ವಿಧಾನಸೌಧದಲ್ಲಿ ಯಾರಿಗೂ ಟ್ವಿಟರ್ ಉಪಯೋಗಿಸಕ್ಕೆ ಬರಲ್ಲ ಅಂತ ತೋರುಸ್ಬುಟ್ರು ಸಿದ್ರಾಮಯ್ನೋರು

ಈಗಿನ್ ಕಾಲದಲ್ಲಿ ಹೀಗೆಲ್ಲ ಆದ್ರೆ ಕಷ್ಟ

ಇವತ್ತಿನ ದಿನ ಸರ್ಕಾರಗಳು ಸೋಶಿಯಲ್ ಮೀಡಿಯಾನಲ್ಲಿ ಹುಟ್ಕೋತವೆ, ಬಿದ್ದೂ ಬೀಳ್ತವೆ

ಸೋಶಿಯಲ್ ಮೀಡಿಯಾನಲ್ಲಿ ಬೀದಿಗೆ ಇಳೀದೇ ಚಳುವಳಿಗಳು ನಡೀತವೆ. ಅಷ್ಟು ಮುಖ್ಯ ಆಗೋಗಿದೆ ಈ ಸೋಶಿಯಲ್ ಮೀಡಿಯಾ ಅನ್ನೋದು ನಮ್ಮ ಜೀವನದಲ್ಲಿ.

ಆದರೆ ನಮ್ಮ ಜನಕ್ಕೆ ಅದನ್ನ ಉಪಯೋಗಿಸಕ್ಕೆ ಅಷ್ಟಾಗಿ ಬರಲ್ಲ ಕಣ್ರೀ. ಇಲ್ಲಿ ನೋಡಿ, ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ನೋರು ಇವತ್ತು ಬಹಳ ಒಳ್ಳೇ ಉದ್ದೇಶದಿಂದ ಈ ಟ್ವೀಟ್ ಹಾಕುದ್ರು:

ನಾರಾಯಣ ಆಸ್ಪತ್ರೆಯೋರು ಶರ್ಬತ್ ಗುಲಾ ಅನ್ನೋ ಈ ಅಫಘಾನಿ ಹುಡುಗಿಗೆ ಬಿಟ್ಟಿ ಚಿಕಿತ್ಸೆ ಕೊಡ್ತಿರೋದು ಪ್ರಪಂಚದಲ್ಲೆಲ್ಲ ಸುದ್ದಿ ಮಾಡಿದೆ. ಹೀಗಿರುವಾಗ ಸಿದ್ದರಾಮಯ್ಯ ಮಾಡಿರೋದು ಒಳ್ಳೇ ಕೆಲಸಾನೇ. ನಾಡಿನ ಮುಖ್ಯಮಂತ್ರಿ ಅಂದಮೇಲೆ ಹೊರರಾಜ್ಯಗಳು ಹೊರದೇಶಗಳಿಗೆಲ್ಲ ನಮ್ಮ ಕೆಲಸದ ಬಗ್ಗೆ ತಿಳಿಸಿಕೊಡೋದು ಮುಖ್ಯ.

ಆದ್ರೆ ಟ್ವಿಟರ್ ಇವರು ಅಂದುಕೊಂಡಿರೋಹಂಗೆ ಕೆಲಸ ಮಾಡಲ್ಲ.

ಶರ್ಬತ್ ಗುಲಾ @sharbatgula ಅಂತ ಟ್ವಿಟರ್ ಐಡಿ ಇಟ್ಕೊಂಡಿರೋದು ಇವರಂದುಕೊಂಡಿರೋಳಲ್ಲ, ಈಕೆ:

ಈ ಹೆಂಗಸು ಅಫಘಾನಿಸ್ತಾನೋಳಲ್ಲ, ಸ್ಪೇನ್ನೋಳು. ಇವಳಿಗೆ ಯಾವ ರೋಗಾನೂ ಇಲ್ಲ. ಇವಳು ಬೆಂಗಳೂರಿಗೆ ಬರ್ತಾ ಇಲ್ಲ. ನಾರಾಯಣ ಆಸ್ಪತ್ರೆನೋರ್ಗೂ ಇವಳಿಗೂ ಯಾವ ಸಂಬಂಧಾನೂ ಇಲ್ಲ.

ಬಾರ್ಸಿಲೋನಾನಲ್ಲಿ ಒಬ್ಬ ಪ್ರೊಫೆಸರ್ರು ಈಕೆ. ಹೆಸರು ಆನಾ ಅಂತ ಹೇಳ್ಕೊಂಡಿದಾರೆ. ಟ್ವಿಟರ್ನಲ್ಲಿ ನಿಮ್ಮ ಐಡೀನ ಏನಂತ ಬೇಕಾದರೂ ಇಟ್ಕೋಬೋದು (ಇನ್ನೊಬ್ರು ಇಟ್ಕೊಂಡಿದ್ರೆ ಆಗಲ್ಲ, ಅಷ್ಟೇ). ಹಾಗೇನೇ, ನಿಮ್ಮ ಹೆಸರನ್ನ ಕೂಡ ಬದಲಾಯಿಸಿಕೊಳ್ಳಬಹುದು. ಎಷ್ಟು ಸರಿ ಬೇಕಾದರೂ. ಜನ ಆಗಾಗ ಬದಲಾಯಿಸಿಕೊಳ್ತಾ ಇರ್ತಾರೆ. ಶರ್ಬತ್ ಗುಲಾ ಅಂತ ನಮ್ಮಲ್ಲಿ ಯಾರೂ ಹೆಸರಿಟ್ಕೊಳಲ್ಲ ಅಂತ ಟ್ವಿಟರ್ನಲ್ಲಿ ಹುಡುಕಿದಾಗ ಸಿಕ್ಕ ಮೊದಲ ವ್ಯಕ್ತೀನೇ ನೀವು ಅಂದುಕೊಂಡಿರೋ ಶರ್ಬತ್ ಗುಲಾ ಅಂತ ಯಾಕ್ ಅಂದುಕೋಬೇಕು?

ಸಿದ್ರಮಯ್ನೋರೇ, ರಾಂಗ್ ನಂಬರ್ ಆಗೋಯ್ತಲ್ರೀ? ನಿಮ್ಮ ಸೋಶಿಯಲ್ ಮೀಡಿಯಾ ಸೆಲ್ನೋರ್ಗೆ ಸ್ವಲ್ಪ ಹೇಳೀಪ್ಪಾ. ಇದು ಕರ್ನಾಟಕದ ಮರ್ಯಾದೆ ವಿಷಯ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: