ವಾಟ್ಸಪ್ಪಲ್ಲಿ ವೀಡಿಯೋ ಕಾಲ್ ಹೆಂಗ್ ಮಾಡೋದು ಅಂತ ತಿಳ್ಕೊಳಿ (ಹೊಸದಾಗಿ ಬಿಟ್ಟಿದಾರೆ)

ಮುಂದ್-ಮುಂದೆ ನಿಂತು ಮಾತಾಡಿದಂಗೆ ಇರುತ್ತೆ

15ನೇ ನವಂಬರ್ 2016ನೇ ತಾರೀಕು ವಾಟ್ಸಪ್ಪಲ್ಲಿ ವೀಡಿಯೋ‌ ಕಾಲಿಂಗ್ ಫೀಚರ್ ಬಿಟ್ಟಿದಾರೆ. ಇವರು ಬಿಟ್ಟೇ ಬಿಡ್ತಾರೆ ಅಂತ ನಾವು ಈಗಾಗಲೇ ಭವಿಷ್ಯ ನುಡಿದಿದ್ವಿ :-)

ಇದನ್ನ ಆಂಡ್ರಾಯ್ಡ್, ಐಫೋನ್ ಮತ್ತೆ ವಿಂಡೋಸ್ ಫೋನುಗಳಲ್ಲಿ ಉಪಯೋಗಿಸಬಹುದು. ಇದ್ಯಾಕಪ್ಪಾ ಬೇಕು ಅಂತೀರಾ? ಫೋನ್ ಅಂದ್ರೆ ಬರೀ ಕೇಳ್ಸೋದು ಅನ್ನೋ ಕಾಲ ಮುಗೀತು ಕಣ್ರೀ. ಇನ್ಮೆಲೆ ಎರಡು ಕಡೆಯೋರೂ ಒಬ್ರನ್ನೊಬ್ರು ನೋಡ್ಕೊಂಡ್ ಮಾತಾಡ್ಬೋದು! ಆದರೆ ಈ ಫೀಚರ್ ನಿಮ್ಮ ವಾಟ್ಸಪ್ಪಲ್ಲಿ ತಾನಾಗೇ ಬಂದಿಲ್ಲದೆ ಇರಬಹುದು. ಬಂದಿದ್ದರೂ ಅದನ್ನ ಉಪಯೋಗಿಸಕ್ಕೆ ನಿಮಗೆ ಗೊತ್ತಿಲ್ಲದೆ ಇರಬಹುದು. ಅದೇನೇ ಇರಲಿ, ನೀವು ಇನ್ನ ಹತ್ತು ನಿಮಿಷದಲ್ಲಿ ವಾಟ್ಸಪ್ ಉಪಯೋಗಿಸಿ ವೀಡಿಯೋ ಕಾಲ್ ಮಾಡಕ್ಕೆ ಸಹಾಯ ಮಾಡಿಕೊಡ್ತೀವಿ, ಓದ್ತಾ ಹೋಗಿ…

ನಿಮ್ಮ ವಾಟ್ಸಪ್ ತಂತಾನೇ ಅಪ್ಡೇಟ್ ಆಗೋಹಾಗೆ ಸೆಟ್ಟಿಂಗ್ ಮಾಡ್ಕೊಂಡಿರೆ ನೇರವಾಗಿ ಎರಡನೇ ಸ್ಟೆಪ್ಪಿಗೆ ಹೋಗಿ. ಇಲ್ಲದೆ ಹೋದ್ರೆ…

1) ನಿಮ್ಮ ಆಂಡ್ರಾಯ್ಡ್ ಫೋನಲ್ಲಿ ವಾಟ್ಸಪ್ ವೀಡಿಯೋ ಕಾಲಿಂಗ್ ಇರೋ ವಾಟ್ಸಪ್ ಹಾಕ್ಕೊಳಕ್ಕೆ ಹೀಗ್ ಮಾಡಿ:

 1. Google Play ತೆಗೆದು WhatsApp ಹುಡುಕಿ
 2. ವಾಟ್ಸಪ್ಪಿನ Google Play Listing ತೆಗೀರಿ
 3. ಪೂರ್ತಿ ಪೇಜ್ ಕೆಳಗೆ ಬನ್ನಿ
 4. "Become a beta tester" ಅನ್ನೋ ಕಡೆ "I'M IN" ಅಂತ ಆಯ್ಕೆ ಮಾಡಿಕೊಳ್ಳಿ.
 5. ಮುಂದಿನ ಸ್ಕ್ರೀನಲ್ಲಿ Confirm ಒತ್ತಿ ಒಂದೆರಡು ನಿಮಿಷ ಕಾಯಿರಿ.
 6. ಮತ್ತೆ ವಾಟ್ಸಪ್ಪಿನ Google Play Listing ತೆಗೀರಿ
 7. ಈಗ ವಾಟ್ಸಪ್ಪಿನ Beta ಆವೃತ್ತಿ ಬಳಸಕ್ಕೆ ನಿಮಗೆ ಅನುಮತಿ ಇರುತ್ತೆ
 8. ವಾಟ್ಸಪ್ನ ಅಪ್ಡೇಟ್ ಮಾಡಿ.

ಅಷ್ಟೇ! ನಿಮ್ಮ ವಾಟ್ಸಪ್ಪಲ್ಲಿ ಈಗ ವೀಡಿಯೋ ಕಾಲಿಂಗ್ ಬಂದಿರುತ್ತೆ. ಅದನ್ನ ಉಪಯೋಗಿಸೋದು ಹೇಗೆ? ಮುಂದೆ ಓದಿ:

2) ನಿಮ್ಮ ಹೊಚ್ಚ ಹೊಸ ವಾಟ್ಸಪ್ಪಿಂದ ವೀಡಿಯೋ ಕಾಲ್ ಮಾಡಕ್ಕೆ ಹೀಗ್ ಮಾಡಿ:

 1. ವಾಟ್ಸಪ್ ಆನ್ ಮಾಡಿ
 2. Contacts ಟ್ಯಾಬಿಗೆ ಹೋಗಿ
 3. ಯಾರ ಜೊತೆ ವೀಡಿಯೋ ಕಾಲ್ ಮಾಡಬೇಕೋ ಅವರ ಹೆಸರಿನ ಮೇಲೆ ಒತ್ತಿ. ನೆನಪಿಡಿ - ಅವರ ಹತ್ತಿರಾನೂ ವೀಡಿಯೋ ಕಾಲಿಂಗ್ ಇರೋ ವಾಟ್ಸಪ್ ಇರಬೇಕು.
 4. ಸ್ಕ್ರೀನಲ್ಲಿ ಮೇಲಗಡೆ ಫೋನ್ ಐಕಾನ್ ಒತ್ತಿ
 5. ಪಾಪಪ್ ಬಂದಾಗ Video call ಅಂತ ಆಯ್ಕೆ ಮಾಡಿಕೊಳ್ಳಿ.

ಅಷ್ಟೇ - ಕಾಲ್ ಆಗ್ತಿದೆ ನೋಡಿ!

ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ:

ನೆನಪಿಡಿ: ವೀಡೀಯೋ ಕಾಲ್ ಮಾಡುವಾಗ ಡೇಟಾ ಜಾಸ್ತಿ ಖರ್ಚಾಗುತ್ತೆ. ಅಲ್ಲದೆ, 4G ಕನೆಕ್ಷನ್ ಇದ್ದರೆ ಒಳ್ಳೇದು… ಮದ್-ಮಧ್ಯದಲ್ಲಿ ವೀಡಿಯೋ ಕಚ್ಕೊಳಲ್ಲ. ಅಂದಹಾಗೆ, ವಾಟ್ಸಪ್ ಮೆನೂನಲ್ಲಿ ಏನೇನೋ ರಹಸ್ಯಗಳು ಅಡಗಿವೆ. ನಿಮಗೆ ಅದರಲ್ಲಿ ಎಷ್ಟು ಗೊತ್ತು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: