲ್ಲ, ಆದ್ರೆ ನಮ್ಮ ದೈಹಿಕ ಮತ್ತೆ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ.

ನಿಮಗೇನಾದ್ರೂ ಕೆಟ್ಟ ದೃಷ್ಟಿಗಳಿಂದ ಮುಂಚೇನೇ ದೂರ ಇರ್ಬೇಕು, ನಿಮ್ಮ ಪ್ರಭಾವಳೀನ ಚೆನ್ನಾಗಿ ನೋಡ್ಕೋಬೇಕು ಅಂತಿದ್ರೆ ವಾರಕ್ಕೆರಡು ಸಲ ಆದ್ರೂ ಸ್ನಾನ ಮಾಡೋ ನೀರಲ್ಲಿ ಒಂದು ಹಿಡಿ ಕಲ್ಲುಪ್ಪು ಹಾಕಿ ಸ್ನಾನ ಮಾಡಿ. ವ್ಯತ್ಯಾಸ ನಿಮಗೇ ಕಾಣ್ಸುತ್ತೆ.

ಮನೆ ಸಾರಿಸುವಾಗ ಉಪ್ಪು ಹಾಕ್ಕೊಂಡ್ ಸಾರಿಸಿದರೆ ಏನು ಉಪಯೋಗ ಇದೆ ಅಂತ ಈಗಾಗಲೆ ಹೇಳಿದ್ವಿ. ಉಪ್ಪಿಗೆ ನಿಜಕ್ಕೂ ಒಂದು ವಿಶೇಷವಾದ ಶಕ್ತಿ ಇದೆ.

ಇದನ್ನೆಲ್ಲ ಮೂಢನಂಬಿಕೆ ಅಂತ ಕರೆದುಬಿಡೋದು ಬಹಳ ಸುಲಭ, ಆದರೆ…

ಹಾಗೆ ಕರೆಯೋರು ನಿಜವಾಗಲೂ ಇದರಿಂದೆಲ್ಲ ಉಪಯೋಗ ಪಡ್ಕೊಳೋರು ಇದಾರಲ್ಲ, ಅದು ಹೇಗೆ ಸಾಧ್ಯ ಅಂತ ವಿವರಿಸಬೇಕು. ಆಗಲೇ ಅವರ ಮಾತು ವೈಜ್ಞಾನಿಕ ಅನ್ನಿಸಿಕೊಳೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ರಾಮಾಯಣ ಅರಿದು ಕುಡಿದಿದ್ದರೆ ಮಾತ್ರ ನಿಮಗೆ ಈ 10 ವಿಚಿತ್ರ ಸತ್ಯಗಳು ಗೊತ್ತಿರಕ್ಕೆ ಸಾಧ್ಯ

ಇಲ್ಲದಿದ್ದರೆ ಬಹಳ ಆಶ್ಚರ್ಯ ಆಗುತ್ತೆ

ಕೆಲವ್ರು ರಾಮಾಯಣ ಮತ್ತೆ ಮಹಾಭಾರತ ಅರಿದು ಕುಡಿದು ಬಿಟ್ಟಿದ್ದೀವಿ ಅಂತಿರ್ತಾರೆ. ಆದ್ರೂ ಕೆಲವೊಂದು ವಿಷಯಗಳು ಎಷ್ಟೋ ಮಂದಿಗೆ ಗೊತ್ತಿರಲ್ಲ. ವಾಲ್ಮೀಕಿ ಬರೆದಿರೋಂತ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಇಂದಿನವ್ರಿಗೂ ಆದರ್ಶ. ಈವತ್ತಿಗೂ ರಾಮಾಯಣ, ಅದ್ರ ಪಾತ್ರಗಳು ನಮಗೆಲ್ಲಾ ದಾರಿ ತೋರಿಸೋ ತರಹ ಇವೆ. ಆದ್ರೂ ರಾಮಾಯಣದ  ಬಗ್ಗೆ ಎಷ್ಟೋ ಸತ್ಯಗಳು ಜನಕ್ಕೆ ಗೊತ್ತಿರಲ್ಲ. ಮಹಾನ್ ಪಂಡಿತರಿಗೆ ಮಾತ್ರ ಗೊತ್ತಿರುವಂಥ 10 ವಿಚಿತ್ರ ಸತ್ಯಗಳನ್ನು ನಾವಿಲ್ಲಿ ಕೊಡ್ತಿದ್ದೇವೆ.

1. ರಾಮನಿಗೆ ಶಾಂತಾ ಅಂತ ಒಬ್ಬಳು ಅಕ್ಕ ಇರ್ತಾಳೆ

ದಶರಥನಿಗೆ ಕೌಸಲ್ಯೆಯಿಂದ ಹುಟ್ಟಿದ ಮಗಳು ಇವಳು. ಅಂಗದೇಶದ ರಾಜ ರೋಮಪಾದ ಅವಳನ್ನ ದತ್ತು ತೊಗೊಂಡಿರ್ತಾನೆ.

2. ರಾವಣನಿಗೆ 10 ತಲೆಗಳು ಬಂದದ್ದು ಈಶ್ವರನಿಂದ

ಈಶ್ವರನ ಪರಮ ಭಕ್ತನಾಗಿದ್ದ ರಾವಣ. ಘೋರ ತಪಸ್ಸು ಮಾಡಿ ತಲೆಯನ್ನೇ ಈಶ್ವರನಿಗೆ ಅರ್ಪಿಸಿದ್ದ. ಆದರೂ ತಲೆ ಮತ್ತೆ ಬೆಳೀತಿತ್ತಂತೆ. ಹತ್ತು ಸಲ ತಲೆ ಈಶ್ವರನಿಗೆ ಅರ್ಪಿಸಿದರೂ ಅದು ಮತ್ತೆಮತ್ತೆ ಬೆಳೀತಾನೇ ಇತ್ತಂತೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಎಲ್ಲಾ ಹತ್ತು ತಲೆಗಳನ್ನು ವಾಪಸ್ಸು ಕೊಟ್ನಂತೆ. ಹಾಗಾಗಿ ರಾವಣನಿಗೆ 10 ತಲೆಗಳು ಬಂದವು ಅಂತ ಪುರಾಣ ಹೇಳುತ್ತೆ.

3. ರಾವಣನಿಗಿಂತ ಮೊದಲು ಲಂಕೇನ ಕುಬೇರ ಆಳ್ತಿರ್ತಾನೆ

ಲಂಕೆಯನ್ನ ಕಟ್ಟಿ ಆಳ್ತಾ ಇದ್ದದ್ದು ಕುಬೇರ. ಅವನ ಮಲಣ್ಣ ರಾವಣ ಯುದ್ದ ಮಾಡಿ ಕುಬೇರನಿಂದ ಲಂಕೆಯನ್ನ ಕಿತ್ತುಕೊಂಡ ಅಂತ ಪುರಾಣ ಹೇಳುತ್ತೆ.

 

4. ಲಕ್ಷ್ಮಣ ಶೇಷನಾಗನ (ಆದಿಶೇಷನ) ಅವತಾರ

ವಿಷ್ಣುವಿನ ಅವತಾರ ರಾಮ ಅನ್ನೋದು ಎಲ್ರಿಗೂ ಗೊತ್ತು. ಆದರೆ ಶೇಷನಾಗನ ಅವತಾರ ಲಕ್ಷ್ಮಣ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ.   

5. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಲಕ್ಷ್ಮಣ ನಿದ್ದೇನೇ ಮಾಡಲ್ಲ

ಯಾಕಂದ್ರೆ ವನವಾಸದಲ್ಲಿದ್ದ ರಾಮ ಮತ್ತೆ ಸೀತೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋಬೇಕಾಗಿತ್ತು. ಅದಕ್ಕಾಗಿ ತನಗೆ ನಿದ್ದೆ ಬರದೆ ಇರೋಹಂಗೆ ನಿದ್ರಾದೇವಿಯ ವರ ಪಡ್ಕೊಂಡಿರ್ತಾನೆ ಲಕ್ಷ್ಮಣ.

6. ಶ್ರೀಕೃಷ್ಣನನ್ನ ಬೇಟೆಗಾರನಾಗಿ ಬಂದು ಕೊಂದದ್ದು ವಾಲಿ

ಮರದ ಕೆಳಗೆ ಮಲಗಿ ನಿದ್ದೆ ಮಾಡ್ತಿದ್ದಾಗ ಶ್ರೀಕೃಷ್ಣನನ್ನ ಜರಾ ಅನ್ನೋ ಬೇಟೆಗಾರ ಬಾಣಬಿಟ್ಟು ಕೊಂದ. ಈ ಬೇಟೆಗಾರ ಬೇರೆ ಯಾರು ಅಲ್ಲ, ವಾಲಿ ಅವತಾರ. 

7. ಲಕ್ಷ್ಮಣ ಸಾಯೋದು ರಾಮನ ಒಂದು ಮಾತಿಂದ

ಒಮ್ಮೆ ಯಮಧರ್ಮನನ್ನು ರಾಮ ಭೇಟಿಯಾಗಿ ನಮ್ಮಿಬ್ಬರ ಮಾತುಕತೆಗೆ ಯಾರೇ ಬಂದು ಅಡ್ಡಿಪಡಿಸಿದ್ರೂ ಅವರನ್ನ ಸಾಯಿಸಿಬಿಡು ಅಂತ ಕೇಳ್ಕೊಂಡಿದ್ದ. ಅದೇ ಟೈಮಿಗೆ ಪಾಪ ಲಕ್ಷ್ಮಣ ಬರ್ತಾನೆ. ರಾಮನನ್ನ ಮಾತಾಡ್ಬೇಕು ಅಂತಾನೆ. ಆಗ ರಾಮ ಹೇಳಿದಂಗೆ ಲಕ್ಷ್ಮಣನ್ನ ಯಮ ಸಾಯಿಸ್ತಾನೆ.

8. ಹನುಮಂತನಿಗೆ ಒಂದು ಹೂವಿನಿಂದ ಭಜರಂಗಬಲಿ ಅಂತ ಹೆಸರು ಬಂತು

ಸಿಂಧೂರ ಹೂವು ತಲೆ ಮೇಲೆ ಇದ್ದಷ್ಟು ಹೊತ್ತು ರಾಮ ಆರೋಗ್ಯವಾಗಿರ್ತಾನೆ ಅಂತ ಹನುಮಂತನಿಗೆ ಒಮ್ಮೆ ಸೀತೆ ಹೇಳಿದ್ಲು. ಅದನ್ನ ಕೇಳಿ ಹನುಮ ದೇಹವನ್ನೇ ಸಿಂಧೂರವಾಗಿ ಬದಲಾಯಿಸಿಕೊಂಡಿದ್ದ. ಭಜರಂಗ್ ಅಂದ್ರೆ ಸಿಂಧೂರ ಅಂತ ಅರ್ಥ. ತನ್ನನ್ನು ತಾನು ಸಿಂಧೂರವಾಗಿಸಿಕೊಂಡ ಕಾರಣ ಭಜರಂಗಬಲಿ ಅಂತ ಹೆಸರು ಬಂತು.

9. ಅಳಿಲು ಬೆನ್ನ ಮೇಲೆ ಮೂರು ಗೆರೆ ಇರೋದಕ್ಕೆ ರಾಮ ಕಾರಣ

ಲಂಕೆಗೆ ಹೋಗ್ಬೇಕಾದ್ರೆ ಕಪಿಸೈನ ರಾಮಸೇತು ಕಟ್ಟಿತು. ಅದನ್ನ ಕಟ್ಟಬೇಕಾದ್ರೆ ಅಳಿಲುಗಳು ಮಣ್ಣನ್ನ ತಂದುಕೊಡ್ತಿದ್ವು. ಇದನ್ನ ಕಂಡ ಕಪಿಸೈನ್ಯ ನಗಾಡ್ತಿತ್ತು. ಆದರೆ ರಾಮನು ಅವುಗಳ ಅಳಿಲು ಸೇವೆಯನ್ನ ತುಂಬಾ ಇಷ್ಟಪಟ್ಟಿದ್ದ. ಅಳಿಲನ್ನ ಎತ್ಕೊಂಡು ಬೆನ್ನು ಸವರಿದಾಗ ಈ ಮೂರು ಗೆರೆಗಳು ಮೂಡಿದ್ವಂತೆ. 

 

10. ಶೂರ್ಪಣಖೀಗೆ ಅಣ್ಣ ರಾವಣನ್ನ ಸಾಯಿಸಬೇಕು ಅನ್ನೋ ಬಯಕೆ ಇರುತ್ತೆ

ಇದು ನಿಜವಾಗ್ಲೂ ಅಚ್ಚರಿ ಪಡೋಂತ ಸಂಗತಿ. ಶೂರ್ಪಣಕಿಯ ಗಂಡ ದುಷ್ಟಬುದ್ಧಿ ಅನ್ನೋನ್ನ ರಾವಣ ಸಾಯಿಸಿರ್ತಾನೆ. ಕೆಲವು ರಾಮಾಯಣಗಳಲ್ಲಿ ರಾವಣನ ಮೇಲೆ ಸೇಡು ತೀರಿಸಿಕೊಳಕ್ಕೆ ಶೂರ್ಪಣಕಿ ದೊಡ್ಡ ನಾಟಕ ಮಾಡಿ, ಯುದ್ಧ ಆಗೋಹಾಗೆ ನೋಡ್ಕೊಂಡು ರಾವಣನ ಸಾವಿಗೆ ಕಾರಣ ಆಗ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: