ಹೇಗಪ್ಪಾ ಕೇಳೋದು ಅಂತ ಮದುವೆ ಮುಂಚೆ ಈ 12 ಪ್ರಶ್ನೆಗಳ್ನ ಅವರ ಹತ್ತಿರ ಕೇಳದೆ ಇರಬೇಡಿ

ಆಮೇಲೆ ಕಷ್ಟ ಪಡೋರು ನೀವೇ

ಮುಂಚೆ ಎಲ್ಲಾ ಮದ್ವೆ ಅಂದ್ರೆ ಜನ್ಮಜನ್ಮದ ಅನುಬಂಧ ಅಂತಿದ್ರು. ಇವತ್ತು ಅಂಥ ಡೈಲಾಗ್ ಹೊಡ್ಯೋರು ಕಡಿಮೆ. ಮದುವೆ ಆದ ಮೇಲೆ ಆಗೊವರೆಗೆ ಇದ್ದ ಜೋಶ್ ಉಳಿಯಲ್ಲ. ಮೂರು ಗಂಟು ಮೊಟ್ಟಮೊದಲ ಆಕರ್ಷಣೆ ಒಂದರ ಮೇಲೇ ನಿಂತಿರಲ್ಲ... ಅದಕ್ಕೇ ನೀವು ಮದ್ವೆ ಆಗ್ಬೇಕು ಅಂತಿರೋರನ್ನ ಮದುವೆಗೆ ಮುಂಚೆನೇ ಈ 12 ಪ್ರೆಶ್ನೆ ಕೇಳ್ಕೊಂಬಿಡಿ. ಹೇಗಪ್ಪಾ ಕೇಳೋದು ಅಂತ ಯೋಚನೆ ಮಾಡೋದು ಸ್ವಲ್ಪ ಕಡಿಮೆ ಮಾಡಿ. ಮದುವೆ ಮುಂಚೆ ಕೇಳಿದರೆ ಕೇಳಿದಹಂಗೆ. ಆಮೇಲೆ ತುಂಬ ಲೇಟಾಗೋಗುತ್ತೆ. ನೇರವಾಗಿ ಇಲ್ಲಿರೋಹಾಗೇ ಕೇಳಿ ಅಂತ ನಾವು ಹೇಳ್ತಿಲ್ಲ, ಈ ಪ್ರಶ್ನೆಗಳಿಗೆ ಉತ್ತರ ಸಿಗೋಹಾಗೆ ನೋಡ್ಕೊಳಿ. ಪ್ರಶ್ನೆಗಳಿಗೆ ಬರೋಣ್ವಾ?

1. ನಿಮ್ಮ ಸಂಬಳ ಎಷ್ಟು?

ನಿಮ್ಮ ಗಳಿಕೆ, ಉಳಿಕೆ, ಖರ್ಚಿನ ಬಗ್ಗೆ ಒಬ್ಬರಿಗೊಬ್ಬರು ಚೆನ್ನಾಗಿ ಮಾತಾಡ್ಕೊಳೋದು ಒಳ್ಳೇದು. ಕೊನೆ ತನಕ ಜೊತೆಲಿರಬೇಕಾದಾಗ ನಂಬಿಕೆ ಇರಬೇಕು. ದುಡ್ಡಿನ ವಿಷಯಕ್ಕೆ ಜಗಳ ಆದರೆ ಅದು ಎಲ್ಲಿಂದ ಎಲ್ಲಿಗೋ ಹೋಗುತ್ತೆ.

2. ನಿಮ್ಮ ಪ್ರಕಾರ ತಿಂಗಳಿಗೆ ಎಷ್ಟು ಉಳಿಸಬೇಕು?

ಕೆಲವರಿಗೆ ದುಡ್ಡು ಉಳಿಸೋದು ಅಂದ್ರೆ ಏನೂಂತಾನೇ ಗೊತ್ತಿರಲ್ಲ. ಇನ್ನೂ ಕೆಲವರಿಗೆ ಖರ್ಚು ಮಾಡೋದು ಅಂದ್ರೆ ಏನೂಂತ ಗೊತ್ತಿರಲ್ಲ. ಹೀಗಿರುವಾಗ ಒಬ್ಬರಿಗೊಬ್ಬರು ಇದರ ಬಗ್ಗೇನೂ ಮಾತಾಡ್ಕೊಳೋದು ವಾಸಿ.

3. ನನ್ನ ಬಗ್ಗೆ ನಿಮಗೆ ನಿಜವಾಗಲೂ ಗೊತ್ತಾ?

ಕೆಲವರು ಯಾರ್ನ ಮದುವೆ ಆಗ್ತಿದೀನಿ ಅಂತ ಗೊತ್ತಿಲ್ಲದಿದ್ದರೂ ಮದುವೆ ಆಗಕ್ಕೆ ಮುಂದೆ ಬರ್ತಾರೆ, ಆದರೆ ಅದು ಸರಿಯಲ್ಲ. ಆಮೇಲೆ ತೊಂದರೆ ಕೊಡುತ್ತೆ. 'ನನಗೆ ನೀನು ಹಿಂಗೆ ಅಂತ ಮೊದಲೇ ಗೊತ್ತಿದ್ದರೆ ಖಂಡಿತ ಮದುವೆ ಆಗ್ತಿರಲಿಲ್ಲ' ಅನ್ನೋ ಮಾತೆಲ್ಲ ಬರುತ್ತೆ. ಅವೆಲ್ಲ ಯಾಕೆ?

4. ನಾನು ಹೇಗಿದೀನೋ ಹಾಗೆ ಒಪ್ಕೋತೀರಾ?

ನಾವು ಬದಲಾಗ್ತಾನೇ ಇರ್ತೀವಿ. ಪ್ರತಿ ದಿನ ಬದಲಾಗ್ತೀವಿ. ಆದರೂ ಬೇರೆಯೋರು ಹೇಗೆ ಬದಲಾಗಬೇಕು ಅಂತ ಬಯಸುತ್ತಾರೋ ಹಾಗೆ ಬದಲಾಗದೆ ಇರಬಹುದು. ಆದ್ದರಿಂದ ಇದನ್ನ ಕೇಳಿಬಿಡೋದು ವಾಸಿ. ಆಗ ಅವನು/ಅವಳು ನಿಮ್ಮ ಭವಿಷ್ಯದ ಬಗ್ಗೆ ಏನು ಯೋಚನೆ ಮಾಡಿದಾನೆ/ಳೆ ಅಂತ ಗೊತ್ತಾಗುತ್ತೆ.

5. ಜೀವನದಲ್ಲಿ ನೀವ್ ಮಾಡ್ಬೇಕು ಅಂತಿರೋ ದೊಡ್ಡ ಸಾಧನೆ ಏನು?

ಕನಸುಗಳಿರೋ ವ್ಯಕ್ತಿ ಜೊತೆ ಬದುಕೋದು ಒಂದು ಥ್ರಿಲ್ಲು. ಹಾಗಂತ ಆ ಕನಸಿನಲ್ಲಿ ನೀವು ಹೊಂದ್ಕೊಂಡ್ ಹೋಗಕ್ಕಾಗತ್ತೆ ಅಂತ ಗೊತ್ತಿಲ್ಲದಿದ್ದರೂ ನಂಬಿಕೊಳ್ಳಬೇಡಿ. ಆ ಕನಸು ಏನು ಅಂತ ಮೊದಲು ಅರ್ಥ ಮಾಡ್ಕೊಳಿ. ಕೇಳಿ.

6. ಮದುವೆ ಆದ ಮೇಲೆ ನೀವು ನನ್ನಿಂದ ಏನ್ ಬಯಸ್ತೀರಿ?

ನಾವ್ ಏನೋ ಅನ್ಕೊಂಡು ಮದುವೆ ಆಗಿ ಆಮೇಲೆ ನಂಗೆ ಹೀಗಿರಬೇಕಿತ್ತು, ಹಾಗಿರಬೇಕಿತ್ತು ಅಂದ್ರೆ ಕಷ್ಟ. ಮೊದ್ಲೇ ಇದೆಲ್ಲಾ ಮಾತಾಡ್ಕೊಂಡಿದ್ರೆ ಒಳ್ಳೇದು.

7. ನಿಮಗೇನಾದ್ರು ಕೆಟ್ಟಭ್ಯಾಸ, ಆರೋಗ್ಯದ ಸಮಸ್ಯೆ ಇದ್ಯಾ?

ಆ ಸಮಸ್ಯೆ ಚಿಕ್ಕದೊ, ದೊಡ್ದದೊ.. ಏನೇ ಆಗಿರ್ಲಿ ಮೊದಲೇ ಗೊತ್ತು ಮಾಡ್ಕೊಳಿ. ಇವತ್ತು ಚಿಕ್ಕದಾಗಿರೋ ಸಮಸ್ಯೆ ಮುಂದೆ ದೊಡ್ಡದಾಗಿ ಬೆಳೆದು ಮದುವೆನೇ ಮುರಿದುಬೀಳುತ್ತೆ ಕಣ್ರೀ.

8. ನಾನು ಚೆನ್ನಾಗಿದೀನಾ?

ದೈಹಿಕ ಸಂಬಂಧವಿಲ್ಲದಿದ್ದರೆ ಅದೆಂಥ ಮದುವೆ? ಆದ್ದರಿಂದ ನಿಮ್ನ ಮದುವೆ ಆಗೋರ್ಗೆ ನೀವು ಚೆನ್ನಾಗಿದೀರಿ ಅನ್ನಿಸಬೇಕು. ಎಂಥಾ ಆಧ್ಯಾತ್ಮಿಕ ವ್ಯಕ್ತಿಗಳಾಗಿದ್ದರೂ ಕಾಮವಿಲ್ಲದ ಮದುವೆ ಮದುವೇನೇ ಅಲ್ಲ.

9. ನಮ್ಮ ಮನೆಯೋರು, ಸ್ನೇಹಿತರ ಬಗ್ಗೆ ನಿಮಗೇನನ್ನಿಸುತ್ತೆ?

ಮದುವೆ ಇಬ್ಬರ ನಡುವೆಯೆ ನಡೆದ್ರೂ, ಎರಡೂ ಕುಟುಂಬಗಳೂ ಹಾಗೂ ಸ್ನೇಹಿತರೊಂದಿಗೆ ನಿಕಟ ಸಂಬಂಧ  ಇರುತ್ತೆ. ಎಲ್ಲಾನ್ನೂ ಮ್ಯಾನೇಜ್ ಮಾಡೋದು ಕಷ್ಟ. ನಿಮ್ಮನ್ನ ಮದುವೆ ಆಗೋರು ನಿಮ್ಮ ಸ್ನೇಹಿತರ ಜೊತೆ ಮತ್ತೆ ಮನೆಯೋರ ಜೊತೆ ಹೊಂದ್ಕೊಂಡ್ ಹೋಗೋಹಾಗಿದ್ರೆ ನಿಮ್ಮ ಜೀವನ ಸುಲಭವಾಗಿರುತ್ತೆ.

10. ನಿಮ್ಮನೇಲಿ ಪೂಜೆ ಗೀಜೆ ಜಾಸ್ತಿನಾ? ಬಹಳ ಸಂಪ್ರದಾಯಸ್ಥರಾ?

ಈ ವಿಷಯಗಳಲ್ಲಿ ಮೊದಮೊದಲು ಎಲ್ಲಾ ಚೆನ್ನಾಗೇ ಇರುತ್ತೆ. ನಿಧಾನವಾಗಿ ಒಬ್ಬರಮೇಲೊಬ್ಬರಿಗೆ ಬೇಜಾರ್ ಶುರುವಾಗುತ್ತೆ. ಒಬ್ಬರ ನಂಬಿಕೆನೇ ಇನ್ನೊಬ್ರಿಗೆ ಇಲ್ದೇ ಹೋದ್ರೂ, ಕೊನೆ ಪಕ್ಷ, ಇಬ್ರಿಗೂ ಇನ್ನೊಬ್ರ ನಂಬಿಕೆ ಬಗ್ಗೆ ಗೊತ್ತಿರಬೇಕು. ಅಲ್ದೇ ಒಬ್ರ ನಂಬಿಕೇನ ಇನ್ನೊಬ್ರು ಗೌರವಿಸಬೇಕು.

11. ಮದ್ವೆ ಆದ್ಮೇಲೆ ಅಕಸ್ಮಾತ್ ನಂಗೂ ನಿಮ್ಗೂ ಯಾವ್ದಾದ್ರೂ ವಿಷ್ಯದಲ್ಲಿ ಸರಿ ಹೋಗ್ದೇ ಹೋದ್ರೆ ಏನ್ ಮಾಡ್ತಿರಾ?

ಈ ಪ್ರಶ್ನೆಗೆ ಏನ್ ಉತ್ರ ಕೊಡ್ತಾರೆ ಅಂತ ನೋಡ್ಕೊಳಿ. ಔರು ನಿಮ್ಮನ್ನ ಬಿಡೋ ಮಾತು ಆಡ್ತಾರೆ ಅಂದ್ರೆ ಔರು ನಿಮ್ಮಿಬ್ಬರ ಸಂಬಂಧದ ಬಗ್ಗೆ ತುಂಬಾ ಸೀರಿಯಸ್ಸಾಗಿಲ್ಲ ಅಂತ ಅರ್ಥ.

12. ಮಕ್ಕಳು?

ಇದಂತೂ ಬಹಳ ಮುಖ್ಯವಾದ ವಿಷಯ. ಈ ಪ್ರಶ್ನೆಯಿಂದ ಇವರನ್ನ ಮದುವೆ ಮಾಡ್ಕೊಂಡ್ರೆ ನಿಮ್ಮ ಮುಂದಿನ ಜೀವನ ಹೇಗಿರುತ್ತೆ ಅನ್ನೋದರ ಒಂದು ಅತಿ ಮುಖ್ಯವಾದ ಭಾಗ ಗೊತ್ತಾಗೋಗುತ್ತೆ. ಅವರಿಗೆ ಮಕ್ಕಳು ಇಷ್ಟ ನಾ? ಅವರ  ಆರೋಗ್ಯ ಎಲ್ಲಾ ರೀತಿಯಲ್ಲೂ ಚೆನ್ನಾಗಿದ್ಯಾ? ಮಕ್ಕಳ ಕಂಡರೆ ಅವರಿಗೆ ಇಷ್ಟ ನಾ? ಇವೆಲ್ಲ ಈಗಲೇ ಕೇಳ್ಕೊಳೋದು ವಾಸಿ.

ಮದುವೆ ಅಂದಮೇಲೆ ಮನಸ್ಸಿಗೆ ಎಷ್ಟೋ ಪ್ರಶ್ನೆಗಳು ಬರುತ್ವೆ. ಎಷ್ಟೋ ಜನ ದುಡುಕಿ ಬಿಡ್ತಾರೆ. ಮುಂದೆ ಕೇಳಿದ್ರಾಯ್ತು, ಕೇಳಿದ್ರೆ ಏನಂದುಕೊಳ್ಳುತ್ತಾರೊ... ಮದುವೆ ನಿಂತ್ಹೋದ್ರೆ... ಅಂತೆಲ್ಲಾ ಹೆದರಬೇಡಿ. ಸುಮ್ನೆ ಇದ್ದು ನಿಮಗೆ ನೀವೇ ಮೋಸ ಮಾಡ್ಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬೆಳ್-ಬೆಳಗ್ಗೆ 20 ನಿಮಿಷ ಹೀಗ್ ಕಳೆದರೆ ಇಡೀ ದಿನ ಲವಲವಿಕೆ ಮತ್ತು ಸಂತೋಷಗಳು ನಿಮ್ನ ಬಿಟ್ಟು ಹೋಗಲ್ಲ

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತೋರು ಬಿಚ್ಚಿಟ್ಟ ಗುಟ್ಟು

ಇಂಥದ್ದು ನಡೆದೇ ಇರುತ್ತೆ - ಬೆಳ್ ಬೆಳಿಗ್ಗೆನೇ ಯಾವ್ದೂ ನೀವಂದ್ಕೊಂಡ ಹಾಗೆ ನಡೀತಿರೊಲ್ಲ. ನೀವಿಟ್ಟ ಸಮಯಕ್ಕೆ ಅಲಾರ್ಮು ಹೊಡ್ದಿರೊಲ್ಲ, ಅಥವಾ ನೀವೇ ತಪ್ಪಾಗಿ ಅಲಾರ್ಮ್ ಸೆಟ್ ಮಾಡಿರ್ತೀರ. ಅಯ್ಯಯ್ಯೋ ಲೇಟ್ ಆಯ್ತು ಅಂದ್ಕೊಂಡು ಬೇಗ ಸ್ನಾನ ಮಾಡಿ ತಿಂಡಿ ರೆಡಿ ಮಾಡೋಕೆ ಹೋದ್ರೆ ಅದು ಸೀದು ಹೋಗುತ್ತೆ. ಇಸ್ತ್ರಿ ಹಾಕೋಕೆ ಹೋದಾಗ ಕರೆಂಟು ಕೈ ಕೊಡುತ್ತೆ. ಸರಿ, ಆ ದಿನ ಪೂರ್ತಿ ಎಲ್ಲವೂ ಹಾಳು. ನೀವು ಮುರ್ಫಿ ಅನ್ನೋನು ಹೇಳಿರೋದು ಕೇಳಿರ್ಬಹುದು - ಏನಾದ್ರು ಹಾಳಾಗೋ ಚಾನ್ಸ್ ಇದ್ರೆ, ಅದು ಹಾಳಾಗಿಯೇ ಆಗುತ್ತೆ. ಒಟ್ನಲ್ಲಿ ಬೆಳ್ ಬೆಳಿಗ್ಗೆ ಕೆಟ್ಟದಾಗಿ ಶುರುವಾದ್ರೆ ಅವತ್ತು ಪೂರ್ತಿ ಮುರ್ಫಿ ಹೇಳಿದ್ದು ನಿಜ ಆಗ್ತಾ ಹೋಗುತ್ತೆ. ಇದಕ್ಕೆ ಪರಿಹಾರ ಇದೆ - ದಿನವೂ ಬೆಳಿಗ್ಗೆ ಬರೀ ಇಪ್ಪತ್ತು ನಿಮಿಷ ಈ ರೀತಿ ಕಳ್ದ್ರೆ ಇಡೀ ದಿನ ಸಕತ್ತಾಗಿರುತ್ತೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತು ಸಂತೋಷ, ನೆಮ್ಮದಿಗಳ ಬಗ್ಗೆ ರಿಸರ್ಚ್ ಮಾಡ್ತಿರೋ ಶಾನ್ ಏಚರ್ ಅನ್ನೋನು ಹೇಳಿರೋ ಪ್ರಕಾರ ಬೆಳಿಗ್ಗೆ ನೀವು ಪಾಸಿಟಿವ್ ಆಗಿದ್ರೆ ಆ ದಿವ್ಸ ಖಷಿಯಾಗಿರ್ತೀರಿ. ಪಾಸಿಟಿವಿಟಿ ಹೆಚ್ಚಾದ್ರೆ ನಿಮ್ ಮಿದುಳು ಖುಷ್ ಖುಷಿಯಾಗಿರುತ್ತೆ. ಖುಷಿಯಾಗಿದ್ದಾಗ ಮಿದುಳು ಚೆನ್ನಾಗಿ ಕೆಲಸ ಮಾಡುತ್ತೆ, ಎಷ್ಟು ಕಷ್ಟ ಇದ್ರೂ ಟೆನ್ಷನ್ ತೆಗೊಳೊಲ್ಲ. ಆ 20 ನಿಮಿಷ ಏನು ಮಾಡ್ಬೇಕು ಅಂತ ಹೇಳ್ತಾರೆ ಅನ್ನೋದನ್ನ ಓದ್ಕೊಳ್ಳಿ.

1) 2 ನಿಮಿಷ ಹಿಂದಿನ್ ದಿವ್ಸ ಏನೇನು ಒಳ್ಳೇದಾಯ್ತು ಅನ್ನೋದನ್ನ ನೆನೆಸ್ಕೋಬೇಕು

ನಾವು ಮಿದುಳಿಗೆ ಮೋಸ ಮಾಡ್ಬಹುದು. ಖುಷಿಯಾಗಿದ್ದೀನಿ ಅಂತ ನಿಮ್ಗೆ ನೀವೇ ಹೇಳ್ಕೊಂಡ್ರೆ ಅದು ನಿಜಕ್ಕೂ ಖುಷಿಯಾಗಿ ಬಿಡುತ್ತೆ. ಹಿಂದಿನ್ ದಿನ ಖುಷಿ ಕೊಡೋ ಅಂಥದ್ದು ಏನಾಯ್ತು ಅಂತ ನೆನಪು ಮಾಡ್ಕೊಂಡು ಬರ್ದಿಟ್ಕೊಳ್ಳಿ. ಹಿಂದಿನ್ ದಿನದ ಖುಷೀನ ಎರಡು ನಿಮಿಷ ಮತ್ತೆ ಅನುಭವ್ಸಿ. ಇದರಿಂದ ನಿಮ್ ಮಿದುಳು ಪಾಸಿಟಿವ್ ಆಗುತ್ತೆ. ಮೊದ್ಲೇ ಹೇಳಿದ್ ಹಾಗೆ, ಮಿದುಳು ಪಾಸಿಟಿವ್ ಆಗಿದ್ರೆ ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

2) 2 ನಿಮಿಷ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋಬೇಕು

ನಾವು ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋದು ಕಡಿಮೆ. ಬೆಳ್ ಬೆಳಿಗ್ಗೆ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳಿ. ನೆನೆಸ್ಕೊಳ್ಳೋದಷ್ಟೆ ಅಲ್ಲ, ಅವ್ರು ನಿಮ್ ಮುಂದೆ ಇದ್ರೆ ಅವ್ರಿಗೆ ಹೇಳಿ. ಅಥ್ವಾ ಈಮೇಲೋ ಮೆಸೇಜೋ ಮಾಡಿ. ಇದರಿಂದ ಎರಡು ರೀತಿ ಪ್ರಯೋಜನ ಇದೆ - ಈ ರೀತಿ ಒಳ್ಳೆ ಕೆಲ್ಸ ಮಾಡಿದ್ದೀನಿ ಅಂತ ನೀವು ಖುಷಿಯಾಗ್ತೀರಿ, ಅಲ್ಲದೆ ಬೇರೆಯವ್ರ ಜೊತೆ ನಿಮ್ ಸಂಬಂಧ ಗಟ್ಟಿಯಾಗುತ್ತೆ. ಇದರಿಂದ ಮಿದುಳು ಖುಷಿಯಾಗುತ್ತೆ, ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

3) 2 ನಿಮಿಷ ನಿಮ್ಗಿರೋ ಭಾಗ್ಯ ನೆನೆಸ್ಕೋಬೇಕು

ಡಿ.ವಿ.ಗುಂಡಪ್ಪ 'ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ' ಅಂತ ಹೇಳಿದ್ದಾರೆ. ಹೀಗೆ ನಿಮ್ ಬದುಕಲ್ಲಿ ನಿಮ್ಗೆ ದಕ್ಕಿರೋ ಭಾಗ್ಯಗಳ್ನ ನೆನೆಸ್ಕೋಬೇಕಂತೆ ಬೆಳಿಗ್ ಬೆಳಿಗ್ಗೆ. ಇದರಿಂದ ಮಿದುಳು ಪಾಸಿಟಿವ್ ಆಗುತ್ತೆ. ಬದುಕಲ್ಲಿ ಏನೇನಿದೆ ಅಂತ ನೋಡೋದ್ರಿಂದ, ಏನೇನಿಲ್ಲ ಅಂತ ಕೊರಗೋದು ತಪ್ಪುತ್ತೆ. ಲೋಟ ಅರ್ಧ ಖಾಲಿಯಾಗಿದೆ ಅಂತ ಕೊರಗೋ ಬದ್ಲು ಅರ್ಧ ಲೋಟ ನೀರಿದ್ಯಲ್ಲ ಅಂತ ಖುಷಿ ಪಡ್ಬೇಕು. ಇಂಥ ಆಶಾವಾದದಿಂದ ಇಡೀ ದಿನ ಚೆನ್ನಾಗಿ ಕಳಿಯುತ್ತೆ. ನೀವು ಅಂದ್ಕೊಂಡ ಕೆಲಸ ಎಲ್ಲ ಮಾಡಿ ಮುಗಿಸ್ಬಹುದು.

ಮೂಲ

4) 12 ನಿಮಿಷ ವ್ಯಾಯಾಮ ಮಾಡ್ಬೇಕು

ಮನುಷ್ಯನ್ ದೇಹದಲ್ಲಿ 'ಎಂಡಾರ್ಫಿನ್' ಅನ್ನೋ ಹಾರ್ಮೋನು ಇದ್ದಷ್ಟು ಅವ್ನು ಖುಷಿಯಾಗಿರ್ತಾನಂತೆ. ನಾವು ಜಾಗಿಂಗ್, ಯೋಗಾಸನ, ವ್ಯಾಯಾಮ್ ಮಾಡೋವಾಗ್ಲೂ ಈ ಎಂಡಾರ್ಫಿನ್ ದೇಹದಲ್ಲಿ ಹೆಚ್ಚಾಗುತ್ತೆ. ಇದರಿಂದ ಟೆನ್ಷನ್ ಕಡಿಮೆ ಆಗಿ, ಮಿದುಳು ಅದರ ಪೂರ್ತಿ ತಾಕತ್ತು ತೋರ್ಸುತ್ತೆ. ಅಲ್ಲದೆ ನೀವು ನಿಮ್ ಬಗ್ಗೆ ಯೋಚ್ನೆ ಮಾಡೋದನ್ನ ಕಲೀತೀರಿ. ದಿವ್ಸ ವ್ಯಾಯಾಮ ಮಾಡೋದ್ರಿಂದ, ಹಿಡಿದ ಕೆಲ್ಸಾನ ಕಷ್ಟ ಬಿದ್ದು ಪೂರ್ತಿ ಮಾಡ್ಬೇಕು ಅನ್ನೋದೂ ಮಿದುಳಿಗೆ ಅರ್ಥ ಆಗುತ್ತೆ. ಇದೆಲ್ಲ ಪಾಸಿಟಿವಿಟಿ ಹೆಚ್ಸುತ್ತೆ.

ಮೂಲ

5) 2 ನಿಮಿಷ ಧ್ಯಾನ ಮಾಡ್ಬೇಕು

ಎರಡೇ ಎರಡು ನಿಮಿಷ ಧ್ಯಾನ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಒಂದು ಕಡೆ ಶಾಂತವಾಗಿ ಕೂತು, ನಿಮ್ ಉಸಿರಾಟದ್ ಮೇಲೆ ನಿಮ್ ಗಮನ ಇಡಿ. ಬೇರೆ ಯಾವುದ್ರ ಬಗ್ಗೆನೂ ಯೋಚ್ನೆ ಮಾಡ್ಬೇಡಿ. ಇದ್ರಿಂದ ಕೈಯಲ್ಲಿರೋ ವಿಷಯದ್ ಬಗ್ಗೆ ಮಾತ್ರ ಯೋಚ್ನೆ ಮಾಡೋ ಶಕ್ತಿ ಹೆಚ್ಚಾಗುತ್ತೆ. ದಿವ್ಸ ಇದನ್ನ ಅಭ್ಯಾಸ ಮಾಡ್ಕೊಂಡ್ರೆ ನಿಧಾನಕ್ಕೆ ಪಾಸಿಟಿವಿಟಿ ಹೆಚ್ಚಾಗುತ್ತೆ.

ಮೂಲ

ಬೆಳಿಗ್ಗೆ ಸ್ವಲ್ಪ ಜಾಸ್ತಿ ಟೈಮ್ ಇದ್ದ ದಿವ್ಸ ಬೇಕಿದ್ರೆ ಇದನ್ನೆಲ್ಲ ಜಾಸ್ತಿ ಹೊತ್ತು ಮಾಡ್ಬಹುದು. ಈ ಅಭ್ಯಾಸಗಳನ್ನ ರೂಢಿ ಮಾಡ್ಕ್ಕೊಂಡ್ರೆ ನೀವು ಹೆಚ್ಚು ಪಾಸಿಟಿವ್ ಆಲೋಚನೆಗಳನ್ನ ಮಾಡ್ತೀರಿ. ನಿಮ್ಮ ದಿನವೂ ಚೆನ್ನಾಗಿರುತ್ತೆ. ಅಂದ್ಕೊಂಡ ಕೆಲ್ಸ ಎಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತೀರಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: