ಹೊಸ 2000 ರುಪಾಯಿ ನೋಟ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಓಡಾಡ್ತಿರೋ ಮಹಾನ್ ಸುಳ್ಳು

ಅದೆಲ್ಲಿಂದ ಹರಡುತ್ತೋ ಇವೆಲ್ಲ

ನೆನ್ನ ತಾನೇ ಮೈಸೂರಲ್ಲಿ ಈ ಹೊಸ 2000 ₹ ನೋಟುಗಳ್ನ ಪ್ರಿಂಟ್ ಮಾಡಿದಾರೆ ಅಂತ ಹೇಳ್ತಿದಾರೆ, ಆದ್ರೆ ಹುಷಾರಾಗಿರಿ ಅಂತ ಹೇಳಿದ್ವಿ. ಆದ್ರೆ ನಿಮಗೆ ಗೊತ್ತಿರೋಹಂಗೆ ಇವತ್ತು ಆ‌ ನೋಟು ನಿಜವಾದ ನೋಟೇ ಅಂತ ಆಗಿದೆ. ಅದರ ಬಗ್ಗೆ ಹುಷಾರಾಗಿರೋ ಬದ್ಲು ಇವತ್ತು ನಿಮ್ಮ ಹತ್ತಿರ ಇರೋ ನಿಜವಾದ 500 ಮತ್ತೆ 1000 ನೋಟುಗಳ ಬಗ್ಗೇನೇ‌ ಹುಷಾರಾಗಿರಬೇಕಾದ ಸಂದರ್ಭ ಬಂದುಬಿಟ್ಟಿದೆ. ಅದರ ಬಗ್ಗೆ ಏನ್ ಮಾಡ್ಬೇಕು ಅಂತ ನಿಮಗೇನು ನಾವು ಹೇಳಬೇಕಾಗಿಲ್ಲ ಬಿಡಿ. ನಿಮಗದು ಗೊತ್ತೇ ಇದೆ.

ಆದ್ರೆ ಸಾಮಾಜಿಕ ತಾಣಗಳಲ್ಲಿ ಒಂದು ಮಹಾನ್ ಹಸಿ ಸುಳ್ಳು ಓಡಾಡ್ತಿದೆ...

ಹೊಸ 2000 ₹ ನೋಟಲ್ಲಿ ಒಂದು Nano GPS Chip ಇರುತ್ತೆ, ಸೆಟಿಲೈಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಅದರಿಂದ ಯಾವ ನೋಟ್ ಎಲ್ಲಿದೆ ಅಂತ ಗೊತ್ತಾಗುತ್ತೆ ಅನ್ನೋದೇ ಆ ಹಸಿ ಸುಳ್ಳು.

ವಾಟ್ಸಪ್, ಫೇಸ್ಬುಕ್ ಮತ್ತೆ ಟ್ವಿಟರ್ಗಳಲ್ಲಿ ಇಂಗ್ಲಿಷಲ್ಲಿ ಈ ಸುಳ್ಳು ಓಡಾಡ್ತಿದೆ.

ಇದು ಯಾಕೆ ಬರೀ ಸುಳ್ಳು ಗೊತ್ತಾ?

  1. ನೆನ್ನೆ ರಾತ್ರಿ RBI ನೋರು ಹೊಸ ನೋಟಲ್ಲಿ ಏನೇನಿರುತ್ತೆ ಅಂತ ಹೇಳಿದಾರೆ. ಅದರಲ್ಲಿ ಎಲ್ಲೂ ಈ ಚಿಪ್ಪಿನ ಬಗ್ಗೆ ಉಲ್ಲೇಖ ಇಲ್ಲ.
  2. ಇಂಥ ಚಿಪ್ಗಳು ಓಡಬೇಕಾದರೆ ಕರೆಂಟ್ ಬೇಕು
  3. ಕರೆಂಟ್ ಇಲ್ಲದೆ ಓಡೋ‌ ಚಿಪ್ಪುಗಳೂ ಇರ್ತವೆ (ಉದಾ: RFID ಚಿಪ್ಪುಗಳು), ಆದರೆ ಅವುಗಳಿಗೆ ಕೆಲವು ಅಡಿಯಷ್ಟು ದೂರ ಮಾತ್ರ ಸಿಗ್ನಲ್ ಕಳ್ಸಕ್ಕಾಗೋದು. ಸೆಟಿಲೈಟ್ ವರೆಗೂ ಕಳ್ಸಕ್ಕಾಗೋದು ಅಸಾಧ್ಯ.
  4. ಎಲ್ಲಾ‌ ಕಡೆ ಓಡಾಡ್ತಿರೋ ಫೋಟೋಗಳಲ್ಲಿ ಎಲ್ಲೂ ಈ ಚಿಪ್ಪು ಕಾಣಿಸ್ತಾ ಇಲ್ಲ.

ಇಂಥ ಸುಳ್ಳು ಹೇಳ್ಕೊಂಡು ಜನರಿಗೆ ಅದೇನು ಮಜಾ ಸಿಗುತ್ತೋ ಗೊತ್ತಿಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: