ಗಂಡ್ಸಾದೋನು ಹೆಂಗಸರ ಬಗ್ಗೆ ಈ 14 ವಿಷಯ ಆದ್ರೂ ತಿಳ್ಕೊಂಡಿರ್ಬೇಕು, ಇಲ್ಲದಿದ್ರೆ ಕಷ್ಟ

ಇದನ್ನೆಲ್ಲ ಯಾರೂ‌ ಹೇಳ್ಕೊಡಲ್ಲ, ಅನುಭವದಿಂದ ಕಲ್ತುಕೋಬೇಕು. ಅಥವಾ ಅಂತೆಕಂತೆ ಓದ್ಬೇಕು :-)

ಹೆಂಗಸರು ಗಂಡಸರ ಥರ ಅಲ್ಲ. ಅವರ ಯೋಚನೆನೇ ಬೇರೆ, ಅವರ ದೇಹಾನೂ ಬೇರೆ. ಮುಕ್ಕಾಲ್ವಾಸಿ ಗಂಡಸ್ರಿಗೆ ಹೆಂಗಸರ ಬಗ್ಗೆ ಒಂದ್ ಚೂರು ಗೊತ್ತಿರಲ್ಲ... ಈ ಹೆಂಗುಸ್ರೇ ಹಿಂಗೆ - ಅವರನ್ನ ಅರ್ಥ ಮಾಡ್ಕೊಳೋದು ಅಷ್ಟು ಸುಲಭ ಅಲ್ಲ. ಆದರೂ ಕೆಲವೊಂದು ವಿಷಯಗಳು ಏನೇ ಆದರೂ ಪ್ರತಿಯೊಬ್ಬ ಗಂಡಸಿಗೂ ಗೊತ್ತಿರಬೇಕು... ಕೆಳಗೆ ಅಂಥ 12 ವಿಷಯಗಳ್ನ ಕೊಟ್ಟಿದೀವಿ. ಓದಿ, ಒಳ್ಳೇದಾಗುತ್ತೆ:

  1. ಹೆಂಗಸರು ಸ್ವಲ್ಪ ಅವರ ಫ್ರೆಂಡ್ಸ್ ಯೋಚ್ನೆ ಮಾಡಿದಂಗೆ ಮಾಡ್ತಾರೆ. ಆ ಫ್ರೆಂಡ್ಸಗೆ ನೀವು ಇಷ್ಟ ಆದ್ರೆ ಅವರಿಗೂ ಇಷ್ಟ ಆಗ್ತೀರಿ. ಇಲ್ಲದಿದ್ದರೆ ಇಲ್ಲ.
  2. ಹಿಂದೆ ನಡ್ದಿರೋದನ್ನ ಹೆಂಗಸರು ಆಗಾಗ ನೆನಪು ಮಾಡ್ಕೊತಾನೇ ಇರ್ತಾರೆ, ಯಾಕಂದರೆ ಅವರಿಗೆ ಗಂಡಸರಿಗಿಂತ ಜ್ಞಾಪಕಶಕ್ತಿ ಜಾಸ್ತಿ.
  3. ಬೇರೆ ಗಂಡಸರ ಜೊತೆ ಇದ್ದಾಗ ಗಂಡಸರು ನೋಡಿ ಉರ್ಕೊಂಡ್ರೆ ಹೆಂಗಸರಿಗೆ ಇಷ್ಟ ಆಗುತ್ತಂತೆ. ಉರ್ಕೊಳೋದ್ರಲ್ಲೂ ಒಂದು ಪ್ರೀತಿ ಇರತ್ತೆ ಅಂತ ಅವರ ಲೆಕ್ಕ... ಉರ್ಕೊಳ್ಲಿಲ್ಲ ಅಂದ್ರೆ ಯಾಕಪ್ಪಾ ಅಂತ ಯೋಚನೆ ಮಾಡ್ತಾರಂತೆ.
  4. ಹೆಂಗಸರು ತಾವು ಮುಂಚೆ ಇಷ್ಟ ಪಡ್ತಿದ್ದೋರ್ನ ಫೇಸ್ಬುಕ್ಕಲ್ಲಿ ಫಾಲೋ ಮಾಡ್ತಾ ಇರ್ತಾರೆ. ಬಿಡಲ್ಲ. ಅವರು ಮತ್ತೆ ಬೇಕು ಅಂತಲ್ಲ, ಹೇಗಿದಾರೆ ಏನು ಎತ್ತ ಅನ್ನೋ ಕುತೂಹಲ, ಅಷ್ಟೇ.
  5. ಗಂಡಸರಿಗೆ ಹೆಂಗಸರು ಕಡಿಮೆ ವಯಸ್ನೋರಾಗಿರ್ಬೇಕು, ನೋಡಕ್ಕೆ ಚೆನ್ನಾಗಿರ್ಬೇಕು. ಹೆಂಗಸರಿಗೆ ಜಾಸ್ತಿ ವಯಸ್ಸಿನ ಗಂಡಸರು ಬೇಕು... ಜೊತೆಗೆ ನೋಡಕ್ಕೆ ಚೆನ್ನಾಗಿರೋದಕ್ಕಿಂತ ದುಡ್ಡಿರಬೇಕು.
  6. ಗಂಡಸರು ಘಂ-ಘಮಾ ಅಂತ ಇದ್ದರೆ ಹೆಂಗಸರಿಗೆ ಇಷ್ಟವಂತೆ.
  7. ಎಷ್ಟು ಪ್ರಯತ್ನ ಪಟ್ಟರೂ ಅರ್ಥ ಆಗದಿರೋ ಗಂಡಸರು ಹೆಂಗಸರಿಗೆ ಇಷ್ಟ ಆಗ್ತಾರಂತೆ.
  8. ಬೇರೆಯೋರ್ಗೆ ಸಹಾಯ ಮಾಡೋ ಗಂಡಸರನ್ನ ಹೆಂಗಸರು ಇಷ್ಟ ಪಡ್ತಾರೆ, ಆದ್ರೆ ಅಂಥೋರ ಜೊತೆ ಮುಂದುವರೆಯಕ್ಕೆ ಇಷ್ಟ ಪಡಲ್ಲವಂತೆ. ಅವರಿಗೆ ಈ ದಾನ ಧರ್ಮ ಮಾಡೋರ್ಗಿಂತ ನಾನು ನನ್ನದು ನನ್ನ ಮನೆ ಅಂತಿರೋರು ಜಾಸ್ತಿ ಇಷ್ಟವಂತೆ.
  9. ನೀವು ಇಷ್ಟ ಪಡೋ ಹೆಂಗಸು/ಹುಡುಗಿ ಚೆನ್ನಾಗಿ ಡ್ರಸ್ ಮಾಡ್ಕೊಳೋದು, ಮೇಕಪ್ ಗೀಕಪ್ ಮಾಡ್ಕೊಳೋದು ನಿಮಗೆ ಚೆನ್ನಾಗಿ ಕಾಣಲಿ ಅಂತ. ಆದ್ರಿಂದ ನೀವು ಹೊಗಳ್ತಾ ಇದ್ರೆ ಅವ್ರಿಗ್ ಇಷ್ಟ ಆಗತ್ತೆ.
  10. ನೀವು ಇಷ್ಟ ಪಡೋ ಹೆಂಗಸಿಗೆ/ಹುಡುಗಿಗೆ ಬೇರೆ ಗಂಡಸರ ಮುಂದೇನೂ ಚೆನ್ನಾಗಿ ಕಾಣಬೇಕು ಅನ್ನೋ ಆಸೆ ಇರುತ್ತೆ... ಅವರು ಹೊಗಳಿದರೆ ನೀವು ಇನ್ನಷ್ಟು ಹತ್ತಿರ ಆಗ್ತೀರ ಅಂತ...
  11. ಗಂಡಸರು ಹೆಂಗಸರಿಗೆ ಗಿಫ್ಟ್ ಕೊಡುವಾಗ ಸಕ್ಕತ್ ತಲೆ ಕೆಡುಸ್ಕೊಂಡು, ಯೋಚೆನೆ ಮಾಡಿ, ಕೊಡಬೇಕು ಅನ್ನೋ ಆಸೆ ಅಂತೆ ಅವರಿಗೆ
  12. ಹೆಂಗಸರಿಗೆ ಬೇರೆಯೋರು ಬಾಯಲ್ಲಿ ಆಡಿದ ಮಾತು, ಮೈಸನ್ನೆಗಳು 'ಹೇಳೋ' ಮಾತು ಎರಡೂ ಗೊತ್ತಾಗುತ್ತಂತೆ... ಅವರ ಮಿದುಳೇ ಹಂಗೆ.
  13. ವಯಸ್ಸಾಗ್ತಾ ಆಗ್ತಾ ಹೆಂಗಸರಿಗೆ ಆಸೆ ಜಾಸ್ತಿ. ಹೌದು, ಆ ಆಸೆ ನೇ. ಇದಕ್ಕೆ ಕಾರಣ ಅವಳ ದೇಹದಲ್ಲಿ ಆಗೋ‌ ಬದಲಾವಣೆ.
  14. ಬಸುರೀರು ತಮಗೆ ತುಂಬ ಇಷ್ಟವಾಗಿರೋದನ್ನ ತಿಂದ್ರೆ ಮಗು ತುಂಬಾ ಮುದ್ದಾಗಿರುತ್ತಂತೆ.

ಇಷ್ಟು ಗೊತ್ತಿದ್ರೆ ಹೆಂಗಸರು ಸ್ವಲ್ಪ ಅರ್ಥ ಆದಂಗೆ, ನೋಡಿ :-)

ಹೊರಚಿತ್ರ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: