ಈ 9 ಗುಣಗಳಿರೋ ಹುಡುಗ್ರು ಸಿಕ್ರೆ ಹುಡುಗೀರು ಕಣ್ ಮುಚ್ಕೊಂಡ್ ಮಾಡ್ಕೋಬೋದು

ಈ ಥರದ ಹುಡುಗ್ರು ಕೈ ಕೊಡಲ್ಲ

21ನೇ ಶತಮಾನದಲ್ಲಿ ಪ್ರೀತಿಸಿ ಮದ್ವೆ ಆದೋರು ಮತ್ತೆ ಆಗ್ತಿರೋರು ಜಾಸ್ತಿ ಇದಾರೆ. ನೀವ್ ಹುಡುಕುತ್ತಿರೋ ಹುಡುಗಂಗೆ ನಾವು ಕೆಳಗೆ ಕೊಟ್ಟಿರೋ 9 ಗುಣಗಳಿದ್ರೆ ಸಾಕು, ಕಣ್ಮುಚ್ಕೊಂಡು ಮಾಡ್ಕೊಳ್ಳಿ...

1) ನೀವ್ ಹೇಳೋದನ್ನ ತಾಳ್ಮೆಯಿಂದ ಕೇಳ್ಸ್ಕೊಂಡು ನ್ಯಾಯವಾಗಿ ಮಾತಾಡೋನು

ಎಲ್ರೂ ಮಾತಾಡ್ತಾರೆ. ಬೇಕಾದಾಗ ಕೂಕೊತಾರೆ. ತಮ್ಮ ಭಾವನೆಗಳನ್ನ ಹೇಳ್ಕೊತಾರೆ. ಆದ್ರೆ ಅಪರೂಪಕ್ಕೆ ಸ್ವಲ್ಪ ಜನ ಮಾತ್ರ ಇನ್ನೊಬ್ರು ಹೇಳಿದ ಮಾತನ್ನ ಕಿವಿಗೊಟ್ಟು ಆಲಿಸ್ತಾರೆ. ಅಂಥಾ ಹುಡುಗ ಏನಾದ್ರೂ ಸಿಕ್ಕರೆ ಬಿಡ್ಬೇಡಿ. ನಿನಗೆ ಕಷ್ಟ ಅದಾಗ ಅವನ ಜೊತೆ ಮಾತಾಡಿದ್ರೆ ಮನಸ್ಸಿನ ಭಾರ ಇಳಿಯತ್ತೆ. ವಿಶ್ವಾಸ ಹೆಚ್ಚತ್ತೆ.

2) ನಿಮ್ ಕನಸನ್ನ ನನಸು ಮಾಡ್ಕೊಳಕ್ಕೆ ಸಾಥ್ ಕೊಡೋನು

ಈಗ ಕಾಲ ಬದ್ಲಾಗಿದೆ. ಹುಡುಗೀರ್ ಕೂಡ ಎಷ್ಟೋ ಕನಸುಗಳನ್ನ ಹೊತ್ಕೊಂಡು ಓದಿ ಬರ್ದು ಮಾಡಿರ್ತಾರೆ. ಮಧ್ಯಮ ವರ್ಗ ಮತ್ತೆ ಕೆಳ ವರ್ಗದೋರ್ಗಂತೂ ಓದಿ ಬರ್ದು ಕೆಲ್ಸಕ್ಕೆ ಸೇರ್ಬೇಕು ಅಂತ ಆಸೆ ಇಟ್ಕೊಂಡಿರ್ತಾರೆ. ಈ ಆಸೆಗೆ ಸಹಾಯ ಮಾಡೊ ಹುಡುಗ್ರು ಸಿಕ್ಕ್ರೆ ಬಿಡೋದು ಬೇಡ.

3) ಅವನು ಏನಾದ್ರು ಸಾಧಿಸಿದಾಗ ನಿಮ್ನ ಶಾಮೀಲ್ ಮಾಡ್ಕೊಳೋನು

ನಿಮ್ ಸಕ್ಸೆಸ್ಗೆ ಖುಷಿ ಪಡೋದಲ್ಲದೆ ಅವನ್ನ ಸಕ್ಸೆಸ್ಸಿಗೆ ನಿಮ್ಮದು ಕೂಡ ಒಂದು ಕೊಡುಗೆ ಇದೆ ಅಂತ ತುಂಬು ಮನಸ್ಸಿಂದ ಹೇಳೋ ಹುಡ್ಗ ನಿಜವಾಗ್ಲೂ ಒಳ್ಳೇಯೋನೆ. ನಿಮ್ಗೂ ಅವನ ಜೊತೆ ಬಾಳ್ವೆ ಮಾಡಕ್ಕೆ ಇಷ್ಟ ಆಗತ್ತೆ.

4) ಬೇರೇಯೋರ ಜೊತೆ ಒಳ್ಳೆ ರೀತೀಲಿ ನಡ್ಕೋಳೋನು

ಮಕ್ಕಳು ಜೊತೆ ಮತ್ತೆ ವಯಸ್ಸಾದೋರ್ ಜೊತೆ ಆ ಹುಡ್ಗ ನಡ್ಕೊಳ್ಳೊ ರೀತಿಯಿಂದ ಅವನ ನಿಜವಾದ ವ್ಯಕ್ತಿತ್ವ ಎಂಥದ್ದು ಅಂಥ ಕಂಡುಹಿಡಿಬೋದು. ಎಲ್ಲರನ್ನೂ ಸಮಭಾವನೆಯಿಂದ ನೋಡೊನು ಸಿಕ್ಕರೆ ಖಂಡಿತ ಹಿಡ್ಕೊಳ್ಳಿ. 

5) ನಿಮ್ ಮನಸ್ಸಿಲ್ಲಿರೋದನ್ನ ಅವನ್ ಜೊತೆ ಹಂಚಿಕೊಳ್ಳಕ್ಕೆ ಸದರ ಮಾಡ್ಕೋಡೋನು

ಅವನ ಜೊತೆ ನೀವ್ ಬರೀ ಮಾತಾಡೊದಲ್ಲ, ನಿಮ್ ಮನಸ್ಸಿನ ಅಂತರಾಳನ ಯಾವುದೆ ಆತಂಕ ಇಲ್ಲದೆ ಹಂಚ್ಕೊಬೋದು. ಸಮಯ ಸಂದರ್ಭ ನೋಡಿ ನಿಮ್ಗೆ ಒಳ್ಳೆ ಸಲಹೆ ಕೊಡೋನಾದ್ರೆ ನಿಮ್ಗೆ ಉಪಯೋಗ. ಜೀವನಾ ಪೂರ್ತಿ ಸುಖವಾಗಿ ಇರ್ತೀರಿ.

6) ಎಷ್ಟೇ ಜಗಳ ಆಡಿದ್ರೂ ಸ್ವಲ್ಪ ಹೊತ್ತಲ್ಲೇ ಸರಿಹೋಗೋನು

ಯಾವ್ದೇ ಸಂಬಂಧ ತೊಗೊಳ್ಳಿ, ಸ್ವಲ್ಪ ಜಗಳ, ಕೋಪ-ತಾಪ, ಭಿನ್ನಾಭಿಪ್ರಾಯ ಇದ್ದೇ ಇರತ್ತೆ ಅಲ್ವಾ? ಹಾಗೆ ನೀವ್ ಎನಾದ್ರೂ ಅವನ ಜೊತೆ ಜಗಳ ಮಾತುಕಥೆ ಆದ್ರೆ, ನೀವು ಅದೆಷ್ಟ್ ಬೇಗ ಅವನ್ ಜೊತೆ ಮತ್ತೆ ಮಾತಾಡಕ್ಕೆ ಹವಣಿಸುತ್ತೀರಿ ಅನ್ನೋದ್ರ ಮೇಲೆ ನಿಮ್ಗೆ ಅವನ ಮೇಲೆ ಎಷ್ಟ್ ಪ್ರೀತಿ ಇದೆ ಅಂತ ಗೊತ್ತಾಗತ್ತೆ. ಅವನಿಗೂ ಅಷ್ಟೆ ಎಷ್ಟ್ ಬೇಗ ವಾಪಸ್ ನಿಮ್ ಜೊತೆ ಮಾತಾಡಕ್ಕೆ ಶುರು ಮಾಡ್ತಾನೆ ಅನ್ನೋದ್ರಲ್ಲೇ ನಿಮ್ ಮೇಲೆ ಎಷ್ಟ್ ಪ್ರೀತಿ ಇದೆ ಅಂತ ಗೊತ್ತಾಗತ್ತೆ!

7) ನಿರ್ಧಾರ ತೊಗೋವಾಗ ನಿಮ್ನ ಕೇಳೋನು

ಅವನು ಸಣ್ಣ ಪುಟ್ಟ ವಿಷ್ಯ ಅಥವಾ ದೊಡ್ಡ ವಿಷ್ಯದಲ್ಲಿ ನಿರ್ಧಾರ ತೊಗೊಬೇಕಾದ್ರೆ ನಿಮ್ ಜೊತೆ ಚರ್ಚೆ ಮಾಡ್ತಾನೆ. ನಿಮ್ಮ ಭಾವನೆಗೆ, ಅಭಿಪ್ರಾಯಕ್ಕೆ ತಕ್ಕ ಬೆಲೆ ಕೊಡ್ತಾನೆ. ಅವನಲ್ಲಿ ಈ ಗುಣ ಭಾಳ ಮುಖ್ಯ. ಇದ್ರಿಂದ ನಿಮ್ಮಿಬ್ಬರ ನಡುವೆ ಅನ್ಯೋನ್ಯತೆ ಬೆಳೆಯತ್ತೆ. 

8) ನೀವ್ ಹೇಗಿದ್ದಿರೋ ಹಾಗೇನೇ ಪ್ರೀತ್ಸೋನು

ನೋಡಕ್ಕೆ ನೀವು ಅಂಥಾ ಏನ್ ಚೆನಾಗಿ ಕಾಣಿಸಲ್ಲ ಅಂದ್ರೂ ನಿಮ್ನ ಇಷ್ಟಪಡೋನು. ನಿಮ್ ಮೂಡ್ ಸರಿ ಇಲ್ಲದೆ ಅವನ ಜೊತೆ ಜಗಳ ಆಡಿದ್ರೂ ಸಿಕ್ಕಾಪಟ್ಟೆ ಬೈದಿದ್ರೂ ನಿಮ್ನ ಇಷ್ಟಪಡೋನು. ನಿಮ್ಮಲ್ಲಿರೋ ಕೆಲ ಕೆಟ್ಟ ವರ್ತನೆ ಅವನು ನೋಡಿದ್ರೂ ನೀವು ಹೇಗೋ ಹಾಗೇನೇ ಇಷ್ಟಪಡೋನಾದ್ರೆ ಅವನೇ ನಿಮ್ಗೆ ಸರ್ಯಾದ ಜೋಡಿ.

9) ನೀವ್ ಹೇಗೆ ನಂಬ್ತಿರೋ ಹಾಗೆ ಅವನು ನಂಬೋನು

ಪರಸ್ಪರ ನಂಬಿಕೆ ಇದ್ರೆ ಮಾತ್ರ ಜೀವನದಲ್ಲಿ ಸುಖ ಇರೋದು. ಎಲ್ಲಾ ಇದ್ದು ಅವನೇನೇ ಮಾಡಿದ್ರೂ ನೀವ್ ಒಳಗೊಳಗೆ ಸಿಐಡಿ ತರ ಜಾಲಾಡೋದು, ನೀವ್ ಏನೇ ಮಾಡಿದ್ರೂ ಅವ ಸಂದೇಹ ಪಡೋದಾದ್ರೆ ಜೀವನ ನರಕ ಆಗಬಿಡತ್ತೆ. 

ಯಾರೂ 100% ಪರ್ಫೆಕ್ಟ್ ಅಲ್ಲ, ಒಬ್ಬರಿಗೊಬ್ಬರು ಹೊಂದಿಕೊಂಡು ಹೋದ್ರೆ ಅದೇ ಸುಖ ಸಂಸಾರ ಆಗತ್ತೆ.

ಇಂಥಾ ಹುಡುಗ ಸಿಕ್ಕ್ರೆ ತಕ್ಷಣ ಮನೆಯೋರಿಗೆ, ತಂದೆ ತಾಯಿಗೆ ತಿಳಿಸಿ ಅದೇನ್ ಬೇಕೋ ಮಾಡಿ ಮದ್ವೆ ಆಗ್ಬಿಡಿ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬೆಳ್-ಬೆಳಗ್ಗೆ 20 ನಿಮಿಷ ಹೀಗ್ ಕಳೆದರೆ ಇಡೀ ದಿನ ಲವಲವಿಕೆ ಮತ್ತು ಸಂತೋಷಗಳು ನಿಮ್ನ ಬಿಟ್ಟು ಹೋಗಲ್ಲ

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತೋರು ಬಿಚ್ಚಿಟ್ಟ ಗುಟ್ಟು

ಇಂಥದ್ದು ನಡೆದೇ ಇರುತ್ತೆ - ಬೆಳ್ ಬೆಳಿಗ್ಗೆನೇ ಯಾವ್ದೂ ನೀವಂದ್ಕೊಂಡ ಹಾಗೆ ನಡೀತಿರೊಲ್ಲ. ನೀವಿಟ್ಟ ಸಮಯಕ್ಕೆ ಅಲಾರ್ಮು ಹೊಡ್ದಿರೊಲ್ಲ, ಅಥವಾ ನೀವೇ ತಪ್ಪಾಗಿ ಅಲಾರ್ಮ್ ಸೆಟ್ ಮಾಡಿರ್ತೀರ. ಅಯ್ಯಯ್ಯೋ ಲೇಟ್ ಆಯ್ತು ಅಂದ್ಕೊಂಡು ಬೇಗ ಸ್ನಾನ ಮಾಡಿ ತಿಂಡಿ ರೆಡಿ ಮಾಡೋಕೆ ಹೋದ್ರೆ ಅದು ಸೀದು ಹೋಗುತ್ತೆ. ಇಸ್ತ್ರಿ ಹಾಕೋಕೆ ಹೋದಾಗ ಕರೆಂಟು ಕೈ ಕೊಡುತ್ತೆ. ಸರಿ, ಆ ದಿನ ಪೂರ್ತಿ ಎಲ್ಲವೂ ಹಾಳು. ನೀವು ಮುರ್ಫಿ ಅನ್ನೋನು ಹೇಳಿರೋದು ಕೇಳಿರ್ಬಹುದು - ಏನಾದ್ರು ಹಾಳಾಗೋ ಚಾನ್ಸ್ ಇದ್ರೆ, ಅದು ಹಾಳಾಗಿಯೇ ಆಗುತ್ತೆ. ಒಟ್ನಲ್ಲಿ ಬೆಳ್ ಬೆಳಿಗ್ಗೆ ಕೆಟ್ಟದಾಗಿ ಶುರುವಾದ್ರೆ ಅವತ್ತು ಪೂರ್ತಿ ಮುರ್ಫಿ ಹೇಳಿದ್ದು ನಿಜ ಆಗ್ತಾ ಹೋಗುತ್ತೆ. ಇದಕ್ಕೆ ಪರಿಹಾರ ಇದೆ - ದಿನವೂ ಬೆಳಿಗ್ಗೆ ಬರೀ ಇಪ್ಪತ್ತು ನಿಮಿಷ ಈ ರೀತಿ ಕಳ್ದ್ರೆ ಇಡೀ ದಿನ ಸಕತ್ತಾಗಿರುತ್ತೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತು ಸಂತೋಷ, ನೆಮ್ಮದಿಗಳ ಬಗ್ಗೆ ರಿಸರ್ಚ್ ಮಾಡ್ತಿರೋ ಶಾನ್ ಏಚರ್ ಅನ್ನೋನು ಹೇಳಿರೋ ಪ್ರಕಾರ ಬೆಳಿಗ್ಗೆ ನೀವು ಪಾಸಿಟಿವ್ ಆಗಿದ್ರೆ ಆ ದಿವ್ಸ ಖಷಿಯಾಗಿರ್ತೀರಿ. ಪಾಸಿಟಿವಿಟಿ ಹೆಚ್ಚಾದ್ರೆ ನಿಮ್ ಮಿದುಳು ಖುಷ್ ಖುಷಿಯಾಗಿರುತ್ತೆ. ಖುಷಿಯಾಗಿದ್ದಾಗ ಮಿದುಳು ಚೆನ್ನಾಗಿ ಕೆಲಸ ಮಾಡುತ್ತೆ, ಎಷ್ಟು ಕಷ್ಟ ಇದ್ರೂ ಟೆನ್ಷನ್ ತೆಗೊಳೊಲ್ಲ. ಆ 20 ನಿಮಿಷ ಏನು ಮಾಡ್ಬೇಕು ಅಂತ ಹೇಳ್ತಾರೆ ಅನ್ನೋದನ್ನ ಓದ್ಕೊಳ್ಳಿ.

1) 2 ನಿಮಿಷ ಹಿಂದಿನ್ ದಿವ್ಸ ಏನೇನು ಒಳ್ಳೇದಾಯ್ತು ಅನ್ನೋದನ್ನ ನೆನೆಸ್ಕೋಬೇಕು

ನಾವು ಮಿದುಳಿಗೆ ಮೋಸ ಮಾಡ್ಬಹುದು. ಖುಷಿಯಾಗಿದ್ದೀನಿ ಅಂತ ನಿಮ್ಗೆ ನೀವೇ ಹೇಳ್ಕೊಂಡ್ರೆ ಅದು ನಿಜಕ್ಕೂ ಖುಷಿಯಾಗಿ ಬಿಡುತ್ತೆ. ಹಿಂದಿನ್ ದಿನ ಖುಷಿ ಕೊಡೋ ಅಂಥದ್ದು ಏನಾಯ್ತು ಅಂತ ನೆನಪು ಮಾಡ್ಕೊಂಡು ಬರ್ದಿಟ್ಕೊಳ್ಳಿ. ಹಿಂದಿನ್ ದಿನದ ಖುಷೀನ ಎರಡು ನಿಮಿಷ ಮತ್ತೆ ಅನುಭವ್ಸಿ. ಇದರಿಂದ ನಿಮ್ ಮಿದುಳು ಪಾಸಿಟಿವ್ ಆಗುತ್ತೆ. ಮೊದ್ಲೇ ಹೇಳಿದ್ ಹಾಗೆ, ಮಿದುಳು ಪಾಸಿಟಿವ್ ಆಗಿದ್ರೆ ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

2) 2 ನಿಮಿಷ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋಬೇಕು

ನಾವು ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋದು ಕಡಿಮೆ. ಬೆಳ್ ಬೆಳಿಗ್ಗೆ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳಿ. ನೆನೆಸ್ಕೊಳ್ಳೋದಷ್ಟೆ ಅಲ್ಲ, ಅವ್ರು ನಿಮ್ ಮುಂದೆ ಇದ್ರೆ ಅವ್ರಿಗೆ ಹೇಳಿ. ಅಥ್ವಾ ಈಮೇಲೋ ಮೆಸೇಜೋ ಮಾಡಿ. ಇದರಿಂದ ಎರಡು ರೀತಿ ಪ್ರಯೋಜನ ಇದೆ - ಈ ರೀತಿ ಒಳ್ಳೆ ಕೆಲ್ಸ ಮಾಡಿದ್ದೀನಿ ಅಂತ ನೀವು ಖುಷಿಯಾಗ್ತೀರಿ, ಅಲ್ಲದೆ ಬೇರೆಯವ್ರ ಜೊತೆ ನಿಮ್ ಸಂಬಂಧ ಗಟ್ಟಿಯಾಗುತ್ತೆ. ಇದರಿಂದ ಮಿದುಳು ಖುಷಿಯಾಗುತ್ತೆ, ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

3) 2 ನಿಮಿಷ ನಿಮ್ಗಿರೋ ಭಾಗ್ಯ ನೆನೆಸ್ಕೋಬೇಕು

ಡಿ.ವಿ.ಗುಂಡಪ್ಪ 'ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ' ಅಂತ ಹೇಳಿದ್ದಾರೆ. ಹೀಗೆ ನಿಮ್ ಬದುಕಲ್ಲಿ ನಿಮ್ಗೆ ದಕ್ಕಿರೋ ಭಾಗ್ಯಗಳ್ನ ನೆನೆಸ್ಕೋಬೇಕಂತೆ ಬೆಳಿಗ್ ಬೆಳಿಗ್ಗೆ. ಇದರಿಂದ ಮಿದುಳು ಪಾಸಿಟಿವ್ ಆಗುತ್ತೆ. ಬದುಕಲ್ಲಿ ಏನೇನಿದೆ ಅಂತ ನೋಡೋದ್ರಿಂದ, ಏನೇನಿಲ್ಲ ಅಂತ ಕೊರಗೋದು ತಪ್ಪುತ್ತೆ. ಲೋಟ ಅರ್ಧ ಖಾಲಿಯಾಗಿದೆ ಅಂತ ಕೊರಗೋ ಬದ್ಲು ಅರ್ಧ ಲೋಟ ನೀರಿದ್ಯಲ್ಲ ಅಂತ ಖುಷಿ ಪಡ್ಬೇಕು. ಇಂಥ ಆಶಾವಾದದಿಂದ ಇಡೀ ದಿನ ಚೆನ್ನಾಗಿ ಕಳಿಯುತ್ತೆ. ನೀವು ಅಂದ್ಕೊಂಡ ಕೆಲಸ ಎಲ್ಲ ಮಾಡಿ ಮುಗಿಸ್ಬಹುದು.

ಮೂಲ

4) 12 ನಿಮಿಷ ವ್ಯಾಯಾಮ ಮಾಡ್ಬೇಕು

ಮನುಷ್ಯನ್ ದೇಹದಲ್ಲಿ 'ಎಂಡಾರ್ಫಿನ್' ಅನ್ನೋ ಹಾರ್ಮೋನು ಇದ್ದಷ್ಟು ಅವ್ನು ಖುಷಿಯಾಗಿರ್ತಾನಂತೆ. ನಾವು ಜಾಗಿಂಗ್, ಯೋಗಾಸನ, ವ್ಯಾಯಾಮ್ ಮಾಡೋವಾಗ್ಲೂ ಈ ಎಂಡಾರ್ಫಿನ್ ದೇಹದಲ್ಲಿ ಹೆಚ್ಚಾಗುತ್ತೆ. ಇದರಿಂದ ಟೆನ್ಷನ್ ಕಡಿಮೆ ಆಗಿ, ಮಿದುಳು ಅದರ ಪೂರ್ತಿ ತಾಕತ್ತು ತೋರ್ಸುತ್ತೆ. ಅಲ್ಲದೆ ನೀವು ನಿಮ್ ಬಗ್ಗೆ ಯೋಚ್ನೆ ಮಾಡೋದನ್ನ ಕಲೀತೀರಿ. ದಿವ್ಸ ವ್ಯಾಯಾಮ ಮಾಡೋದ್ರಿಂದ, ಹಿಡಿದ ಕೆಲ್ಸಾನ ಕಷ್ಟ ಬಿದ್ದು ಪೂರ್ತಿ ಮಾಡ್ಬೇಕು ಅನ್ನೋದೂ ಮಿದುಳಿಗೆ ಅರ್ಥ ಆಗುತ್ತೆ. ಇದೆಲ್ಲ ಪಾಸಿಟಿವಿಟಿ ಹೆಚ್ಸುತ್ತೆ.

ಮೂಲ

5) 2 ನಿಮಿಷ ಧ್ಯಾನ ಮಾಡ್ಬೇಕು

ಎರಡೇ ಎರಡು ನಿಮಿಷ ಧ್ಯಾನ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಒಂದು ಕಡೆ ಶಾಂತವಾಗಿ ಕೂತು, ನಿಮ್ ಉಸಿರಾಟದ್ ಮೇಲೆ ನಿಮ್ ಗಮನ ಇಡಿ. ಬೇರೆ ಯಾವುದ್ರ ಬಗ್ಗೆನೂ ಯೋಚ್ನೆ ಮಾಡ್ಬೇಡಿ. ಇದ್ರಿಂದ ಕೈಯಲ್ಲಿರೋ ವಿಷಯದ್ ಬಗ್ಗೆ ಮಾತ್ರ ಯೋಚ್ನೆ ಮಾಡೋ ಶಕ್ತಿ ಹೆಚ್ಚಾಗುತ್ತೆ. ದಿವ್ಸ ಇದನ್ನ ಅಭ್ಯಾಸ ಮಾಡ್ಕೊಂಡ್ರೆ ನಿಧಾನಕ್ಕೆ ಪಾಸಿಟಿವಿಟಿ ಹೆಚ್ಚಾಗುತ್ತೆ.

ಮೂಲ

ಬೆಳಿಗ್ಗೆ ಸ್ವಲ್ಪ ಜಾಸ್ತಿ ಟೈಮ್ ಇದ್ದ ದಿವ್ಸ ಬೇಕಿದ್ರೆ ಇದನ್ನೆಲ್ಲ ಜಾಸ್ತಿ ಹೊತ್ತು ಮಾಡ್ಬಹುದು. ಈ ಅಭ್ಯಾಸಗಳನ್ನ ರೂಢಿ ಮಾಡ್ಕ್ಕೊಂಡ್ರೆ ನೀವು ಹೆಚ್ಚು ಪಾಸಿಟಿವ್ ಆಲೋಚನೆಗಳನ್ನ ಮಾಡ್ತೀರಿ. ನಿಮ್ಮ ದಿನವೂ ಚೆನ್ನಾಗಿರುತ್ತೆ. ಅಂದ್ಕೊಂಡ ಕೆಲ್ಸ ಎಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತೀರಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: