ಸೈಕಾಲಜಿ ಪ್ರಕಾರ ನಾವ್ಯಾಕೆ "ಇಲ್ಲ" ಅನ್ನಕ್ಕೆ ಹಿಂಜರೀತೀವಿ ಅಂತ ತಿಳ್ಕೊಂಡು ಇನ್ಮೇಲೆ ಅನ್ನಕ್ಕೆ ಶುರು ಮಾಡಿ

ಮುಲಾಜೇ ಇಲ್ಲ

ತುಂಬಾ ಜನಕ್ಕೆ ಅದೆಂತಾದ್ದೇ ಸಮಯ ಆಗಿರ್ಲಿ ಯಾರೇ ಆಗಿರ್ಲಿ "ಇಲ್ಲ"/ "ಆಗೋಲ್ಲ" ಅಂತ ಹೇಳೋದು ಭಾರಿ ಕಷ್ಟ. ಅವರ ಮನಸ್ಸು ಅದೆಷ್ಟೇ ಜೋರಾಗಿ ಅಯ್ಯೋ ನನ್ನಿಂದಾಗೋಲ್ಲ ಅಂತ ಕೂಗಿ ಕೂಗಿ ಹೇಳ್ತಿದ್ರೂ ಕೂಡ ಬೇಜಾರ್ ಮಾಡ್ಕೊಂಡೇ ಒ.ಕೆ ಅಂದ್ಬಿಡ್ತಾರೆ. ನಿಮಗೂ ಇದೇ ಪ್ರಾಬ್ಲಮ್ಮಾ?, ಆದ್ರೆ ಈ ರೀತಿ ಹೇಳೋದ್ರಿಂದ ನಾವು ನಮ್ಮನ್ನೇ ನೊಯಿಸ್ಕೊಂಡಿರ್ತೀವಿ ಅಂತ ಯೋಚ್ನೆ ಮಾಡಲ್ಲ.

ಮಿಕ್ಕವರೂ ನಮ್ಮ ಹಾಗೆ ಅಂತಲೋ, ಅಥವಾ ಪರಿಸ್ಥಿತಿ ಒತ್ತಡದಿಂದ್ಲೋ ನಿಮ್ಮ ಮನಸ್ಸಿನ ವಿರುದ್ಧ ತೊಗೊಳ್ಳೊಕೆ ಮುಂದಾಗ್ತೀರಿ ಕೆಲವೊಮ್ಮೆ ಇದ್ರಿಂದ ಹೊರಗ್ ಬರೋಕೆ  ಯಾರದ್ದದ್ರೂ ಸಹಾಯನ ನಿರೀಕ್ಷೆ ಮಾಡಿದ್ರೂ ಆಶ್ಚರ್ಯ ಇಲ್ಲ. ನಿಮಗಿಂತ ಹೆಚ್ಚು ಮಿಕ್ಕವರ ಭಾವನೆಗಳು ನಿಮ್ಮನ್ನ ಬಾದಿಸಬಹುದು.

ಸೈಕಾಲಜಿ ಪ್ರಕಾರ ನಾವು ಯಾವ ಯಾವ ಕಾರಣದಿಂದ "ಇಲ್ಲ" ಅನ್ನಕ್ಕೆ ಹಿಂಜರೀತೀವಿ ಅಂತ ತಿಳ್ಕೊಳೋಣ ಬನ್ನಿ.

1. ಇಲ್ಲ ಅಂದರೆ ಅವರಿಗೆ ನೋವಾಗುತ್ತೆ ಅಂತ ಹಿಂಜರೀತೀವಿ

ಅಯ್ಯೋ! ನಾನು ಇಲ್ಲ ಅಂದುಬಿಟ್ಟರೆ ಅವರಿಗೆ ತೊಂದರೆ ಆಗುತ್ತೆ. ಅವರು ಏನೋ ಆಸೆ ಇಟ್ಕೊಂಡು ನನ್ನ ಹತ್ತಿರ ಬಂದಿದಾರೆ, ಆ ಆಸೆ ನೆರವೇರಿಸೋದು ನನ್ನ ಕರ್ತವ್ಯ ಅಲ್ಲವೇ? ಹೀಗ್ ಅಂದುಕೊಳೋದ್ರಿಂದ ನೀವು ಇಲ್ಲ ಅನ್ನಕ್ಕೆ ಹಿಂಜರೀತೀರಿ.

ಮೂಲ

2. ನಮ್ಮನ್ನ ಅವರು ಇಷ್ಟ ಪಡದೆ ಹೋದರೆ ಅನ್ನೊ ಭಯದಿಂದ

ಮೊದಲ್ನೇ ಪಾಯಿಂಟಲ್ಲಿ ಹೇಳಿದ ಹಾಗೇನೇ ಇದೂನೂ. ಆದರೆ ಇಲ್ಲಿ ನಿಮ್ಮ ಮತ್ತೆ ಅವರ ಸಂಬಂಧದ ಮುಂದಿನ ಹಂತದ ಬಗ್ಗೆ ಯೋಚನೆ ನಿಮಗೆ. ಇಲ್ಲ ಅಂತಾನೇ ಇದ್ದರೆ ಅವರು ನಿಮ್ನ ಇಷ್ಟ ಪಡದೆ ಹೋದ್ರೆ?

ಮೂಲ

3. ನಮ್ಮನ್ನ ಅವರು ಸ್ವಾರ್ಥಿ ಅಂದುಕೊಂಡ್ರೆ ಅನ್ನೋ ಭಯದಿಂದ

ಇಲ್ಲ ಅನ್ನೋದು ಯಾವಾಗ ಹೇಳಿ? ನಾವು ಎನಾದರೂ ಕೆಲಸ ಮಾಡಬೇಕಾದಾಗ. ಯಾರಾದರೂ ಏನಾದರೂ ಕೇಳಿಕೊಂಡು ಬಂದಾಗ ಆ ಕೆಲಸ ಮಾಡಲ್ಲ ಅಂದ್ರೆ ಅವರು ನಮ್ನ ಸ್ವಾರ್ಥಿ ಅನ್ಕೋಬೋದು ಅಲ್ವಾ? ಇದಕ್ಕೋಸ್ಕರಾನೂ ನಾವು ಒಮ್ಮೊಮ್ಮೆ ಇಲ್ಲ ಅನ್ನಲ್ಲ.

ಮೂಲ

4. ಇನ್ನೊಬ್ಬರ ನೋವನ್ನ ನಾವು ನಮ್ಮದೇ ಅಂತ ಪರಿಗಣಿಸೋದ್ರಿಂದ

ಕೆಲವರು ಇರ್ತಾರೆ. ಅವರಿಗೆ ಬೀದೀಲಿ ಹೋಗೋರ ನೋವೆಲ್ಲ ತಮ್ಮದೇ ಅನ್ನಿಸುತ್ತಾ ಇರುತ್ತೆ. ಅದಕ್ಕೇ ಅವರು ಎನು ಕೇಳಿದರೂ ಹೂಂ ಅಂದು ಆಮೇಲೆ ಕಷ್ಟಕ್ಕೆ ಸಿಕಾಕೋತಾರೆ!

ಮೂಲ

5. ಸಾಮಜದಲ್ಲಿ ನಮ್ಮ ಬಗ್ಗೆ ಒಳ್ಳೇ ಅಭಿಪ್ರಾಯ ಮೂಡಬೇಕು ಅನ್ನೋ ಆಸೆಯಿಂದ

ಸಮಾಜದಲ್ಲಿ ಒಳ್ಳೇ ಹೆಸರು ಮಾಡೋರು ಕೆಲಸಗಳ್ನ ಮಾಡಿ ತೋರ್ಸೋರು. ಅದಾಗಲ್ಲ ಇದಾಗಲ್ಲ, ಇಲ್ಲ ಇಲ್ಲ ಅನ್ನೋರಲ್ಲ. ನಾನೂ ಸಮಾಜದಲ್ಲಿ ಒಳ್ಳೇ ಹೆಸರು ಮಾಡಬೇಕು ಅಂತ ಯಾವ್ಯಾವುದಕ್ಕೋ ಹೂಂ ಅಂದು ಆಮೇಲೆ ಕಷ್ಟಕ್ಕೆ ಸಿಕಾಕೋತೀವಿ ಒಂದೊಂದ್ಸಲ.

ಮೂಲ

6. ನಾವು ಜಗಳಗಂಟ್ರು ಅಂತ ತಿಳಿದುಕೊಂಡ್ರೆ ಅನ್ನೊ ಭಯ ಇದ್ರೆ

ಇಂಥದ್ದು ಮಾಡಿಕೊಡಿ ಅಂತ ಕೇಳಿದಾಗ ವಿರುದ್ಧವಾಗಿ ಮಾತಾಡೋದೇ ತಪ್ಪು ಅನ್ಕೊಂಡಿದ್ರೆ ನಿಮಗೆ ಇಲ್ಲ ಅನ್ನಕ್ಕಾಗಲ್ಲ. ಹಾಗೆ ಹೇಳೋದೇನು ಜಗಳ ಅಲ್ಲ, ಆದರೆ ನಿಮಗೆ ಹಾಗೆ ಅನ್ನಿಸುತ್ತೆ. ಅದಕ್ಕೇ ನೀವು ಇಲ್ಲ ಅನ್ನಕ್ಕೆ ಹಿಂಜರೀತೀರಿ.

ಮೂಲ

7. ಎದುರಿಗಿನ ವ್ಯಕ್ತಿ ನಮ್ಮನ್ನ ವಿಚಿತ್ರವಾಗಿ ನೋಡದಿರಲಿ ಅಂತ

ಎನಾರೂ ಕೇಳ್ಕೊಂಡ್ ಬಂದೋರು ಇವನು ಹೂಂ ಅಂತಾನೆ ಅನ್ಕೊಂಡಿರ್ತಾರೆ. ಆಮೇಲೆ ನೀವು ಇಲ್ಲ ಅಂದಾಗ ಅವರೇನಾದರೂ ನಿಮ್ನ "ಇವನು ವಿಚಿತ್ರ" ಅಂದುಬಿಟ್ಟರೆ? ಅದಕ್ಕೂ ಹೂಂ ಅಂದು ಆಮೇಲೆ ಕಷ್ಟ ಪಡ್ತೀರಿ.

ಮೂಲ

8. ಇಲ್ಲ ಅನ್ನೋ‌ ಬದಲು ಒಂದು ಚೂರು ಕಷ್ಟ ಪಟ್ಟರಾಯಿತು ಅಂದುಕೊಳ್ಳೋದ್ರಿಂದ

ಕೆಲವರಿಗೆ ತಮ್ಮ ಲಿಮಿಟ್ಟೇ ಗೊತ್ತಿರಲ್ಲ. ಮಾಡಬಾರದಷ್ಟು ಕೆಲಸ ಮಾಡಿ ಆಮೇಲೆ ಸುಸ್ತಾಗಿ ಒಂದ್ ದಿನ ಮಠ ಆಗ್ತಾರೆ. ಅಂಥವರಿಗೆ ಯಾವುದಕ್ಕೂ ಇಲ್ಲ ಅನ್ನೋದಕ್ಕೇ ಬರಲ್ಲ. ಇನ್ನೊಂದು ಸ್ವಲ್ಪ ಕೆಲಸ ಮಾಡಿದರಾಯಿತು ಅನ್ನೋ ಜನ ಅವರು.

ಓದಿದ್ದು ಆಯ್ತಾ? ಇನ್ನು ಮುಂದಿನ್ ಸಲ ನಿಮಗೆ ಇಲ್ಲ ಅನ್ನಬೇಕು ಅನ್ನಿಸಿದಾಗ ಅಂದು ನೋಡ್ತೀರಾ?

ಇಷ್ಟು ಹೊತ್ತು ಹೇಳಿದ್ದರಲ್ಲಿ ನಿಮ್ಮನ್ನ ನೀವು ಸ್ವಲ್ಪ ಆದರೂ ಕಂಡಿದೀರಾ?‌ ಹಾಗಿದ್ರೆ ನೀವು ನಿಮ್ಮ ಮನಸ್ಸಿನಲ್ಲೆ ಒಂದು ಯುದ್ಧ ಮಾಡಬೇಕಾಗಿ ಬರಬಹುದು. ನಿಮಗೆ ಯಾವ ಕಾರಣಕ್ಕೆ ಎದುರಿಗಿನ ವ್ಯಕ್ತಿಗೆ ಇಲ್ಲ ಅನ್ನೋಕಾಗ್ತಿಲ್ಲ ತಿಳ್ಕೊಳ್ಳಿ. ಅದ್ರಿಂದ ಆದಷ್ಟು ಬೇಗ ಹೊರಗ್ ಬರೋ ಪ್ರಯತ್ನ ಮಾಡಿ. ನೀವು ನಿಷ್ಟೂರವಾಗಿ ಇಲ್ಲ ಅಂತ ಹೇಳೊಕೆ ಶುರು ಮಾಡಿದ ದಿನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿ ನೀವು ಬೇಡದ ಜನಗಳಿಂದ ದೂರ ಆಗೋಕೂ ಸಾಧ್ಯ ಆಗುತ್ತೆ, ಬೇಕಾದವರನ್ನ ಗುರುತಿಸಕ್ಕೂ ಸಾಧ್ಯ ಆಗುತ್ತೆ. ಜನ ತಾನಾಗಿ ತಾನೇ ನಿಮ್ಮನ್ನ ಅದು ಮಾಡು ಇದು ಮಾಡು ಅಂತ ಕೇಳೋದು ಕಡಿಮೆ ಮಾಡ್ತಾರೆ, ನೀವು ಏನು ಅನ್ನೋದು ಅವ್ರಿಗೂ ಅರ್ಥ ಆಗುತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: